twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ : 'ದಂಡುಪಾಳ್ಯ' ದಾರಿಯಲ್ಲಿ ಯಾವುದು ಸತ್ಯ, ಯಾವುದು ಸುಳ್ಳು

    |

    'ದಂಡುಪಾಳ್ಯ 3' ಸಿನಿಮಾ ಇಂದು ಬಿಡುಗಡೆಯಾಗಿದೆ ಎನ್ನುವುದಕ್ಕಿಂತ ದಂಡುಪಾಳ್ಯದ ಕಥೆ ಇಲ್ಲಿಗೆ ಅಂತ್ಯವಾಗಿದೆ ಎನ್ನುವುದು ಸೂಕ್ತ. ಮೊದಲ ಭಾಗದಲ್ಲಿ ದಂಡುಪಾಳ್ಯ ಗ್ಯಾಂಗ್ ಮಾಡಿರುವ ಕೆಟ್ಟ ಕೆಲಸವನ್ನು ತನಗೆ ಸಿಕ್ಕಿರುವ ಮಾಹಿತಿಯ ಮೂಲಕ ಹೇಳಿದ್ದ ನಿರ್ದೇಶಕ ಶ್ರೀ ನಿವಾಸ ರಾಜು ಎರಡನೇ ಭಾಗದಲ್ಲಿ ಕಥೆಯನ್ನು ದಂಡುಪಾಳ್ಯ ಹಂತಕರ ವರ್ಷನ್ ನಲ್ಲಿ ಹೇಳಿದ್ದರು. ಆದರೆ ಸದ್ಯ ಬಂದಿರುವ ಮೂರನೇ ಭಾಗದಲ್ಲಿ ಕಥೆಯನ್ನು ಪೊಲೀಸ್ ವರ್ಷನ್ ನಲ್ಲಿ ಹೇಳಿದ್ದಾರೆ.

    Rating:
    3.0/5
    Star Cast: ಪೂಜಾಗಾಂಧಿ, ರವಿಶಂಕರ್, ಶೃತಿ, ಮಕರಂದ್ ದೇಶಪಾಂಡೆ, ಸಂಜನಾ
    Director: ಶ್ರೀನಿವಾಸ್ ರಾಜು

    ಹೇಗಿದೆ ಸಿನಿಮಾ..?

    ಹೇಗಿದೆ ಸಿನಿಮಾ..?

    ದಂಡುಪಾಳ್ಯ 1 ಮತ್ತು 2 ಚಿತ್ರಕ್ಕೆ ಹೋಲಿಸಿದರೆ 'ದಂಡುಪಾಳ್ಯ 3' ಸಿನಿಮಾ ಅಷ್ಟೊಂದು ಹೇಳಿಕೊಳ್ಳುವ ಮಟ್ಟಕ್ಕೆ ಇಲ್ಲ. ಚಿತ್ರದ ಎರಡು ಭಾಗಗಳನ್ನು ನೋಡಿರುವ ಪ್ರೇಕ್ಷಕರು ಮೂರನೇ ಭಾಗದಲ್ಲಿ ಏನಿದೆ ಎಂಬ ಕುತೂಹಲಕ್ಕೆ ಮಾತ್ರ ಸಿನಿಮಾ ನೋಡಬಹುದು. 'ದಂಡುಪಾಳ್ಯ 3' ಕಳಪೆ ಅಲ್ಲದಿದ್ದರೂ ಒಮ್ಮೆ ನೋಡಬಹುದಾದ ಸಿನಿಮಾ. ತೆರೆ ಮೇಲೆ ಕೋಲೆ, ರಕ್ತಪಾತ ನೋಡಲು ಬಯಸುವ ಪ್ರೇಕ್ಷಕರು ಅಡ್ಡಿಯಿಲ್ಲದೆ ಚಿತ್ರವನ್ನು ನೋಡಬಹುದು.

