For Quick Alerts
  ALLOW NOTIFICATIONS  
  For Daily Alerts

  ದೇಸಾಯಿ ಅವರ ಗಂಭೀರ ಸ್ಥಿತಿಗೆ ಕಾರಣ

  By Super
  |

  ಕ-ನ್ನ-ಡ ಚಿತ್ರ-ರಂ-ಗ-ಕ್ಕೆ ಹೊಸದಿ-ಕ್ಕು ತೋ-ರಿ-ದ ನಿರ್ದೇ-ಶ-ಕ ಸುನಿಲ್‌-ಕು-ಮಾ-ರ್‌ ದೇ-ಸಾ-ಯಿ ಕಷ್ಟ-ದ-ಲ್ಲಿ-ದ್ದಾ-ರೆ. ಅದ-ರ-ಲ್ಲಿ ಹೊಸ-ದೇ-ನಿ-ದೆ ? ಅವ-ರು ನಿರ್ದೇ-ಶ-ಕ-ರಾ-ದ ದಿನ-ದಿಂ-ದ-ಲೂ ಇದೇ ಸ್ಥಿತಿ-ಯ-ಲ್ಲಿ-ದ್ದಾ-ರೆ ಅಂದು ಬಿಡ-ಬ-ಹು-ದು. ಆದ-ರೆ, ಈಗಿ-ನ ಅವ-ರ ಸ್ಥಿತಿ-ಗ-ತಿ ನಿಜಕ್ಕೂ ಗಂಭೀ-ರವಾ-ಗಿ-ದೆ ಅನ್ನು-ತ್ತಿ-ದ್ದಾ-ರೆ ಅವ-ರ ಆತ್ಮೀ-ಯ-ರು.

  ದೇಸಾ-ಯಿ ಹತಾ-ಶ-ರಾ-ಗಿ-ದ್ದಾ-ರೆ, ಅವ-ರು ಸದಾ ನಂಬು-ವ ಕೊಲ್ಲೂ-ರಿ-ನ ಮೂಕಾಂ-ಬಿ-ಕೆ-ಯ ದ-ರ್ಶ-ನ-ದಿಂ-ದಲೂ ಮನ-ಸ್ಸಿಗೆ ನೆಮ್ಮ-ದಿ ಸಿಕ್ಕಂ-ತಿ-ಲ್ಲ . ಅಂದಾ-ಜೊಂ-ದ-ರ ಪ್ರಕಾ-ರ ದೇಸಾ-ಯಿ ಅವ-ರ ತಲೆ-ಮೇ-ಲೆ 30 ಲಕ್ಷ ಸಾ-ಲ-ದ ಹೊರೆ ಇದೆ. ನಿತ್ಯ ಖರ್ಚಿ-ಗೂ ತೊಂದ-ರೆ-ಯಾ-ಗಿ-ದೆ. ಕೆಲ-ವು ವರ್ಷ-ದ ಹಿಂದಾ-ದ-ರೆ ಇಂಥಾ ತಾಪ-ತ್ರ-ಯ-ಗ-ಳಿ-ಗೆ ಅವ-ರು ಕೇರ್‌ ಮಾಡು-ತ್ತಿ-ರ-ಲಿ-ಲ್ಲ . ಕೈ ಖಾಲಿ-ಯಾ-ಗಿ-ದ್ದ-ರೂ, ಕಣ್ಣ ತುಂಬ ಕನ-ಸಿ-ತ್ತು . ಒಂಟಿ-ಯಾ-ಗಿ-ದ್ದ-ರಿಂ-ದ ಯಾವು-ದೇ ಜವಾಬ್ದಾ-ರಿ-ಯ ಹಂಗಿ-ರಲಿ-ಲ್ಲ . ಸಾಲ-ಗಾ-ರ-ರ ಕಾಟ-ವಿ-ರ-ಲಿ-ಲ್ಲ . ಈಗ ದೇಸಾ-ಯಿ ಸಂಸಾ-ರ-ಸ್ಥ. ರೇಷ-ನ್‌-ನಿಂ-ದ ಹಿಡಿ-ದು ಮನೆ-ಬಾ-ಡಿ-ಗೆ-ಯ ತನ-ಕ ಖರ್ಚಿ-ಗೇ-ನು ಕಮ್ಮಿ .

