For Quick Alerts
ALLOW NOTIFICATIONS  
For Daily Alerts

ಪಾರ್ವತಮ್ಮನ ಮಗಳಿಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

|

ಹರಿಪ್ರಿಯಾ ಮತ್ತು ಸುಮಲತಾ ಅಭಿನಯದ ಡಾಟರ್ ಆಫ್ ಪಾರ್ವತಮ್ಮ ಸಿನಿಮಾ ನಿನ್ನೆ (ಮೇ 24) ರಾಜ್ಯಾದ್ಯಂತ ತೆರೆಕಂಡಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಇದೇ ಮೊದಲ ಬಾರಿಗೆ ಆಕ್ಷನ್ ಒರಿಯೆಂಟೆಡ್ ಚಿತ್ರದಲ್ಲಿ ಹರಿಪ್ರಿಯಾ ನಟಿಸಿದ್ದಾರೆ.

ಈ ಕಾರಣಕ್ಕಾಗಿ ಡಾಟರ್ ಆಫ್ ಪಾರ್ವತಮ್ಮ ಸಿನಿಮಾ ಬಹಳ ನಿರೀಕ್ಷೆ ಹುಟ್ಟುಹಾಕಿತ್ತು. ನಿರೀಕ್ಷೆಯಂತೆ ಹರಿಪ್ರಿಯಾ ಸಕ್ಸಸ್ ಆಗಿದ್ದಾರೆ. ಚಿತ್ರಕ್ಕೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಆದರೆ, ಅಲ್ಲೊಂದು ಇಲ್ಲೊಂದು ಅಂಶಗಳು ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿದೆ.

ವಿಮರ್ಶೆ: ಪಾರ್ವತಮ್ಮನ 'ರೆಬೆಲ್' ಮಗಳು

ಹಾಗಿದ್ರೆ, ವಿಮರ್ಶಕರು ಡಾಟರ್ ಆಫ್ ಪಾರ್ವತಮ್ಮ ಚಿತ್ರವನ್ನ ನೋಡಿ ಏನಂದ್ರು? ಈ ಸಿನಿಮಾದಲ್ಲಿ ಅವರಿಗೆ ಏನು ಇಷ್ಟ ಆಗಿದೆ ಏನು ಇಷ್ಟ ಆಗಿಲ್ಲ. ಹರಿಪ್ರಿಯಾ ನಟನೆಗೆ ಎಷ್ಟು ಮಾರ್ಕ್ಸ್ ಕೊಟ್ಟಿದ್ದಾರೆ. ಕರ್ನಾಟಕ ಜನಪ್ರಿಯ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ವಿಮರ್ಶೆ ಇಲ್ಲಿದೆ ಓದಿ....

