Devara X Review: ಜ್ಯೂ. ಎನ್‌ಟಿಆರ್ ಸೂಪರ್, ಒಮ್ಮೆ ನೋಡಬಹುದು, ಕ್ಲೈಮ್ಯಾಕ್ಸ್ ಟ್ವಿಸ್ಟ್!
ಕೊರಟಾಲ ಶಿವ ನಿರ್ದೇಶನದ 'ದೇವರ' ಸಿನಿಮಾ ತೆರೆಗಪ್ಪಳಿಸಿದೆ. ಮಧ್ಯರಾತ್ರಿಯಿಂದಲೇ ಕೆಲವಡೆ ಅಭಿಮಾನಿಗಳು ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಜ್ಯೂ. ಎನ್‌ಟಿಆರ್ ಆರ್ಭಟಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಒಂದೊಳ್ಳೆ ಮೆಸೇಜ್ ಜೊತೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ 'ದೇವರ' ಪ್ರಪಂಚವನ್ನು ಕಟ್ಟಿಕೊಡಲಾಗಿದೆ.
ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ನಲ್ಲಿ 'ದೇವರ' ಸಿನಿಮಾ ನಿರ್ಮಾಣವಾಗಿದೆ. ತಾರಕ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇನ್ನುಳಿದಂತೆ ಸೈಫ್ ಅಲಿಖಾನ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಅನಿರುದ್ ರವಿಚಂದರ್ ಸಂಗೀತ ಚಿತ್ರಕ್ಕಿದೆ. ದೊಡ್ಡಮಟ್ಟದಲ್ಲಿ ತೆರೆಗಪ್ಪಳಿಸಿರುವ ಚಿತ್ರ ಗ್ರ್ಯಾಂಡ್ ಓಪನಿಂಗ್ ಪಡೆದುಕೊಳ್ಳುವ ನಿರೀಕ್ಷೆಯಿದೆ.

ಬಹಳ ದಿನಗಳ ಬಳಿಕ ದೊಡ್ಡ ಸಿನಿಮಾ ನೋಡಿ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಸಣ್ಣಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟು ಅಭಿಮಾನಿಗಳು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಕೆಲವರಿಗೆ ಸಿನಿಮಾ ಆವರೇಜ್ ಅನ್ನಿಸಿದೆ. ಮತ್ತೆ ಕೆಲವರು ಸೂಪರ್ ಎಂದು ಜೈಕಾರ ಹಾಕುತ್ತಿದ್ದಾರೆ. ಈಗಾಗಲೇ ಸಾಕಷ್ಟು ಜನ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಬ್ಲಾಕ್‌ಬಸ್ಟರ್ ದೇವರ
ಟೈಟಲ್ ಕಾರ್ಡ್ ಸೂಪರ್, ಅದ್ಭುತ ಫಸ್ಟ್ ಹಾಫ್. ಇಂಟರ್‌ವಲ್ ಝಲಕ್ ಕೂಡ ಸೂಪರ್. ಅನಿರುದ್ದ್ ಮಾಸ್ ಮ್ಯೂಸಿಕ್ ಚೆನ್ನಾಗಿದೆ. ಸೆಕೆಂಡ್ ಹಾಫ್ ಕೂಡ ಚೆನ್ನಾಗಿದೆ. ಆದರೆ ಸ್ವಲ್ಪ ಲ್ಯಾಗ್. ಕ್ಲೈಮ್ಯಾಕ್ಸ್ ಚಿಂದಿ. ಜಾನ್ವಿ ಸುಂದರ. ಒಟ್ಟಾರೆ ಬ್ಲಾಕ್‌ಬಸ್ಟರ್ ದೇವರ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಮೌಳಿ ಮಿಥ್ ಸುಳ್ಳಾಯ್ತು
ರಾಜಮೌಳಿ ಜೊತೆ ನಟಿಸಿದ ಬಳಿಕ ಆ ನಾಯಕನ ಸಿನಿಮಾ ಗೆಲ್ಲಲ್ಲ ಎನ್ನುವ ಮಾತನ್ನು ತಾರಕ್ ಸುಳ್ಳಾಗಿದ್ದಾರೆ. ಚೆಂಡನ್ನು ಬೌಂಡರಿಯಿಂದ ಹೊರಕ್ಕೆ ಹೊಡಿದಿದ್ದಾರೆ. ಕೊರಟಾಲ ಶಿವ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಅನಿರುದ್ದ್ ಸಂಗೀತ ಸೂಪರ್, ಚಿತ್ರಕ್ಕೆ ಪ್ಲಸ್ ಪಾಯಿಂಟ್. ಎನ್‌ಟಿಆರ್ ಅಭಿನಯ ಅದ್ಭುತ ಎನ್ನುವುದು ಮತ್ತೊಬ್ಬರ ಪ್ರತಿಕ್ರಿಯೆ.
2nd ಆಫ್ ಚೆನ್ನಾಗಿ ಮಾಡಬಹುದಿತ್ತು
'ದೇವರ' ಪವರ್‌ಫುಲ್ ಆಕ್ಷನ್ ಎಂಟರ್‌ಟೈನರ್. ಫಸ್ಟ್ ಹಾಫ್ ಚಿಂದಿ. ಅನಿರುದ್ದ್ ಸೂಪರ್, ಆಕ್ಷನ್ ಸೀಕ್ವೆನ್ಸ್ ಬೆಂಕಿ. ಛಾಯಾಗ್ರಹಣ, ಎಲಿವೇಷನ್ ಸೀನ್ಸ್, ಬಿಜಿಎಂ ಎಲ್ಲವೂ ಸೂಪರ್. ಗ್ರಾಫಿಕ್ಸ್ ಓಕೆ ಓಕೆ. ಸೆಕೆಂಡ್ ಹಾಫ್ ಇನ್ನು ಚೆನ್ನಾಗಿ ಮಾಡಬಹುದಿತ್ತು.
