Cocktail- 2 X Review: 'ಕಾಕ್‌ಟೇಲ್' ರುಚಿ ಉಳಿಸಿದ್ದು ಕೃತಿ; ರಶ್ಮಿಕಾ ಬೇಗ ಹಿಂದಿ ಟೀಚರ್ ಹುಡುಕ್ಕೊಳ್ಳಿ
ಶಾಹಿದ್ ಕಪೂರ್, ಕೃತಿ ಸನೂನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಕಾಕ್‌ಟೇಲ್- 2' ಸಿನಿಮಾ ವಿಶ್ವದಾದ್ಯಂತ ತೆರೆಗೆ ಬಂದಿದೆ. ಹೊಮಿ ಅಡಜಾನಿಯಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ರೊಮ್ಯಾಂಟಿಕ್ ಟ್ರಯಾಂಗಲ್ ಲವ್ ಸ್ಟೋರಿ ಸಿನಿಮಾ. ಕಲರ್‌ಫುಲ್ ಸಾಂಗ್ಸ್ ಹಾಗೂ ಟ್ರೈಲರ್ ಮೂಲಕ ಗಮನ ಸೆಳೆದಿದ್ದ ಸಿನಿಮಾ ಈಗ ತೆರೆಗೆ ಬಂದಿದೆ.
ಈಗಾಗಲೇ 'ಕಾಕ್‌ಟೇಲ್- 2' ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವರು ಅದ್ಭುತ ಸಿನಿಮಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಾಕಷ್ಟು ಜನ ರಶ್ಮಿಕಾ ಪಾತ್ರ ಹಾಗೂ ಹಿಂದಿ ಭಾಷೆ ಉಚ್ಛಾರಣೆ ಬಗ್ಗೆ ಚಕಾರ ಎತ್ತಿದ್ದಾರೆ. ಕೃತಿ ಸನೂನ್ ಕಾರಣಕ್ಕೆ ಸಿನಿಮಾ ಸೋಲಿನಿಂದ ಬಚಾವ್ ಆಗಿದೆ. ಇಲ್ಲದಿದ್ದರೆ ಕಷ್ಟವಾಗುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದು ಪಕ್ಕಾ ಬಾಲಿವುಡ್ ಸ್ಟೈಲ್ ಗ್ಲಾಮರಸ್ ಸಿನಿಮಾ. ಬಿಕಿನಿ ಬಾಲೆಯರು, ಕಾಮಿಡಿ, ಫ್ರೆಂಡ್ಶಿಪ್, ಬ್ರೇಕಪ್ ಹೀಗೆ ಕಲರ್‌ಫುಲ್ ಆಗಿ ಕಟ್ಟಿಕೊಟ್ಟಿರುವ ಸಿನಿಮಾ. ಬಾಲಿವುಡ್ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಚಿತ್ರ ತೆರೆಗೆ ತರಲಾಗಿದೆ. ಸಿನಿಮಾ ನೋಡಿದವರ ಅಭಿಪ್ರಾಯ ಮುಂದೆ ಓದಿ.
ಕ್ಲೈಮ್ಯಾಕ್ಸ್ ಸೂಪರ್
'ಕಾಕ್‌ಟೇಲ್- 2' ಒಂದು ಸುಂದರ ಪ್ರೇಮಕಥೆ. ಆರಂಭದಿಂದ ಅಂತ್ಯದವರೆಗೆ ಆಕರ್ಷಕವಾಗಿ ಮೂಡಿಬಂದಿದೆ. ಚಿತ್ರದಲ್ಲಿ ಶಾಹಿದ್, ರಶ್ಮಿಕಾ, ಕೃತಿ ಮೂವರು ಅದ್ಭುತ ಅಭಿನಯ ನೀಡಿದ್ದಾರೆ. ಸಂಗೀತ ಮತ್ತು ಛಾಯಾಗ್ರಹಣಕ್ಕೆ ಧನ್ಯವಾದಗಳು. ಕ್ಲೈಮ್ಯಾಕ್ಸ್ ಸೂಪರ್.. ಬಾಲಿವುಡ್ ಶೈಲಿಯ ಗ್ಲಾಮರಸ್ ಜೊತೆಗೆ ಒಳ್ಳೆ ಮನರಂಜನೆಯ ಸಿನಿಮಾ ಎನ್ನುವುದು ಪ್ರೇಕ್ಷಕರೊಬ್ಬರ ಅಭಿಪ್ರಾಯ.
ಶಾಹಿದ್‌ಗೆ ಮತ್ತೊಂದು ಫ್ಲಾಪ್
ನಾನು 'ಕಾಕ್‌ಟೇಲ್- 2' ಸಿನಿಮಾ ನೋಡ್ದೆ. ಬೋರ್ ಹೊಡೆಸುವ ಸೀಕ್ವೆಲ್ ಚಿತ್ರಕಥೆ ಮತ್ತು ಸಾಕಷ್ಟು ಓವರ್ ಆಕ್ಟಿಂಗ್..
