Coolie Twitter Review: ರಜನಿಕಾಂತ್ ಗೆದ್ರಾ? ಲೋಕೇಶ್ ಮ್ಯಾಜಿಕ್ ರಿಪೀಟ್ ಆಯ್ತಾ?

ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ತೆರೆಗಪ್ಪಳಿಸಿದೆ. ಬೆಳ್ಳಂಬೆಳಗ್ಗೆ ಅಭಿಮಾನಿಗಳು ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನ ತಲೈವಾ ಜೊತೆಗೆ ಉಪೇಂದ್ರ, ನಾಗಾರ್ಜುನ, ಸತ್ಯರಾಜ್, ಆಮೀರ್ ಖಾನ್, ಶ್ರುತಿ ಹಾಸನ್ ನಟನೆ ಕಣ್ತುಂಬಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಸನ್ ಪಿಕ್ಚರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ 'ಕೂಲಿ' ಸಿನಿಮಾ ನಿರ್ಮಾಣ ಮಾಡಿದೆ. ಬಹುಕೋಟಿ ವೆಚ್ಚದಲ್ಲಿ ತೆರೆಗೆ ಬಂದಿರುವ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಸುಳಿವು ಸಿಗುತ್ತಿದೆ. ವಿಶ್ವದಾದ್ಯಂತ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಸಿನಿಮಾ ನೂರಾರು ಕೋಟಿ ಬಾಚಿದೆ. ಕರ್ನಾಟಕದಲ್ಲಿ ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಲಾಗಿದೆ. ಆದರೂ ಸಿನಿಮಾ ನೋಡಬೇಕು ಎನ್ನುವ ಅಭಿಮಾನಿಗಳ ಉತ್ಸಾಹ ಕಮ್ಮಿ ಆಗಿಲ್ಲ. 5 ಪಟ್ಟು ಹಣ ತೆತ್ತು ಟಿಕೆಟ್ ಖರೀದಿಸಿ ಸಿನಿಮಾ ವೀಕ್ಷಿಸಿದ್ದಾರೆ.

Coolie Movie X Review  Rajinikanth  Upedra s Actioner Is A Treat For Thalaiva Fans

ಈಗಾಗಲೇ 'ಕೂಲಿ' ಸಿನಿಮಾ ನೋಡಿದವರು ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಆಹಾ ಓಹೋ ಎಂದು ಕೊಂಡಾಡುತ್ತಿದ್ದಾರೆ. ಮತ್ತೆ ಕೆಲವರು ಓಕೆ ಓಕೆ ಎನ್ನುತ್ತಿದ್ದಾರೆ. ಒಂದಷ್ಟು ಮಂದಿ ಸಿನಿಮಾ ನೋಡದೇ ಫೇಕ್ ರಿವ್ಯೂ ಹಾಕುತ್ತಿರುವುದು ಇದೆ. ಒಟ್ಟಾರೆ ಅದೆಲ್ಲವನ್ನು ಮೀರಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ.

ಒನ್‌ಮ್ಯಾನ್ ಶೋ

ರಜನಿಕಾಂತ್ ಒನ್ ಮ್ಯಾನ್ ಶೋ, ವಿಲನ್ ಸೈಮನ್ ಆಗಿ ನಾಗಾರ್ಜುನ ನಟನೆ ಗೂಸ್‌ಬಂಪ್ಸ್ ತರುವಂತಿದೆ. ಆಮೀರ್ ಖಾನ್ ಅವರ ಪವರ್‌ಫುಲ್ ಕೆಮಿಯೊ, ಅನಿರುದ್ಧ್ ಸಂಗೀತದ ಜೊತೆ ಆಕ್ಷನ್ ಎಕ್ಸ್ಟ್ ಲೆವೆಲ್. ಕಾಲಿವುಡ್‌ನಲ್ಲಿ ಮೊದಲ 1000 ಕೋಟಿ ರೂ. ಕಲೆಕ್ಷನ್ ಸಿನಿಮಾ ಆಗುತ್ತದೆ. ಲೋಕೇಶ್ ಕನಕರಾಜ್ ನಿರ್ದೇಶನ ಚೆನ್ನಾಗಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಆವರೇಜ್ ಸಿನಿಮಾ

