For Quick Alerts
  ALLOW NOTIFICATIONS  
  For Daily Alerts

  Darbar Review: ಅದ್ಭುತವಂತೂ ಅಲ್ಲ, ಇಷ್ಟ ಆಗುತ್ತೆ ರಜನಿ 'ಪೊಲೀಸ್ ಸ್ಟೋರಿ'

  |

  ಔಟ್ ಅಂಡ್ ಔಟ್ ಪೊಲೀಸ್ ಸ್ಟೋರಿ. ಒಳ್ಳೆಯ ಪೊಲೀಸ್ ಇರ್ತಾರೆ. ಕೆಟ್ಟ ಪೊಲೀಸ್ ಇರ್ತಾರೆ. ಆದರೆ ಪೊಲೀಸ್ ಹುಚ್ಚನಾದರೆ (ಮ್ಯಾಡ್) ಹೆಂಗಿರುತ್ತೆ ಎನ್ನುವುದು ದರ್ಬಾರ್. ಅದೇ ಎನರ್ಜಿ, ಅದೇ ಜೋಶ್, ಅದೇ ಫೈಟ್, ಅದೇ ಸ್ಟೈಲ್, ಅದೇ ಡ್ಯಾನ್ಸ್...ರಜನಿ ಅಭಿಮಾನಿಗಳನ್ನು ಖುಷಿಪಡಿಸುವಲ್ಲಿ ದರ್ಬಾರ್ ಸಕ್ಸಸ್.

  ಚಿತ್ರ: ದರ್ಬಾರ್

  ನಿರ್ದೇಶಕ: ಎ ಆರ್ ಮುರುಗದಾಸ್

  ನಿರ್ಮಾಪಕ: ಲೈಕಾ ಪ್ರೊಡಕ್ಷನ್

  ಕಲಾವಿದರು: ರಜನಿಕಾಂತ್, ನಯನತಾರ, ನಿವೇತಾ ಥಾಮಸ್, ಯೋಗಿಬಾಬು, ಸುನೀಲ್ ಶೆಟ್ಟಿ ಮತ್ತು ಇತರರು

  ಬಿಡುಗಡೆ: ಜನವರಿ 9, 2020

  ಇದು ಪಕ್ಕಾ ಪೊಲೀಸ್ ಸ್ಟೋರಿ

  ಇದು ಪಕ್ಕಾ ಪೊಲೀಸ್ ಸ್ಟೋರಿ

  ಪೊಲೀಸರಿಗೆ ಗೌರವ, ಬೆಲೆ ಇಲ್ಲದ ಮುಂಬೈ ನಗರಕ್ಕೆ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸುವ ಆಧಿತ್ಯ ಅರುಣಾಚಲಂ, ಮತ್ತೆ ಪೊಲೀಸ್ ಇಲಾಖೆಯ ತಾಕತ್ ಏನು ಎಂಬುದನ್ನು ತೋರಿಸುವುದೇ ದರ್ಬಾರ್. ಪೊಲೀಸ್ ವರ್ಸಸ್ ಅಂಡರ್ ವರ್ಲ್ಡ್ ಕಥೆ. ಖಡಕ್ ಪೊಲೀಸ್ ಸ್ಟೋರಿಯಲ್ಲೂ ಎಮೋಷನ್, ಸಾಮಾಜಿಕ ಕಾಳಜಿ, ಕಾಮಿಡಿ, ಡ್ಯಾನ್ಸ್, ಭರ್ಜರಿ ಫೈಟ್ ಎಲ್ಲವೂ ಸೇರಿ ರಜನಿ ಅಭಿಮಾನಿಗಳಿಗೆ ತಕ್ಕ ಸಿನಿಮಾ ನೀಡಿದ್ದಾರೆ ಎಆರ್ ಮುರುಗಾಸ್. ಸೆಕೆಂಡ್ ಹಾಫ್ ಹೋಲಿಸಿಕೊಂಡರೆ ಮೊದಲಾರ್ಧ ಹೆಚ್ಚು ಇಷ್ಟು ಆಗುತ್ತೆ. ಇಡೀ ಸಿನಿಮಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಚಿತ್ರಕಥೆ ಮಾಡಿರುವುದು ಪ್ಲಸ್ ಆಗಿದೆ.

  'ದರ್ಬಾರ್' ಚಿತ್ರದ ಟ್ವಿಟ್ಟರ್ ವಿಮರ್ಶೆ: ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಹೇಳಿದ್ದೇನು?

