Don't Miss!
- Automobiles
ಇನ್ನೋವಾ ಕ್ರಿಸ್ಟಾ ಡೀಸಲ್ ಸೇರಿದಂತೆ ಇದೆ ತಿಂಗಳು ಮಾರುಕಟ್ಟೆ ಪ್ರವೇಶಿಸಲಿವೆ 8 ಹೊಸ ಕಾರುಗಳು
- News
Breaking; ಒಂದೇ ಕಾರಿನಲ್ಲಿ ತೆರಳಿದ ಸಿಎಂ, ರಮೇಶ್ ಜಾರಕಿಹೊಳಿ
- Sports
ರಣಜಿ ಟ್ರೋಫಿ: ಕ್ವಾ. ಫೈನಲ್ನಲ್ಲಿ ಕರ್ನಾಟಕ vs ಉತ್ತರಾಖಂಡ್ ಸೆಣೆಸಾಟ: 2ನೇ ದಿನದ Live score
- Finance
GST Collections in January 2023: ಜನವರಿಯಲ್ಲಿ ಬರೋಬ್ಬರಿ 1.55 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ!
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Waltair Veerayya Review: ಚಿರಂಜೀವಿ.. ರವಿತೇಜ ಬಿಟ್ಟರೆ ಸಿನಿಮಾದಲ್ಲಿ ಮೆಚ್ಚುವಂತಹದ್ದೇನಿಲ್ಲ!
ಸಂಕ್ರಾಂತಿ ಹಾಗೂ ಹೊಸ ವರ್ಷದ ಸಂಭ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ ತಮ್ಮ ಅಭಿಮಾನಿಗಳಿಗೆ 'ವಾಲ್ತೇರು ವೀರಯ್ಯ' ಸಿನಿಮಾವನ್ನೇ ಗಿಫ್ಟ್ ಮಾಡಿದ್ದಾರೆ. ಮೆಗಾಸ್ಟಾರ್ ಜೊತೆ ಮಾಸ್ ಮಹಾರಾಜ ರವಿತೇಜ ಮತ್ತು ಶ್ರುತಿ ಹಾಸನ್ ಗ್ರ್ಯಾಂಡ್ ಎಂಟ್ರಿ ಈ ಸಿನಿಮಾದಲ್ಲಿದೆ.
'ವಾಲ್ತೇರು ವೀರಯ್ಯ' ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ಮೆಗಾಸ್ಟಾರ್ ಲುಕ್ ನೋಡಿ ಅವರ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಹುಟ್ಟಾಕಿತ್ತು. ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು ಪ್ರೇಕ್ಷಕರ ಮುಂದೆ ಬಂದಿದ್ದ ಸಿನಿಪ್ರಿಯರಿಗೆ ಖುಷಿ ಕೊಟ್ಟಿದೆಯೇ? ಅನ್ನೋದನ್ನು ನೋಡೋಣ.

'ವಾಲ್ತೇರು ವೀರಯ್ಯ' ಸ್ಟೋರಿ ಏನು?
ವಾಲ್ತೇರು ಪೊಲೀಸ್ ಠಾಣೆಯಿಂದ ಅಂತರಾಷ್ಟ್ರೀಯ ಡ್ರಗ್ ಮಾಫಿಯಾದ ಲೀಡರ್ ಸೊಲೊಮನ್(ಬಾಬಿ ಸಿಂಹ) ಪರಾರಿಯಾಗುತ್ತಾನೆ. ಈ ಘಟನೆ ಬಳಿಕ ಪೊಲೀಸ್ ಅಧಿಕಾರಿ(ರಾಜೇಂದ್ರ ಪ್ರಸಾದ್)ಯನ್ನು ಅಮಾನತು ಮಾಡಲಾಗುತ್ತೆ. ಹೀಗಾಗಿ ವಾಲ್ತೇರುವಿನ ಮೀನುಗಾರ ವೀರಯ್ಯನ ಮೊರೆ ಹೋಗುತ್ತಾರೆ. ಇದೇ ವೇಳೆ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿರೋದ್ರಿಂದ ಸೊಲೊಮನ್ ಕರೆತರಲು ವೀರಯ್ಯ ಪೊಲೀಸರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾನೆ. ಬಳಿಕ ಮುಂದೇನಾಗುತ್ತೆ? ಅನ್ನೋದೇ ಕಥೆ.

