twitter
    For Quick Alerts
    ALLOW NOTIFICATIONS  
    For Daily Alerts

    Chhapaak Review: ಅದ್ಭುತ ಸಿನಿಮಾ, ಅತ್ಯದ್ಭುತ ನಟನೆ

    |

    'ಬಾಜಿರಾವ್ ಮಸ್ತಾನಿ', 'ಪದ್ಮಾವತಿ', 'ಪೀಕು' ಸಿನಿಮಾಗಳ ಅದ್ಭುತ ನಟನೆಯ ನಂತರ ದೀಪಿಕಾ ಪಡುಕೋಣೆ 'ಚಪಾಕ್' ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದರು. ಇಲ್ಲಿ ದೊಡ್ಡ ಸಾವಲು ಸ್ವೀಕರಿಸಿದ ದೀಪಿಕಾ, ಅದನ್ನು ತುಂಬ ಚೆನ್ನಾಗಿ ನಿಭಾಯಿಸಿದ್ದಾರೆ. ನೈಜಕಥೆಯನ್ನು ಪ್ರಾಮಾಣಿಕವಾಗಿ ಚಿತ್ರತಂಡ ತೆರೆ ಮೇಲೆ ತರುವಲ್ಲಿ ಯಶಸ್ಸಿಯಾಗಿದೆ.

    Rating:
    3.5/5
    Star Cast: ದೀಪಿಕಾ ಪಡುಕೋಣೆ
    Director: ಮೇಘನಾ ಗುಲ್ಜಾರ್

    ಮಾಲತಿ ಅಗರ್ವಾಲ್ ಪಾತ್ರದ ಪರಿಚಯ

    ಮಾಲತಿ ಅಗರ್ವಾಲ್ ಪಾತ್ರದ ಪರಿಚಯ

    ಸಿನಿಮಾ 2012 ರಲ್ಲಿ ಶುರು ಆಗುವುದು ದೊಡ್ಡ ಪ್ರತಿಭಟನೆಯ ಮೂಲಕ. ನಿರ್ಬಯಾ ಅತ್ಯಾಚಾರ ಪ್ರಕರಣ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಇದಾಗಿದೆ. ಈ ವೇಳೆ ಸುದ್ದಿ ವಾಹಿನಿ ವರದಿಗಾರ್ತಿ ಹಾಗೂ ಸಾಮಾಜಿಕ ಕಾರ್ಯಕರ್ತನ ನಡುವೆ ಸಂಭಾಷಣೆ ನಡೆಯುತ್ತದೆ. ಈ ಮೂಲಕ ಮಾಲತಿ ಅಗರ್ವಾಲ್ (ದೀಪಿಕಾ ಪಡುಕೋಣೆ) ಪಾತ್ರದ ಪರಿಚಯ ಆಗುತ್ತದೆ.

    ದೀಪಿಕಾ ಮನ ಮುಟ್ಟುವ ನಟನೆ

    ದೀಪಿಕಾ ಮನ ಮುಟ್ಟುವ ನಟನೆ

    ದೀಪಿಕಾ ಪಡುಕೋಣೆ ಪ್ರತಿಭಾವಂತ ನಟಿ ಎನ್ನುವುದು ಈಗಾಗಲೇ ಅನೇಕ ಬಾರಿ ಸಾಬೀತಾಗಿದೆ. ಈ ಸಿನಿಮಾದಲ್ಲಿಯೂ ಅವರ ಪಾತ್ರ ನಿರ್ವಹಣೆ ಚೆನ್ನಾಗಿದೆ. ಅನೇಕ ದೃಶ್ಯಗಳು ಮನಮುಟ್ಟುವ ಹಾಗಿದೆ. ದೀಪಿಕಾ ನಟನೆ ಸಿನಿಮಾಗೆ ದೊಡ್ಡ ಶಕ್ತಿ ನೀಡಿದೆ. ಪಾತ್ರಕ್ಕಾಗಿ ದೀಪಿಕಾ ಹಾಕಿರುವ ಶ್ರಮಕ್ಕೆ, ಸರಿಯಾದ ಫಲ ಸಿಕ್ಕಿದೆ. ದೀಪಿಕಾ ಬೆಸ್ಟ್ ಸಿನಿಮಾಗಳ ಪಟ್ಟಿಯಲ್ಲಿ 'ಚಪಾಕ್' ಸೇರುವ ಸಾಧ್ಯತೆ ಅಧಿಕವಾಗಿದೆ.

    'ಚಪಾಕ್' ಸ್ಕ್ರಿಪ್ಟ್ ರಿಜೆಕ್ಟ್ ಮಾಡಿದ್ರಂತೆ ಸ್ಟಾರ್ ನಟಿ, ಯಾರು ಆಕೆ?'ಚಪಾಕ್' ಸ್ಕ್ರಿಪ್ಟ್ ರಿಜೆಕ್ಟ್ ಮಾಡಿದ್ರಂತೆ ಸ್ಟಾರ್ ನಟಿ, ಯಾರು ಆಕೆ?

    ಸಿನಿಮಾದ ವಿಷಯಗಳು ಏನೇನು?

    ಸಿನಿಮಾದ ವಿಷಯಗಳು ಏನೇನು?

