For Quick Alerts
  ALLOW NOTIFICATIONS  
  For Daily Alerts

  God Father Movie Review: ಚಿರಂಜೀವಿ ನಟನೆಯ ಗಾಡ್ ಫಾದರ್ ಸಿನಿಮಾ ಹೇಗಿದೆ?

  By ವಿಘ್ನೇಶ್ ವಿಜಯ್ ಕೆಕೆ
  |

  ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ಮೊದಲ ಬಾರಿಗೆ ಒಟ್ಟಿಗೆ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡಿರುವ 'ಗಾಡ್ ಫಾದರ್' ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆಯನ್ನು ಸೃಷ್ಟಿಸುವಲ್ಲಿ ಸಫಲವಾಗಿದೆ. ಈ ಸಿನಿಮಾ ಮಲಯಾಳಂ ಸಿನಿಮಾ 'ಲುಸೀಫರ್' ರೀಮೇಕ್‌ ಆಗಿದ್ದು, ಮೂಲ ಸಿನಿಮಾದಲ್ಲಿ ಮಲಯಾಳಂನ ಮೋಹನ್‌ಲಾಲ್ ನಟಿಸಿದ್ದರೆ, ನಿರ್ದೇಶನ ಮಾಡಿರುವುದು ಪೃಥ್ವಿರಾಜ್ ಸುಕುಮಾರನ್.

  'ಲುಸಿಫರ್‌'ಗೆ ಹೋಲಿಸಿದರೆ 'ಗಾಡ್ ಫಾದರ್' ಸಿನಿಮಾ ಹೆಚ್ಚು ರಿಚ್ ಆಗಿದೆ. ಸಿನಿಮಾದ ಆಕ್ಷನ್ ಭರ್ಜರಿಯಾಗಿದೆ. ಸಿನಿಮಾಕ್ಕೆ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಲುಸಿಫರ್‌ನ ಡಾರ್ಕ್ ಟೋನ್ ಅನ್ನು ಬದಲಾಯಿಸಿ, ಇಲ್ಲಿ ರಿಚ್ ಟೋನ್ ನೀಡಲಾಗಿದೆ. ಚಿರಂಜೀವಿಯ ಇಮೇಜಿಗೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಸಹ ಮಾಡಲಾಗಿದೆ.

  ಕೌಟುಂಬಿಕ ರಾಜಕಾರಣದ ಕತೆಯನ್ನು ಹೊಂದಿರುವ ಸಿನಿಮಾ 'ಗಾಡ್ ಫಾದರ್'. ಸಿಎಂ ಪಿಕೆಆರ್ ನಿಧನ ಹೊಂದಿರುತ್ತಾನೆ. ಅಸಲಿಗೆ ಪಿಕೆಆರ್‌ನ ಅಳಿಯ ಜಯದೇವನೇ ಅವನನ್ನು ಕೊಲ್ಲಿಸಿರುತ್ತಾನೆ, ಸಿಎಂ ಪಟ್ಟಕ್ಕೆ ಏರಲು ತಯಾರಾಗಿದ್ದಾನೆ. ಅವನೊಬ್ಬ ಕೆಟ್ಟ, ಕ್ರೂರ ವ್ಯಕ್ತಿ. ಆದರೆ ಅವನ ಪತ್ನಿ ಸತ್ಯ ಹಾಗಲ್ಲ, ಆಕೆ ಒಳ್ಳೆಯ ಮಹಿಳೆ, ನಿಯಮ-ನಿಷ್ಠೆ, ಜನಗಳ ಬಗ್ಗೆ ಕಾಳಜಿ ಇರುವಾಕೆ, ಆದರೆ ಪತಿಯ ಕಾರಣಕ್ಕೆ ಹಿಂಸೆ ಅನುಭವಿಸುತ್ತಿದ್ದಾಳೆ. ಇನ್ನೇನು ಜಯದೇವ್ ಸಿಎಂ ಆಗಬೇಕು ಎಂಬ ಸಮಯ ಬಂದಾಗ ರಂಗಕ್ಕೆ ಇಳಿಯುವುದೇ ಬ್ರಹ್ಮಾ ಪಾತ್ರಧಾರಿ ಮೆಗಾಸ್ಟಾರ್ ಚಿರಂಜೀವಿ. ಈತ ಪಿಕೆಆರ್‌ನ ಪುತ್ರನೇ, ಆದರೆ ಸತ್ಯಾಗೆ ನೇರವಾದ ಸಹೋದರನಲ್ಲ. ಸತ್ಯಾಗೆ ಬ್ರಹ್ಮಾ ಎಂದರೆ ಆಗದು, ಆತನಿಂದಲೇ ತನ್ನ ತಾಯಿ ಸತ್ತಿದ್ದಾಳೆಂಬುದು ಸತ್ಯಳ ನಂಬಿಕೆ.