'ವಾಲ್ತೇರು ವೀರಯ್ಯ' ಪಕ್ಕಾ ಕಮರ್ಷಿಯಲ್
ಅಂತರಾಷ್ಟ್ರೀಯ ಡ್ರಗ್ ಡೀಲರ್ ಸೊಲೊಮನ್ ಬಂಧಿಸಿದ ದೃಶ್ಯದಿಂದ ಸಿನಿಮಾ ಆರಂಭ ಆಗುತ್ತೆ. ಇಲ್ಲಿಂದ ಸೊಲೊಮನ್ ಸೀಸರ್ ಪರಾರಿ, ಪೊಲೀಸ್ ಅಧಿಕಾರಿಯ ಅಮಾನತು ಹೀಗೆ ಒಂದರ ಹಿಂದೊಂದು ದೃಶ್ಯಗಳು ಬರುತ್ತವೆ. 'ವಾಲ್ತೇರು ವೀರಯ್ಯ'ಪಾತ್ರ ಎಷ್ಟು ಪವರ್‌ಫುಲ್ ಅನ್ನೋದನ್ನು ತೋರಿಸುತ್ತೆ. ಪಾರ್ಟಿ, ಫೈಟ್, ಶೃತಿ ಹಾಸನ್ ಚಿರಂಜೀವಿ ಜೊತೆಗಿನ ಡ್ಯಾನ್ಸ್, ಅತಿಲೋಕ ಸುಂದರಿ ಹಾಡು ಮೆಗಾಫ್ಯಾನ್ಸ್‌ಗೆ ಕಿಕ್ ಕೊಡುತ್ತೆ.ಇದು ಫಸ್ಟ್ ಹಾಫ್‌ನ ಹೈಲೈಟ್.

ರವಿತೇಜ ಎಂಟ್ರಿ ಯಾವಾಗ?
ಸೆಕೆಂಡ್ ಹಾಫ್ ಬಳಿಕ ಮಾಸ್ ಮಹಾರಾಜ ರವಿತೇಜ ಗ್ರ್ಯಾಂಡ್ ಎಂಟ್ರಿ ಆಗುತ್ತೆ. ಪೊಲೀಸ್ ಅಧಿಕಾರಿ ವಿಕ್ರಮ್ ಸಾಗರ್ ಆಗಿ ಪವರ್‌ಫುಲ್ ಲುಕ್ ಕೊಟ್ಟಿದ್ದಾರೆ. ಆದರೆ, ಚಿರಂಜೀವಿ ಹಾಗೂ ರವಿತೇಜ ನಡುವಿನ ದೃಶ್ಯಗಳು ಪ್ರೇಕ್ಷಕರಿಗೆ ಕಿಕ್ ಕೊಡಲು ವಿಫಲವಾಗಿವೆ. ರವಿತೇಜಾ ಮೇಲೆ ಆಗುವ ದಾಳಿಯ ದೃಶ್ಯಗಳು ಬೇಸರ ತರಿಸುವುದಿಲ್ಲ. ಇನ್ನು ಕ್ಲೈಮ್ಯಾಕ್ಸ್ ಕೂಡ ರೆಗ್ಯೂಲರ್ ಅನಿಸೋದ್ರಿಂದ ಸಿನಿಮಾ ವಿಶೇಷ ಅಂತ ಅನಿಸೋದಿಲ್ಲ.
"ನನ್ನ ಮೇಲೆ ವಿಷ ಪ್ರಯೋಗ": ಶಾಕಿಂಗ್ ಸಂಗತಿ ಬಿಚ್ಚಿಟ್ಟ ಚಿರಂಜೀವಿ

ನಿರ್ದೇಶಕ ಬಾಬಿ ಎಡವಿದ್ದೆಲ್ಲಿ?
ನಿರ್ದೇಶಕ ಬಾಬಿ ಕಥೆ, ಹಾಗು ಚಿತ್ರಕಥೆ ಹೆಣೆಯುವಲ್ಲಿ ಸೋತಿದ್ದಾರೆ. 80-90ರ ದಶಕದಲ್ಲಿಯೂ ಮಾಡದಂತಹ ಚಿತ್ರಕಥೆ ಮಾಡಿದ್ದಾರೆ ಎಂದೆನಿಸುತ್ತೆ. ಇಂಟರ್‌ವಲ್ ಸಮಯಕ್ಕೂ ಮುನ್ನ 10 ನಿಮಿಷ ಹಾಗೂ ನಂತರದ ಕೆಲವು ದೃಶ್ಯಗಳು ಕಿಕ್ ಕೊಡುತ್ತವೆ. ಇದು ಬಿಟ್ಟರೆ ಸಿನಿಮಾ ಸಿನಿಪ್ರಿಯರನ್ನು ಹಾಗೂ ಚಿರಂಜೀವಿ ಅಭಿಮಾನಿಗಳನ್ನು ನಿರಾಸೆಗೊಳಿಸುತ್ತೆ.

