For Quick Alerts
ALLOW NOTIFICATIONS  
For Daily Alerts

'ಸಿಂಗ'ನ ಅಬ್ಬರ ನೋಡಿ ವಿಮರ್ಶಕರು ಹೇಳಿದ್ದೇನು?

|

ಶಾನೆ ಟಾಪಗವ್ಳೆ ಹಾಡಿನ ಮೂಲಕವೆ ಹೆಚ್ಚು ಸದ್ದು ಮಾಡಿದ್ದ 'ಸಿಂಗ' ರಾಜ್ಯದಾದ್ಯಂತ ರಿಲೀಸ್ ಆಗಿದೆ. ಚಿರಂಜೀವಿ ಸರ್ಜಾ ಮತ್ತು ಅದಿತಿ ಪ್ರಭುದೇವ ಅಭಿನಯದ 'ಸಿಂಗ' ಚಿತ್ರಕ್ಕೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಟ್ರೈಲರ್ ಮತ್ತು ಹಾಡುಗಳ ಮೂಲಕ ಚಿತ್ರಾಭಿಮಾನಿಗಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ 'ಸಿಂಗ' ನೋಡಿದವರಿಗೆ ಕೊಂಚ ನಿರಾಸೆ ಮೂಡಿಸಿದೆ. ಆಕ್ಷನ್, ಪಂಚಿಂಗ್ ಡೈಲಾಗ್, ಸೆಂಟಿಮೆಂಟ್ ಎಲ್ಲವು ಸಿಂಗನಲ್ಲಿ ಇದೆ. ಚಿರು ಸರ್ಜಾ ತಾಯಿಯಾಗಿ ಹಿರಿಯ ನಟಿ ಕಾಣಿಸಿಕೊಂಡಿದ್ದಾರೆ.

ವರ್ಷದ ಬಳಿಕ ತೆರೆಮೇಲೆ ಮಿಂಚಿರುವ ಚಿರು ಸರ್ಜಾ ನೋಡಿ ವಿಮರ್ಶಕರು ಏನಂದರು? ವಿಜಯ್ ಕಿರಣ್ ನಿರ್ದೇಶನದ ಮಾಸ್ ಸಿಂಗನನ್ನು ನೋಡಿ ವಿಮರ್ಶಕರು ಕೊಟ್ಟ ಅಂಕಗಳೆಷ್ಟು? ಈ ಬಗ್ಗೆ ಕರ್ನಾಟಕದ ಜನಪ್ರಿಯ ಪತ್ರಿಕೆಗಳ ವಿಮರ್ಶೆಯ ಕಲೆಕ್ಷನ್ ಇಲ್ಲಿದೆ. ಮುಂದೆ ಓದಿ..

ಇವ್ನು ಹೆಂಗರುಳಿನ ಮಾಸ್‌ 'ಸಿಂಗ'

ಇವ್ನು ಹೆಂಗರುಳಿನ ಮಾಸ್‌ 'ಸಿಂಗ'

ಈ ಸಿನಿಮಾದ ಕಥಾನಾಯಕ ‘ಸಿಂಹ'ದ ಗುಣದವನೇ ಆಗಿದ್ದರಿಂದ ತೆರೆಯ ಮೇಲೆ ನಾಯಕನ ಪಾತ್ರಧಾರಿ ಚಿರಂಜೀವಿ ಸರ್ಜಾ ಕೂಡ ಘರ್ಜಿಸಿದ್ದಾರೆ. ಪಂಚಿಂಗ್ ಡೈಲಾಗ್‌ ಹೊಡೆದಿದ್ದಾರೆ. ಖಳರ ಎದುರು ಸಖತ್‌ ಫೈಟ್ ಮಾಡಲು ನಿಂತರೆ, ತಾಯಿ ಎದುರು ಥೇಟ್‌ ಕುರಿಮರಿ. ಪ್ರೀತಿಯ ಹುಡುಗಿಯ ಮುಂದೆ ಅಪ್ಪಟ ಪ್ರೇಮಿ. ಈ ಮೂರು ಭಾವಗಳನ್ನೂ ಚಿರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವನು ಅಮ್ಮನ ಮುದ್ದಿನ ಮಗ ಸಿಂಗ (ಚಿರಂಜೀವಿ ಸರ್ಜಾ). ಅಪ್ಪನ ಹಾಗೆ ರೆಬಲ್ ಗುಣದವನು. ‘ನಾನು ಯಾರ ತಂಟೆಗೂ ಹೋಗಲ್ಲ, ನನ್ನ ತಂಟೆಗೆ ಯಾರೇ ಬಂದರೂ ಬಿಡಲ್ಲ' ಎನ್ನುತ್ತಾ ಎದುರಾಳಿಗಳನ್ನು ಚೆಂಡಾಡುತ್ತಾನೆ. ಈ ದಾರಿಯಲ್ಲಿ ಸಿಂಗನಿಗೂ ಲವ್‌ ಆಗುತ್ತದೆ. ಈ ಪ್ರೇಮವೇ ಅವನ ಬದುಕು ಬದಲಿಸುತ್ತದೆ. ಅದು ಹೇಗೆ ಅನ್ನುವುದನ್ನು ಸಿನಿಮಾದಲ್ಲಿಯೇ ನೋಡಿ" - ವಿಜಯ ಕರ್ನಾಟಕ

