'ಚಪಾಕ್' ನೋಡಿ ದೀಪಿಕಾ ಪಡುಕೋಣೆಗೆ ಸಲ್ಯೂಟ್ ಹೊಡೆದ ಟ್ವೀಟಿಗರು.!

ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರ 'ಚಪಾಕ್' ದೇಶದಾದ್ಯಂತ ಬಿಡುಗಡೆ ಆಗಿದೆ. ಆಸಿಡ್ ಅಟ್ಯಾಕ್ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಜೀವನಾಧಾರಿತ ಚಿತ್ರ ಇದಾಗಿದ್ದು, ಸಿನಿಮಾದಲ್ಲಿ ಲಕ್ಷ್ಮೀ ಅಗರ್ವಾಲ್ ಆಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ.

ಕಳೆದ ಎರಡು ದಿನಗಳಿಂದ 'ಚಪಾಕ್' ಚಿತ್ರವನ್ನ ಬಹಿಷ್ಕರಿಸಿ ಎಂಬ ಕೂಗು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದ್ದರೂ, 'ಚಪಾಕ್' ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕಿದೆ. ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿರುವ 'ಚಪಾಕ್' ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೂಡ ಕೇಳಿಬರುತ್ತಿವೆ.

'ಚಪಾಕ್' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿರುವ ಸಿನಿ ಪ್ರಿಯರು ಟ್ವಿಟ್ಟರ್ ನಲ್ಲಿ ದೀಪಿಕಾ ಪಡುಕೋಣೆ ಪರ್ಫಾಮೆನ್ಸ್ ನ ಕೊಂಡಾಡುತ್ತಿದ್ದಾರೆ. ಇಡೀ 'ಚಪಾಕ್' ಚಿತ್ರತಂಡಕ್ಕೆ ಸಲ್ಯೂಟ್ ಹೊಡೆಯುತ್ತಿದ್ದಾರೆ. ಬೇಕಾದ್ರೆ, ನೀವೇ ಕೆಲ ಟ್ವೀಟ್ ಗಳತ್ತ ಕಣ್ಣಾಡಿಸಿ...

ನಿರೀಕ್ಷೆ ಮಟ್ಟಕ್ಕಿಂತ ಹೆಚ್ಚಿದೆ.!

ನಿರೀಕ್ಷೆ ಮಟ್ಟಕ್ಕಿಂತ ಹೆಚ್ಚಿದೆ.!

''ಚಪಾಕ್' ಚಿತ್ರ ನನ್ನ ನಿರೀಕ್ಷೆ ಮಟ್ಟಕ್ಕಿಂತ ಹೆಚ್ಚಿದೆ. ತಮ್ಮ ವೃತ್ತಿ ಜೀವನದಲ್ಲಿ ದೀಪಿಕಾ ಪಡುಕೋಣೆ ದಿ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಈ ಚಿತ್ರ ಸಮಾಜಕ್ಕೆ ಹಿಡಿದಿರುವ ಕೈಗನ್ನಡಿ. ವಿಕ್ರಾಂತ್ ಸೇರಿದಂತೆ ಹಲವು ನಟರು ಉತ್ತಮ ನಟನೆ ಮಾಡಿದ್ದಾರೆ'' ಎಂದು ಇಂದ್ರಜಿತ್ ಎಂಬುವರು ಟ್ವೀಟ್ ಮಾಡಿ ಚಿತ್ರಕ್ಕೆ 4.5 ಸ್ಟಾರ್ಸ್ ರೇಟಿಂಗ್ ಕೊಟ್ಟಿದ್ದಾರೆ.

ಅತ್ಯುತ್ತಮ ನಟನೆ

ಅತ್ಯುತ್ತಮ ನಟನೆ

''ಹೌದು, ಇದು ನಿಜಕ್ಕೂ ದೀಪಿಕಾ ಪಡುಕೋಣೆ ಕೆರಿಯರ್ ನ ಬೆಸ್ಟ್ ಪರ್ಫಾಮೆನ್ಸ್. ಮುಂಬರುವ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವಂಥ ಮತ್ತಷ್ಟು ಪರ್ಫಾಮೆನ್ಸ್ ಗಳನ್ನ ದೀಪಿಕಾ ಕೊಡುತ್ತಾರೆ ಎಂಬ ನಂಬಿಕೆ ನನಗಿದೆ. ನಿಮ್ಮ ಪ್ರೀತಿ ಪಾತ್ರರವರ ಜೊತೆಗೆ ಹೋಗಿ 'ಚಪಾಕ್' ಚಿತ್ರ ನೋಡಿ ಎಂದು ಪ್ರಿಯಾ ಎಂಬುವರು ಟ್ವೀಟ್ ಮಾಡಿದ್ದಾರೆ.

ಮೇಘನಾ ಗುಲ್ಜರ್ ನಿರ್ದೇಶನ ಸೂಪರ್

ಮೇಘನಾ ಗುಲ್ಜರ್ ನಿರ್ದೇಶನ ಸೂಪರ್

''ಚಪಾಕ್' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿದೆ. ಮೇಘನಾ ಗುಲ್ಜರ್ ನಿರ್ದೇಶನ ಸೂಪರ್. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರದ ಕ್ಲೈಮ್ಯಾಕ್ಸ್ ಚೆನ್ನಾಗಿದೆ. ದೀಪಿಕಾ ಪಡುಕೋಣೆ ನಟನೆ ಪವರ್ ಫುಲ್ ಆಗಿದೆ'' ಎನ್ನುತ್ತ ಸಯಾನ್ ಬಾಗ್ಚಿ ಎಂಬುವರು ಟ್ವೀಟ್ ಮಾಡಿ ಚಿತ್ರಕ್ಕೆ 4.5 ಸ್ಟಾರ್ಸ್ ನೀಡಿದ್ದಾರೆ.

