twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ 'Mr.ಐರಾವತ'ನಿಗೆ ವಿಮರ್ಶಕರಿಂದ ಸಿಕ್ಕ ಕಾಮೆಂಟ್ ಗಳಿವು.!

    By Harshitha
    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'Mr.ಐರಾವತ' ಚಿತ್ರ ಬಿಡುಗಡೆ ಆಗಿದೆ. ಚಿತ್ರಕ್ಕೆ ಅದ್ಭುತ ಓಪನ್ನಿಂಗ್ ಸಿಕ್ಕಿದೆ. ಕಲೆಕ್ಷನ್ ನಲ್ಲಿ 'Mr.ಐರಾವತ' ದಾಖಲೆ ಮಾಡಿದ್ದಾನೆ.

    ದರ್ಶನ್ ಅಪ್ಪಟ ಭಕ್ತರಿಗೆ 'Mr.ಐರಾವತ' ಸೂಪರ್ ಆಗಿದೆ. ದುಷ್ಟರನ್ನ ಮಟ್ಟ ಹಾಕುವ ಪೊಲೀಸ್ ಆಫೀಸರ್ ಐರಾವತನಿಗೆ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ಆದ್ರೆ, ಚಿತ್ರವನ್ನ ನೋಡಿದ ವಿಮರ್ಶಕರು ಐರಾವತನನ್ನ ಮೆಚ್ಚಿದ್ರಾ? [ಚಿತ್ರ ವಿಮರ್ಶೆ : 'ಸುಂಟರಗಾಳಿ' ಬೀಸಿದ ದರ್ಶನ್ 'Mr.ಐರಾವತ']

    ಒಂದು ವರ್ಷಕ್ಕೂ ಹೆಚ್ಚು ಕಾಲ ಚಿತ್ರೀಕರಣ ಮಾಡಿದ ನಿರ್ದೇಶಕ ಎ.ಪಿ.ಅರ್ಜುನ್ 'Mr.ಐರಾವತ'ನನ್ನ ಹೇಗೆ ತೆರೆ ಮೇಲೆ ತಂದಿದ್ದಾರೆ. ನಿರ್ದೇಶಕರ ಪ್ರಯತ್ನ ವಿಮರ್ಶಕರಿಗೆ ಇಷ್ಟವಾಯ್ತಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

    'Mr.ಐರಾವತ' ಚಿತ್ರದ ಬಗ್ಗೆ ಕರ್ನಾಟಕದ ಜನಪ್ರಿಯ ಪತ್ರಿಕೆಗಳು ಪ್ರಕಟಿಸಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

    'ಐರಾವತ' ಮಹಾತ್ಮೆ - ಪ್ರಜಾವಾಣಿ

    'ಐರಾವತ' ಮಹಾತ್ಮೆ - ಪ್ರಜಾವಾಣಿ

    ದರ್ಶನ್ ಅಭಿಮಾನಿಗಳನ್ನು ಗಮನದಲ್ಲಿ ಇಟ್ಟುಕೊಂಡೇ ಮಾಡಿರುವ ‘ಐರಾವತ', ಸಿದ್ಧಸೂತ್ರಗಳ ಚೌಕಟ್ಟಿನಿಂದ ಆಚೆಗೆ ದಾಟುವ ಯತ್ನವನ್ನೇ ಮಾಡಿಲ್ಲ. ತನ್ನ ಕುಟುಂಬದ ಸಮಸ್ಯೆಗೆ ಸ್ಪಂದಿಸದ ಪೊಲೀಸರ ವಿರುದ್ಧ ಬಂಡೆದ್ದು, ತಾನೇ ಪೊಲೀಸ್ ಅಧಿಕಾರಿಯಾಗುವ ಯುವರೈತನೊಬ್ಬನ ಕಥೆಯಿದು. ರೈತ, ನಕಲಿ ಪೊಲೀಸ್ ಹಾಗೂ ಅಸಲಿ ಪೊಲೀಸ್- ಎಂಬ ಮೂರು ಹಂತಗಳಲ್ಲಿ ದರ್ಶನ್ ಪಾತ್ರವಿದೆ. ಯಾವ ವೇಷ ಹಾಕಿದರೇನು? ಸಾಮಾನ್ಯ ಜನರ ಸಂಕಟಕ್ಕೆ ಸ್ಪಂದಿಸುವ ಗುಣ ಅವರದು! ಅದಕ್ಕೆ ತಕ್ಕಂತೆ ‘ಇಮೇಜ್' ವೈಭವೀಕರಿಸುವ ಸಂಭಾಷಣೆಗಳು ಹೇರಳವಾಗಿವೆ; ಕೆಲವು ಸಲ ಅತಿರೇಕ ಅನಿಸುತ್ತವೆ. - ಆನಂದತೀರ್ಥ ಪ್ಯಾಟಿ

