ಈ ವರ್ಷದ ಧನುಷ್ ನಾಲ್ಕನೇ ಸಿನಿಮಾ 'ನಾನೇ ವರುವೆನ್' ಬಿಡುಗಡೆ; ಚಿತ್ರ ಹಿಟ್ಟಾ ಫ್ಲಾಪಾ?

ಈ ವರ್ಷ ಮಾರನ್ ಚಿತ್ರದ ಮೂಲಕ ನೇರವಾಗಿ ಓಟಿಟಿಗೆ ಲಗ್ಗೆಯಿಟ್ಟಿದ್ದ ಧನುಷ್ ಆನ್ ಲೈನ್ ವೀಕ್ಷಕರ ಮನ ಗೆಲ್ಲುವಲ್ಲಿ ವಿಫಲರಾಗಿದ್ದರು ಹಾಗೂ ನಂತರ ಧನುಷ್ ಅಭಿನಯದ ಮೊದಲ ಹಾಲಿವುಡ್ ಸಿನಿಮಾ ದಿ ಗ್ರೇ ಮ್ಯಾನ್ ಕೂಡಾ ಬಿಡುಗಡೆಯಾಯಿತು ಮತ್ತು ಇದರಲ್ಲಿ ಧನುಷ್ ಅವರಿಗೆ ಸಣ್ಣ ಪಾತ್ರ ನೀಡಲಾಗಿದೆ ಎಂದು ಟೀಕೆ ವ್ಯಕ್ತವಾಗಿದ್ದವು ಮತ್ತು ಇತ್ತೀಚಿಗಷ್ಟೆ ಆಗಸ್ಟ್ ತಿಂಗಳಿನಲ್ಲಿ ತಿರು ಚಿತ್ರಾಂಬಲಂ ಮೂಲಕ ಥಿಯೇಟರ್ ಅಂಗಳಕ್ಕೆ ಬಂದ ಧನುಷ್ ನೂರು ಕೋಟಿ ಕ್ಲಬ್ ಸೇರಿದರು.

ಹೀಗೆ ಈ ವರ್ಷದಲ್ಲಿ ಧನುಷ್ ಅಭಿನಯದ 3 ಸಿನಿಮಾಗಳು ಈಗಾಗಲೇ ಬಿಡುಗಡೆಯಾಗಿದ್ದು ನಾಲ್ಕನೇ ಚಿತ್ರ ಇಂದು ( ಸೆಪ್ಟೆಂಬರ್ 29 ) ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ತಮಿಳಿನಲ್ಲಿ ನಾನೇ ವರುವೆನ್ ಎಂಬ ಶೀರ್ಷಿಕೆ ಇಡಲಾಗಿದ್ದು ತೆಲುಗಿಗೆ ಡಬ್ ಮಾಡಿ 'ನೇನೇ ವಸ್ತುನ್ನಾ' ಎಂಬ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಚಿತ್ರಕ್ಕೆ ಸೆಲ್ವರಾಘವನ್ ನಿರ್ದೇಶನವಿದ್ದು, 2011ರಲ್ಲಿ ಧನುಷ್ ಹಾಗೂ ಸೆಲ್ವರಾಘವನ್ ಕಾಂಬಿನೇಷನ್ ಅಡಿಯಲ್ಲಿ 'ಮಯಾಕ್ಕಮ್ ಎನ್ನ' ಎಂಬ ಸೂಪರ್ ಹಿಟ್ ಚಿತ್ರ ತೆರೆಕಂಡಿತ್ತು. ಹೀಗೆ 11 ವರ್ಷಗಳ ಬಳಿಕ ಈ ನಾಯಕ ಮತ್ತು ನಿರ್ದೇಶಕನ ಜೋಡಿ ಮತ್ತೆ ನಾನೇ ವರುವೆನ್ ಚಿತ್ರದ ಮೂಲಕ ಒಂದಾಗಿದ್ದು, ಚಿತ್ರದ ಮೊದಲ ಶೋ ವೀಕ್ಷಿಸಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಇಂದು ಈ ಚಿತ್ರ ಬಿಡುಗಡೆಯಾದರೆ ನಾಳೆ ಪೊನ್ನಿಯನ್ ಸೆಲ್ವನ್ ಬಿಡುಗಡೆಯಾಗುತ್ತಿದೆ ಹೀಗಾಗಿ ಚಿತ್ರದ ಕುರಿತು ಧನುಷ್ ಅಭಿಮಾನಿಗಳು ಒಳ್ಳೆಯ ವಿಮರ್ಶೆ ಹಾಕುತ್ತಿದ್ದರೆ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿನ ನಟರ ಅಭಿಮಾನಿಗಳು ಧನುಷ್ ಸಿನಿಮಾ ವಿರುದ್ಧವಾಗಿ ಟ್ವೀಟ್ ಮಾಡುತ್ತಿದ್ದಾರೆ. ಹೀಗಾಗಿ ತಮಿಳು ಸಿನಿ ಪ್ರೇಕ್ಷಕರ ಟ್ವಿಟ್ಟರ್ ವಿಮರ್ಶೆ ತಿಳಿದುಕೊಳ್ಳುವ ಬದಲಾಗಿ ನಾವು ಈ ಚಿತ್ರದ ತೆಲುಗು ಅವತರಣಿಕೆಯ ವಿಮರ್ಶೆ ಕಡೆ ಕಣ್ಣಾಡಿಸುವುದೇ ಉತ್ತಮ.