    'ಚಪಾಕ್' ಆಸಿಡ್ ದಾಳಿಗೆ ಒಳಗಾದ ಲಕ್ಷ್ಮಿ ಅಗರ್ವಾಲ್ ಕಥೆ. ಆಸಿಡ್ ದಾಳಿಗೂ ಹಿಂದಿನ ಹಾಗೂ ನಂತರದ ಭಾಗ ಸಿನಿಮಾದಲ್ಲಿದೆ. ಆಸಿಡ್ ದಾಳಿಯ ನಂತರ ಲಕ್ಷ್ಮಿ ಎದುರಿಸಿದ ಸವಾಲುಗಳು, ಮಾನಸಿಕ ಹಿಂಸೆ, ಕಷ್ಟಗಳು, ಹೋರಾಟ ಹೀಗೆ ಆಕೆಯ ಜೀವನವನ್ನು ಎಳೆ ಎಳೆಯಾಗಿ ತೋರಿಸಲಾಗಿದೆ. ಅನೇಕ ಅಂಶಗಳನ್ನು ನಿಜಕ್ಕೂ ಹೃದಯ ಮುಟ್ಟುತ್ತವೆ.

    ನ್ಯಾಯಾಂಗ ವ್ಯವಸ್ಥೆಯ ತೊಡಕುಗಳು

    ನ್ಯಾಯಾಂಗ ವ್ಯವಸ್ಥೆಯ ತೊಡಕುಗಳು

    ಆಸಿಡ್ ದಾಳಿಯ ವಿರುದ್ಧ ಮಾಲತಿ ಹೋರಾಡುತ್ತಾರೆ. ಆ ಸಮಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ತೊಡಕುಗಳನ್ನು ಹೇಳಲಾಗಿದೆ. ಸಮಾಜದ ಅತಿ ಸೂಕ್ಷ್ಮ ವಿಷಯಗಳ ಬಗ್ಗೆ ಅಚ್ಚುಕಟ್ಟಾಗಿ ತೆರೆ ಮೇಲೆ ತೋರಿಸಿದ್ದಾರೆ. ಕೋರ್ಟ್ ರೂಮ್ ದೃಶ್ಯಗಳು ಚೆನ್ನಾಗಿದ್ದರೂ, ಕೆಲವು ಬಾರಿ ಕೊಂಚ ಬೋರ್ ಎನಿಸುತ್ತದೆ. ಲಾಯರ್ ಗಳ ವಾದ ಗಮನ ಸೆಳೆಯುತ್ತದೆ. ಅಮೋಲ್ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ.

    ದೀಪಿಕಾ ವಿರುದ್ಧ ಬೆಂಗಳೂರು ಮಾಜಿ ಪೊಲೀಸ್ ಆಯುಕ್ತರ ಟ್ವೀಟ್ ಪ್ರಕರಣಕ್ಕೆ ಟ್ವಿಸ್ಟ್ದೀಪಿಕಾ ವಿರುದ್ಧ ಬೆಂಗಳೂರು ಮಾಜಿ ಪೊಲೀಸ್ ಆಯುಕ್ತರ ಟ್ವೀಟ್ ಪ್ರಕರಣಕ್ಕೆ ಟ್ವಿಸ್ಟ್

    ಪಾತ್ರಗಳ ಹೆಸರು ಬದಲಾವಣೆಯಾಗಿದೆ

    ಪಾತ್ರಗಳ ಹೆಸರು ಬದಲಾವಣೆಯಾಗಿದೆ

    ಸಿನಿಮಾದ ಪಾತ್ರಗಳ ಹೆಸರನ್ನು ಬದಲಾವಣೆ ಮಾಡಲಾಗಿದೆ. ಲಕ್ಷ್ಮಿ ಅಗರ್ವಾಲ್ ಹೆಸರು ಮಾಲತಿ ಅಗರ್ವಾಲ್ ಹಾಗೂ ನದೀಮ್ ಹೆಸರನ್ನು ಬಶೀರ್ ಖಾನ್ ಆಗಿ ಬದಲಾಯಿಸಲಾಗಿದೆ. ಸಿನಿಮಾದ ಮೇಕಿಂಗ್, ತಾಂತ್ರಿಕ ದೃಷ್ಟಿಯಿಂದ ಬಾಲಿವುಡ್ ಚಿತ್ರಗಳಿಗೆ ತಕ್ಕ ಹಾಗೆ ಇದೆ. ಫಸ್ಟ್ ಹಾಫ್ ಹಾಗೂ ಸೆಕೆಂಡ್ ಹಾಫ್ ನಲ್ಲಿ ಬರುವ ಫ್ಲಾಶ್ ಬ್ಯಾಕ್ ಗಳು ಕೊಂಚ ಉದ್ದಾವಾಯಿತು.

    ಸಂತ್ರಸ್ತೆಯರಿಗೆ ಮಾದರಿ ಆಗುವ ಕಥೆ

    ಸಂತ್ರಸ್ತೆಯರಿಗೆ ಮಾದರಿ ಆಗುವ ಕಥೆ

    ಆಸಿಡ್ ಹೋರಾಟ ಜೊತೆಗೆ ಮಾಲತಿ ಮತ್ತು ಅಮೋಲ್ ಪ್ರೀತಿಯ ಸನ್ನಿವೇಶಗಳು ಇವೆ. ಆದರೆ, ಕೊನೆಯಲ್ಲಿ ಅಮೋಲ್ ಪಾತ್ರ ಪರಿಪೂರ್ಣತೆ ಸಿಕ್ಕಿಲ್ಲ ಎನಿಸುತ್ತದೆ. ನಿರ್ದೇಶಕಿ ಮೇಘನಾ ಗುಲ್ಜಾರ್ ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ. 'ಚಪಾಕ್' ಬರೀ ಒಬ್ಬ ಸಂತ್ರಸ್ತೆಯ ಕಥೆಯಲ್ಲ, ಅನೇಕ ಸಂತ್ರಸ್ತೆಯರಿಗೆ ಮಾದರಿ ಆಗುವ ಕಥೆ, ಅವರಿಗೆ ಸ್ಫೂರ್ತಿ ನೀಡುವ ಕಥೆ.

    English summary
    Deepika Padukone'S 'Chhapaak' hindi movie review.
    Thursday, January 9, 2020, 15:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X