ಅಂತಿಂಥವಳಲ್ಲ ಈ ಪಾರ್ವತಮ್ಮನ ಮಗಳು

ಅಂತಿಂಥವಳಲ್ಲ ಈ ಪಾರ್ವತಮ್ಮನ ಮಗಳು

''ಖಡಕ್ ಆಫೀಸರ್ ಪಾತ್ರವನ್ನು ನಾಯಕಿಯರೂ ಮಾಡಬಹುದು. ನಾಯಕನಷ್ಟೇ ಸಮರ್ಥವಾಗಿ ರೆಬಲ್ ಪಾತ್ರಗಳನ್ನು ಹುಡುಗಿಯರೂ ನಿರ್ವಹಿಸಬಹುದು ಎಂದು ಈ ಸಿನಿಮಾದಲ್ಲಿ ನಿರೂಪಿಸಿದ್ದಾರೆ ನಿರ್ದೇಶಕರು. ಈ ಕಾರಣಕ್ಕಾಗಿ ಈ ಚಿತ್ರ ವಿಭಿನ್ನವಾಗಿ ನಿಲ್ಲುತ್ತದೆ. ವೈದೇಹಿ ಪಾತ್ರದಲ್ಲಿ ಹರಿಪ್ರಿಯಾ ಸೂಪರ್‌ ಆಗಿ ನಟಿಸಿದ್ದಾರೆ. ಸಾಫ್ಟ್‌ ಪಾತ್ರಗಳನ್ನೇ ಮಾಡುತ್ತಾ ಬಂದಿರುವ ಇವರು, ಮೊದಲ ಬಾರಿಗೆ ಸವಾಲಿನ ಪಾತ್ರ ಪೋಷಿಸಿದ್ದಾರೆ. ಅದರಲ್ಲಿ ಗೆದ್ದಿದ್ದಾರೆ. ಪಾರ್ವತಮ್ಮನ ಪಾತ್ರದಲ್ಲಿ ನಟಿಸಿರುವ ಸುಮಲತಾ ಅಂಬರೀಶ್‌ ಕೂಡ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಲ್ಲಲ್ಲಿ ತರಂಗ ವಿಶ್ವ ನಗಿಸುತ್ತಾರೆ. ಪುಟ್ಟ ಪುಟ್ಟ ಪಾತ್ರಗಳನ್ನು ನಿರ್ವಹಿಸಿದ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.'' - ವಿಜಯ ಕರ್ನಾಟಕ ಪತ್ರಿಕೆ

ಸಸ್ಪೆನ್ಸ್ ದಾರಿಯಲ್ಲಿ ಡಾಟರ್ ತನಿಖೆ

ಸಸ್ಪೆನ್ಸ್ ದಾರಿಯಲ್ಲಿ ಡಾಟರ್ ತನಿಖೆ

''ಕಥೆ ಸಿಂಪಲ್ ಆಗಿದ್ದರೂ ಅದನ್ನು ನಿರ್ದೇಶಕ ಶಂಕರ್ ಕಟ್ಟಿಕೊಟ್ಟಿರುವ ರೀತಿ ರೋಚಕ. ಇದು ಹರಿಪ್ರಿಯಾ ನಟನೆಯ 25ನೇ ಕನ್ನಡ ಸಿನಿಮಾ. ಅದಕ್ಕೆ ತಕ್ಕಂತೆಯೇ ನಾಯಕಿ ಪಾತ್ರಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ ನಿರ್ದೇಶಕರು. ನಟರಾದ ಸೂರಜ್​ಗೌಡ, ಪ್ರಭು ಮುಂಡ್ಕುರ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ, ಈ ಚಿತ್ರಕ್ಕೆ ಹೀರೋ-ಹೀರೋಯಿನ್ ಎಲ್ಲವೂ ಹರಿಪ್ರಿಯಾ ಅವರೇ! ಈವರೆಗೂ ಬೇರಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರದ ರೀತಿಯಲ್ಲಿ ಈ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ತನ್ನ ಬಾಯ್ಫ್ರೆಂಡ್​ಗೆ ಹೊಡೆದ ಪುಡಾರಿಗಳಿಗೆ ಬೆಂಡೆತ್ತಿ ಪಾಠ ಕಲಿಸುವ ಗಟ್ಟಿಗಿತ್ತಿ ಈ ವೈದೇಹಿ! ‘ನಮ್ಮ ಪಾಲಿಗೆ ನೀನೇ ಅಣ್ಣನಂತೆ' ಎಂದು ಸ್ನೇಹಿತೆಯರೆಲ್ಲ ಅವಳಿಗೇ ರಾಖಿ ಕಟ್ಟುತ್ತಾರೆ. ಬಾಬ್ ಕಟ್ ಕೇಶವಿನ್ಯಾಸ, ಟಾಮ್ ಬಾಯ್ ವ್ಯಕ್ತಿತ್ವದಿಂದಾಗಿ ಗಮನ ಸೆಳೆಯುತ್ತಾರೆ ಹರಿಪ್ರಿಯಾ'' - ವಿಜಯವಾಣಿ ಪತ್ರಿಕೆ