 ಧನುಷ್ ಅವರಿಗೆ ಸಾಲು ಸಾಲು ಬ್ಲಾಕ್ ಬಸ್ಟರ್ ಎಂದ ಮಹೇಶ್ ಬಾಬು ಅಭಿಮಾನಿ

ಧನುಷ್ ಅವರಿಗೆ ಸಾಲು ಸಾಲು ಬ್ಲಾಕ್ ಬಸ್ಟರ್ ಎಂದ ಮಹೇಶ್ ಬಾಬು ಅಭಿಮಾನಿ

ನೇನೆ ವಸ್ತುನ್ನಾ ಚಿತ್ರವನ್ನು ವೀಕ್ಷಿಸಿದ ನಂತರ ತನ್ನ ಟ್ವಿಟರ್ ಖಾತೆಯಲ್ಲಿ ಮಹೇಶ್ ಬಾಬು ಅಭಿಮಾನಿಯೋರ್ವ ಚಿತ್ರದ ಕುರಿತು ಬರೆದುಕೊಂಡಿದ್ದು, ಧನುಷ್ ಇತ್ತೀಚೆಗಷ್ಟೇ ತಿರು ಚಿತ್ರಾಂಬಲಂ ಮೂಲಕ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ರು ಇದೀಗ ಈ ಚಿತ್ರದ ಮೂಲಕವೂ ಸಹ ಬ್ಲಾಕ್ ಬಸ್ಟರ್ ನೀಡಿದ್ದು ಸಾಲುಸಾಲು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕೊಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಜ್ಯೂನಿಯರ್ ಎನ್ ಟಿಆರ್ ಅಭಿಮಾನಿ ಹೇಳಿದ್ದಿಷ್ಟು

ಜ್ಯೂನಿಯರ್ ಎನ್ ಟಿಆರ್ ಅಭಿಮಾನಿ ಹೇಳಿದ್ದಿಷ್ಟು

ತಾರಕ್ ಅಭಿಮಾನಿ ಕೂಡ ಈ ಚಿತ್ರವನ್ನು ವೀಕ್ಷಿಸಿ ತನ್ನ ಟ್ವಿಟರ್ ಖಾತೆಯಲ್ಲಿ ವಿಮರ್ಶೆ ಹಂಚಿಕೊಂಡಿದ್ದು, ಚಿತ್ರಕ್ಕೆ 5 ಅಂಕಗಳಿಗೆ 3.5 ಅಂಕಗಳನ್ನು ನೀಡಿ ಹಿಟ್ ಎಂದು ಬರೆದುಕೊಂಡಿದ್ದಾರೆ. ಇದು ಸೈಕೋ ಥ್ರಿಲ್ಲರ್ ಅಲ್ಲ ಸೈಕೋ ಹಾರರ್ ಥ್ರಿಲ್ಲರ್ ಎಂದು ಬರೆದುಕೊಂಡಿರುವ ಈತ ಮೊದಲಾರ್ಧ ಸಖತ್ತಾಗಿದೆ ಮತ್ತು ಸೆಕೆಂಡ್ ಹಾಫ್ ಓಕೆ ಓಕೆ ಎಂದಿದ್ದಾರೆ .

ಮೊದಲಾರ್ಧ ಸೂಪರ್, ಚಿತ್ರಕ್ಕೆ ವಿಲನ್ ದ್ವಿತೀಯಾರ್ಧ ಮತ್ತು ಕ್ಲೈಮ್ಯಾಕ್ಸ್ ವಿಲನ್ ಎಂದ ಪ್ರೇಕ್ಷಕರು!

ಮೊದಲಾರ್ಧ ಸೂಪರ್, ಚಿತ್ರಕ್ಕೆ ವಿಲನ್ ದ್ವಿತೀಯಾರ್ಧ ಮತ್ತು ಕ್ಲೈಮ್ಯಾಕ್ಸ್ ವಿಲನ್ ಎಂದ ಪ್ರೇಕ್ಷಕರು!

ಚಿತ್ರ ವೀಕ್ಷಿಸಿದ ಬಹುತೇಕರು ಮೊದಲಾರ್ಧ ಸೂಪರ್ ಆಗಿದೆ ಹಾಗೂ ಇಷ್ಟು ಭಯಂಕರವಾದ ಮಧ್ಯಂತರ ಇರಲಿದೆ ಎಂಬ ನಿರೀಕ್ಷೆ ಕೂಡ ಮಾಡಿರಲಿಲ್ಲ ಎಂದು ಹೊಗಳಿದ್ದಾರೆ. ಆದರೆ ಚಿತ್ರದ ದ್ವಿತೀಯಾರ್ಧ ಮಾತ್ರ ಸಪ್ಪೆಯಾಗಿದೆ ಹಾಗೂ ಕ್ಲೈಮ್ಯಾಕ್ಸ್ ಚಿತ್ರಕ್ಕೆ ವಿಲನ್ ಆಗಿದೆ ಎಂದು ಇದೇ ಪ್ರೇಕ್ಷಕರು ವಿಮರ್ಶೆ ನೀಡಿದ್ದಾರೆ. ಹೀಗೆ ಮೊದಲರ್ಧ ಸೂಪರ್ ದ್ವಿತೀಯಾರ್ಧ ಚೆನ್ನಾಗಿಲ್ಲ ಎಂಬ ವಿಮರ್ಶೆಗಳೇ ನಾನೇ ವರುವೆನ್ ಚಿತ್ರದ ಕುರಿತಾಗಿ ಹೆಚ್ಚಾಗಿ ವ್ಯಕ್ತವಾಗುತ್ತಿವೆ.

More from Filmibeat

English summary
Dhanush starrer Naane Varuvean Twiiter Review: First half super, second half below average. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X