The Odyssey Critics Review : ಬೆರಗಾಗಿಸುವ ಕ್ರಿಸ್ಟೋಫರ್ ನೋಲನ್ ಕೈಚಳಕ, ಹೇಗಿದೆ ದಿ ಒಡಿಸ್ಸಿ ? ಇಲ್ಲಿದೆ ವಿಮರ್ಶಕರ ವಿಮರ್ಶೆ

ಹಾಲಿವುಡ್‌ನವರ ಹಾವಳಿನೇ ಹಾಗೇ. ತಮ್ಮ ಕಲ್ಪನೆ ಮತ್ತು ಕೈಚಳಕದಿಂದ ಮೊದಲಿಂದಲೂ ನಿಬ್ಬೇರಗಾಗಿಸುವ ಗುಣ ಇವರದ್ದು. ವರ್ಷಕ್ಕೂ ಮುಂಚೆಯೇ ತಮ್ಮ ಚಿತ್ರಕ್ಕೆ ಎಲ್ಲರನ್ನೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುವ ಇವರಿಗೆ ಭಾರತ ಮೊದಲಿಂದಲೂ ಕೋಟಿ ಕೋಟಿ ಹಣವನ್ನು ನೀಡುತ್ತಲೇ ಬಂದಿದೆ. ನಿರ್ಮಾಪಕರ ಖಜಾನೆಯನ್ನು ತುಂಬಿಸುತ್ತಲೇ ಇದೆ. ಇದಕ್ಕೆ ಭಾರತದಲ್ಲಿ ಬ್ಲಾಕ್ ಬಸ್ಟರ್ ಆದ ಹಲವು ಚಿತ್ರಗಳು ಉದಾಹರಣೆಗಳಾಗಿ ಇವೆ. ಈ ಸಾಲಿಗೆ ''ದಿ ಒಡಿಸ್ಸಿ'' ಸೇರಿಕೊಳ್ಳುವ ಎಲ್ಲ ಲಕ್ಷಣಗಳು ಸದ್ಯ ಕಂಡು ಬರುತ್ತಿವೆ.

ಹೌದು, ''ದಿ ಒಡಿಸ್ಸಿ''.. ಜಗದ್ವಿಖ್ಯಾತ ಡೈರೆಕ್ಟರ್ ಕ್ರಿಸ್ಟೋಫರ್ ನೋಲನ್ ಅವರ ಹೊಸ ಕನಸು. ಕನವರಿಕೆ. ಇನ್ನೇನು ಇದೇ ಜುಲೈ 17ರಂದು ಚಿತ್ರ ತೆರೆಗೆ ಬರಲಿದೆ. ಇನ್ನು ಬಹುತೇಕರಿಗೆ ಗೊತ್ತಿರುವಂತೆ ನೋಲನ್ ಸೈನ್ಸ್ ಫಿಕ್ಷನ್ ಕಥೆಯಾಧಾರಿತ ಚಿತ್ರಗಳ ಸರದಾರ. ವಿಶ್ವವ್ಯಾಪಿ ಇವರ ಕ್ರೇಜ್ ಹೇಗಿದೆ ಅಂದರೆ ಮಾಧ್ಯಮಗಳ ವರದಿಯ ಪ್ರಕಾರ ಇವರ ಹಿಂದಿನ ಎಲ್ಲ ಚಿತ್ರಗಳ ಗಳಿಕೆ ಕೂಡಿಸಿದರೆ 157 ಸಾವಿರ ಕೋಟಿಯಾಗುತ್ತೆ.

