For Quick Alerts
  ALLOW NOTIFICATIONS  
  For Daily Alerts

  'ದಬಾಂಗ್-3' ಟ್ವಿಟ್ಟರ್ ವಿಮರ್ಶೆ: ಮೊದಲ ಶೋ ನೋಡಿ ಪ್ರೇಕ್ಷಕರು ಹೇಳಿದ್ದೇನು?

  |

  ಬಾಲಿವುಡ್ ನ ಬಹುನಿರೀಕ್ಷೆಯ ದಬಾಂಗ್-3 ಸಿನಿಮಾ ಇಂದು ದೇಶ-ವಿದೇಶದಲ್ಲಿ ತೆರೆಗೆ ಬಂದಿದೆ. ಬಾಲಿವುಡ್ ದೊಡ್ಡ ಸೀರಿಸ್ ಗಳಲ್ಲಿ ಒಂದಾಗಿರುವ ದಬಾಂಗ್ ನ ಮೂರನೆ ಆವೃತ್ತಿ ಇಂದು ಗ್ರ್ಯಾಂಡ್ ಆಗಿ ತೆರೆಗೆ ಬಂದಿದೆ. ದಬಾಂಗ್-3 ಕನ್ನಡರಿಗೂ ವಿಶೇಷವಾದ ಸಿನಿಮಾವಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಲನ್ ಆಗಿ ಅಬ್ಬರಿಸಿದ್ದಾರೆ.

  ಸಲ್ಮಾನ್ ಖಾನ್ ಮತ್ತು ಸುದೀಪ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆ ದಿನ ಇಂದು ಬಂದಿದೆ. ದಬಾಂಗ್-3 ಪ್ರಭುದೇವ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ. ಈಗಾಗಲೆ ಅಭಿಮಾನಿಗಳು ಮೊದಲ ಶೋ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ವಿಮರ್ಶೆಯನ್ನು ಚಿಕ್ಕದಾಗಿ ಟ್ವಿಟ್ಟರ್ ನಲ್ಲಿ ಬರೆದು ಕೊಳ್ಳುತ್ತಿದ್ದಾರೆ. ಅಭಿನಯ ಚಕ್ರವರ್ತಿ ಸುದೀಪ್ ಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಮೊದಲ ಶೋ ನೋಡಿದ ಪ್ರೇಕ್ಷಕರ ಅಭಿಪ್ರಾಯವೇನು?

  ಸಿನಿಮಾ ಪೂರ್ತಿ ಅಬ್ಬರಿಸಿರುವ ಸುದೀಪ್

  ಸಿನಿಮಾ ಪೂರ್ತಿ ಅಬ್ಬರಿಸಿರುವ ಸುದೀಪ್

  ಸಿನಿಮಾ ನೋಡಿ ಅಭಿಮಾನಿಯೊಬ್ಬರು 4 ಸ್ಟಾರ್ ನೀಡಿದ್ದಾರೆ. ಅಲ್ಲದೆ ದಬಾಂಗ್ ಆಲ್ ಟೈಮ್ ಬ್ಲಾಕ್ ಬಸ್ಟರ್ ಸಿನಿಮಾ ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಮತ್ತೆ ಬ್ಯಾಂಕ್ ಆಗಿದ್ದಾರೆ. ದಬಾಂಗ್-3 ಅತ್ಯುತ್ತಮವಾದ ಸಿನಿಮಾವಾಗಿದೆ. ಮತ್ತು ಉತ್ತಮ ಮನರಂಜನೆ ಇದೆ. ಪ್ರಭುದೇವ ನಿರ್ದೇಶನ ಅದ್ಭುತ. ಕಿಚ್ಚ ಸುದೀಪ್ ಸಿನಿಮಾ ಪೂರ್ತಿ ಅಬ್ಬರಿಸಿದ್ದಾರೆ. ಎಂದು ಹೇಳಿದ್ದಾರೆ.

  ದಬಾಂಗ್-3 ಔಟ್ ಅಂಡ್ ಔಟ್ ಸಲ್ಮಾನ್ ಸಿನಿಮಾ

  ದಬಾಂಗ್-3 ಔಟ್ ಅಂಡ್ ಔಟ್ ಸಲ್ಮಾನ್ ಸಿನಿಮಾ

  ಬಾಲಿವುಡ್ ಸಿನಿಮಾ ತಜ್ಞ ತರಣ್ ಆದರ್ಶ್ ದಬಾಂಗ್-3 ಸಿನಿಮಾ ಬಗ್ಗೆ ಒಂದು ಪದದ ವಿಮರ್ಶೆ ಮಾಡಿದ್ದಾರೆ. ಅವರ ಪ್ರಕಾರ ಚಿತ್ರಕ್ಕೆ 3.5 ಸ್ಟಾರ್ ನೀಡಿದ್ದಾರೆ. ಮತ್ತು ದಬಾಂಗ್-3 ಪಕ್ಕ ಮನರಂಜನೆ ಸಿನಿಮಾ. ಚುಲ್ ಬುಲ್ ಪಾಂಡೆ ಮತ್ತೆ ಬ್ಯಾಂಗ್ ಆಗಿದ್ದಾರೆ. ದಬಾಂಗ್-3 ಔಟ್ ಅಂಡ್ ಔಟ್ ಸಲ್ಮಾನ್ ಸಿನಿಮಾ. ನಿರ್ದೇಶಕ ಪ್ರಭುದೇವ ಇಲ್ಲಿ ಮಾಸ್ ಮತ್ತು ಮಸಾಲೆ ಎರಡು ಅಂಶಗಳನ್ನು ಕೇಂದ್ರೀಕರಸಿದ್ದಾರೆ. ಕಿಚ್ಚ ಸುದೀಪ್ ಅದ್ಭುತ ಎಂದು ಬರೆದುಕೊಂಡಿದ್ದಾರೆ.

