Chitrakatha Review : ಅಘೋರಿಯ ಆಟ, ನಾಯಕನಿಗೆ ಪ್ರಾಣಸಂಕಟ

ಐದು ಗೆಳೆಯರು ಪ್ರವಾಸ ಹೋಗುತ್ತಾರೆ. ಆ ಪ್ರವಾಸದಲ್ಲಿ ಭಯಾನಕ ಘಟನೆಗಳು ನಡೆಯುತ್ತವೆ. ಆ ಘಟನೆಗಳ ಹಿಂದಿನ ಚಿತ್ರಕಥೆಯೇ 'ಚಿತ್ರಕಥಾ' ಸಿನಿಮಾ. ಕಥೆಯ ಒನ್ ಲೈನ್ ಕೇಳಿದರೆ, ಈ ರೀತಿಯ ಸಿನಿಮಾ ಈಗಾಗಲೇ ಬಹಳ ಬಂದಿವೆ ಎನಿಸಿದರೂ, ಇದು ಕೊಂಚ ಬೇರೆ ರೀತಿ ಇದೆ. ಥ್ರಿಲ್ಲರ್ ಜಾನರ್ ನಲ್ಲಿ ಬಂದಿರುವ ಈ ಸಿನಿಮಾ ನೋಡಲು ಬೇಸರ ಆಗಲ್ಲ. ಹೊಸಬರ ಈ ಪ್ರಯತ್ನ ಚೆನ್ನಾಗಿದೆ.

Rating:
3.0/5

ಸಿನಿಮಾ : ಚಿತ್ರಕಥಾ

ನಿರ್ದೇಶಕ : ಯಶಸ್ವಿ ಬಾಲಾದಿತ್ಯ

ನಟನೆ : ಸುಜಿತ್ ರಾಠೋಡ್, ಸುಧಾರಾಣಿ, ಬಿ ಜಯಶ್ರೀ, ದಿಲೀಪ್ ರಾಜ್

ಬಿಡುಗಡೆ ದಿನಾಂಕ : 12 ಜುಲೈ 2019

ನಿನಗಿಂತ ಸಿನಿಮಾನೇ ಹೆಚ್ಚು...

ನಿನಗಿಂತ ಸಿನಿಮಾನೇ ಹೆಚ್ಚು...

'ನಿನಗಿಂತ ಸಿನಿಮಾನೇ ಹೆಚ್ಚು...' ಎಂದು ಹೇಳುತ್ತ ನಾಯಕ ತಾನು ಪ್ರೀತಿಸಿದ ಹುಡುಗಿಯನ್ನು ದೂರ ಮಾಡಿಕೊಳ್ಳುತ್ತಾನೆ. ತನ್ನ ಕಥೆ ಹಿಡಿದು ಬೀದಿ ಬೀದಿ ಅಲೆಯುತ್ತಾನೆ. ಆದರೆ, ಅವಕಾಶಗಳು ಮಾತ್ರ ಸಿಗುವುದಿಲ್ಲ. ಇದರಿಂದ ಮಾನಸಿಕ ಹಿಂಸೆ ಪಡುವ ಆತನನ್ನು ಗೆಳೆಯರು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ಇಲ್ಲಿಂದ ಅಸಲಿ ಸಿನಿಮಾ ಶುರು ಆಗುತ್ತದೆ.

ಕುತೂಹಲ ಮೂಡಿಸೋ ಅಘೋರಿ ಪಾತ್ರ

ಕುತೂಹಲ ಮೂಡಿಸೋ ಅಘೋರಿ ಪಾತ್ರ

ಸೋಲು ಒಂದು ಕಡೆಯಾದರೆ, ಮತ್ತೊಂದು ಕಡೆ ಅಘೋರಿಯ ಕಾಟದಿಂದ ನಾಯಕ ರಾಣಾ ಹುಚ್ಚನ ರೀತಿ ಆಗುತ್ತಾನೆ. ಪ್ರವಾಸಕ್ಕೆ ಹೋದ ಸ್ನೇಹಿತರಿಗೆ ಭಯಾನಕ ಅನುಭವ ಶುರು ಆಗುತ್ತವೆ. ರಾಣಾ ನನ್ನು ಹಿಂಬಾಲಿಸಿ ಅಘೋರಿಯೂ ಅಲ್ಲಿಗೆ ಬರುತ್ತಾನೆ. ಹೀಗಿರುವಾಗ, ಯಾಕೆ ಆ ಅಘೋರಿ ರಾಣಾನಿಗೆ ಹಿಂಸೆ ನೀಡುತ್ತಾನೆ ಎನ್ನುವುದು ಚಿತ್ರದ ಕುತೂಹಲಕಾರಿ ಅಂಶ.