Critics Crown Christopher Nolan   s    The Odyssey    His Ultimate Masterpiece

ಈ ಹಿನ್ನೆಲೆ ''ದಿ ಒಡಿಸ್ಸಿ'' ಮೇಲೆ ಅಪಾರವಾದ ನಿರೀಕ್ಷೆಗಳಿವೆ. ನೋಲನ್‌ಗೆ ಕೂಡ ಈ ವಿಷಯ ಚೆನ್ನಾಗಿಯೇ ಗೊತ್ತು. ಹೀಗಾಗಿಯೇ ಹಲವಡೆ ಚಿತ್ರವನ್ನು ಬಿಡುಗಡೆ ಮಾಡುವ ಮುನ್ನ ಪ್ರೀಮಿಯರ್ ಪ್ರದರ್ಶನವನ್ನು ಕ್ರಿಸ್ಟೋಫರ್ ನೋಲನ್ ಹಮ್ಮಿಕೊಂಡಿದ್ದಾರೆ.

ಆ ಪೈಕಿ ಮೊನ್ನೆ ಮುಂಬೈನಲ್ಲಿ ನಡೆದ ಪ್ರೀಮಿಯರ್ ಪ್ರದರ್ಶನದಲ್ಲಿ ''ದಿ ಒಡಿಸ್ಸಿ'' ಚಿತ್ರವನ್ನು ಎಲ್ಲರಿಗಿಂತ ಮೊದಲು ಹಲವಾರು ಪ್ರೇಕ್ಷಕರು ಮತ್ತು ವಿಮರ್ಶಕರು ನೋಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ''ದಿ ಒಡಿಸ್ಸಿ'' ಕುರಿತು ಮನದ ಮಾತುಗಳನ್ನು ಕೂಡ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಹೇಗಿದೆ ''ದಿ ಒಡಿಸ್ಸಿ''..? ಈ ಬಾರಿಯೂ ನೋಲನ್ ಮ್ಯಾಜಿಕ್ ವರ್ಕ್‌ ಆಗಿದೆಯಾ..? ಎಂದು ತಿಳಿಯಲು ಮುಂದೆ ಓದಿ.

ನೆಕ್ಸ್ಟ್ ಲೆವಲ್ ಸಿನಿಮಾ

''ದಿ ಒಡಿಸ್ಸಿ'' ಸಿನಿಮಾ ನೋಡೋದು ಒಂದು ನೆಕ್ಸ್ಟ್ ಲೆವೆಲ್ ಅನುಭವ. ಕಣ್ಣಿಗೆ ಹಬ್ಬದಂತೆ ಕಾಣಿಸುವ ದೃಶ್ಯಾವಳಿಗಳನ್ನು ಅಷ್ಟೇ ಭಾವನಾತ್ಮಕವಾಗಿ ಕ್ರಿಸ್ಟೋಫರ್ ನೋಲನ್ ತೋರಿಸಿದ್ದಾರೆ. ನಾನು ಇಷ್ಟೊಂದು ಕಣ್ಣೀರು ಹಾಕುತ್ತೇನೆ ಎಂದು ನಿಜಕ್ಕೂ ಅಂದುಕೊಂಡಿರಲಿಲ್ಲ. 3 ಸಾವಿರ ವರ್ಷಗಳ ಹಿಂದಿನ ದೇವ್ರು, ದೇವತೆಗಳು, ಮಾಟಗಾತಿಯರು ಮತ್ತೆ ವಿಚಿತ್ರ ಪ್ರಾಣಿಗಳಿರೋ ಈ ಕಥೆ, ಇವತ್ತಿನ ಜನರೇಷನ್‌ಗೂ ಸಖತ್ ಆಗಿ ಕನೆಕ್ಟ್ ಆಗುತ್ತೆ. ಈ ಸಿನಿಮಾ ಮತ್ತೆ ಯಾವಾಗ ನೋಡ್ತೀನೋ ಅಂತ ಕಾಯ್ತಾ ಇದ್ದೀನಿ ಎಂದು ಭಾರತದ ಖ್ಯಾತ ವಿಮರ್ಶಕಿ, ಲೇಖಕಿ ಅನುಪಮಾ ಚೋಪ್ರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಫುಲ್ ಫಿದಾ ಆದೆ