ಕೃತಿ ಸನೋನ್ ಚಿತ್ರವನ್ನು ಉಳಿಸಿದ್ದಾರೆ. ಆಕೆಗಾಗಿ ಸಿನಿಮಾ ನೋಡಬಹುದು. ಶಾಹಿದ್ ಕಪೂರ್‌ಗೆ ಮತ್ತೊಂದು ಫ್ಲಾಪ್. ಅವರು 2 ದಶಕಗಳಿಗೂ ಹೆಚ್ಚು ಕಾಲ ಉದ್ಯಮದಲ್ಲಿ ಹೇಗೆ ಬದುಕುಳಿದಿದ್ದಾರೆ ಎಂಬುದು ಅಚ್ಚರಿ ಮೂಡಿಸುತ್ತದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ರಶ್ಮಿಕಾ ಹಿಂದಿ ಕಷ್ಟ ಕಷ್ಟ
ಕೃತಿ ಸನೂನ್ ಒಂದು ಬ್ಯಾಂಗ್‌ನೊಂದಿಗೆ ಆಗಮಿಸಿ 'ಕಾಕ್‌ಟೇಲ್-2' ಚಿತ್ರಕ್ಕೆ ಅಕ್ಷರಶಃ ಜೀವ ತುಂಬುತ್ತಾರೆ.. ಶಾಹಿದ್ ಕಪೂರ್ ಅವರದ್ದು ಓವರ್ ಆಕ್ಟಿಂಗ್ ಅನ್ನಿಸುತ್ತೆ. ಅವರು ಮಾಡದಿದ್ದರೂ, ನಿರ್ದೇಶಕರು ಅವರನ್ನು ಹಾಗೆ ಮಾಡುವಂತೆ ಮಾಡಿದಂತಿದೆ. ರಶ್ಮಿಕಾ ಮಂದಣ್ಣ ಗುಡ್‌ಬೈ, ಛಾವಾ, ತಮ್ಮಾ ಚಿತ್ರಗಳ ರೀತಿಯಲ್ಲಿ ಹಿಂದಿ ಉಚ್ಛಾರಣೆ ಕಾರಣಕ್ಕೆ ಬೇಸರ ಮೂಡಿಸುತ್ತಾರೆ ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಕೃತಿ ಸನೂನ್ ಸೂಪರ್
'ಕಾಕ್‌ಟೇಲ್ 2' ಚಿತ್ರದಲ್ಲಿ ಕೃತಿ ಸನೂನ್ ಸ್ಕ್ರೀನ್ ಪ್ರಸೆನ್ಸ್ ರಶ್ಮಿಕಾ ಅವರನ್ನು ಸಂಪೂರ್ಣವಾಗಿ ಮರೆಮಾಡಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆಲಿಯಾ ಭಟ್ ಮತ್ತು ಶಾರ್ವರಿ ರೀತಿಯ ನಟಿಯರು ಸಹ ಕೃತಿ ಜೊತೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಮಗದೊಬ್ಬರು ಟ್ವೀಟ್ ಮಾಡಿದ್ದಾರೆ.
ನಿರಾಶಾದಾಯಕ ಅನುಭವ
ಬಾಲಿವುಡ್ ಸಿನಿಮಾ ವಿಮರ್ಶಕ ವಿಶ್ವಜಿತ್ ಪಾಟೀಲ್ ಸುದೀರ್ಘವಾಗಿ ಸಿನಿಮಾ ಬಗ್ಗೆ ಪೋಸ್ಟ್ ಮಾಡಿದ್ದಾರೆ. 'ಕಾಕ್‌ಟೇಲ್-2' ಒಂದು ದುಃಸ್ವಪ್ನ ಮತ್ತು ಆತ್ಮವಿಲ್ಲದ ಸೀಕ್ವೆಲ್ ಎನ್ನುವುದಕ್ಕೆ ಪರಿಪೂರ್ಣ ಉದಾಹರಣೆಯಾಗಿದೆ. ಒಂದು ರೋಮಾಂಚಕಾರಿ, ಮಾಡ್ರನ್ ರಿಲೇಷನ್‌ಶಿಪ್ ಡ್ರಾಮಾ ಎಂದು ಆಶಿಸುತ್ತಾ ನೋಡಲು ಪ್ರಾರಂಭಿಸಿದೆ. ಆದರೆ ಇದು ಸಂಪೂರ್ಣವಾಗಿ ನೋವಿನ, ಟೊಳ್ಳು ಮತ್ತು ನಿರಾಶಾದಾಯಕ ಅನುಭವ ನೀಡಿತು. ಶಾಹಿದ್ ಬಹಳ ಸ್ಟೈಲಿಶ್ ಆಗಿ ಕಂಡರೂ ನಟನೆ ಮಾತ್ರ ಹಳಸಲು ಎನ್ನುವಂತಿದೆ. ರಶ್ಮಿಕಾ ಆಯ್ಕೆ ಸರಿಯಾಗಿಲ್ಲ. ಆಕೆಯ ಪಾತ್ರವನ್ನು ಕಟ್ಟಿಕೊಟ್ಟಿರುವ ರೀತಿ ಚೆನ್ನಾಗಿಲ್ಲ. ಇನ್ನು ಹಿಂದಿ ಉಚ್ಚಾರಣೆ ಬೇಸರ ಮೂಡಿಸುತ್ತದೆ. ಕೃತಿ ಸನೂನ್ ಓಕೆ ಓಕೆ ಎಂದು ಬರೆದುಕೊಂಡಿದ್ದಾರೆ.
ರಶ್ಮಿಕಾ ಹಿಂದಿ ಕಲಿಬೇಕು
ಸಿನಿಮಾ ಒಳ್ಳೆ ಮನರಂಜನೆ ನೀಡುತ್ತೆ. ಯಾವುದೇ ನೀರಸ ಕ್ಷಣಗಳಿಲ್ಲ. ಶಾಹಿದ್ ಅವರ ಟೈಮಿಂಗ್ ಅದ್ಭುತವಾಗಿದೆ. ಕೃತಿ ಸನೂನ್ ಅದ್ಭುತ.. ರಶ್ಮಿಕಾ ಹಿಂದಿ ಕಲಿಯಲು ಬೇಗ ಶಿಕ್ಷಕರನ್ನು ಹುಡುಕಿಕೊಳ್ಳುವುದು ಉತ್ತಮ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications