Hayagreeva Review: ಮಿಸ್ಟರಿ, ಥ್ರಿಲ್ಲರ್, ಸಸ್ಪೆನ್ಸ್.. ಧನ್ವೀರ್ ಸಿನಿಮಾ 'ಹಯಗ್ರೀವ'ದ ಪ್ಲಸ್ ಏನು? ಮೈನಸ್ ಏನು?

By ಯಶವಂತ್

Rating:
3.0/5
Star Cast: Dhanveerah, Sanjana Anand,
Director: Ragu Kumar OR

ಧನ್ವೀರ್ ನಟನೆಯ ಮತ್ತೊಂದು ಸಿನಿಮಾ 'ಹಯಗ್ರೀವ' ರಿಲೀಸ್ ಆಗಿದೆ. ಬಿಡುಗಡೆ ದಿನವೇ ಸಿನಿಮಾಗೆ ವಿಘ್ನ ಆಗಿತ್ತು. ಸೆನ್ಸಾರ್ ಕಾಪಿ ಸಿಗದೇ ಇದ್ದಿದ್ದರಿಂದ ಎರಡು ಶೋಗಳ ಬಳಿಕ ಸಿನಿಮಾ ಪ್ರದರ್ಶನ ಆಗುತ್ತಿದೆ. ಹೀಗಾಗಿ ಮೊದಲ ಎರಡು ಶೋಗಳಿಗೆ ಕಾದು ಕೂತಿದ್ದ ಸಿನಿಪ್ರಿಯರಿಗೆ ನಿರಾಸೆ ಆಗಿದ್ದಂತೂ ಅಷ್ಟೇ ನಿಜ. ಆದರೆ, ಸಂಜೆ ಶೋಗಳಿಗೆ ಕೆಲವೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

'ಹಯಗ್ರೀವ' ಸಿನಿಮಾಗಾಗಿ ಧನ್ವೀರ್ ಸಿಕ್ಕಾಪಟ್ಟೆ ಪ್ರಚಾರ ಮಾಡಿದ್ದರು. ಕಳೆದ ಮೂರು ನಾಲ್ಕು ವಾರಗಳಿಂದ 'ಹಯಗ್ರೀವ' ಸಖತ್ ಆಗಿಯೇ ಪ್ರಚಾರ ಆಗಿದೆ. ಅಲ್ಲದೇ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಸೇರಿದಂತೆ ಎಲ್ಲರೂ ಧನ್ವೀರ್ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೊಂದು ಕಡೆ ದರ್ಶನ್ ಇನ್‌ಸ್ಟಾಗ್ರಾಂ ಖಾತೆಯಿಂದ ಅವರ ಅಭಿಮಾನಿಗಳಿಗೆ ಮನವಿ ಕೂಡ ಹೋಗಿದೆ. ಹೀಗಾಗಿ ಒಳ್ಳೆಯ ಓಪನಿಂಗ್ ಸಿಗುವ ಸಾಧ್ಯತೆಯಿದೆ.

Dhanveerah Sanjana Anand starrer Hayagreeva movie Review and rating in Kannada

ಧನ್ವೀರ್‌ಗೆ 'ಹಯಗ್ರೀವ' ಸಿನಿಮಾ ವಿಶೇಷ ಸಿನಿಮಾ. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ. ರಘು ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಚೇತನ್ ಸಿದ್ಧ್ ಕಥೆಯನ್ನು ಬರೆದಿದ್ದಾರೆ. ಧನ್ವೀರ್‌ಗೆ ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದರೆ, ಸಾಧು ಕೋಕಿಲಾ, ಶರತ್ ಲೋಹಿತಾಶ್ವ, ರಮೇಶ್ ಭಟ್, ಅಶ್ವಿನಿ ಗೌಡ , ಗಿಲ್ಲಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಹಾಗಿದ್ದರೆ, 'ಹಯಗ್ರೀವ' ಸಿನಿಮಾ ಹೇಗಿದೆ? ಸಿನಿಮಾ ಪ್ಲಸ್ ಏನು? ಮೈನಸ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

'ಹಯಗ್ರೀವ'ನ ಕಥೆಯೇನು?

ಇದೊಂದು ಕಂಪ್ಲೀಟ್ ಮಿಸ್ಟರಿ, ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾ. ಹೀಗಾಗಿ ಪ್ರೇಕ್ಷಕರಿಗೆ ಸಿನಿಮಾದಲ್ಲಿ ಟ್ವಿಸ್ಟ್‌ಗಳು ಸಿಗುತ್ತವೆ. ಸಿನಿಮಾ ಹಯಗ್ರೀವ ಟೈಟಲ್ ಏನಕ್ಕೆ ಇಟ್ಟಿದ್ದೀವಿ ಅಂತಾನೇ ಶುರುವಾಗುತ್ತೆ. ಪುರಾಣದ ಕಥೆ ಹೇಳಿ ಅಲ್ಲಿಂದ ಸಿನಿಮಾ ಶುರು ಮಾಡಿದ್ದಾರೆ. ಸಿನಿಮಾದ ಆರಂಭ ಒಂದು ಡೇಂಜರ್ಸ್ ಕೊಲೆಯಿಂದ ಶುರುವಾಗಿತ್ತೆ. ಮನುಷ್ಯನ ದೇಹಕ್ಕೆ ಪ್ರಾಣಿಯ ಮುಖ ಅಳವಡಿಸಿ ಕೊಲೆ ಮಾಡುತ್ತಿರುತ್ತಾರೆ. ಸತ್ತಿರೋರು ಯಾರು ಅಂತ ಗುರುತಿಸುವುದಕ್ಕೆ ಆಗದೇ ಇರುವಂತೆ ಒಂದೇ ಪ್ಯಾಟ್ರನ್‌ನಲ್ಲಿ ಕೊಲೆ ನಡೆಯುತ್ತಿರುತ್ತೆ. ಹೀಗೆ ಕೊಲೆ ಮಾಡುತ್ತಿರುವವರು ಯಾರು? ಅನ್ನೋದನ್ನು ಕಂಡು ಹಿಡಿಯುವುದೇ ಕಥೆ.