ಪಾರ್ವತಮ್ಮ ಮಗಳ ಸಾಹಸಗಾಥೆ

ಪಾರ್ವತಮ್ಮ ಮಗಳ ಸಾಹಸಗಾಥೆ

''ಮೊದಲರ್ಧ ಅಲ್ಲಲ್ಲಿ ನೋಡುಗರ ತಾಳ್ಮೆ ಪರೀಕ್ಷಿಸಿದರೂ, ದ್ವಿತಿಯಾರ್ಧದಲ್ಲಿ ಪಾರ್ವತಮ್ಮ ಮಗಳ ಸಾಹಸವನ್ನು ಮೆಚ್ಚಿಸುತ್ತಾ ಹೋಗುತ್ತದೆ. ಒಂದು ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್‌ ಚಿತ್ರದಲ್ಲಿ ಏನೆಲ್ಲಾ ಏರಿಳಿತಗಳು, ತಿರುವುಗಳು, ನಿರೀಕ್ಷೆಗಳನ್ನು ಕಾಣಬಹುದೋ, ಅವೆಲ್ಲವನ್ನೂ ಇಲ್ಲಿ ಕಾಣಬಹುದು. ನೋಡುಗರ ಮತ್ತೂಂದು ಸಮಾಧಾನಕ್ಕೆ ಕಾರಣ, ಅತೀವೇಗದಲ್ಲಿ ಸಾಗುವ ಚಿತ್ರ, ಅಷ್ಟೇ ಕಡಿಮೆ ಅವಧಿಯಲ್ಲಿ ಮುಗಿದು, ತೃಪ್ತ ಭಾವ ಎನಿಸುವುದು. ಸಾಮಾನ್ಯವಾಗಿ ಕ್ರೈಮ್ ಸಸ್ಪೆನ್ಸ್ ಥ್ರಿಲ್ಲರ್‌ ಕಥೆಗಳಲ್ಲಿ ಅಬ್ಬರ ಹೆಚ್ಚಾಗಿರುತ್ತೆ. ಆದರೆ, ಇಲ್ಲಿ ಅಂತಹ ಯಾವುದೇ ಅಬ್ಬರಗಳಿಲ್ಲದೆ, ಅಷ್ಟೇ ತಿಳಿಯಾಗಿ, ತನಿಖೆ ಸಾಗುತ್ತದೆ. ಹಾಗಂತ, ತನಿಖೆಯಲ್ಲಿ ಮಜ ಇಲ್ಲವೆಂದಲ್ಲ. ಆದರೆ, ತನಿಖೆಯಲ್ಲಿ ಇನ್ನಷ್ಟು "ಧಮ್' ಇರಬೇಕಿತ್ತು. ತನಿಖಾಧಿಕಾರಿ ಪಾತ್ರಕ್ಕೆ ಮಗದಷ್ಟು ಜೋಶ್ ತುಂಬಬಹುದಾಗಿತ್ತು. ಆದರೂ, ಚಿತ್ರದುದ್ದಕ್ಕೂ ಅಲ್ಲಲ್ಲಿ ಕಾಣಸಿಗುವ ತಿರುವುಗಳು ಚಿತ್ರದ ವೇಗವನ್ನು ಹೆಚ್ಚಿಸಿವೆ''

ಬೆಂಗಳೂರು ಮಿರರ್

ಬೆಂಗಳೂರು ಮಿರರ್

''The film's length is just right for a film of this genre, with the couple of songs in montages not hurting its flow. A flashback to establish the tomboyish character of Hariprriya is conveniently placed early in the film and the story gets to the murder mystery there aren't any distractions. Some of the scenes to establish the investigator's character was unnecessary'' - ಬೆಂಗಳೂರು ಮಿರರ್

English summary
Kannada actress haripriya and sumalatha starrer D/O Parvathamma movie has released yesterday (may24th). the movie directed by shankar j. here is the critics review of D/O Parvathamma.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more