twitter
    For Quick Alerts
    ALLOW NOTIFICATIONS  
    For Daily Alerts

    Dear Comrade Review : ಬಾಬಿ - ಲಿಲ್ಲಿಯ ಎಮೋಷನಲ್ ಲವ್ ಸ್ಟೋರಿ

    |

    ನಾವು ಪ್ರೀತಿಸುತ್ತಿರುವುದು, ನಮಗೆ ಸಿಗಬೇಕು ಅಂದ್ರೆ ಹೋರಾಟ ನಡೆಸಬೇಕು.

    ಹೋರಾಟ ಎನ್ನುವುದು ನಮ್ಮ ಒಳಗೆ ಆಗುವ ವಿಷಯ. ಅದು ಹೊರಗಡೆ ಆದ್ರೆ, ಅದೇ ಹೋರಾಟ ಮತ್ತೆ ನಮ್ಮ ಬಳಿ ಬರುತ್ತದೆ.

    ನಾವು ಇಷ್ಟಪಟ್ಟಿದನ್ನು ಹೋರಾಟ ಮಾಡಿ ಪಡೆದರೆ, ನಮ್ಮನ್ನು ಇಷ್ಟಪಡುವುದೆಲ್ಲವೂ ಹುಡುಕಿ ನಮ್ಮ ಬಳಿ ಬರುತ್ತದೆ.

    ಈ ಕಾರಣಕ್ಕಾಗಿ ರಶ್ಮಿಕಾ ಚಿತ್ರರಂಗಕ್ಕೆ ಬರುವುದು ಬೇಡ ಎಂದಿದ್ದರಂತೆ ತಂದೆ-ತಾಯಿ ಈ ಕಾರಣಕ್ಕಾಗಿ ರಶ್ಮಿಕಾ ಚಿತ್ರರಂಗಕ್ಕೆ ಬರುವುದು ಬೇಡ ಎಂದಿದ್ದರಂತೆ ತಂದೆ-ತಾಯಿ

    ನಮ್ಮ ಮನೆಯಲ್ಲಿನ ಹೆಣ್ಣುಮಕ್ಕಳು, ನಾವು ಪ್ರೀತಿಸುವ ಹುಡುಗಿ, ನಮ್ಮ ಸ್ನೇಹಿತೆ ಹೀಗೆ ಪ್ರತಿ ಮಹಿಳೆಯ ದುಃಖದ ವಿರುದ್ಧ ಹೋರಾಟ ಮಾಡಬೇಕು. ಅವನೇ ಕಾಮ್ರೇಡ್.

    ಈ ವಿಷಯಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾವೇ 'ಡಿಯರ್ ಕಾಮ್ರೇಡ್'. ಬಾಬಿ ಹಾಗೂ ಲಿಲ್ಲಿ ಇಬ್ಬರ ಭಾವನಾತ್ಮಕ ಪ್ರೇಮ ಕಥೆಯೇ ಈ ಸಿನಿಮಾ.

    Rating:
    3.0/5
    Star Cast: ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ
    Director: ಭರತ್ ಕಮ್ಮಾ

    ಕಾಮ್ರೇಡ್ ಅಂದರೆ ಏನು?

    ಕಾಮ್ರೇಡ್ ಅಂದರೆ ಏನು?

    ಸಿನಿಮಾ ಹೇಗಿದೆ..? ಎಂದು ಹೇಳುವ ಮುನ್ನ ಕಾಮ್ರೇಡ್ ಎಂದರೆ ಏನು ಎಂದು ಹೇಳಿಬಿಡಬೇಕು. ಕಾಮ್ರೇಡ್ ಎಂದರೆ, ನಮ್ಮ ಜೀವನದಲ್ಲಿ ಕನಸುಗಳನ್ನು ನನಸು ಮಾಡಲು, ಸಾಧನೆಗಳನ್ನು ಈಡೇರಿಸಲು, ಯಾರು ನಮ್ಮ ಜೀವನದಲ್ಲಿ ಹೋರಾಟ ನಡೆಸಲು ನಮ್ಮ ಜೊತೆಗೆ ನಿಲ್ಲುತ್ತಾರೋ ಅವರೇ ಕಾಮ್ರೇಡ್.