ಸರಿ - ತಪ್ಪು ಎರಡು ಇವೆ

ಸರಿ - ತಪ್ಪು ಎರಡು ಇವೆ

ಸಿನಿಮಾದ ಕೆಲವು ಅಂಶಗಳು ಇಷ್ಟ ಆದ್ರೆ, ಇನ್ನು ಕೆಲವು ಅಂಶಗಳು ಇನ್ನಷ್ಟು ಚೆನ್ನಾಗಿ ಮಾಡಬೇಕಿತ್ತು ಎಂಬ ಭಾವ ಮೂಡಿಸುತ್ತದೆ. ಕಥೆ, ಅದಕ್ಕೆ ಬೆರೆತ ಹಾಸ್ಯ, ಸೆಕೆಂಡ್ ಹಾಫ್ ಟ್ವಿಸ್ಟ್, ಅಘೋರಿ ಪಾತ್ರ ಎಲ್ಲವೂ ಚಿತ್ರದ ಹೈಲೈಟ್ ಆಗಿದೆ. ಆದರೆ, ಈ ಥ್ರಿಲ್ಲರ್ ಸಿನಿಮಾಗೆ ಇನ್ನಷ್ಟು ಟ್ವಿಸ್ಟ್ ಟರ್ನ್, ಚುರುಕಾದ ಚಿತ್ರಕಥೆಯ ಅಗತ್ಯ ಇತ್ತು. ಸಿನಿಮಾದ ಕೆಲ ದೃಶ್ಯಗಳಿಗೆ ಕಡಿವಾಣ ಹಾಕಬಹುದಿತ್ತು.

ಬಲ ತುಂಬಿದ ಅನುಭವಿ ನಟರು

ಬಲ ತುಂಬಿದ ಅನುಭವಿ ನಟರು

ರಾಣಾ ಪಾತ್ರದಲ್ಲಿ ನಟಿಸಿದ ಕಲಾವಿದ ಸುಜಿತ್ ರಾಠೋಡ್ ನಟನೆ ಚೆನ್ನಾಗಿದೆ. ಬಿಟ್ಟರೆ ಹೊಸಬರ ಅಭಿನಯ ಓಕೆ ಓಕೆ ಅಷ್ಟೇ. ಮೊದಲ ಸಿನಿಮಾ ಆಗಿರುವ ಕಾರಣ ಅವರನ್ನು ಮನ್ನಿಸಬಹುದು. ಇತ್ತ ನಟಿ ಸುಧಾರಾಣಿ, ಬಿ ಜಯಶ್ರೀ, ದಿಲೀಪ್ ರಾಜ್ ಅನುಭವ ಪಾತ್ರಕ್ಕೆ ಬಲ ನೀಡಿದೆ. ಅನುಷಾ ರಾವ್ ಆಕ್ಟಿಂಗ್ ಕೂಡ ಅಡ್ಡಿ ಇಲ್ಲ. ಯಮನ ಪಾತ್ರವೂ ಚೆನ್ನಾಗಿದೆ

ಹಿನ್ನಲೆ ಸಂಗೀತ, ಕ್ಯಾಮರಾ ವರ್ಕ್, ನಿರ್ದೇಶಕ

ಹಿನ್ನಲೆ ಸಂಗೀತ, ಕ್ಯಾಮರಾ ವರ್ಕ್, ನಿರ್ದೇಶಕ

ಥ್ರಿಲ್ಲರ್ ಸಿನಿಮಾ ಆಗಿರುವ ಕಾರಣ ಹಿನ್ನಲೆ ಸಂಗೀತ ಪರಿಣಾಮಕಾರಿಯಾಗಿದೆ. ಕ್ಯಾಮರಾ ವರ್ಕ್ ಅಡ್ಡಿ ಇಲ್ಲ. ಆದರೆ, ಇನ್ನಷ್ಟು ಒಳ್ಳೆಯ ದೃಶ್ಯಗಳನ್ನು ಕಟ್ಟಿಕೊಡಲು ಅವಕಾಶ ಇತ್ತು. ಹೊಸ ನಟರನ್ನು ಇಟ್ಟುಕೊಂಡು, ನಿರ್ದೇಶಕ ಯಶಸ್ವಿ ಬಾಲಾದಿತ್ಯ ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ.

ಥ್ರಿಲ್ಲರ್ ಸಿನಿಮಾ ಇಷ್ಟ ಪಡುವವರು ಮಿಸ್ ಮಾಡಬೇಡಿ

ಥ್ರಿಲ್ಲರ್ ಸಿನಿಮಾ ಇಷ್ಟ ಪಡುವವರು ಮಿಸ್ ಮಾಡಬೇಡಿ

'ಚಿತ್ರಕಥಾ' ಚಿತ್ರವನ್ನು ಕಥೆಯ ಕಾರಣಕ್ಕೆ ಎಲ್ಲರೂ ನೋಡಬಹುದು. ಬೇರೆ ರೀತಿಯ ಪ್ರಯತ್ನ ಇಲ್ಲಿ ಕಾಣುತ್ತದೆ. ಹೊಸಬರು ಸೇರಿ ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ. ಫ್ಯಾಮಿಲಿ ಸಮೇತ ಆರಾಮಾಗಿ ಚಿತ್ರಮಂದಿರದಲ್ಲಿ ಕೂರಬಹುದು. ಥ್ರಿಲ್ಲರ್ ಸಿನಿಮಾ ಇಷ್ಟ ಪಡುವವರು ಮಿಸ್ ಮಾಡಬೇಡಿ.

More from Filmibeat

English summary
'Chitrakatha' Kannada movie review. The movie have a complete thrilling subject.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X