ಸಿನಿಮಾದ ಸ್ಕೇಲ್ ಅಂತೂ ಸಿಕ್ಕಾಪಟ್ಟೆ ದೊಡ್ಡದಾಗಿದೆ. ಕ್ರಿಸ್ಟೋಫರ್ ನೋಲನ್ ಮೇಕಿಂಗ್‌ಗೆ ತಕ್ಕ ಹಾಗೆ ಮೈಂಡ್ ಬ್ಲೋಯಿಂಗ್ ಸಿನಿಮಾಟೋಗ್ರಫಿ, ಎದೆ ಬಡಿತ ಜಾಸ್ತಿ ಮಾಡೋ ಬ್ಯಾಕ್‌ಗ್ರೌಂಡ್ ಸ್ಕೋರ್, ಜೊತೆಗೆ ಸಖತ್ ಆಗಿ ಹೇಳಿರೋ ಕಥೆ ಮತ್ತು ಆ್ಯಕ್ಟಿಂಗ್ ಇಲ್ಲಿದೆ. ಮೂರು ಗಂಟೆಗಳ ಕಾಲ ನಾನು ಸ್ಕ್ರೀನ್‌ನಿಂದ ಕಣ್ಣೇ ತೆಗೆಯದೆ ಫುಲ್ ಫಿದಾ ಆಗ್ಬಿಟ್ಟೆ. ಸಿನಿಮಾ ಸಖತ್ ಬಿಗ್ ಆಗಿದೆ, ಹಾಗೇ ಅಷ್ಟೇ ಎಮೋಷನಲ್ ಆಗಿದೆ ಎಂದು ಪತ್ರಕರ್ತೆ ಪ್ರಿಯಾಂಕ ರಾಯ್ ಬರೆದುಕೊಂಡಿದ್ದಾರೆ.

ದೇವರು ಕೂಡ ನಿಮ್ಮನ್ನು ತಯಾರು ಮಾಡಲು ಆಗಲ್ಲ.

ನಾನು ''ದಿ ಒಡಿಸ್ಸಿ'' ಸಿನಿಮಾ ನೋಡ್ದೆ. ಬರೀ ಪ್ರೇಕ್ಷಕರು ಮಾತ್ರ ಅಲ್ಲ, ದೇವರು ಕೂಡ ಈ ರೇಂಜ್ ಸಿನಿಮಾ ನೋಡೋಕೆ ನಿಮ್ಮನ್ನು ರೆಡಿ ಮಾಡಲು ಆಗಲ್ಲ. ಹಳೇ ರೆಕಾರ್ಡ್ಸ್ ಎಲ್ಲಾ ಬ್ರೇಕ್ ಮಾಡೋ ತರಹದ ಸಿನಿಮಾ ಇದು. ಲೈಫ್‌ನಲ್ಲಿ ಮರೆಯೋಕೆ ಆಗದಂತಹ ಒಂದು ಅತ್ಯದ್ಭುತವಾದ ಅನುಭವ ಎಂದು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ಬರೆದುಕೊಂಡಿದ್ದಾರೆ.

IMAX 70mm ನಲ್ಲೇ ನೋಡಿ

ಕ್ರಿಸ್ಟೋಫರ್ ನೋಲನ್ ಮಾಡಿರೋ ''ದಿ ಒಡಿಸ್ಸಿ'' ನಿಜಕ್ಕೂ ಅದ್ಭುತವಾದ ಸಿನಿಮಾ. ನನಗಂತೂ ಅಕ್ಷರಶಃ ತಲೆ ಕೆಟ್ಟುಹೋಗಿದೆ. ಆ್ಯಕ್ಟರ್ಸ್ ಪರ್ಫಾರ್ಮೆನ್ಸ್ ದಿಂದ ಹಿಡಿದು, ನೋಲನ್ ಆ ದೆವ್ವ-ಭೂತ ಹಾಗೂ ಸೂಪರ್ ನ್ಯಾಚುರಲ್ ಎಲಿಮೆಂಟ್ಸ್ ತೋರಿಸಿರೋ ರೀತಿ ಪ್ರತಿಯೊಂದೂ ಪರ್ಫೆಕ್ಟ್ ಆಗಿದೆ. ನಿಮಗೆ ಚಾನ್ಸ್ ಸಿಕ್ಕರೆ, ಖಂಡಿತ ಈ ಸಿನಿಮಾನ ಐಮ್ಯಾಕ್ಸ್‌ 70mm ನಲ್ಲೇ ನೋಡಿ. ಬಿಟ್ಟ ಕಣ್ಣು ಬಿಟ್ಟಂಗೆ ನೋಡ್ತಾ ನಿಲ್ತೀರಾ. ನೀವು ಎಲ್ಲೇ ನೋಡಿದ್ರೂ ಸಿನಿಮಾ ಸಖತ್ ಆಗಿರುತ್ತೆ, ಆದ್ರೆ IMAX 70mm ನಲ್ಲಿ ನೋಡೋದೇ ಅತ್ಯುತ್ತಮವಾದ ಆಯ್ಕೆ ಎಂದು ಮತ್ತೊಬ್ಬರು ಚಿತ್ರದ ವಿಮರ್ಶೆ ಮಾಡಿದ್ದಾರೆ.