  ಬೆಳ-ದಿಂ-ಗ-ಳ ಬಾಲೆ ಚಿತ್ರ ನಿರ್ಮಾ-ಣ-ದ ಸಂದ-ಭ-ರ್-ದ-ಲ್ಲಿ ದೇಸಾ-ಯಿ ಕೆಲ-ವು ಲಕ್ಷ ಸಾಲ ಮಾಡಿ-ದ್ದ-ರು. ಆ ಚಿತ್ರ-ಕ್ಕೆ ಇನ್ನೊ-ಬ್ಬ ಸಹ ನಿರ್ಮಾ-ಪ-ಕ-ರಿ-ದ್ದ-ರೂ, ನಷ್ಟ-ದ-ಲ್ಲಿ ದೊಡ್ಡ ಪಾಲು ಸಿಕ್ಕಿ-ದ್ದು ದೇಸಾ-ಯಿ-ಗೇ. ಆ ಚಿತ್ರ-ವ-ನ್ನು ಎಲ್ಲ-ರೂ ಚೆನ್ನಾ-ಗಿ-ದೆ ಎಂದು ಹಾಡಿ ಹೊಗ-ಳಿ-ದ-ರೂ ದೇಸಾ-ಯಿ ಕೈಗೆ ಏನೂ ಸಿಗ-ಲಿ-ಲ್ಲ . ಇನ್ನೊಂ-ದೆ-ಡೆ ಮಾಡಿದ ಸಾ-ಲ-ಕ್ಕೆ ಬಡ್ಡಿ ಬೆಳೆ-ಯು-ತ್ತಾ ಹೋಯಿ-ತು.

  ಬಾಲೆ-ಯ ಸಾಲ ತೀರಿ-ಸು-ವ ಸಲು-ವಾ-ಗಿ-ಯೇ ಒಂದಿ-ಬ್ಬ-ರು ನಿರ್ಮಾ-ಪ-ಕ-ರಿಂ-ದ ದೇಸಾ-ಯಿ ಅಡ್ವಾ-ನ್ಸ್‌ ತೆಗೆ--ದು-ಕೊಂ-ಡ-ರು. ಅದ-ರ ಫಲ-ವಾಗಿ-ಯೇ ಪ್ರೇಮ-ರಾ-ಗ ಹಾಡು ಗೆಳ-ತಿ, ಪ್ರತ್ಯ-ರ್ಥ-ದಂ-ಥ ದೇಸಾ-ಯಿ ಲೆವೆ-ಲ್‌-ಗೆ ತಕ್ಕ-ನಾ-ಗಿ-ಲ್ಲ-ದ ಚಿತ್ರ-ಗ-ಳು ಹೊರ-ಬಂ-ದ-ವು.

  ಇದೇ ಸಂದ-ರ್ಭ-ದ-ಲ್ಲಿ ದೇಸಾ-ಯಿ ಶಿಷ್ಯ ಉ-ಪೇಂ-ದ್ರ ದಿಢೀ-ರ್‌ ಖ್ಯಾತಿ-ಗೆ ಬಂದ-ರು. ದೇಸಾ-ಯಿ ಅವ-ರ ಮುಂದೆ ಮಂಕಾ-ದ-ರು. ನಮ್ಮೂ-ರ ಮಂದಾ-ರ ಹೂವೆ ನಂತ-ರ ಅದ-ನ್ನು ಮೀರಿ-ಸು-ವ ಇನ್ನೊಂ-ದು ಹಿಟ್‌ ಚಿತ್ರ-ವ-ನ್ನು ಕೊಡ-ಲೇ-ಬೇ-ಕೆಂ-ದು ಸಂಕ-ಲ್ಪ ಮಾಡಿ-ದ-ರು.