  ರಜನಿಯ ಎನರ್ಜಿ ದೊಡ್ಡ ಶಕ್ತಿ

  ರಜನಿಯ ಎನರ್ಜಿ ದೊಡ್ಡ ಶಕ್ತಿ

  ಇಡೀ ಚಿತ್ರಕ್ಕೆ ರಜನಿಕಾಂತ್ ಶೋ ಮ್ಯಾನ್. ಆಧಿತ್ಯ ಅರುಣಾಚಲಂ ಒಳ್ಳೆಯ ಪೊಲೀಸ್ ಅಲ್ಲ, ಕೆಟ್ಟ ಪೊಲೀಸ್ ಅಲ್ಲ. ಮ್ಯಾಡ್ ಪೊಲೀಸ್. ಒಂದು ಸರಿ ಕೆಲಸ ವಹಿಸಿಕೊಂಡರೆ ಮುಗಿತು, ಮತ್ತೆ ಯಾರೇ ಹೇಳಿದ್ರು ಆ ಕೆಲಸ ಪೂರ್ತಿ ಮಾಡದೆ ಬಿಡಲ್ಲ. ಮುಂಬೈ ಸ್ವಚ್ಛಗೊಳಿಸಬೇಕು ಎಂಬ ಬರುವ ಆದಿತ್ಯನ ದರ್ಬಾರ್ ಅಬ್ಬಬ್ಬಾ ಎನ್ನಬಹುದು. ಇಂತಹ ಖಡಕ್ ಪೊಲೀಸ್ ಆಗಿ ರಜನಿ ಮಿಂಚಿದ್ದಾರೆ. ಸಿಕ್ಕ ಕಡೆಯಲ್ಲೆಲ್ಲ ಸ್ಟೈಲ್ ಮೂಲಕ ಜೋಶ್ ಕೊಡ್ತಾರೆ. ರಜನಿ ಡ್ಯಾನ್ಸ್ ನೋಡಿದ್ಮೇಲೆ ಅವರಿಗೆ ವಯಸ್ಸಾಗಿದೆ ಅನ್ನೋದಕ್ಕೆ ಇಷ್ಟ ಆಗಲ್ಲ. ಖದರ್ ಕಮ್ಮಿಯಾಗದ ಫೈಟ್ ನೋಡಬಹುದು. ಪ್ರತಿ ದೃಶ್ಯಗಳಲ್ಲಿ ರಜನಿಯ ಎಂಟ್ರಿ ನೋಡೋದೇ ಒಂದು ಹಬ್ಬ.

  ಎಮೋಷನ್ ವರ್ಕೌಟ್ ಆಯ್ತು

  ಎಮೋಷನ್ ವರ್ಕೌಟ್ ಆಯ್ತು

  ತಂದೆ ಮಗಳ ಸಂಬಂಧ ಸಿನಿಮಾದಲ್ಲಿ ಹೈಲೈಟ್. ರಜನಿ ಮಗಳ ಪಾತ್ರದಲ್ಲಿ ನಿವೇತಾ ಥಾಮೋಸ್ ನಟಿಸಿದ್ದು, ಗಮನ ಸೆಳೆಯುತ್ತಾರೆ. ಸೆಕೆಂಡ್ ಹಾಫ್ನಲ್ಲಿ ರಜನಿ ಮತ್ತು ನಿವೇತಾ ದೃಶ್ಯಗಳು ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಕಟ್ಟಿಹಾಕುತ್ತೆ. ಇನ್ನು ಡ್ರಗ್ಸ್ ಮಾಫಿಯಾ ಸಿನಿಮಾದ ಪ್ರಮುಖ ಅಂಶ. ಅಪ್ರಾಪ್ತ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತೆ. ಇಂದಿನ ಯುವಜನಾಂಗಕ್ಕೆ ಇದು ಹೇಗೆ ಮಾರಕವಾಗುತ್ತಿದೆ ಎಂದು ಬೆಳಕು ಚೆಲ್ಲಲಾಗಿದೆ. ಈ ದೃಶ್ಯಗಳಲ್ಲಿ ರಜನಿ ಹೀರೋಯಿಸಂ ಪ್ರಮುಖ ಆಕರ್ಷಣೆ.

  ಒಂದೇ ಮಲ್ಟಿಪ್ಲೆಕ್ಸ್ ನಲ್ಲಿ ದರ್ಬಾರ್ 87 ಶೋ: ಯಾವುದು ಆ ಚಿತ್ರಮಂದಿರ? ಎಲ್ಲಿದೆ?