ಪಕ್ಕಾ ಬ್ಲಾಕ್‌ ಬಸ್ಟರ್

''ದಿ ಒಡಿಸ್ಸಿ'' ವೈಯಕ್ತಿಕವಾಗಿ ನನಗೆ ತುಂಬಾನೇ ಇಷ್ಟವಾಯ್ತು. ಅದ್ಭುತವಾದ ಕಾವ್ಯ. ಅಚ್ಚರಿ ಅಂದರೆ ಹೆದರಿಕೆ ಕೂಡ ಆಗುತ್ತೆ. ನೋಲನ್ ಸಿನಿಮಾದಲ್ಲಿ ಈ ತರಹದ ಹಾರರ್ ಎಲಿಮೆಂಟ್ಸ್ ಇದೆ ಮೊದಲ ಬಾರಿ ನಾನು ನೋಡಿದ್ದು. ಗ್ರೀಕ್ ದೇವರುಗಳು, ಮ್ಯಾಜಿಕ್ ಮತ್ತು ಮಾಟಗಾತಿಯರ ಕಥೆಯನ್ನು ಎಷ್ಟು ರಿಯಲಿಸ್ಟಿಕ್ ಆಗಿ ತೋರಿಸೋಕೆ ಸಾಧ್ಯನೋ ಅಷ್ಟು ರಿಯಲಿಸ್ಟಿಕ್ ಆಗಿ ತೋರಿಸಿದ್ದಾರೆ. ಅದಕ್ಕೇ ಇವರು ಈ ಕಾಲದ ಒನ್ ಆಫ್ ದಿ ಗ್ರೇಟೆಸ್ಟ್ ಫಿಲ್ಮ್ ಮೇಕರ್.

ಕಥೆ ವಿಷಯಕ್ಕೆ ಬಂದ್ರೆ, ಇಡೀ ಒಡಿಸ್ಸಿ ಸಿನಿಮಾ 'ಕರ್ಮ' ಸಿದ್ಧಾಂತದ ಮೇಲೆ ನಿಂತಿದೆ.ಮ್ಯಾಟ್ ಡಮನ್ ಇಡೀ ಸಿನಿಮಾನ ಹೆಗಲ ಮೇಲೆ ಹೊತ್ತಿದ್ದಾರೆ. ಇದು ಖಂಡಿತ ಅವ್ರ ಕೆರಿಯರ್‌ನಲ್ಲೇ ಬೆಸ್ಟ್ ಪರ್ಫಾರ್ಮೆನ್ಸ್. ತಾವೊಬ್ಬ ಹಾಲಿವುಡ್‌ನ ಬೆಸ್ಟ್ ಹೀರೋ ಅಂತ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ನನಗಂತೂ ಅವ್ರ ಆಕ್ಟಿಂಗ್ ಸಖತ್ ಇಷ್ಟ ಆಯ್ತು. ಹಾಗೇ ಯಾರಾದ್ರೂ ನಮ್ಮ ರಾಬರ್ಟ್ ಪ್ಯಾಟಿನ್ಸನ್‌ಗೆ ಇನ್ನು ಜಾಸ್ತಿ ವಿಲನ್ ರೋಲ್‌ಗಳನ್ನು ಕೊಡಿ ಪ್ಲೀಸ್, ನೆಗೆಟಿವ್ ಕ್ಯಾರೆಕ್ಟರ್‌ನಲ್ಲಿ ಧೂಳ್ ಎಬ್ಬಿಸಿದ್ದಾರೆ.