    ಯಾವುದು ಸತ್ಯ - ಯಾವುದು ಸುಳ್ಳು

    ಯಾವುದು ಸತ್ಯ - ಯಾವುದು ಸುಳ್ಳು

    'ದಂಡುಪಾಳ್ಯ 3' ಸಿನಿಮಾ ನೋಡಿ ಹೊರ ಬಂದ ಪ್ರೇಕ್ಷಕರಲ್ಲಿ ಕಾಡುವ ಮೊದಲ ಮತ್ತು ಕೊನೆಯ ಪ್ರಶ್ನೆ ಅಂದರೆ ಇದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬುದು. ಹಿಂದೆ ನೆಡೆದಿರುವ ಒಂದು ಘಟನೆಯಲ್ಲಿ ಹತ್ತು ಜನ ಹತ್ತು ರೀತಿ ಹೇಳುತ್ತಾರೆ ಇಲ್ಲಿ ಆಗಿರುವುದು ಅದೇ. 'ದಂಡುಪಾಳ್ಯ 3' ಪೊಲೀಸ್ ವರ್ಷನ್ ನಲ್ಲಿ ನಡೆಯುವ ಕಥೆ. 'ದಂಡುಪಾಳ್ಯ 2' ಅಂತ್ಯವಾಗಿದ್ದ ದೃಶ್ಯದಿಂದಲೇ ಈ ಸಿನಿಮಾ ಶುರು ಆಗುತ್ತದೆ. ಇದು ಚಿತ್ರದ ಮೂರನೇ ಭಾಗ ಆಗಿದ್ದರು ಪಾರ್ಟ್ 1 ಮತ್ತು ಪಾರ್ಟ್ 2 ಗಿಂತ ಮುಂಚೆ ನಡೆದಿರುವ ಘಟನೆಯನ್ನು ಇಲ್ಲಿ ಹೇಳಲಾಗಿದೆ. ದಂಡುಪಾಳ್ಯ ಹಂತಕರಲ್ಲಿರುವ ಕೆಟ್ಟತನ ಅವರ ಬಾಲ್ಯದಿಂದ ಶುರುವಾಗಿದೆ ಎನ್ನುವುದು ಈ ಕಥೆಯ ಮೂಲ ಅಂಶ. ಇಡೀ ಚಿತ್ರ ತುಂಬ ಕೌರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದ್ದು, ಚಿತ್ರದ ತುಂಬ ರಕ್ತ, ಕೋಲೆ, ಅತ್ಯಾಚಾರ ಗಳು ತುಂಬಿ ತುಳುಕಾಡುತ್ತಿವೆ.

    ವೀರಾವೇಶದ ನಟನೆ

    ವೀರಾವೇಶದ ನಟನೆ

    ಪಾರ್ಟ್ 1 ಮತ್ತು ಪಾರ್ಟ್ 2 ಗಳ ಸಿನಿಮಾಗಳ ರೀತಿ ಇಲ್ಲಿಯೂ ನಟನೆಯಲ್ಲಿ ದಂಡುಪಾಳ್ಯದ ಯಾವ ಸದಸ್ಯರು ಹಿಂದೆ ಬಿದ್ದಿಲ್ಲ. ಪೂಜಾಗಾಂಧಿ, ಮಕರದ್ ದೇಶಪಾಂಡೆ, ಮುನಿ, ರವಿಕಾಳೆ ಪಾತ್ರವೇ ತಾವಾಗಿ ವೀರಾವೇಶದ ನಟನೆ ಮಾಡಿದ್ದಾರೆ. ರವಿಶಂಕರ್ ಎಂದಿನಂತೆ ತಮಗೆ ಕೊಟ್ಟ ಪಾತ್ರವನ್ನು ಬೇರೆಯದ್ದೆ ಲೆವೆಲ್ ಗೆ ತೆಗೆದುಕೊಂಡು ಹೋಗಿದ್ದಾರೆ. ಸಿನಿಮಾದ ಹೈಲೈಟ್ ಗಳಲ್ಲಿ ಕಲಾವಿದರ ನಟನೆ ಕೂಡ ಒಂದು.