    ಬರುವಾಗ ಆನಂದ ನೀಡುವ ಪ್ರೀತಿ, ಹೋಗುವಾಗ ದುಃಖ ನೀಡುವುದೆಕೆ?

    ಬರುವಾಗ ಆನಂದ ನೀಡುವ ಪ್ರೀತಿ, ಹೋಗುವಾಗ ದುಃಖ ನೀಡುವುದೆಕೆ?

    ''ಬರುವಾಗ ಆನಂದ ನೀಡುವ ಪ್ರೀತಿ, ಹೋಗುವಾಗ ದುಃಖ ನೀಡುವುದೆಕೆ?''ಎಂದು ಹೇಳುವ ಬಾಬಿ (ವಿಜಯ ದೇವರಕೊಂಡ) ಸಿನಿಮಾ ಶುರು ಆದಾಗಲೇ ಲಿಲ್ಲಿಯಿಂದ ದೂರ ಆಗಿರುತ್ತಾನೆ. ಚಿತ್ರದ ಪ್ರಾರಂಭದಲ್ಲಿಯೇ ಈ ದೃಶ್ಯ ಇದ್ದು, ಸಿನಿಮಾ ನೋಡುವಾಗ ಬಾಬಿಯ ಬ್ಯಾಗ್ರಾಂಡ್ ಕಥೆ ಬಗ್ಗೆ ಕುತೂಹಲ ಹುಟ್ಟುತ್ತದೆ. ಟೈಟಲ್ ಕಾರ್ಡ್ ಮೂಲಕವೇ ನಿರ್ದೇಶಕರು ತಮ್ಮ ಸ್ಟೈಲ್ ತೋರಿಸಿದ್ದಾರೆ.

    'ಡಿಯರ್ ಕಾಮ್ರೇಡ್' ಬಿಡುಗಡೆ ಸಮಯಕ್ಕೆ ಡಬ್ಬಿಂಗ್ ಚಿತ್ರಗಳ ಬಗ್ಗೆ ಪುಷ್ಕರ್ ಟ್ವೀಟ್ 'ಡಿಯರ್ ಕಾಮ್ರೇಡ್' ಬಿಡುಗಡೆ ಸಮಯಕ್ಕೆ ಡಬ್ಬಿಂಗ್ ಚಿತ್ರಗಳ ಬಗ್ಗೆ ಪುಷ್ಕರ್ ಟ್ವೀಟ್

    ಫ್ಯಾಶ್ ಬ್ಯಾಕ್ ನಲ್ಲಿ ಸಿನಿಮಾ ಓಪನ್

    ಫ್ಯಾಶ್ ಬ್ಯಾಕ್ ನಲ್ಲಿ ಸಿನಿಮಾ ಓಪನ್

    ಲಿಲ್ಲಿಯಿಂದ ದೂರ ಆಗಿರುವ ಬಾಬಿ ತನ್ನ ಕಥೆ ಹೇಳಲು ಶುರು ಮಾಡುತ್ತಾನೆ. ಕಾಲೇಜ್ ಲೀಡರ್ ಆಗಿರುವ ಬಾಬಿ ವಿದ್ಯಾರ್ಥಿಗಳಿಗಾಗಿ ಯಾವುದೇ ಹೋರಾಟಕ್ಕೆ ಸೈ ಎನ್ನುತ್ತಾನೆ. ಆತನಿಗೆ ಮೂಗಿನ ಮೇಲೆಯೇ ಕೋಪ ಇರುತ್ತದೆ. ತನಗೆ ಬೇಕಾಗಿರುವುದನ್ನು ಹೋರಾಟದ ಮೂಲಕ ಪಡೆದುಕೊಳ್ಳುತ್ತಾನೆ. ಈ ರೀತಿ ಇರುವ ಬಾಬಿ ಕೊನೆಗೆ ತನ್ನ ಲವರ್ ಲಿಲ್ಲಿಗಾಗಿಯೇ ಹೋರಾಟ ಮಾಡಬೇಕಾಗುತ್ತದೆ.