  ಇದು ಪಕ್ಕ ಸಲ್ಮಾನ್ ಖಾನ್ ಸಿನಿಮಾ

  ಇದು ಪಕ್ಕ ಸಲ್ಮಾನ್ ಖಾನ್ ಸಿನಿಮಾ

  ದಬಾಂಗ್-3 ಮಾಸ್ ಆಕ್ಷನ್ ಎಂಟಟೈನರ್ ಸಿನಿಮಾ. ಸಲ್ಮಾನ್ ಅವರ ಫುಲ್ ಮಸಾಲ ಸಿನಿಮಾ. ಸಲ್ಮಾನ್ ಅಭಿಮಾನಿಗಳ ನಿರೀಕ್ಷೆಯಂತೆ ಅಭಿಮಾನಿಗಳಿಗೆ ಬೇಕಾದ ಅಂಶ ಈ ಸಿನಿಮಾದಲ್ಲಿ ಇದೆ. ತರ್ಕ ಕಂಡುಹಿಡಿಯುವವರು ಚಿತ್ರಮಂದಿರಕ್ಕೆ ಹೋಗಬೇಡಿ. ಮತ್ತು ಲಾಜಿಕ್ ಅನ್ನು ನಿರೀಕ್ಷಿಸಬೇಡಿ. ಚುಲ್ ಬುಲ್ ಪಾಂಡೆ ಡೈಲಾಗ್ ಆಕ್ಷನ್ ವೀಕ್ಷಿಸಬಹುದು. ಎಂದು ಹೇಳಿದ್ದಾರೆ.

  ಹಾಸ್ಯ ಮತ್ತು ಸಂಭಾಷಣೆ ನಿರಾಸೆ ಮೂಡಿಸಿದೆ

  ಹಾಸ್ಯ ಮತ್ತು ಸಂಭಾಷಣೆ ನಿರಾಸೆ ಮೂಡಿಸಿದೆ

  ಒಂದು ಪದದಲ್ಲಿ ಹೇಳಬೇಕೆಂದರೆ ಅತ್ಯುತ್ತಮ ಎಂದು ಹೇಳುತ್ತ 3.5 ಸ್ಟಾರ್ ನೀಡಿದ್ದಾರೆ. ಹಿಂದಿನ ದಬಾಂಗ್ ಸಿನಿಮಾಗೆ ಹೋಲಿಸಿದರೆ ಸಂಭಾಷಣೆ ಮತ್ತು ಹಾಸ್ಯ ನಿರಾಸೆ ಮೂಡಿಸುತ್ತೆ. ಸುದೀಪ್ ಪಾತ್ರ ಭಯಂಕರವಾಗಿದೆ. ಸಲ್ಮಾನ್ ಖಾನ್ ಅಭಿನಯ ಮತ್ತು ಚುಲ್ ಬುಲ್ ಅವರ ಫ್ಲ್ಯಾಶ್ ಬ್ಯಾಕ್ ಭಾಗವು ಅಧ್ಬುತವಾಗಿದೆ. ಕಥೆಯ ಪ್ರಕಾರ ದಬಾಂಗ್ ಸರಣಿಯ ಉತ್ತಮ ಸರಣಿ ಇದಾಗಿದೆ. ಎಂದು ಹೇಳಿದ್ದಾರೆ.

  ಬೋರಿಂಗ್ ಆಗಿದೆ ಸಿನಿಮಾ

  ಬೋರಿಂಗ್ ಆಗಿದೆ ಸಿನಿಮಾ

  ಕೆಲವು ಅಭಿಮಾನಿಗಳಿಗೆ ಸಿನಿಮಾ ಇಷ್ಟವಾದರೆ ಇನ್ನು ಕೆಲವರು ಬೇಸರ ಹೊರಹಾಕುತ್ತಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವಾಗ ಪಬ್ಜಿ ಆಡುವ ಪೋಟೋ ಶೇರ್ ಮಾಡಿ ಸಿನಿಮಾ ಎಷ್ಟು ಬೋರಿ ಆಗಿದೆ ಎನ್ನುವುದಕ್ಕೆ ನಾವು ಪಬ್ಜಿ ಆಡುವ ದೃಶ್ಯಗಳೆ ಸಾಕ್ಷಿ ಎಂದು ಹೇಳಿ ವ್ಯಂಗ್ಯ ಆಗಿದ್ದಾರೆ.

  English summary
  Salman Khan And Sudeep Starrer Dabanng-3 movie released today (December 20th). Here is the twitter reaction about Dabanng-3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X