ಧನಂಜಯ್ 'ಗುರುದೇವ್ ಹೊಯ್ಸಳ' ಫಸ್ಟ್ ಶೋ ನೋಡಿದವರು ಹೀಗಂದ್ರು; ಚಿತ್ರ ಹಿಟ್ಟಾ, ಫ್ಲಾಪಾ?

ನಟ ರಾಕ್ಷಸ ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಜೋಡಿಯಾಗಿ ನಟಿಸಿರುವ ಮೂರನೇ ಸಿನಿಮಾ ಗುರುದೇವ್ ಹೊಯ್ಸಳ ಇಂದು ( ಮಾರ್ಚ್ 30 ) ರಾಮನವಮಿ ಹಬ್ಬದ ಪ್ರಯುಕ್ತ ಚಿತ್ರಮಂದಿರದ ಅಂಗಳಕ್ಕೆ ಬಂದಿದೆ. ಹೊಸ ನಿರ್ದೇಶಕ ವಿಜಯ್ ಎನ್ ರಚನೆ ಹಾಗೂ ನಿರ್ದೇಶನವಿರುವ ಈ ಚಿತ್ರಕ್ಕೆ ಕೆಆರ್‌ಜಿ ಸ್ಟುಡಿಯೋಸ್ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಬಂಡವಾಳ ಹೂಡಿದ್ದಾರೆ.

ಚಿತ್ರಕ್ಕೆ ಸೆನ್ಸೇಷನಲ್ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಸಂಗೀತ ನಿರ್ದೇಶನವಿದ್ದು, ಚಿತ್ರ್ ರಾಜ್ಯಾದ್ಯಂತ 150ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿದೆ. ಜತೆಗೆ ಇಂದು ಹಿಂದಿಯಲ್ಲಿ ಅಜಯ್ ದೇವಗನ್ ನಟನೆಯ ಭೋಲಾ, ತೆಲುಗಿನಲ್ಲಿ ನಾನಿ ನಟನೆಯ ದಸರಾ ಹಾಗೂ ತಮಿಳಿನಲ್ಲಿ ಸಿಳಂಬರಸನ್ ನಟನೆಯ ಪತ್ತು ತಲ ಚಿತ್ರಗಳೂ ಸಹ ಬಿಡುಗಡೆಗೊಂಡಿವೆ.

Dhananjaya Starrer Gurudev Hoysala Twitter Review; movie getting blockbuster response
Photo Credit: Google images and twitter tweet screenshots

ಈ ಪೈಕಿ ಪ್ರೀಮಿಯರ್ ಶೋ ಪ್ರದರ್ಶನವನ್ನು ಪೂರ್ಣಗೊಳಿಸಿದ ಬಳಿಕ ದಸರಾ ಹಾಗೂ ಭೋಲಾ ಚಿತ್ರಗಳು ಸಿನಿ ರಸಿಕರಿಂದ ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿದ್ದವು. ಅತ್ತ ತಮಿಳಿನ ಪತ್ತು ತಲ ಸಿನಿಮಾ ಸಹ ಹಿಟ್ ಟಾಕ್ ಪಡೆದುಕೊಂಡಿತ್ತು. ಹೀಗೆ ಇಂದು ಬಿಡುಗಡೆಯಾದ ಎಲ್ಲಾ ಚಿತ್ರಗಳೂ ಸಹ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡರೆ, ಇವುಗಳ ಜತೆ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿಗೆ ಇಳಿದಿರುವ ಗುರುದೇವ್ ಹೊಯ್ಸಳ ಚಿತ್ರ ಯಾವ ರೀತಿಯ ವಿಮರ್ಶೆಗಳನ್ನು ಸಿನಿ ರಸಿಕರಿಂದ ಪಡೆದುಕೊಂಡಿದೆ ಎಂಬ ಕುತೂಹಲವಿತ್ತು. ಈ ಕುತೂಹಲಕ್ಕೆ ಇದೀಗ ಬ್ರೇಕ್ ಬಿದ್ದಿದ್ದು, ಗುರುದೇವ್ ಹೊಯ್ಸಳ ಮೊದಲ ಪ್ರದರ್ಶನವನ್ನು ನೋಡಿ ಹೊರಬಂದಿರುವ ಚಿತ್ರ ಪ್ರೇಮಿಗಳು ಟ್ವಿಟರ್‌ನಲ್ಲಿ ಈ ಕೆಳಕಂಡಂತೆ ವಿಮರ್ಶೆ ನೀಡಿದ್ದಾರೆ.