    ಲಿಲ್ಲಿ ಜೀವನದಲ್ಲಿ ಕಾಮ್ರೇಡ್ ಆಗುವ ಬಾಬಿ

    ಲಿಲ್ಲಿ ಜೀವನದಲ್ಲಿ ಕಾಮ್ರೇಡ್ ಆಗುವ ಬಾಬಿ

    ತನ್ನ ಹೋರಾಟದ ಮೂಲಕ...ತನ್ನ ಮುಂಗೋಪದ ಮೂಲಕ ಪ್ರೀತಿ ಕಳೆದುಕೊಳ್ಳುವ ಬಾಬಿ, ಮತ್ತೆ ಅದೇ ಹೋರಾಟದ ಮೂಲಕ ತನ್ನ ಪ್ರೀತಿಯನ್ನು ಹೇಗೆ ಪಡೆದುಕೊಳ್ಳುತ್ತಾನೆ ಎನ್ನುವುದು ಸಿನಿಮಾದ ನಿರೂಪಣೆಯಾಗಿದೆ. ಪ್ರೇಮಿಯಾಗಿರುವ ಬಾಬಿ ಹೇಗೆ ಲಿಲ್ಲಿಯ ಜೀವನದಲ್ಲಿ ಕಾಮ್ರೇಡ್ ಆಗುತ್ತಾನೆ ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು.

    ಈ ಶುಕ್ರವಾರ ಬಿಡುಗಡೆಯಾಗುತ್ತಿರುವ ಐದು ಸಿನಿಮಾಗಳ ಪಟ್ಟಿ ಈ ಶುಕ್ರವಾರ ಬಿಡುಗಡೆಯಾಗುತ್ತಿರುವ ಐದು ಸಿನಿಮಾಗಳ ಪಟ್ಟಿ

    ಸ್ವಲ್ಪ ಬೋರು.. ಉಳಿದಿದೆಲ್ಲ ಸೂಪರು..

    ಸ್ವಲ್ಪ ಬೋರು.. ಉಳಿದಿದೆಲ್ಲ ಸೂಪರು..

    ಇಡೀ ಸಿನಿಮಾ ಚೆನ್ನಾಗಿದೆ. ಆದರೆ, ಸಿನಿಮಾದ ಅವಧಿ ಚಿತ್ರದ ಮೈನಸ್ ಪಾಯಿಂಟ್ ಗಳಲ್ಲಿ ಒಂದು. ಸಿನಿಮಾದ ಅವಧಿ ಹೆಚ್ಚು ಇರುವ ಕಾರಣ ಕೆಲವು ದೃಶ್ಯಗಳು ಬೋರ್ ಆಗಲು ಶುರು ಆಗುತ್ತದೆ. ಸೆಂಟಿಮೆಂಟ್ ದೃಶ್ಯಗಳು ತುಂಬನೇ ಹೆಚ್ಚಿದೆ. ವಿಜಯ್ ದೇವರಕೊಂಡಗೆ ಡಬ್ ನೀಡಿದ ಧ್ವನಿ ಇಷ್ಟ ಆಗುವುದಿಲ್ಲ. ಈ ರೀತಿ ಕೆಲವೊಂದು ತಪ್ಪುಗಳನ್ನು ಬಿಟ್ಟು ನೋಡಿದರೆ, ಸಿನಿಮಾ ಸೂಪರ್ ಎನ್ನಬಹುದು.

    ವೀರಾವೇಶದ ವಿಜಯ್ ದೇವರಕೊಂಡ

    ವೀರಾವೇಶದ ವಿಜಯ್ ದೇವರಕೊಂಡ

    ಕಾಲೇಜ್ ಹುಡುಗ ಬಾಬಿ ಪಾತ್ರದಲ್ಲಿ ವಿಜಯ್ ದೇವರಕೊಂಡ ಅಬ್ಬರಿದ್ದಾರೆ. ತೆರೆ ಮೇಲೆ ಎಂದಿನಂತೆ ತಮ್ಮ ವೀರಾವೇಶದ ನಟನೆ ಮೂಲಕ ಗಮನ ಸೆಳೆದಿದ್ದಾರೆ. ಆಕ್ಟಿಂಗ್ ಹಾಗೂ ಫೈಟ್ ನಲ್ಲಿ ವಿಜಯ್ ಇನ್ನಷ್ಟು ಮುಂದಕ್ಕೆ ಹೋಗಿದ್ದಾರೆ. ಕಾಲೇಜ್ ಲೀಡರ್ ಆಗಿ, ಲವರ್ ಬಾಯ್ ಆಗಿ, ಕೊನೆಗೆ ಹೋರಾಟಗಾರನಾಗಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ.