  ಮುರುಗದಾಸ್ ಸ್ಟೈಲ್ ಮೇಕಿಂಗ್

  ಮುರುಗದಾಸ್ ಸ್ಟೈಲ್ ಮೇಕಿಂಗ್

  ಇದು ರಜನಿಕಾಂತ್ ಸಿನಿಮಾ ಅನ್ನೋದಕ್ಕಿಂತ ಎ ಆರ್ ಮುರುಗದಾಸ್ ಸಿನಿಮಾ ಎನ್ನಬಹುದು. ತುಪಾಕಿ, ಕತ್ತಿ, ಸರ್ಕಾರ್ ಚಿತ್ರಗಳಲ್ಲಿ ಒಂದೊಂದು ಸಾಮಾಜಿಕ ಸಮಸ್ಯೆ ಸುತ್ತ ಕಥೆ ಮಾಡಿ ರಂಜಿಸಿದ್ದರು. ಈ ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ಎಳೆಯನ್ನಿಟ್ಟು ಕಮರ್ಷಿಯಲ್ ಆಗಿ, ಮನರಂಜನಾತ್ಮಕವಾಗಿ ಸಿನಿಮಾ ಮಾಡಿದ್ದಾರೆ. ರಜನಿ ಹೀರೋ ಎಂಬ ಕಾರಣಕ್ಕೆ ನಿರೀಕ್ಷೆ ಹೆಚ್ಚಾಗಿತ್ತು. ಅಷ್ಟು ದೊಡ್ಡ ಮೋಡಿ ಮಾಡಿಲ್ಲ ಅಂದ್ರು ನಿರಾಸೆ ಅಂತೂ ಮಾಡಿಲ್ಲ. ತಮ್ಮ ರೆಗ್ಯುಲರ್ ಸ್ಟೈಲ್ ನಲ್ಲಿ ಮೇಕಿಂಗ್ ಆಗಿದೆ.

  ಅಬ್ಬಬ್ಬಾ....ಬೆಂಗಳೂರಲ್ಲಿ ದರ್ಬಾರ್ ಚಿತ್ರದ ಟಿಕೆಟ್ ಬೆಲೆ ಇಷ್ಟೊಂದಾ!

  ಕಲಾವಿದರು ಉತ್ತಮ ಸಾಥ್

  ಕಲಾವಿದರು ಉತ್ತಮ ಸಾಥ್

  ನಯನತಾರ ಅವರದ್ದು ಕ್ಲಾಸ್ ಪಾತ್ರ. ಸಿನಿಮಾ ಪೂರ್ತಿ ಸೀರೆಯಲ್ಲೇ ಕಾಣಿಸುವ ನಯನತಾರ ಇಷ್ಟ ಆಗ್ತಾರೆ. ಯೋಗಿ ಬಾಬು ಮತ್ತು ರಜನಿಕಾಂತ್ ನಡುವಿನ ಕಾಮಿಡಿ ವರ್ಕೌಟ್ ಆಗಿದೆ. ವಿಲನ್ ಪಾತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಒಳ್ಳೆಯ ಪರ್ಫಾಮೆನ್ಸ್. ಅನಿರುದ್ಧ ಮ್ಯೂಸಿಕ್ ಕೂಡ ಚಿತ್ರಕ್ಕೆ ಉತ್ತಮ ಸಾಥ್ ನೀಡಿದೆ.

  ಅತಿ ಹೆಚ್ಚು ಸ್ಕ್ರೀನ್ ನಲ್ಲಿ ದರ್ಬಾರ್ ಬಿಡುಗಡೆ: ಬಾಹುಬಲಿ ದಾಖಲೆ ಮುರಿತಾ?

  ಅದ್ಭುತವಲ್ಲ, ಕಳಪೆಯೂ ಇಲ್ಲ

  ಅದ್ಭುತವಲ್ಲ, ಕಳಪೆಯೂ ಇಲ್ಲ

  ಹಾಗಂತ ದರ್ಬಾರ್ ಸೂಪರ್ ಆಗಿದೆ ಎಂದು ಹೇಳುತ್ತಿಲ್ಲ. ಹಲವು ಕಡೆ ಸಿನಿಮಾ ಎಳೆದಿದ್ದಾರೆ ಎಂಬ ಫೀಲ್ ಆಗುತ್ತೆ. ಕಮಿಷನರ್ ಆಗಿರುವ ಕಾರಣಕ್ಕೆ ಸರ್ವಾಧಿಕಾರಿಯಂತೆ ವರ್ತಿಸುವ ರಜನಿ ಪಾತ್ರ ಕೆಲವು ಕಡೆ ಅತಿ ಎನಿಸುತ್ತೆ. ಲಾಜಿಕ್ ಹುಡುಕಿ ನೋಡಿದ್ರೆ ಕೆಲವು ಕಡೆ ಅರಗಿಸಿಕೊಳ್ಳಲು ಕಷ್ಟವಾಗುತ್ತೆ. ಕೊನೆಯದಾಗಿ ರಜನಿ, ರಜನಿ ಸ್ಟೈಲ್ ಇದೆಲ್ಲವನ್ನು ಗಮನಿಸದಂತೆ ಮಾಡುತ್ತೆ. ದರ್ಬಾರ್ ನೋಡಬಹುದು. ಅತಿಯಾದ ನಿರೀಕ್ಷೆ ಬೇಡ. ಇದೊಂದು ರೆಗ್ಯುಲರ್ ಸಿನಿಮಾ ಅಷ್ಟೆ.

  English summary
  Superstar Rajnikanth starrer Darbar movie release. audience are very happy about rajniti. movie got good respons from first day audiance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X