ನಿಶ್ಯಕ್ತ ಸಿಂಗನ ಬಿಲ್ಡಪ್ ಪ್ರಸಂಗ

ನಿಶ್ಯಕ್ತ ಸಿಂಗನ ಬಿಲ್ಡಪ್ ಪ್ರಸಂಗ

ಸಿಂಗ ಅಸಹಾಯಕ ಹಣ್ಣುಮಕ್ಕಳ ಪಾಲಿನ ಸೇವಕ. ಒಮ್ಮೆ ಮದ್ಯವ್ಯಸನಿಯೊಬ್ಬನ ಪತ್ನಿಗೆ ಅನಾರೋಗ್ಯ ಕಾಡುತ್ತೆ. ಆಗ ಆತನ ಬಳಿ ದುಡ್ಡುರುವುದಿಲ್ಲ. ಆತ ಹಣಕ್ಕಾಗಿ ಮೊರೆಹೋಗುವುದು ಸಿಂಗನ ಬಳಿಗೆ. ದೇಗುಲದ ಹುಂಡಿಯಿಂದ ಹಣ ಕಳವು ಮಾಡಿ ಆತನಿಗೆ ನೆರವಾಗುತ್ತಾನೆ ಸಿಂಗ. ಕಳ್ಳತನ ಮಾಡುವುದು ಅಪರಾಧ. ಅದರಲ್ಲೂ ದೇವರ ಹುಂಡಿ ಕದಿಯುವುದು ತಪ್ಪಲ್ಲವೆ? ಇಂತಹ ತರ್ಕದ ಪ್ರಶ್ನೆಗಳಿಗೆ ಅರ್ಥ ಹುಡುಕುತ್ತಾ ಹೋದರೆ ಸಿಂಗ ಚಿತ್ರವನ್ನು ನೋಡುವುದು ಕಷ್ಟವಾಗುತ್ತೆ. ನಿರ್ದೇಶಕ ವಿಜಯ್ ಕಿರಣ್ ಅಮ್ಮ-ಮಗನ ನಡುವಿನ ಮಮತೆಯ ಆಶಯವನ್ನು ಕಥೆಯಲ್ಲಿ ಹೇಳುವ ಉದ್ದೇಶ ಹೊಂದಿದ್ದರು ಅದು ನೆತ್ತರ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ"-ಪ್ರಜಾವಾಣಿ

ಭಂಗವಿಲ್ಲದ ಸಿಂಗನ ಸಂಗ

ಭಂಗವಿಲ್ಲದ ಸಿಂಗನ ಸಂಗ

ಆತ ಕೋಪಿಷ್ಠ. ಕೋಪವೇ ಆತನ ವೀಕ್‌ನೆಸ್ ಎಂದರೆ ತಪ್ಪಲ್ಲ. ಆದರೆ, ಒಳ್ಳೇ ಹುಡುಗ, ತಾಯಿ ಮುದ್ದಿನ ಮಗ. ಊರ ಮಂದಿಗೆ ನೆಚ್ಚಿನ ಸಿಂಗ. ಈ ಸಿಂಗನ ಸಂಗದೇ ಕೆಟ್ಟವರಿಲ್ಲ. ಆದರೆ, ಕೆಟ್ಟವರನ್ನು ಸಿಂಗ ಬಿಡೋದಿಲ್ಲ. ಇಷ್ಟು ಹೇಳಿದ ಮೇಲೆ ನಿಮಗೆ "ಸಿಂಗ' ಚಿತ್ರದ ಬಗ್ಗೆ ಒಂದು ಚಿತ್ರಣ ಬಂದಿರುತ್ತದೆ. ಮಜವಾದ ನಿರೂಪಣೆ ಇದೆ, ಹೆಚ್ಚಿನ ಟ್ವಿಸ್ಟ್ -ಟರ್ನ್ಗಳಿಲ್ಲದೇ ನೇರಾನೇರ ಸಾಗುವ ಕಥೆ ಮೂಲಕ ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸಲಾಗಿದೆ. ನಿರ್ದೇಶಕರು ಒನ್ ಲೈನ್‌ ಕಥೆ ಇಟ್ಟುಕೊಂಡು ಉಳಿದಂತೆ, ಮಾಸ್‌ ದೃಶ್ಯಗಳೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಮಾಸ್‌ ಪ್ರಿಯರ ಮೈನವಿರೇಳಿಸುವಂತ ಭರ್ಜರಿ ಆಕ್ಷನ್ ದೃಶ್ಯಗಳು ಚಿತ್ರದಲ್ಲಿವೆ. ಹಾಗಂತ ಕೇವಲ ಹೊಡೆದಾಟ, ಬಡಿದಾಟಕ್ಕೆ ಚಿತ್ರ ಸೀಮಿತವಾಗಿಲ್ಲ"- ಉದಯವಾಣಿ

Singa movie review

Singa movie review

Sinnga (Chiranjeevi Sarja), who has been raised by his mother Janakamma (Tara), is the proverbial do-gooder, but has a temper, which lands him in a lot of trouble with the police. The sheer number of cases against him turns out to be one reason for his reluctance to get married, apart from, of course, his anger, which he believes does not bode well for family life. Janakamma, though, is hell-bent on seeing her son settled in life, so, when she spots Geetha (Aditi Prabhudeva) at a temple, she decides that the latter will become her daughter-in-law. While Sinnga is dead against the idea, he ends up falling for Geetha, when she comes to his help after a deadly attack on him. With his love life on track, Sinnga has to still take care of Rudraswamy (Ravishankar), who wants to exact revenge for a public humiliation"- THE TIMES OF INDIA

English summary
Kannada actor Chiranjeevi Sarja and Aditi Prabhudeva starrer Singa film released on July 19th. Here is the critics review of this movie.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more