ಸೂಪರ್‌ಸ್ಟಾರ್ ವರ್ಚಸ್ಸು, ಫ್ಲ್ಯಾಶ್‌ಬ್ಯಾಕ್‌ನಲ್ಲಿ ಡೀ ಏಜಿಂಗ್ ಸನ್ನಿವೇಶಗಳು ಮಾಸ್. ಶೋಬಿನ್‌ಗೆ ಪೂರ್ಣ ಪ್ರಮಾಣದ ಪಾತ್ರ ಸಿಕ್ಕಿದೆ. ಸ್ಟೈಲಿಶ್ ನಾಗಾರ್ಜುನ, ಆದರೆ ಪಾತ್ರ ನಿರೂಪಣೆ ಕಳಪೆಯಾಗಿದೆ. ಶ್ರುತಿ ಮತ್ತು ರಚಿತಾ ರಾಮ್ ಉತ್ತಮ ಅಭಿನಯ. ಅನಿರುದ್ಧ್ ಅವರ ಅದ್ಭುತ ಕೆಲಸ. ವೀಕ್ ಕಂಟೆಂಟ್ ಮತ್ತು ಚಿತ್ರವಿಚಿತ್ರ ಚಿತ್ರಕಥೆ. ಇನ್ನುಳಿದಂತೆ ಎಲ್ಲಾ ಚೆನ್ನಾಗಿದೆ. ಆಕ್ಷನ್ ಸನ್ನಿವೇಶಗಳು ಸೂಪರ್, ಆಕರ್ಷಕ ಅತಿಥಿ ಪಾತ್ರಗಳು. ಒಟ್ಟಾರೆ ಆವರೇಜ್ ಸಿನಿಮಾ" ಎಂದು ಕ್ರಿಸ್ಟೋಫರ್ ಕನಕರಾಜ್ ಎಂಬುವವರು ಬರೆದುಕೊಂಡಿದ್ದಾರೆ.

ಪ್ಲಸ್ ಹಾಗೂ ಮೈನಸ್

ಹೆಚ್ಚು ಹೈಪ್ ಇರುವ ಸಿನಿಮಾ ಬಿಡುಗಡೆಯಾದಾಗ ಎಲ್ಲಾ ಪ್ರೇಕ್ಷಕರನ್ನು ತೃಪ್ತಿಪಡಿಸುವುದು ಕಷ್ಟ. ರಜನಿಕಾಂತ್ ನಟನೆ ಹಾಗೂ ಆಕ್ಷನ್, ಸೌಬಿನ್ ಪರ್ಫಾರ್ಮನ್ಸ್, ಅನಿರುದ್ಧ ಸಂಗೀತ, ತಾಂತ್ರಿಕವಾಗಿ ಸಿನಿಮಾ, ಟ್ವಿಸ್ಟ್ ಹಾಗೂ ಟರ್ನ್‌ಗಳು. ಫ್ಲ್ಯಾಶ್‌ಬ್ಯಾಕ್ ಎಪಿಸೋಡ್, ಹಾಸ್ಟೆಲ್ ಹಾಗೂ ಮ್ಯಾನ್ಷನ್ ಫೈಟ್ ಜೊತೆಗೆ ಅತಿಥಿ ಪಾತ್ರಗಳು ಚಿತ್ರದ ಪ್ಲಸ್ ಪಾಯಿಂಟ್ಸ್‌. ಸೆಕೆಂಡ್ ಹಾಫ್ ಕೊಂಚ ತಾಳ್ಮೆ ಪರೀಕ್ಷಿಸುತ್ತದೆ. ಮೋನಿಕಾ ಸಾಂಗ್ ಸರಿಯಾದ ಸಮಯದಲ್ಲಿ ಬರಲ್ಲ ಎನ್ನುವುದು ಚಿತ್ರದ ನೆಗೆಟಿವ್ ಅಂಶಗಳು. ಒಟ್ಟಾರೆ ರಜನಿಕಾಂತ್ ಸಿನಿಮಾಗಳಲ್ಲಿ ಇದು ಬಹಳ ವಿಭಿನ್ನವಾದ ಸಿನಿಮಾ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಬ್ಲಾಕ್‌ಬಸ್ಟರ್ ಸಿನಿಮಾ

"ಲೋಕೇಶ್ ಕನಕರಾಜ್ ಮತ್ತು ತಂಡವು ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟಿದ್ದಾರೆ. ಮೊದಲಾರ್ಧ - ಮಾಸ್ ಮತ್ತು ಲೋಕಿ ಕಥೆಯ ಟ್ವಿಸ್ಟ್‌ಗಳ ಉತ್ತಮ ಮಿಶ್ರಣವಿದೆ. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಡೀ-ಏಜಿಂಗ್ ತಂತ್ರಜ್ಞಾನ ಬಳಸಿರುವುದು ಬಹಳ ಅದ್ಭುತವಾಗಿದೆ. ದ್ವಿತೀಯಾರ್ಧದ ಮಾಸ್ ದೃಶ್ಯಗಳು ವರ್ಕ್ ಆಗುತ್ತದೆ" ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