    ಮೆಚ್ಚಿಕೊಳ್ಳಬೇಕಾದ ಅಂಶಗಳು

    ಮೆಚ್ಚಿಕೊಳ್ಳಬೇಕಾದ ಅಂಶಗಳು

    ಎಲ್ಲ ಕಲಾವಿದರ ನಟನೆ

    ಸಿನಿಮಾದಲ್ಲಿರುವ ನೈಜತೆ

    ಒಂದು ಘಟನೆಯನ್ನು ಮೂರು ರೀತಿ ಹೇಳಿರುವ ಶೈಲಿ

    ಅರ್ಜುನ್ ಜನ್ಯ ಹಿನ್ನಲೆ ಸಂಗೀತ

    ಗಮನ ಹರಿಸಬೇಕಿದ್ದ ಅಂಶಗಳು

    ಗಮನ ಹರಿಸಬೇಕಿದ್ದ ಅಂಶಗಳು

    ಸೆಕೆಂಡ್ ಹಾಫ್ ಸಿನಿಮಾದ ವೇಗ ಕಡಿಮೆ ಇದೆ

    ಮೂರು ಭಾಗದಲ್ಲಿ ಅದೇ ರೀತಿಯ ಸನ್ನಿವೇಶಗಳು ಪುನರಾವರ್ತನೆ

    ಉತ್ತಮ ನಿರ್ದೇಶನ

    ಉತ್ತಮ ನಿರ್ದೇಶನ

    ಮೂರನೇ ಬಾರಿ ದಂಡುಪಾಳ್ಯದ ಕಥೆ ಹೇಳುತ್ತಿರುವ ನಿರ್ದೇಶಕ ಶ್ರೀನಿವಾಸ ರಾಜು ತಮ್ಮ ಕಥೆಯನ್ನು ಅಚ್ಚುಕಟ್ಟಾಗಿ ಹೇಳಿದ್ದಾರೆ. ದಂಡುಪಾಳ್ಯ ನಿರ್ದೇಶಕ ಶ್ರೀನಿವಾಸ್ ರಾಜು, ಒಂದು ನಿಜವಾದ ಕಥೆಯ ಎರಡು ಸೈಡ್ ಗಳನ್ನು ಬಹಳ ತಟಸ್ಥವಾಗಿ ತೋರಿಸಿದ್ದಾರೆ. ಫಸ್ಟ್ ಆಫ್ ಕ್ಷಣ ಕ್ಷಣವೂ ಕುತೂಹಲದಿಂದ ಕೂಡಿದೆ. ಎಲ್ಲೂ ಬೋರ್ ಅನಿಸಲ್ಲ. ಆದರೆ ಸೆಕೆಂಡ್ ಹಾಫ್ ನಲ್ಲಿ ಕೆಲವು ಬೇಡದ ದೃಶ್ಯಗಳು ಇದೆ. ಕೆಲವು ಭಾರಿ ಅವು ಗೊಂದಲ ಉಂಟು ಮಾಡುತ್ತದೆ. ಉಳಿದಂತೆ, ಅರ್ಜುನ್ ಜನ್ಯ ಬ್ಯಾಕ್ ಗ್ರೌಂಡ್ ಸ್ಕೋರ್ ಚಿತ್ರದ ಖದರ್ ಹೆಚ್ಚು ಮಾಡುತ್ತದೆ.

    ಒಮ್ಮೆ ನೋಡಬಹುದು

    ಒಮ್ಮೆ ನೋಡಬಹುದು

    'ದಂಡುಪಾಳ್ಯ' ಮೊದಲ ಭಾಗ ಮತ್ತು ಎರಡನೇ ಭಾಗವನ್ನು ನೋಡಿದ ಪ್ರೇಕ್ಷಕರಿಗೆ ಈ ಚಿತ್ರವೂ ಇಷ್ಟ ಆಗುತ್ತದೆ. ಕೆಲವು ಥ್ರಿಲ್ಲಿಂಗ್ ಅಂಶಗಳು ಸಿನಿಮಾದಲ್ಲಿವೆ. ಮುಖ್ಯವಾಗಿ ಆಗ ನಡೆದಿರುವ ನೈಜ ಘಟನೆ ಏನು ಎಂದು ಪ್ರೇಕ್ಷಕರಿಗೆ ತಿಳಿಯದಿದ್ದರು, ಮೂರು ದಿಕ್ಕುಗಳಲ್ಲಿ ವಾಸ್ತವದ ಘಟನೆಯನ್ನು ನೋಡಬಹುದಾಗಿದೆ.

    English summary
    Pooja Gandhi starrer Kannada Movie 'Dandupalya 3' has hit the screens today (march 16th). The movie is out and out Suspense Thriller. 'Dandupalya 3' Review is here.
    Saturday, September 29, 2018, 12:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X