    ಪ್ರೇಕ್ಷಕರನ್ನು ಮೆಚ್ಚಿಸದ ಐರಾವತ - ವಿಜಯ ಕರ್ನಾಟಕ

    ಪ್ರೇಕ್ಷಕರನ್ನು ಮೆಚ್ಚಿಸದ ಐರಾವತ - ವಿಜಯ ಕರ್ನಾಟಕ

    ದರ್ಶನ್ ಗೆ ಲಕ್ ಚೆನ್ನಾಗಿಲ್ಲವೋ ಅಥವಾ ಅವರಿಗೆ ಸಿನಿಮಾ ಮಾಡುವ ನಿರ್ದೇಶಕರ ಹಣೆ ಬರಹ ಕರಾಬ್ ಆಗಿದೆಯೋ ಗೊತ್ತಿಲ್ಲ. ಅಂಬರೀಷ ಚಿತ್ರದ ನಂತರ ಐರಾವತ ಚಿತ್ರ ಮತ್ತೆ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಮೈಸೂರಿನ ಹಳ್ಳಿಯಲ್ಲಿ ಬೇಸಾಯ ಮಾಡುತ್ತಿದ್ದ ಐರಾವತ ( ದರ್ಶನ್) ನಕಲಿ ಐಪಿಎಸ್ ಆಫೀಸರ್ ಆಗಿ ಬೆಂಗಳೂರನ್ನು ಸ್ವಚ್ಛಗೊಳಿಸಲು ಬರುತ್ತಾನೆ. ಆದರೆ ಆತ ನಕಲಿ ಆಫೀಸರ್ ಎಂದು ಗೊತ್ತಾದ ನಂತರ ಜೈಲು ಸೇರುತ್ತಾನೆ. ಇದು ಸಿನಿಮಾದ ಕತೆ. ಆದರೆ ನಿರ್ದೇಶಕ ಅರ್ಜುನ್ ಅವರ 'ಅತೀವ ಕ್ರಿಯೇಟಿವಿಟಿಯ ಕೃಪೆ'ಯಿಂದ ನಕಲಿ ಆಫೀಸರ್ ಗೆ ರಾಷ್ಟ್ರಪತಿಗಳು ರಿಯಲ್ ಐಪಿಎಸ್ ಆಫೀಸರ್ ಹುದ್ದೆಗಾಗಿ ಪರೀಕ್ಷೆ ಬರೆಯಲು ಅವಕಾಶ ಕೊಡುತ್ತಾರೆ. ಆ ಮೂಲಕ ಆತ ಹಗಲು ರಾತ್ರಿ ನಿದ್ದೆಗೆಟ್ಟು ಓದದೇ ಒಂದೇ ಸಿಟ್ಟಿಂಗ್ ನಲ್ಲಿ ಪರೀಕ್ಷೆ ಪಾಸು ಮಾಡಿ, ಅಂದೇ ಫಲಿತಾಂಶವನ್ನೂ ಪಡೆದು, ಅಂದೇ ಆಫೀಸರ್ ಕೂಡ ಆಗುತ್ತಾನೆ. ಇದನ್ನು ಫ್ಯಾಂಟಸಿ ಸಿನಿಮಾ ಅನ್ನಬೇಕೋ ಅಥವಾ ನಿರ್ದೇಶಕರಿಗೆ ಐಪಿಎಸ್ ಆಫೀಸರ್ ಹುದ್ದೆ ಬಗ್ಗೆ ಇರುವ ಅಜ್ಞಾನದ ಪರಾಮಾವಧಿ ಎಂದು ತಿಳಿದುಕೊಳ್ಳಬೇಕೋ ಗೊತ್ತಿಲ್ಲ. ಆದರೆ, ಸರ್ಕಾರಕ್ಕೆ ಮೋಸ ಮಾಡಿ, ನಕಲಿ ಆಫೀಸರ್ ಆಗಿದ್ದವನು ಒಂದೇ ದಿನ ಅಸಲಿ ಆಫೀಸರ್ ಆಗುತ್ತಾನೆ. ಇದು ನಿರ್ದೇಶಕರಿಂದ ಮಾತ್ರ ಸಾಧ್ಯವಾಗಿದೆ. - ಎಚ್.ಮಹೇಶ್