ಪರ್ಫಾಮೆನ್ಸ್ ಹೇಗಿದೆ?

ಧನ್ವೀರ್ ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ವಿಚಿತ್ರ ಕೊಲೆಯ ಕೇಸ್‌ ಅನ್ನು ಭೇದಿಸುವ ಪಾತ್ರದಲ್ಲಿ ಮಿಂಚಿದ್ದಾರೆ. ಸಿನಿಮಾದ ಟೈಟಲ್‌ ಹಯಗ್ರೀವನ ಪಾತ್ರದಲ್ಲಿ ಧನ್ವೀರ್ ನಟಿಸಿದ್ದು, ಒಬ್ಬ ಮಫ್ತಿಯಲ್ಲಿ ಇರುವ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೇ ಸಂಜನಾ ಆನಂದ್‌ಗೆ ಸ್ಕ್ರೀನ್ ಸ್ಪೇಸ್ ಕಮ್ಮಿ ಇದೆ. ಆದರೂ ಇಷ್ಟ ಆಗುತ್ತಾರೆ. ಸಿನಿಮಾದಲ್ಲಿ ಇನ್ನೊಂದು ಪಾತ್ರ ವೀಕ್ಷಕರಿಗೆ ಸರ್ಪ್ರೈಸ್ ಕೊಡುತ್ತೆ.

Dhanveerah Sanjana Anand starrer Hayagreeva movie Review and rating in Kannada

ಪ್ಲಸ್ ಏನು?

'ಹಯಗ್ರೀವ' ಇಡೀ ಸಿನಿಮಾದಲ್ಲಿ ಧನ್ವೀರ್ ಹೈಲೈಟ್. ಇಡೀ ಸಿನಿಮಾದಲ್ಲಿ ಅವರು ಒಬ್ಬರೇ ಕಾಣಿಸಿಕೊಳ್ಳುತ್ತಾರೆ. ಸಿನಿಮಾದ ಮೊದಲಾರ್ಧ ಚೆನ್ನಾಗಿದೆ. ಸಖತ್ ಇಂಟ್ರೆಸ್ಟಿಂಗ್ ಅನಿಸುತ್ತೆ. ಕಂಪ್ಲೀಟ್ ಮಿಸ್ಟರಿ, ಥ್ರಿಲ್ಲಿಂಗ್, ಸಸ್ಪೆನ್ಸ್ ಅನಿಸುತ್ತೆ. ಸಿನಿಮಾ ಕೆಲವು ಪಾತ್ರಗಳು ತೆರೆ ಮೇಲೆ ಇಷ್ಟ ಆಗುತ್ತವೆ. ಚೇತನ್ ಸಿದ್ಧ್ ಕಥೆಯನ್ನು ಚೆನ್ನಾಗಿ ಹೆಣೆದಿದ್ದಾರೆ. ಅದರಲ್ಲೂ ಟೈಟಲ್‌ಗೆ ಸಮಜಾಯಿಷಿ ಕೊಟ್ಟು ಸಿನಿಮಾ ಶುರು ಮಾಡಿರೋದು ಹೈಲೈಟ್.

ಮೈನಸ್ ಏನು?

ಫಸ್ಟ್ ಹಾಫ್ ಇಂಟ್ರೆಸ್ಟಿಂಗ್ ಅಂತ ಅನಿಸಿದರೂ ಸಿನಿಮಾವನ್ನು ತುಂಬಾನೇ ಎಳೆದಿದ್ದಾರೆ. ಅಲ್ಲಲ್ಲಿ ಶಾರ್ಟ್ ಮಾಡಿದ್ರೆ ಹಯಗ್ರೀವ ಇನ್ನೂ ಚೆನ್ನಾಗಿ ಇರುತ್ತಿತ್ತು. ಇನ್ನು ಗಿಲ್ಲಿಗೆ ಈ ಸಿನಿಮಾದಲ್ಲಿ ದೊಡ್ಡ ಪಾತ್ರವೇನು ಕೊಟ್ಟಿಲ್ಲ. ಟೀಸರ್‌ನಲ್ಲಿ ತೋರಿಸಿದ್ದಕ್ಕಿಂತ ಸ್ವಲ್ಪ ಹೆಚ್ಚಿರಬಹುದು ಅಷ್ಟೇ. ಇನ್ನು ಕೆಲವು ಪಾತ್ರಗಳು ಹೀಗೆ ಬಂದು ಹಾಗೆ ಹೋಗುತ್ತವೆ. ಅದು ಬಿಟ್ಟರೆ, ಕ್ರೈಂ ಸಸ್ಪೆನ್ಸ್ ಇಷ್ಟ ಪಡೋರಿಗೆ ಈ ಸಿನಿಮಾ ಇಷ್ಟ ಆಗುತ್ತೆ.

More from Filmibeat

English summary
Dhanveerah Sanjana Anand starrer Hayagreeva movie Review and rating in Kannada
Read more about: dhanveer kannada movie review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X