ಚಿರಂಜೀವಿಗೆ ಹೊಂದುವ ಪಾತ್ರ
'ವಾಲ್ತೇರು ವೀರಯ್ಯ' ಪಾತ್ರ ಮೆಗಾಸ್ಟಾರ್ ಚಿರಂಜೀವಿಗೆ ಹೇಳಿ ಮಾಡಿಸಿದಂತಿದೆ. ಕಥೆ ಮತ್ತು ಚಿತ್ರಕಥೆ ಹೆಣೆಯುವಲ್ಲಿ ಸೋಲು ಕಂಡರೂ, ಚಿರಂಜೀವಿ ಮ್ಯಾನರಿಸಂ ಹಾಗೂ ನಟನೆ ಸಿನಿಮಾ ನಿಲ್ಲುವಂತೆ ನೋಡಿಕೊಂಡಿದ್ದಾರೆ. 90ರ ದಶಕದಲ್ಲಿ ಬಂದಿದ್ದ ಅವರದ್ದೇ ಟಾಪ್ ಸಿನಿಮಾಗಳ ಪಾತ್ರಗಳನ್ನು ಚಿರಂಜೀವಿ ನೆನಪಿಸುತ್ತಾರೆ. ಬಾಸ್ ಪಾರ್ಟಿ ಮತ್ತು ಪುನಕಲಾ ಹಾಡುಗಳನ್ನು ಇಷ್ಟ ಆಗುತ್ತವೆ. ಇನ್ನು ಕೆಲವು ದೃಶ್ಯಗಳಲ್ಲಿ ಶ್ರುತಿ ಹಾಸನ್ ಸುಂದರವಾಗಿ ಕಂಡರೂ, ಗ್ಲಾಮರ್‌ಗಷ್ಟೇ ಸೀಮಿತ ಅಂತ ಅನಿಸುತ್ತಾರೆ.

ರವಿತೇಜ ಪರ್ಫಾಮೆನ್ಸ್ ಹೇಗಿದೆ?
ಮಾಸ್ ಮಹಾರಾಜ ರವಿತೇಜ ಇಮೇಜ್‌ಗೆ ತಕ್ಕಂತೆ ದೃಶ್ಯಗಳನ್ನು ಹೆಣೆಯಲಾಗಿದೆ. ಸೆಕೆಂಡ್‌ಹಾಫ್‌ನಲ್ಲಿ ಮಾಸ್ ಮಹಾರಾಜ ರವಿತೇಜ ಎಂಟ್ರಿ ಆಗುತ್ತೆ. ಎಂದಿನಂತೆ, ರವಿತೇಜ ತಮ್ಮ ಟ್ರೇಡ್‌ಮಾರ್ಕ್ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಇನ್ನುಳಿದಂತೆ ಬಾಬಿ ಸಿಂಹ, ಪ್ರಕಾಶ್ ರಾಜ್, ರಾಜೇಂದ್ರ ಪ್ರಸಾದ್ ಮುಂತಾದ ಪಾತ್ರಗಳಲ್ಲಿ ಹೊಸತೇನೂ ಇಲ್ಲ.

ಸಂಗೀತವೇ ಸಿನಿಮಾದ ಹೈಲೈಟ್
ಈ ಸಿನಿಮಾಗೆ ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಇದೆ. ಡಿಎಸ್‌ಪಿ ಹಾಕಿದ ಟ್ಯೂನ್ಸ್ ಹಾಗೂ ಬಿಜಿಎಂ ಸಿನಿಮಾದ ಹೈಲೈಟ್. ಮ್ಯೂಸಿಕ್ ಜೊತೆಗೆ ಕಲಾ ನಿರ್ದೇಶನ ಕೂಡ ಸಿನಿಮಾ ಹೈಲೈಟ್ ಎನಿಸಿಕೊಳ್ಳುತ್ತವೆ.

ಪ್ಲಸ್ ಹಾಗೂ ಮೈನಸ್ ಏನು?
ಪ್ಲಸ್ ಪಾಯಿಂಟ್ಸ್
ಚಿರಂಜೀವಿ ಹಾಗೂ ರವಿತೇಜ ಎಂಟ್ರಿ ಸೀನ್
ಶ್ರುತಿ ಹಾಸನ್ ಗ್ಲಾಮರ್
ಇಂಟರ್‌ವಲ್ ದೃಶ್ಯಗಳು
ದೇವಿ ಶ್ರೀ ಪ್ರಸಾದ್ ಮ್ಯೂಸಿಕ್
ಮೈನಸ್ ಪಾಯಿಂಟ್ಸ್ ಏನು?
ಅದೇ ಹಳೆ ಕಥೆ
ಕೆಲವು ಕಾಮಿಡಿ ದೃಶ್ಯಗಳು
ಬಾಬಿ ನಿರ್ದೇಶನ