For Quick Alerts
ALLOW NOTIFICATIONS  
For Daily Alerts

ಕಥೆ ಕೇಳ್ಬೇಡಿ, 'ಭರ್ಜರಿ' ಆಟ ನೋಡಿ ಎಂದ ವಿಮರ್ಶಕರು.!

By Harshitha
|

ನಟ ಧ್ರುವ ಸರ್ಜಾ ರವರ ಮೂರನೇ ಸಿನಿಮಾ 'ಭರ್ಜರಿ' ರಾಜ್ಯಾದ್ಯಂತ ತೆರೆ ಕಂಡು 'ಭರ್ಜರಿ' ಪ್ರದರ್ಶನ ಕಾಣುತ್ತಿದೆ. ಮಾಸ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಿರುವ 'ಭರ್ಜರಿ' ಚಿತ್ರಕ್ಕೆ ಬಹುತೇಕ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಬೋರ್ಡ್ ಕೂಡ ಬಿದ್ದಿದೆ.

ವಿಮರ್ಶೆ: 'ಬಹದ್ದೂರ್' ಹುಡುಗನ 'ಭರ್ಜರಿ' ಪ್ರೇಮ ಕಥೆ

ಧ್ರುವ ಸರ್ಜಾ ರವರ ಆಕ್ಟಿಂಗ್, ಫೈಟ್ ಹಾಗೂ ಡ್ಯಾನ್ಸ್ ನೋಡಿ ಅಭಿಮಾನಿಗಳು ಜೈಕಾರ ಕೂಗಿದ್ದಾರೆ. ಅಭಿಮಾನಿಗಳಿಗೆ ಖುಷಿ ಆದಂತೆ ನಮ್ಮ ವಿಮರ್ಶಕರಿಗೂ 'ಭರ್ಜರಿ' ಸಿನಿಮಾ ಇಷ್ಟ ಆಯ್ತಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕರ್ನಾಟಕದ ಜನಪ್ರಿಯ ಪತ್ರಿಕೆಗಳು ಪ್ರಕಟಿಸಿರುವ 'ಭರ್ಜರಿ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿರಿ....

'ಭರ್ಜರಿ' ಪಂದ್ಯದಲ್ಲಿ ರೋಚಕ ಆಟ - ಉದಯವಾಣಿ

ಈ ತರಹದ ಕಥೆ, ಚಿತ್ರ ಯಾವುದೂ ಕನ್ನಡಿಗರಿಗೆ ಹೊಸದಲ್ಲ. ಆ ಚಿತ್ರದ ಒಂದು ದೃಶ್ಯ, ಇನ್ನೊಂದು ಚಿತ್ರದ ಒಂದು ಟ್ರ್ಯಾಕ್, ಮತ್ತೊಂದು ಚಿತ್ರದ ಇನ್ಯಾವುದೋ ಅಂಶಗಳು ಪ್ರೇಕ್ಷಕರಿಗೆ ಆಗಾಗ ನೆನಪಿಗೆ ಬರಬಹುದು. ಆದರೆ, ಒಂದು ಪಕ್ಕಾ ಕಮರ್ಶಿಯಲ್ ಚಿತ್ರವನ್ನು ಹೇಗೆ ರೂಪಿಸಬೇಕು ಎಂಬುದು ನಿರ್ದೇಶಕ ಚೇತನ್ ಕುಮಾರ್ ಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ತಕ್ಕ ಹಾಗೆ ಇಡೀ ಚಿತ್ರವನ್ನ ಜೋಡಿಸಿದ್ದಾರೆ ಅವರು - ಚೇತನ್ ನಾಡಿಗೇರ್.