  ಆ-ಗ ದೇಸಾ-ಯಿ ನೆರ-ವಿ-ಗೆ ಬಂದ-ವ-ರು ಸರೋ-ವ-ರ್‌ ಸಂಜೀ-ವ್‌

  ಆ-ಗ ದೇಸಾ-ಯಿ ನೆರ-ವಿ-ಗೆ ಬಂದ-ವ-ರು ಸರೋ-ವ-ರ್‌ ಸಂಜೀ-ವ್‌. ಅವ-ರ ಬಳಿ-ಯೂ ದೇಸಾ-ಯಿ ಸಾಲ ತೆಗೆ-ದು-ಕೊಂ-ಡಿ-ದ್ದ-ರಿಂ-ದ ವ್ಯವ-ಹಾ-ರ ಕು-ದು-ರು-ವು-ದು ಕಷ್ಟ-ವಾ-ಗಿ-ರ-ಲಿ-ಲ್ಲ . ಸಂ-ಜೀವ್‌-ಗೆ ತಮ್ಮ ಮ-ಗ-ನ-ನ್ನು ಹೀರೋ ಆಗಿ-ಸು-ವ ಬಯ-ಕೆ. ಈ ಹಿಂದೆ ನಾಲ್ಕೈ-ದು ಚಿತ್ರ-ಗ-ಳ-ಲ್ಲಿ ಸುದೀ-ಪ್‌ ನಟಿ-ಸಿ-ದ್ದ-ರೂ ಆತ-ನ ವೃತ್ತಿ ಬದು-ಕಿ-ಗೆ ಟೇಕಾ-ಫ್‌ ಸಿಕ್ಕಿ-ರ-ಲಿಲ್ಲ . ಇನ್ನೇ-ನು ಗಾಂಧಿ-ನ-ಗ-ರ ಸುದೀ-ಪ್‌-ಗೆ ನತ-ದೃ-ಷ್ಟ ನಾಯ-ಕ ಎಂಬ ಲೇಬ-ಲ್‌ ಹಚ್ಚ-ಬೇ-ಕು ಅನ್ನು-ವ ಸಮ-ಯ-ದ-ಲ್ಲೇ ದೇಸಾ-ಯಿ ಸ್ಪ-ರ್ಶ ಕೈಗೆ-ತ್ತಿ-ಕೊಂ-ಡ-ರು.

  60 ಲಕ್ಷ-ದ-ಲ್ಲಿ ಸಿನಿ-ಮಾ ಮುಗಿ-ಸಿ-ಕೊ-ಡು-ತ್ತೇ-ನೆ, ಇದು ಸಂಜೀ-ವ್‌-ಗೆ ದೇಸಾ-ಯಿ ಮಾಡಿ-ದ ಪ್ರಾಮಿ-ಸ್‌. ಶೂಟಿಂ-ಗ್‌ ಶುರು-ವಾ---ಯಿತು. ಬಜೆ-ಟ್‌ 60 ರಿಂದ 80 ಕ್ಕೇರಿ-ತು. ನೋಡ ನೋಡು-ತ್ತಿ--ದ್ದಂ-ತೆ 1.25 ಕೋಟಿ ಹತ್ತಿ-ರ ಬಂ-ತು. ಆಗ ಸಂಜೀ-ವ್‌ ಇ-ನ್ನು ಸಾಕು, ಸಿನಿ-ಮಾ ಮುಗಿ-ಯ-ದೇ ಇದ್ದ-ರೂ ಪರ-ವಾ-ಗಿ-ಲ್ಲ , ತಮ್ಮ ಕೈಲಾ-ಗೋ-ದಿ-ಲ್ಲ ಅಂದ-ರಂ-ತೆ. ಆಗ ದೇಸಾ-ಯಿ ಹೇಳಿ-ದ್ದು ಒಂದೇ ಮಾತು.