    ಸಿಕ್ಸರ್ ಬಾರಿಸಿದ ಕ್ರಿಕೆಟರ್ ರಶ್ಮಿಕಾ

    ಸಿಕ್ಸರ್ ಬಾರಿಸಿದ ಕ್ರಿಕೆಟರ್ ರಶ್ಮಿಕಾ

    ಲಿಲ್ಲಿ ಪಾತ್ರದ ಮೂಲಕ ರಶ್ಮಿಕಾ ಮಂದಣ್ಣ ಸೌಂದರ್ಯ ಮತ್ತಷ್ಟು ಜಾಸ್ತಿಯಾಗಿದೆ. ಬರೀ ಅಂದದ ಮೂಲಕ ಅಲ್ಲದೆ, ರಶ್ಮಿಕಾ ನಟನೆಯಲ್ಲಿ ಕೂಡ ಪ್ರಬುದ್ಧತೆ ಕಾಣುತ್ತಿದೆ. ಕ್ರಿಕೆಟರ್ ಆಗಿರುವ ಲಿಲ್ಲಿಯನ್ನು ನೋಡಲು ಅಭಿಮಾನಿಗಳಿಗೆ ಬಹಳ ಖುಷಿ ಆಗುತ್ತದೆ. ಇದರ ಜೊತೆಗೆ ಎಮೋಷನಲ್ ದೃಶ್ಯಗಳಲ್ಲಿ ರಶ್ಮಿಕಾ ಅದ್ಭುತವಾಗಿ ನಟಿದ್ದಾರೆ. ಉಳಿದ ಎಲ್ಲ ಪಾತ್ರಗಳು ಈ ಎರಡು ಪಾತ್ರಗಳಿಗೆ ಬೆಂಬಲ ನೀಡಿವೆ.

    ಕ್ಯಾಮರಾ, ಮ್ಯೂಸಿಕ್, ಸಂಭಾಷಣೆ

    ಕ್ಯಾಮರಾ, ಮ್ಯೂಸಿಕ್, ಸಂಭಾಷಣೆ

    ಸಿನಿಮಾದ ಮೇಕಿಂಗ್ ಸ್ಟೈಲ್ ಹೊಸದಾಗಿದೆ. ಹೀಗಾಗಿ ಪ್ರತಿ ದೃಶ್ಯಗಳು ತಾಜಾ ಅನುಭವ ನೀಡುತ್ತದೆ. ಹಾಡುಗಳು ಚೆನ್ನಾಗಿವೆ, ಹಿನ್ನಲೆ ಸಂಗೀತ ಅದಕ್ಕಿಂತ ಚೆನ್ನಾಗಿದೆ. ಸಂಭಾಷಣೆ ಸಿನಿಮಾದ ತೂಕ ಹೆಚ್ಚು ಮಾಡಿದೆ. ತುಂಬ ಒಳ್ಳೆಯ ಸಾಲುಗಳನ್ನು ಚಿತ್ರಗಳಲ್ಲಿ ಬಳಸಲಾಗಿದೆ.

    ಫುಲ್ ಎಮೋಷನಲ್ ಸಿನಿಮಾ

    ಫುಲ್ ಎಮೋಷನಲ್ ಸಿನಿಮಾ

    'ಡಿಯರ್ ಕಾಮ್ರೇಡ್' ಒಂದು ಎಮೋಷನಲ್ ಲವ್ ಸ್ಟೋರಿ. ಒಂದು ಒಳ್ಳೆಯ ಪ್ರೇಮಕಥೆಯ ಜೊತೆಗೆ, ಒಂದು ಒಳ್ಳೆಯ ಸಂದೇಶ ಹೇಳಿದ್ದಾರೆ. ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳದೆ ಸಿನಿಮಾ ನೋಡಿದರೆ, ಇಷ್ಟ ಆಗುತ್ತದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅಭಿಮಾನಿಗಳು ಸಿನಿಮಾನಾ ಮಿಸ್ ಮಾಡಿಕೊಳ್ಳಬೇಡಿ.

    English summary
    Dear Comrade Movie review in Kananda: Rating: 3 stars.
    Friday, July 26, 2019, 16:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X