twitter
    For Quick Alerts
    ALLOW NOTIFICATIONS  
    For Daily Alerts

    ಇದು ಓದುಗರ ವಿಮರ್ಶೆ : 'ನಾ ನೋಡಿದ ಯಜಮಾನ'

    By ನಾಗರಾಜ್ ಮಹೇಶ್ವರಪ್ಪ
    |

    Recommended Video

    ಈ ವಿಮರ್ಶೆ ಕೊಡ್ತಿರೋದು ನಾವಲ್ಲ..! | FILMIBEAT KANNADA

    "ಆಕಾಶಕ್ಕೆ ತಲೆಕೊಟ್ಟು ಭೂಮಿಗೆ ಬೆವರಿಳಿಸಿ ನಿಯತ್ತಿಂದ ಕಟ್ಟಿ ಸ್ವಂತ ಬ್ರಾಂಡ್ ಮಾಡಿ" ಹಳ್ಳಿಗಾಡಲ್ಲಿ ಅಷ್ಟು ವರ್ಷ ಕಷ್ಟ ಪಟ್ಟು , ಬಂದಿದ್ದ ಅಲ್ಪಸ್ವಲ್ಪ ಕಾಸಲ್ಲೆ ತಾನೇ ಯಜಮಾನ ಆಗಿ ನೆಮ್ಮದಿಯಿಂದ ಇದ್ದವ... ಕೊನೆಗೆ ಒಂದಿನ ಸಿಟಿಯಿಂದ ಬಂದ ತಲೆಕೆಡಿಸೋರ ಬಣ್ಣದ ಮಾತಿಗೆ ಮರುಳಾಗಿ ಅವರಿಗೆ ಗುಲಾಮನಾಗಿ ಸೋತು ಸುಣ್ಣ ಆಗುವ... ಸುಮಾರು ಜನರನ್ನು ಇಂದು ನಾವು ನೋಡ್ತಿದ್ದೀವಿ...!

    ಇತ್ತ ಸಿಟಿ ಲೈಫ್ಗೆ ಹೊಂದಿಕೊಳ್ಳಕೂ ಆಗದೆ , ಬಿಟ್ಟುಬಂದ ಹಳ್ಳಿಗೆ ಮತ್ತೆ ಹೆಜ್ಜೆ ಇಡಲು ಮುಖವಿಲ್ಲದೆ ವಿಲ ವಿಲನೇ ಒದ್ದಾಡುತ್ತ ಜೀವನನೇ ಹಾಳು ಮಾಡಿಕೊಳ್ಳೋ ಬದಲು ...ನಮ್ಮ ನಮ್ಮ ಊರಲ್ಲೇ ನಮ್ಮ ನಮ್ಮ ಕೆಲಸದಲ್ಲಿ ತೊಡಗಿ ನಮಗೆ ನಾವೇ ಯಜಮಾನ ಆಗಿದ್ರೆ ಎಷ್ಟು ಚೆನ್ನ...ಅಂತಾ ಸೊಗಸಾಗಿ ಚಿತ್ರಿಸಿ ಮನಮುಟ್ಟುವಂತೆ ಹೇಳಿದ್ದಾರೆ ದರ್ಶನ್ ಅಭಿನಯದ 'ಯಜಮಾನ' ಚಿತ್ರ ತಂಡ !

    Yajamana Review : ಮನೆಗೆ ಯಜಮಾನ.. ಮಾರ್ಕೆಟ್ ಗೆ ಸುಲ್ತಾನ.. Yajamana Review : ಮನೆಗೆ ಯಜಮಾನ.. ಮಾರ್ಕೆಟ್ ಗೆ ಸುಲ್ತಾನ..

    ಅಂದಹಹಾಗೆ, 'ಯಜಮಾನ'ದ ವಿಮರ್ಶೆ ಪ್ರಮುಖ ಅಂಶಗಳು ಮುಂದಿವೆ ಓದಿ..

    ತಾಕತ್ತಿದ್ರೆ ಕಟ್ಟಾಕು

    ತಾಕತ್ತಿದ್ರೆ ಕಟ್ಟಾಕು

    "ಆನೆ ನಡೆದಿದ್ದೇ ದಾರಿ ...ಬರ್ತಾ ಇದೀನಿ ..ತಾಕತ್ತಿದ್ರೆ ಕಟ್ಟಾಕು.." ಡೈಲಾಗಿಗೆ ತಕ್ಕಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸೊಗಸಾದ ಅಭಿನಯದೊಂದಿಗೆ ಇಡೀ ಸಿನಿಮಾನ ಹೆಗಲ ಮೇಲೆ ಹೊತ್ತು ನಡೆದಿದ್ದರೆ. ಅದಕ್ಕೆ ಸರಿಸಮನಾಗಿ ಉಳಿದ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದಾರೆ.''

    ಕಾವೇರಿಯಾದ ರಶ್ಮಿಕಾ

    ಕಾವೇರಿಯಾದ ರಶ್ಮಿಕಾ

    ''ಕಾವೇರಿಯಾಗಿ ರಶ್ಮಿಕಾ ಮಂದಣ್ಣ ಹಳ್ಳಿ ಹುಡುಗಿಯಾಗಿ ಸುಂದರವಾಗಿ ಕಂಡರೆ, ಸಿಟಿ ಹುಡುಗಿಯಾಗಿ ತಾನ್ಯಾ ಹೋಪ್ ಮಾದಕವಾಗಿ ಕಂಡು ಬಸಣ್ಣಿಯಾಗಿ ಭರ್ಜರಿ ಸ್ಟೆಪ್ಸ್ ಹಾಕಿ ನೋಡುಗರ ಮನಕ್ಕೆ ಡೈರೆಕ್ಟ್ ಆಗಿ ಲಗ್ಗೆ ಹಾಕಿದ್ದಾರೆ. ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಹೊಸ ಖಳನಟರಿಗೆ ಭರ್ಜರಿ ಡಿಮ್ಯಾಂಡೋ ಡಿಮ್ಯಾಂಡು. ಒಳ್ಳೆ ಮೈಕಟ್ಟು ಹೊಂದಿರುವ ಥಾಕುರ್ ಅನೂಪ್ ಸಿಂಗ್ ಭರ್ಜರಿಯಾಗಿ ನಟಿಸಿದ್ದಾರೆ.