  ಇದರ-ಲ್ಲಿ ನನ್ನ ಸ್ವಾ-ರ್ಥಾ-ನೂ ಇದೆ-. ಈ ಚಿತ್ರ ನಿಮ್ಮ ಮಗ-ನ ಭವಿ-ಷ್ಯ-ಕ್ಕೆಷ್ಟು ಮುಖ್ಯಾ-ನೋ, ನನ್ನ ಭವಿ-ಷ್ಯ-ಕ್ಕೂ ಅಷ್ಟೇ ಮುಖ್ಯ. ಈ ಚಿತ್ರ ಖಂಡಿ-ತಾ ಗೆ-ಲ್ಲು-ತ್ತ-ದೆ, ನಮ್ಮಿ-ಬ್ಬ-ರಿ-ಗೆ ಅದ-ರಿಂ-ದ ಅನು-ಕೂ-ಲ-ವಾ-ಗು-ತ್ತ-ದೆ. ದಯ-ವಿ-ಟ್ಟು ನನ್ನ ತಡೀ-ಬೇ-ಡಿ.

  ಸಂಜೀ-ವ್‌ ತಡೆ-ಯ-ಲಿ-ಲ್ಲ . ಬಜೆ-ಟ್‌ 2 ಕೋಟಿ ದಾಟಿ-ತು. ಆದ-ರೇ-ನಂ-ತೆ, ಕ್ವಾಲಿ-ಟಿ-ಯೂ ಅದೇ ಮಟ್ಟ-ದ-ಲ್ಲಿ-ತ್ತು . ಜನ ಕೂಡಾ ಮೆ-ಚ್ಚಿ-ದ-ರು. ಆ ಹೊತ್ತಿ-ಗೆ ರಾಜ್‌ ಅಪ-ಹ-ರ-ಣ-ವಾ-ಯಿ-ತು. ಸ್ಪರ್ಶ-ಕ್ಕೆ ಕಡ್ಡಾಯ ಮಧ್ಯಂ-ತ-ರ ಪ್ರಾಪ್ತಿ--ಯಾ-ಯಿ-ತು. ಒಂದೂ-ವ-ರೆ ತಿಂ-ಗ-ಳ ಅಂತ-ರ-ದ ನಡು-ವೆ ಸ್ಪರ್ಶ ಮರು-ಪ್ರ-ದ-ರ್ಶ-ನ ಕಾಣು-ತ್ತಿ-ದೆ. ಆದ-ರೆ, ಹೆ-ಣ್ಣು ಮಕ್ಕ-ಳು ಚಿತ್ರ-ಮಂ-ದಿ-ರ-ದ ಕಡೆ ಸುಳಿ-ಯು-ತ್ತಿ-ಲ್ಲ . ಸಂಜೀ-ವ್‌, ಸುದೀ-ಪ್‌, ದೇಸಾ-ಯಿ- ಈ ಮೂವ-ರೂ ಕ-ಷ್ಟ-ದ-ಲ್ಲಿ-ದ್ದಾ-ರೆ.

  ಇದು ಯಾರ ತಪ್ಪೂ ಅಲ್ಲ , ಪರಿ-ಸ್ಥಿ-ತಿ-ಯ ಪಿ-ತೂ-ರಿ-ಯೇ ಆದ-ರೂ, ಸ್ಪರ್ಶ ಹಿಟ್‌ ಆಗ-ದೇ ಇದ್ದ-ಲ್ಲಿ ದೇಸಾ-ಯಿ ಇಲ್ಲಿ ಉ-ಳಿ-ಯು-ವು-ದು ಕಷ್ಟ-ವಾ-ಗ-ಬ-ಹು-ದು. ಈಗಾ-ಗ-ಲೇ ಅವ-ರಿ-ಗೆ ಸಾಲ ಕೊಟ್ಟ-ವ-ರು ತಮ-ಗೊಂ-ದು ಚಿತ್ರ ಮಾ-ಡಿ ಅನ್ನು-ತ್ತಿ-ದ್ದಾ-ರೆ. ಉದಾ-ಹ-ರ-ಣೆ, ಶಿಲ್ಪಾ ಶ್ರೀನಿ-ವಾ-ಸ್‌ ಸೇತು ಚಿತ್ರ-ದ ರೀಮೇ-ಕ್‌ ಮಾಡಿ-ಕೊ-ಡಿ ಎಂದು ದೇಸಾ-ಯಿ-ಗೆ ದುಂಬಾ-ಲು ಬಿದ್ದಿ-ದ್ದಾ-ರೆ. 25 ಲಕ್ಷ ಸಂಭಾ-ವ-ನೆ ಕೊಡ್ತೀ-ನಿ ಅನ್ನು-ವ ಆಮಿ-ಷ-ವ-ನ್ನೂ ಒಡ್ಡಿ-ದ್ದಾ-ರೆ. ಒಂದೇ ಒಂದು ಕಂಡೀ-ಷ-ನ್‌ ಅಂದ-ರೆ ಶ್ರೀನಿ-ವಾ-ಸ್‌ ಅವ-ರ-ನ್ನೇ ಹೀ-ರೋ ಆಗಿ ಮೆರೆ-ಸ-ಬೇ-ಕು.