ಒಡಿಸ್ಸಿ ಪಕ್ಕಾ ಶ್ಯೂರ್ ಶಾಟ್ ಬ್ಲಾಕ್‌ಬಸ್ಟರ್ ಸಿನಿಮಾ. ಎಲ್ಲೂ ಬ್ರೇಕ್ ಇಲ್ಲದೇ ಸಾಗೋ ಈ ಸಿನಿಮಾದಲ್ಲಿ ಎಣಿಸೋಕೆ ಆಗದಷ್ಟು ಅದ್ಭುತ ಸೀನ್‌ಗಳಿವೆ. ಅದ್ರಲ್ಲೂ ಒಂದು ಹಾರರ್ ಸೀನ್ ಅಂತೂ ಅಲ್ಟಿಮೇಟ್ ಆಗಿದೆ. ಈ ಸಿನಿಮಾನ ಎಷ್ಟು ಸಾರಿ ನೋಡಿದ್ರೂ ಬೋರ್ ಆಗಲ್ಲ, ಅಷ್ಟು ರಿಪೀಟ್ ವ್ಯಾಲ್ಯೂ ಇದೆ. ಇದು ಕ್ರಿಸ್ಟೋಫರ್ ನೋಲನ್ ಅವರ ಅತ್ಯುತ್ತಮ ಕೃತಿ. ಇದರಲ್ಲಿ ಸಖತ್ ಕಮರ್ಷಿಯಲ್ ಅಂಶಗಳು ಇರೋದ್ರಿಂದ ಹಿಂದಿಯಲ್ಲೂ ಇದು ಸೂಪರ್ ಹಿಟ್ ಆಗೋದು ಗ್ಯಾರಂಟಿ. ನಾನಂತೂ ಇವತ್ತು ರಾತ್ರಿ ಮತ್ತೊಮ್ಮೆ ಈ ಸಿನಿಮಾ ನೋಡೋಕೆ ಹೋಗ್ತಾ ಇದ್ದೀನಿ ಎಂದು ಪ್ರಖ್ಯಾತ ಯೂಟ್ಯೂಬರ್ ಆಶಿಶ್ ಚಂಚಲಾನಿ ವಿಮರ್ಶೆ ಮಾಡಿದ್ದಾರೆ.

ಕೇವಲ ಇವರಷ್ಟೇ ಅಲ್ಲ ಇನ್ನು ಹಲವಾರು ಜನ ''ದಿ ಒಡಿಸ್ಸಿ'' ಚಿತ್ರವನ್ನು ನೋಡಿದ್ದಾರೆ. ಕ್ರಿಸ್ಟೋಫರ್ ನೋಲನ್ ಕೈಚಳಕಕ್ಕೆ ಬೆರಗಾಗಿದ್ದಾರೆ. ತಪ್ಪದೇ ಈ ಚಿತ್ರವನ್ನು ನೋಡಿ, ಮಿಸ್ ಮಾಡಬೇಡಿ ಎಂದು ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆಗಳನ್ನು ಹಂಚಿಕೊಂಡಿದ್ದಾರೆ. ಆ ಪೈಕಿ ಕೆಲ ಟ್ವಿಟ್‌ಗಳು ಇಲ್ಲಿವೆ

English summary
Early reviews for Christopher Nolan's ‘The Odyssey’ hail it as a monumental triumph. Inside the universal acclaim, early Oscar buzz, and stunning standout performances.
Read more about: christopher nolan hollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X