ಒಮ್ಮೆ ನೋಡಬಹುದು
ಆವರೇಜ್ ಸಿನಿಮಾ. ಒಮ್ಮೆ ನೋಡಬಹುದು. ಫಸ್ಟ್ ಹಾಫ್ ಹಾಗೂ ಅನಿರುದ್ದ್ ಬಿಜಿಎಂ ಚೆನ್ನಾಗಿದೆ. ಕಥೆ ಸೆಟ್ ಮಾಡಿದ ರೀತಿ ಚೆನ್ನಾಗಿತ್ತು. ಮುಂದೆ ದೊಡ್ಡದಾಗಿ ಏನೋ ಇರುತ್ತದೆ ಎಂದುಕೊಂಡರೆ ಸೆಕೆಂಡ್ ಆಫ್ ಕುಸಿದುಬಿಡುತ್ತದೆ. ಜಾನ್ವಿ ಸನ್ನಿವೇಶಗಳು, ಎಳೆದಂತ ನಿರೂಪಣೆ, ಊಹಿಸಬಹುದಾದ ಟ್ವಿಸ್ಟ್‌ಗಳು ಎನ್ನುವುದು ಮತ್ತೊಬ್ಬರ ಅಭಿಪ್ರಾಯ.
ಕ್ಲೈಮ್ಯಾಕ್ಸ್ ಟ್ವಿಸ್ಟ್ ಏನೋ?
ಬಿಜಿಎಂ ಹಾಗೂ ಫೈಟ್ಸ್‌ಗಾಗಿ ನೋಡಬಹುದು. ಪ್ರೀ ಇಂಟರ್‌ವಲ್ ಬ್ಯಾಂಗ್ ಚೆನ್ನಾಗಿದೆ. ಜಾನ್ವಿ ಪಾತ್ರ ನೀರಸವಾಗಿದೆ. ಅದೇನೋ ಟಾಸ್ಕ್‌ಪೋರ್ಸ್ ಅಂತೆ, ಯಾರೋ ಗ್ಯಾಂಗ್‌ಸ್ಟರ್ ಅಂತೆ. ಅದೆಲ್ಲಾ ಯಾಕೆ ಬೇಕಿತ್ತು. ಕ್ಲೈಮ್ಯಾಕ್ಸ್ ಚೆನ್ನಾಗಿದೆ. ಆದರೆ ಏನೋ ತೋರಿಸಬೇಕಲ್ಲ ಅಂತ ಆ ಟ್ವಿಸ್ಟ್ ಯಾಕೆ ಕೊಟ್ರೋ? ಎನ್ನುವುದು ಮತ್ತೊಬ್ಬರ ಬೇಸರದ ಬರಹ.
ಕೆಟ್ಟ ಸೆಕೆಂಡ್ ಹಾಫ್
ಬ್ಲಾಕ್‌ಬಸ್ಟರ್ ಫಸ್ಟ್ ಹಾಫ್. ಕೆಟ್ಟ ಸೆಕೆಂಡ್ ಹಾಫ್. ಕೊರಟಾಲ ಶಿವ ಸೆಕೆಂಡ್ ಪಾರ್ಟ್‌ಗೆ ಇಷ್ಟು ಕೆಟ್ಟ ಲೀಡ್ ಕೊಡುತ್ತಾರೆ ಎಂದುಕೊಂಡಿರಲಿಲ್ಲ ಎಂದು ಇನ್ನೊಬ್ಬರು ಬೇಸರದಿಂದ ಬರೆದುಕೊಂಡಿದ್ದಾರೆ.
ಒಟ್ಟಾರೆ ಒಳ್ಳೆಯ ಸಿನಿಮಾ
ಫಸ್ಟ್ ಹಾಫ್‌ಗಿಂತ ಸೆಕೆಂಡ್ ಹಾಫ್ ಚೆನ್ನಾಗಿದೆ. ಮೊದಲ ಭಾಗದಲ್ಲಿ ಫಿಯರ್ ಸಾಂಗ್, ಟ್ರೈಲರ್, ಗ್ಲಿಂಪ್ಸ್ ತರ ಇದೆ. ಆದರೆ ಸೆಕೆಂಡ್ ಹಾಫ್‌ನಲ್ಲಿ ಕೊಂಚ ರಿಲೀಫ್ ಸಿಕ್ಕಿ ಆಕ್ಷನ್ ಸೀನ್ಸ್ ಕಮ್ಮಿ ಆಗಿ ಕಾಮಿಡಿ ಬರುತ್ತದೆ. ವರ ಪಾತ್ರ, ಜಾನ್ವಿ ಸನ್ನಿವೇಶಗಳು ಹಾಗೂ ಕ್ಲೈಮ್ಯಾಕ್ಸ್ ಎಲ್ಲವೂ ಚೆನ್ನಾಗಿದೆ. ಒಟ್ಟಾರೆ ಒಳ್ಳೆ ಸಿನಿಮಾ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.


Click it and Unblock the Notifications