    ಆನೆಯ ಕಾಲ್ತುಳಿತಕ್ಕೆ ಸಿಕ್ಕಿ ನೂರಾರು ಸಾವು - ಕನ್ನಡ ಪ್ರಭ

    ಆನೆಯ ಕಾಲ್ತುಳಿತಕ್ಕೆ ಸಿಕ್ಕಿ ನೂರಾರು ಸಾವು - ಕನ್ನಡ ಪ್ರಭ

    ಕಲ್ಪನೆ, ತರ್ಕ, ಸಾಮಾನ್ಯ ರೂಢಿ ಇವುಗಳನ್ನೆಲ್ಲ ಗಾಳಿಗೆ ತೂರಿ, ಕಥಾನಾಯಕ ದರ್ಶನ್ ಅವರನ್ನು ವೈಭವೀಕರಿಸಿ ಐರಾವತನನ್ನಾಗಿಸಲು ನಿರ್ದೇಶಕ ಅರ್ಜುನ್ ಉರುಳುಸೇವೆ ಮಾಡಿದ್ದಾರೆ. ಐಪಿಎಸ್ ಅಧಿಕಾರಿಯ ನೇಮಕಕ್ಕೆ ಕೇಂದ್ರ ಸರ್ಕಾರದ ಆದೇಶವನ್ನು ನಕಲಿ ಮಾಡಿ ಫ್ಯಾಕ್ಸ್ ಕಳುಹಿಸುವುದು ಅಷ್ಟು ಸುಲಭವೇ? ಸರ್ಕಾರಕ್ಕೆ ಮೋಸ ಮಾಡಿದ ಆರೋಪಿಯ ವಿಚಾರಣೆಗೆ ಮೈದಾನದಲ್ಲಿ ಜನರ ಮಾತು ಕೇಳಿ ನ್ಯಾಯಾಧೀಶನೊಬ್ಬ ಶಿಕ್ಷೆಯನ್ನು ಕಡಿಮೆ ಮಾಡಲು ಸಾಧ್ಯವೇ? ಇಂತಹ ತರ್ಕವನ್ನು ಬಿಟ್ಟುಬಿಡೋಣ. ಒಬ್ಬ ಭೂಗತನ ವರ್ತನೆ ಹೇಗಿರುತ್ತದೆ, ಒಬ್ಬ ಪೊಲೀಸ್ ಅಧಿಕಾರಿಯ ಕಾರ್ಯಪರತೆ ಹೇಗಿರುತ್ತದೆ ಎಂಬುದರ ಸಣ್ಣ ಅಧ್ಯಯನವಾದರೂ ಬೇಡವೇ? ಹೀಗೆ ಅತಿಗಳಿಂದಲೇ ತುಂಬಿದ ಸಿನೆಮಾದ ಮೊದಲಾರ್ಧದಲ್ಲಿ ನಾಯಕ ನಟ ಕಂಡಕಂಡವರಿಗೆ ಹೊಡೆಯುವ, ಕಂಡಕಂಡಲ್ಲಿ ಬೋಧನೆ ಮಾಡುವುದು, ರೌಡಿಯ ಜೊತೆ ವಾಗ್ಯುದ್ಧ ನಡೆಸುವ ಘಟನೆಗಳು ಬಿಟ್ಟರೆ ಏನೇನೂ ಇಲ್ಲ! ಮಧ್ಯಂತರದಲ್ಲಿ ಸಿಗುವ ಒಂದು ಟ್ವಿಸ್ಟ್ ಜನರಿಗೆ ಕುತೂಹಲಕ್ಕಿಂತ ನಗೆಪಾಟಲಿಗೆ ನೂಕುತ್ತದೆ. ದ್ವಿತೀಯಾರ್ಧದಲ್ಲಿ ಐರಾವತನ ಪೂರ್ವಾಶ್ರಮದ ಕಥೆ ಹೇಳುವಾಗ ಅವನ ಕುಟುಂಬದಲ್ಲಿ ನಡೆದಿರುವ ಒಂದು ರೇಪಿನ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದಾಗ, ಪೊಲೀಸರ ವರ್ತನೆಯನ್ನು ಅಗತ್ಯಕ್ಕಿಂತಲೂ ಕೆಟ್ಟದಾಗಿ ಚಿತ್ರಿಸಿ, ಹೀರೋ ಸುತ್ತ ಅತಿರಂಜಿತ ಕಥೆ ಕಟ್ಟಲು ನಡೆಸಿರುವ ಪ್ರಯತ್ನ ಪಿಚ್ಚೆನಿಸುತ್ತದೆ. ನಟ ದರ್ಶನ್ ಮತ್ತು ಪ್ರಕಾಶ್ ರಾಜ್ ಅವರ ಏರು ಧ್ವನಿಯ ಸಂಭಾಷಣೆ ಅವರ ಅಭಿಮಾನಿಗಳನ್ನು ಉನ್ಮಾದಕ್ಕೆ ತಳ್ಳಿ ಶಿಳ್ಳೆ, ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡರೂ, ಅದರಿಂದಾಚೆಗೆ ಚಿಂತಿಸಿದಾಗ ಕಿರುಚಾಟ-ಅಬ್ಬರ ಎನಿಸುತ್ತದೆ. - ಗುರುಪ್ರಸಾದ್ ನಾರಾಯಣ