    'ಯಜಮಾನ' ಮಾಸ್ ಪ್ರೇಕ್ಷಕರಿಗೆ ಮಹಾರಾಜ.. ಕ್ಲಾಸ್ ಪ್ರೇಕ್ಷಕರಿಗೆ ಮನೆ ಹುಡುಗ 'ಯಜಮಾನ' ಮಾಸ್ ಪ್ರೇಕ್ಷಕರಿಗೆ ಮಹಾರಾಜ.. ಕ್ಲಾಸ್ ಪ್ರೇಕ್ಷಕರಿಗೆ ಮನೆ ಹುಡುಗ

    ರವಿಶಂಕರ್, ಧನಂಜಯ್

    ರವಿಶಂಕರ್, ಧನಂಜಯ್

    ಉಳಿದಂತೆ ರವಿಶಂಕರ್, 'ಪಟ್ಟು ಅಂದ್ರೆ ಪಟಾಯ್ಸು ಮಿಠಾಯಿ ಸೂರಿ'ಯಾಗಿ ಡಾಲಿ ಧನಂಜಯ್, ದೇವರಾಜ್, ದತ್ತಣ್ಣ ಚೆನ್ನಾಗಿ ಅಭಿನಯಿದ್ದರೆ , ಕಾಮಿಡಿ ಪೇರ್ ಸಾಧುಕೋಕಿಲ - ಶಿವರಾಜ್ ಕಚಗುಳಿ ನೀಡಿದ್ದರೆ. ಇರುವ ಎಲ್ಲಾ ಐದು ಹಾಡುಗಳನ್ನು ಸೂಪರ್ ಸಕ್ಸಸ್ ಆಗಿ ಮಾಡಿರುವ ಮ್ಯೂಸಿಕ್ ಮಾಂತ್ರಿಕ ವಿ.ಹರಿಕೃಷ್ಣ ಮೊದಲ ಬಾರಿಗೆ ಸಿನಿಮಾ ನಿರ್ದೇಶನದಲ್ಲೂ ಮಿಂಚಿದ್ದಾರೆ ಅಂದರೆ ಉತ್ಪ್ರೇಕ್ಷೆಯಲ್ಲ.

    ಮನೋರಂಜನೆಯ ಸಿನಿಮಾ

    ಮನೋರಂಜನೆಯ ಸಿನಿಮಾ

    ನಾನು ನೋಡಿದ ದರ್ಶನ್ ಮೂವಿಗಳಲ್ಲೆಲ್ಲ ಇದು ಅತ್ತ್ಯುತ್ತಮ ವಾದದ್ದು. ಉತ್ತಮ ಕಥೆ, ಸಂಭಾಷಣೆ, ಸೊಗಸಾದ ಹಾಡುಗಳು, ಬಸಣ್ಣಿ ಹಾಕಿರೋ ಮಾದಕ ಸ್ಟೆಪ್ಸ್, ಮೈ ನವಿರೇಳಿಸುವ ಫೈಟಿಂಗ್ ಸೀನ್ಸ್, ಒಂದೇ ಎರಡೇ.. ಪೈಸಾ ವಸೂಲಿ ಮನೋರಂಜನೆಯ ಅಪ್ಪಟ ಕನ್ನಡ ಕಮರ್ಷಿಯಲ್ ಚಿತ್ರ ಇದಾಗಿದೆ. ಎಲ್ಲಾ ಚಿತ್ರರಸಿಕರು ತಪ್ಪದೆ ಹೋಗಿ ನೋಡಿ ಆನಂದಿಸಿ, ಸ್ಯಾಂಡಲ್ ವುಡ್ ಹೆಸರನ್ನು ಎಲ್ಲೆಡೆ ಇನ್ನೂ ಹೆಚ್ಚಾಗಿಸಿ.

    ನಿಮ್ಮ ಜೀವನದಲ್ಲಿ ಯಜಮಾನನಾಗಿರಿ

    ನಿಮ್ಮ ಜೀವನದಲ್ಲಿ ಯಜಮಾನನಾಗಿರಿ

    "ಬಾಳೊಂದು ಹರಳೆಣ್ಣೆ ಪೇಟೆ ಇಲ್ಲಿ ಒಬ್ಬೊಬ್ಬನೊಂದು ಒಂದೊಂದು ತೀಟೆ. ಧಮ್ಮಿದ್ದೋನು ಆಡ್ತಾನೆ ಬೇಟೆ ಇಲ್ಲದಿದ್ದೋನು ಮಾವಿನಕಾಯಿ ವಾಟೆ. ವಾಟೆ ಆಗೋ ಬದ್ಲು. ಬೇಟೆ ಆಡೋ ಯಜಮಾನ ಆಗಿ ಇರಿ ನಿಮ್ಮ ನಿಮ್ಮ ಜೀವನದಲ್ಲಿ !
    ಇಂತಿ ನಿಮ್ಮ ...ಕನ್ನಡಾಭಿಮಾನಿ''

    English summary
    Challenging star Darshan and Rashmika Mandanna's most expected movie 'Yajamana' review. The movie is a mass and family entertainer. Song and action scenes are highlight in this movie.
    Tuesday, March 12, 2019, 12:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X