ಸೆಕೆಂಡ್ ಹಾಫ್ ಸಾಕು

ಫಸ್ಟ್ ಹಾಫ್ ಎಂಟರ್‌ಟೈನ್‌ಮೆಂಟ್. ರಜನಿಕಾಂತ್ ತಮ್ಮ ಉಪಸ್ಥಿತಿಯೊಂದಿಗೆ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಾರೆ. ಚಿತ್ರದಲ್ಲಿ ಹೆಚ್ಚು ನೀರಸ ಕ್ಷಣಗಳಿಲ್ಲ ಮತ್ತು ಇಂಟರ್‌ವಲ್‌ವರೆಗೆ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ಹಾಡುಗಳನ್ನು ಸರಿಯಾದ ಜಾಗದಲ್ಲಿ ಇಟ್ಟಿಲ್ಲ. ಇಂಟರ್‌ವಲ್ ಬ್ಯಾಂಗ್ ಚೆನ್ನಾಗಿರುತ್ತದೆ ಎಂದುಕೊಂಡರೆ ಪೀಠಿಕೆ ಹಾಕುವುದರಲ್ಲೇ ಮುಕ್ತಾಯವಾಗುತ್ತದೆ. ಸೆಕೆಂಡ್ ಹಾಫ್ ಸಾಕು ಅಭಿಮಾನಿಗಳನ್ನು ರಂಜಿಸಲು. ರಜನಿಕಾಂತ್ ಸ್ವ್ಯಾಗ್, ಪರ್ಫಾರ್ಮೆನ್ಸ್ ಚಿಂದಿ. ಶೋಬಿನ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅನಿರುದ್ಧ್ ಸಂಗೀತ ಚಿತ್ರದ ಬಲ ಹೆಚ್ಚಿಸಿದೆ. ಸಣ್ಣ ಫ್ಲ್ಯಾಶ್‌ಬ್ಯಾಕ್ ನನಗೆ ಬಹಳ ಇಷ್ಟವಾಯಿತು. ಉಪೇಂದ್ರ ಎಂಟ್ರಿ ಚೆನ್ನಾಗಿದೆ" ಎಂದು ಲಕ್ಷ್ಮಿ ಕಾಂತ ಎಂಬುವವರು ಟ್ವೀಟ್ ಮಾಡಿದ್ದಾರೆ.

ಒಮ್ಮೆ ನೋಡಬಹುದು

ಮುಂಬೈನಲ್ಲಿ ಬೆಳಿಗ್ಗೆ 6 ಗಂಟೆಯ ಶೋ ನೋಡಿದೆ. ಚಿತ್ರದಲ್ಲಿ ಸಾಕಷ್ಟು ಎಲಿವೇಷನ್ ಸೀನ್ಸ್ ಇವೆ. ಆದರೆ ಕಥೆ ಚೆನ್ನಾಗಿಲ್ಲ. ದ್ವಿತೀಯಾರ್ಧ ಚೆನ್ನಾಗಿಲ್ಲ. ಅಮೀರ್ ಖಾನ್ ಅವರ ಅತಿಥಿ ಪಾತ್ರ ನಿರಾಶಾದಾಯಕವಾಗಿದೆ. ಯಾವುದೇ LCU ಅಂಶಗಳಿಲ್ಲ. ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಇನ್ನುಳಿದಂತೆ 'ಕೂಲಿ' ಒಮ್ಮೆ ನೋಡಬಹುದಾದ ಸಿನಿಮಾ ಎನ್ನುವುದು ಮತ್ತೊಬ್ಬರ ಅಭಿಪ್ರಾಯ.

ಎಕ್ಸೈಟ್ ಆಗುವಂಥದ್ದು ಏನು ಇಲ್ಲ

ಲೋಕೇಶ್ ಕನಕರಾಜ್ ಬಹಳ ಕೆಟ್ಟ ನಿರೂಪಣೆ. ಇನ್ನು ಚೆನ್ನಾಗಿ ಮಾಡಬಹುದಿತ್ತು. LCU ಚಿತ್ರವನ್ನು ರಕ್ಷಿಸುತ್ತಿತ್ತು ಅನ್ನಿಸುತ್ತದೆ. ಆದರೆ ಆ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ. ಎಕ್ಸೈಟ್ ಆಗುವಂಥದ್ದು ಏನು ಇಲ್ಲ. ಲೋಕೇಶ್ ಪುನರ್ವಿಮರ್ಶಿಸಿಕೊಳ್ಳಬೇಕು. ರತ್ನಕುಮಾರ್ ಅವರ ಸಲಹೆ ಸೂಚನೆ ಬೇಕಿತ್ತು ಎಂದು ಗೌತಮ್ ಎಂಬುವವರು ಬರೆದುಕೊಂಡಿದ್ದಾರೆ. ಈ ಹಿಂದೆ ಲೋಕೇಶ್ ತಂಡದಲ್ಲಿ ಕೆಲಸ ಮಾಡುತ್ತಿದ್ದ ರತ್ನಕುಮಾರ್ ಎಂಬುವವರು 'ಕೂಲಿ' ಚಿತ್ರದಿಂದ ದೂರ ಉಳಿದಿದ್ದಾರೆ.

More from Filmibeat

English summary
Coolie Twitter Review: Netizens Say Rajinikanth and Lokesh Kanagaraj's film Lives Up To The Hype
Read more about: rajinikanth upendra review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X