  Rating:
  2.5/5

  ಆದರೆ ಬ್ರಹ್ಮ ಸಾಮಾನ್ಯವಾದ ವ್ಯಕ್ತಿಯಲ್ಲ. ಜಯ್‌ದೇವ್‌ಗೆ ಗೊತ್ತಿಲ್ಲದ ಹಲವು ಸಂಗತಿಗಳು ಬ್ರಹ್ಮ ನ ವ್ಯಕ್ತಿತ್ವದಲ್ಲಿವೆ. ಬ್ರಹ್ಮ ಅತ್ಯಂತ ಶಕ್ತಿಶಾಲಿ, ದೊಡ್ಡ ಪ್ರಭಾವ ಹೊಂದಿರುವ ವ್ಯಕ್ತಿ, ತನ್ನ ತಂದೆ ಪಿಆರ್‌ಕೆ ಸರ್ಕಾರ ಸಂಕಷ್ಟದಲ್ಲಿದ್ದಾಗ ಬ್ರಹ್ಮನೇ ಹಲವು ಬಾರಿ ಸಹಾಯ ಮಾಡಿದ್ದಾನೆ. ಈ ಬಾರಿ ಹೇಗೆ ತನ್ನ ಸಹೋದರಿಯನ್ನು ಜಯ್‌ದೇವ್‌ನಿಂದ ಕಾಪಾಡುತ್ತಾನೆ, ಹೇಗೆ ರಾಜ್ಯವನ್ನು ಕೆಟ್ಟ ರಾಜಕಾರಣಿಯೊಬ್ಬನಿಂದ ತಡೆಯುತ್ತಾನೆ ಎಂಬುದು ಸಿನಿಮಾದ ಕತೆ.

  Chiranjeevi Starrer God Father Telugu Movie Kannada Review


  ಸಿನಿಮಾದಲ್ಲಿ ಚಿರಂಜೀವಿನ ನಟನೆ, ಸ್ಕ್ರೀನ್ ಪ್ರೆಸೆನ್ಸ್ ಅದ್ಭುತವಾಗಿದೆ. ಜೊತೆಗೆ ನಯನತಾರಾ ನಟನೆಯೂ ಅದ್ಭುತ. ಆಕೆಯ ಗಾಂಭೀರ್ಯ ಗಮನ ಸೆಳೆಯುತ್ತದೆ. ಈ ಇಬ್ಬರು ನಟರ ನಟನೆ ನೆನಪುಳಿಯುತ್ತದೆ. ಮೂಲ ಸಿನಿಮಾದ ಕತೆಗೆ ಹೆಚ್ಚು ಬದಲಾವಣೆ ಮಾಡದೇ ಇರುವುದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಮಾಸೂಮ್ ಭಾಯ್ ಪಾತ್ರದಲ್ಲಿ ಸಲ್ಮಾನ್ ಖಾನ್ ಒಳ್ಳೆಯ ಸರ್ಪ್ರೈಸ್ ನೀಡುತ್ತಾರೆ. ನಿರ್ದೇಶಕ ಪುರಿ ಜಗನ್ನಾಥ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ.

  ಸಿನಿಮಾ ರೀಮೇಕ್ ಎಂಬುದು ನೋಡುವ ಪ್ರೇಕ್ಷಕನನ್ನು ಸಿನಿಮಾದ ಕತೆಯನ್ನು ಮೆಚ್ಚಿಕೊಳ್ಳುವುದರಿಂದ ಅಪ್ರಜ್ಞಾಪೂರ್ವಕವಾಗಿ ತಡೆಯುತ್ತದೆ, ಸಿನಿಮಾದ ಕೆಲವು ಆಕ್ಷನ್ ದೃಶ್ಯಗಳು ಕೆಲವೆಡೆ ಸಾಮಾನ್ಯ ಎನಿಸುತ್ತದೆ. ಕೆಲವೆಡೆ ದೃಶ್ಯಗಳು ತೀರ ನಿರೀಕ್ಷಿತ ಎನಿಸುತ್ತವೆ. ಪಾತ್ರಗಳ ವರ್ತನೆಯೂ ಸಾಮಾನ್ಯವಾಗಿದೆ ಎನಿಸುತ್ತದೆ.

  English summary
  Chiranjeevi-Salman Khan starrer God Father Telugu movie Kannada review. Movie is remake of Malayalam movie Lucifer.
  Thursday, October 6, 2022, 9:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X