ಗುರುದೇವ್ ಹೊಯ್ಸಳ ಚಿತ್ರವನ್ನು ನೋಡಿ ಹೊರಬಂದ ಸಿನಿ ರಸಿಕರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರ ಹೇಗಿದೆ ಎಂಬುದನ್ನು ಬರೆದುಕೊಂಡಿದ್ದಾರೆ. ಗುರುದೇವ್ ಹೊಯ್ಸಳ ಬಗ್ಗೆ ಒಂದು ಪದದಲ್ಲಿ ಹೇಳಬೇಕೆಂದರೆ ಬ್ಲಾಕ್‌ಬಸ್ಟರ್ ಎಂದಿದ್ದಾರೆ. ಗೂಸ್‌ಬಂಪ್ಸ್ ಮೇಲೆ ಗೂಸ್‌ಬಂಪ್ಸ್, ಕಥೆಯನ್ನು ಅದ್ಭುತವಾಗಿ ಕೊಂಡೊಯ್ದಿದ್ದಾರೆ, ಮೈನವಿರೇಳಿಸುವ ವಿಷುಯಲ್ಸ್, ಅದರಲ್ಲಿಯೂ ಕಿತ್ತಾಟದ ದೃಶ್ಯಗಳಂತೂ ಮಾಸ್. ಗುರುದೇವ್ ಆಗಿ ಡಾಲಿ ಧನಂಜಯ್ ಬೆಂಕಿ ಎಂದು ಬರೆದುಕೊಂಡಿದ್ದಾರೆ.

Dhananjaya Starrer Gurudev Hoysala Twitter Review; movie getting blockbuster response
Photo Credit: Google images and twitter tweet screenshots

ಕೆಎಫ್ಐ ಅಪ್‌ಡೇಟ್ ಎಂಬ ಸಿನಿಮಾ ಪೇಜ್ ಒಂದು ಗುರುದೇವ್ ಹೊಯ್ಸಳ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿದ ಬಳಿಕ ಚಿತ್ರ ಹೇಗಿದೆ ಎಂಬುದನ್ನು ಟ್ವೀಟ್ ಮೂಲಕ ತಿಳಿಸಿದೆ. ಚಿತ್ರದ ಕಥೆ, ಚಿತ್ರಕಥೆ, ಬ್ಯಾಕ್‌ಗ್ರೌಂಡ್ ಮ್ಯೂಸಿಕ್, ಧನಂಜಯ್ ನಟನೆ ಹಾಗೂ ವಿಜಯ್ ಎನ್ ನಿರ್ದೇಶನ ಚಿತ್ರದ ಪಾಸಿಟಿವ್ ಎಂದು ಉಲ್ಲೇಖಿಸಿರುವ ಇವರು ಹಾಡುಗಳು ಉತ್ತಮವಾಗಿಲ್ಲ ಎಂಬುದೊಂದೇ ನೆಗೆಟಿವ್ ಅಂಶ ಎಂದು ತಿಳಿಸಿದ್ದಾರೆ. ಇನ್ನು ಐದಕ್ಕೆ ನಾಲ್ಕು ಸ್ಟಾರ್ ನೀಡಿರುವ ಇವರು ಚಿತ್ರ ಬ್ಲಾಕ್‌ಬಸ್ಟರ್ ಎಂದಿದ್ದಾರೆ.

ಕಾಂತೇಶ್ ನಾಯಕ್ ಎಂಬ ಚಿತ್ರ ಪ್ರೇಮಿ ಗುರುದೇವ್ ಹೊಯ್ಸಳ ನೋಡಿದ ಬಳಿಕ ಈ ರೀತಿ ಟ್ವೀಟ್ ಮಾಡಿದ್ದಾರೆ: ಮಾಸ್ ಪೊಲೀಸ್, ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಹಾಗೂ ಸಂಗೀತ, ಛಾಯಾಗ್ರಹಣ, ಪ್ರೊಡಕ್ಷನ್ ವ್ಯಾಲ್ಯೂ, ನವೀನ್ ಶಂಕರ್ ನಟನೆ ಹಾಗೂ ಇತರೆ ಪಾತ್ರಗಳು, ಧನಂಜಯ್ ನಟನೆ, ಮಧ್ಯಂತರ ಹಾಗೂ ಕ್ಲೈಮ್ಯಾಕ್ಸ್ ದೃಶ್ಯಗಳು ಸಖತ್ತಾಗಿವೆ ಎಂದು ತಿಳಿಸಿದ್ದು, ವಿಜಯ್ ಎನ್ ಎಂಬ ಭರವಸೆಯ ನಿರ್ದೇಶಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಹೀಗೆ ಗುರುದೇವ್ ಹೊಯ್ಸಳ ಚಿತ್ರ ಮೊದಲ ಪ್ರದರ್ಶನ ಮುಕ್ತಾಯವಾದ ಬೆನ್ನಲ್ಲೇ ಬ್ಲಾಕ್‌ಬಸ್ಟರ್ ವಿಮರ್ಶೆಗಳನ್ನು ಪಡೆದುಕೊಳ್ಳುತ್ತಿದೆ.

More from Filmibeat

English summary
Dhananjaya Starrer Gurudev Hoysala Twitter Review; movie getting blockbuster response. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X