  ರೀಮೇ-ಕ್‌ ಬೇಡ ಎಂದೇ ಇಷ್ಟು ದಿನ ಕಾಲ ತಳ್ಳಿ-ದ್ದ ದೇಸಾ-ಯಿ ಇಂದಿ--ಗೂ ಆ ಕೆಲ-ಸ ಮಾಡೋ-ದ-ಕ್ಕೆ ಸಿದ್ಧ-ರಾ-ಗಿ-ಲ್ಲ . ಅ-ದು ಬಿಟ್ಟ-ರೆ ಅವ-ರ ಮುಂದಿ-ರು-ವ ಮಾ-ರ್ಗ-ವೆಂ-ದ-ರೆ ಪರ-ಭಾ-ಷೆ-ಗೆ ವಲ-ಸೆ ಹೋಗು-ವು-ದು. ಈಗಾ-ಗ-ಲೇ ಹಿಂದಿ, ತಮಿ-ಳು ನಿರ್ಮಾ-ಪ-ಕು ದೇಸಾ-ಯಿ-ಗೆ ಆಹ್ವಾ-ನ ನೀಡಿ-ದ್ದಾ-ರೆ. ಹಾಗೇ-ನಾ-ದ-ರೂ ಆದ-ರೆ ಕನ್ನ-ಡ ಚಿತ್ರ-ರಂ-ಗ ಒಬ್ಬ ಪ್ರತಿ-ಭಾ-ವಂ-ತ ನಿ-ರ್ದೇ-ಶ-ಕ-ನ-ನ್ನು ಶಾಶ್ವ-ತ-ವಾ-ಗಿ ಕಳೆ-ದು-ಕೊ-ಳ್ಳು-ತ್ತ-ದೆ.

  ಚಿ-ತ್ರೋ-ದ್ಯ-ಮ ಇಂಥ ವಿಚಾ-ರ-ಗ-ಳ-ನ್ನು ಸೀರಿ-ಯ-ಸ್‌ ಆಗಿ ಪರಿ-ಗ-ಣಿ-ಸು-ವು-ದಿ-ಲ್ಲ . ಯಾಕೆಂ-ದ-ರೆ ಇಲ್ಲಿ ನಿರ್ದೇ-ಶ-ಕ--ನೀ-ಗ ಮೇಸ್ತ್ರಿ ಮಟ್ಟ-ಕ್ಕೆ ಬಂದು ತಲು-ಪಿ-ದ್ದಾ-ನೆ. ಒಬ್ಬ ಹೋದ-ರೆ ಇನ್ನೊ-ಬ್ಬ ಬರು-ತ್ತಾ-ನೆ. ಆದ-ರೆ, ತರ್ಕ-ದಿಂ-ದ ಸ್ಪರ್ಶ-ದ ತನ-ಕ ದೇಸಾ-ಯಿ ಚಿತ್ರ-ಗ-ಳ-ನ್ನು ನೋಡಿ-ದ ಪ್ರೇಕ್ಷ-ಕ-ರಿ-ಗೆ ಇದು ನೋವಿ-ನ ಸಂಗ-ತಿ.

  English summary
  Sunil kumar desais SPARSHA needs another touch

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X