    Mr Airavata Movie Review - Times of India

    Mr Airavata Movie Review - Times of India

    Right from the day Airaavatha takes over as the ACP, he brings about sudden changes that ministers and corporators need many layers of permissions for. When his fraud comes to light, he has a special janta ki adalat, where the judges seem to be moved by emotions. He then is allowed to write the IPS exams by none other than the President, which is (hold your breath) telecast live across channels. Never mind that he studied for the tough exams overnight, he has ministers visiting his house to beg him to join the force and he gets back all his power. Also, considering there is just one do-gooder, there's only one rogue. Prakash Rai's character seems to be responsible for all evil, making it easy for Airaavatha to nab the bad guy. Bits and pieces from the narrative remind one of previous Darshan films as well as some Telugu blockbusters. The item song seems to be a direct cut-copy-paste effort from Pokiri. The flashback episode featuring Sindhu Loknath seems rather distasteful, even though the sister sentiment is supposed to evoke viewers' sympathy. The haggard plot seems like a poor catalyst. - Sunayana Suresh

    MOVIE REVIEW: MR AIRAVATHA - Bangalore Mirror

    MOVIE REVIEW: MR AIRAVATHA - Bangalore Mirror

    The film is more or less a Singham rehash in the first half and a throwback to the 'avenging the sister' theme of the 1980s in the second. The leading lady has the obligatory presence in the dream songs and a few other scenes. Notwithstanding the the fact that we have to expect only fantasy in entertainers, Mr Airavatha is hardly successful in its make-believe attempts. There are very few redeeming episodes in the film. - Shyam Prasad S

    English summary
    Kannada Actor Darshan starrer Kannada Movie 'Mr.Airavata' has received mixed response from the critics. Here is the collection of reviews by Top News Papers of Karnataka.
    Monday, October 5, 2015, 11:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X