ನಿಮ್ಮ ಕಣ್ಣಾಲಿಗಳನ್ನು ತೇವಗೊಳಿಸುತ್ತೆ

ನಿಮ್ಮ ಕಣ್ಣಾಲಿಗಳನ್ನು ತೇವಗೊಳಿಸುತ್ತೆ

'ಚಪಾಕ್' ನಿಜಕ್ಕೂ ಸ್ಫೂರ್ತಿದಾಯಕ ಸಿನಿಮಾ. ದೀಪಿಕಾ ಪಡುಕೋಣೆ ಪರ್ಫಾಮೆನ್ಸ್ ಅದ್ಭುತವಾಗಿದೆ. ಕೆಲ ಭಾವನಾತ್ಮಕ ಸನ್ನಿವೇಶಗಳು ನಿಮ್ಮ ಕಣ್ಣಾಲಿಗಳನ್ನು ಒದ್ದೆ ಮಾಡುತ್ತೆ. ಮೇಘನಾ ಗುಲ್ಜರ್ ಚಿತ್ರಕಥೆ ಮತ್ತು ನಿರ್ದೇಶನ ಅತ್ಯುತ್ತಮ'' ಎಂದು ಬಾಲಿವುಡ್ ಬಾಕ್ಸ್ ಆಫೀಸ್ ಟ್ವೀಟ್ ಮಾಡಿದೆ.

ಪರಕಾಯ ಪ್ರವೇಶ ಮಾಡಿದ ದೀಪಿಕಾ

ಪರಕಾಯ ಪ್ರವೇಶ ಮಾಡಿದ ದೀಪಿಕಾ

ಅಭಿಮಾನಿಯಾಗಿ ನಾನು ನನ್ನ ಭಾವನೆಗಳನ್ನು ಪಕ್ಕಕ್ಕೆ ಇಟ್ಟು ದೀಪಿಕಾ ಪಡುಕೋಣೆ ಪರ್ಫಾಮೆನ್ಸ್ ನ ವಿಮರ್ಶೆ ಮಾಡುವುದಾದರೆ, ಲಕ್ಷ್ಮೀ ಅಗರ್ವಾಲ್ ಪಾತ್ರಕ್ಕೆ ದೀಪಿಕಾ ಎಷ್ಟರ ಮಟ್ಟಿಗೆ ನ್ಯಾಯ ಒದಗಿಸಿದ್ದಾರೆ ಅಂದ್ರೆ ದೀಪಿಕಾ ನಟನೆ ಮಾಡುತ್ತಿದ್ದಾರೆ ಅಂತಲೇ ನಮಗೆ ಅನಿಸುವುದಿಲ್ಲ'' ಎಂದು ಧ್ರುವ ಎಂಬುವರು ಟ್ವೀಟ್ ಮಾಡಿದ್ದಾರೆ.

ಅತ್ಯದ್ಭುತ ಚಿತ್ರ

ಅತ್ಯದ್ಭುತ ಚಿತ್ರ

''ಚಪಾಕ್' ಚಿತ್ರ ಅತ್ಯದ್ಭುತ. ಇದು ಇಲ್ಲಿಯವರೆಗಿನ ದೀಪಿಕಾ ಪಡುಕೋಣೆಯ ಅತ್ಯುತ್ತಮ ಅಭಿನಯ. ಸಿನಿಮಾದಲ್ಲಿ ವಿಕ್ರಾಂತ್ ಸ್ಟಾರ್. ಇದು ಮೇಘನಾ ಗುಲ್ಜರ್ ರವರ ಬೆಸ್ಟ್ ಚಿತ್ರ. ಗಟ್ಟಿ ನಿರ್ಧಾರ ಮಾಡಿ ಹೋರಾಟಕ್ಕಿಳಿದ ಲಕ್ಷ್ಮೀ ಅಗರ್ವಾಲ್ ಬಗ್ಗೆ ಹೆಮ್ಮೆ ಆಗುತ್ತದೆ'' ಎಂದು ಸಿನಿಮಾ ಟೈಮ್ಸ್ ಟ್ವೀಟ್ ಮಾಡಿದೆ.

ಇಡೀ ತಂಡಕ್ಕೆ ಸಲ್ಯೂಟ್

ಇಡೀ ತಂಡಕ್ಕೆ ಸಲ್ಯೂಟ್

''ಚಪಾಕ್' ಚಿತ್ರವನ್ನ ನೋಡುತ್ತಿದ್ದರೆ, ನಿಮಗೆ ಕಣ್ಣೀರು ಬರುವುದು ಗ್ಯಾರೆಂಟಿ. ಅಷ್ಟು ಅದ್ಭುತವಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಇಡೀ ತಂಡಕ್ಕೆ ನನ್ನ ಸಲ್ಯೂಟ್'' ಎಂದು ಸೌಪರ್ಣೋ ಸರ್ಕಾರ್ ಎಂಬುವರು ಟ್ವೀಟ್ ಮಾಡಿದ್ದಾರೆ.

More from Filmibeat

English summary
Deepika Padukone starrer Chhapaak is getting good response in Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X