ಸಿದ್ದ ಸೂತ್ರಗಳ 'ಭರ್ಜರಿ' ಊಟ - ಪ್ರಜಾವಾಣಿ

ಪಕ್ಕಾ ಧ್ರುವ ಸರ್ಜಾ ಅವರ ತಾರಾ ವರ್ಚಸ್ಸನ್ನೇ ನೆಚ್ಚಿಕೊಂಡು ಬಂದಿರುವ ಸಿನಿಮಾ ‘ಭರ್ಜರಿ'. ಧ್ರುವ ಸರ್ಜಾ ಅವರಿಂದ ಅಭಿಮಾನಿಗಳು ಏನನ್ನು ಬಯಸುತ್ತಾರೆ ಎಂಬುದನ್ನೆಲ್ಲವನ್ನೂ ಒಂದೇ ತಟ್ಟೆಯಲ್ಲಿಟ್ಟು ಕೊಟ್ಟಿದ್ದಾರೆ ನಿರ್ದೇಶಕ ಚೇತನ್‌. ಹೀಗೆ ತಮಗೆ ಬೇಕಾದ ಊಟ ಸಿಕ್ಕಾಗ ತಟ್ಟೆಯ ಕಡೆಗಷ್ಟು ಲಕ್ಷ್ಯ ಹೋಗುವುದಿಲ್ಲವಲ್ಲ! ಈ ಸಿನಿಮಾದ ಕಥೆಯಲ್ಲಿ ಯಾವ ಹೊಸತನವೂ ಇಲ್ಲ. ಹಾಗೆ ನೋಡಿದರೆ ನಿರ್ದೇಶಕರಿಗೆ ಕಥೆಯೇ ಮುಖ್ಯ ಎಂದು ಅನಿಸಿದಂತಿಲ್ಲ. ಅಥವಾ ‘ಅಭಿಮಾನಿ ದೇವರು'ಗಳು ಅವನ್ನೆಲ್ಲ ಅಷ್ಟಾಗಿ ಗಮನಿಸುವುದಿಲ್ಲ ಎಂಬುದು ಅವರ ಯೋಚನೆಯಿರಬೇಕು. ನಾಯಕನ ಮೈಕಟ್ಟು, ನುಡಿಗಟ್ಟುಗಳನ್ನು ಪೋಣಿಸಲು ಒಂದು ದಾರದಂತೆಯೇ ಪ್ರಸಂಗಗಳನ್ನು ಹೆಣೆಯುತ್ತಾ ಹೋಗಿದ್ದಾರೆ. ಸಿದ್ಧಸೂತ್ರಗಳ ಇಟ್ಟಿಗೆಗಳಲ್ಲಿ ಸಿನಿಮಾವನ್ನು ಭರ್ಜರಿಯಾಗಿಯೇ ಕಟ್ಟಿದ್ದಾರೆ. ಆ ಸೂತ್ರಗಳು ನಿರ್ದೇಶಕನ ಅನುಕೂಲಕ್ಕೆ ತಕ್ಕಹಾಗೆ ಅನವಶ್ಯಕವಾಗಿ ಪೆಕರು ಪೆಕರಾಗಿ ಸುತ್ತಿ ಸಿಕ್ಕಿಹಾಕಿಕೊಳ್ಳುವುದೂ ಇದೆ. ಧ್ರುವ ಸರ್ಜಾ ಅವರ ಮಿತಿ ಮತ್ತು ಶಕ್ತಿ ಎರಡನ್ನೂ ಅರಿತಿರುವ ಅವರು ಆಕ್ಟಿಂಗ್ ಗಿಂತ ಆಕ್ಷನ್ ಗೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ಧ್ರುವ ತಮ್ಮ ಹಿಂದಿನ ಸಿನಿಮಾಗಳ ಪಾತ್ರದಲ್ಲಿಯೇ ಇನ್ನೂ ಮುಂದುವರಿಯುತ್ತಿದ್ದಾರೆ ಎಂದು ಅನಿಸಲೂ ಇದೇ ಕಾರಣ ಇರಬಹುದು - ಪದ್ಮನಾಭ ಭಟ್

ಅಭಿಮಾನಿಗಳಿಗೆ 'ಭರ್ಜರಿ' ರಸಗವಳ - ವಿಜಯ ಕರ್ನಾಟಕ

ಒಂದು ಸಿನಿಮಾ ನಿರ್ದೇಶನ ಮಾಡಿ ಸಾಕಷ್ಟು ಚಿತ್ರಗಳಿಗೆ ಚಿತ್ರ ಸಾಹಿತಿಯಾಗಿ ಕೆಲಸ ಮಾಡಿರುವ ಚೇತನ್‌ಕುಮಾರ್‌ಗೆ ನಮ್ಮ ಜನ ಎಂಥಹ ಸಿನಿಮಾ ನೋಡುತ್ತಾರೆ ಎಂಬ ಲೆಕ್ಕಾಚಾರ ಇರುವುದು ಈ ಕತೆಯ ಆಯ್ಕೆಯಲ್ಲೇ ಗೊತ್ತಾಗುತ್ತದೆ. ತೆಲುಗು, ತಮಿಳಿನ ಮಾಸ್‌ ಸಿನಿಮಾಗಳನ್ನು ಇಷ್ಟ ಪಡುತ್ತಿರುವ ಇಂದಿನ ಪಡ್ಡೆಗಳಿಗೆ ಭರ್ಜರಿ ಸಿನಿಮಾ ಯಾವುದರಲ್ಲಿಯೂ ಕಮ್ಮಿ ಇಲ್ಲ ಎನ್ನುವಂತಿದೆ. ಚಿತ್ರದಲ್ಲಿ ಬರೀ ಮಾಸ್‌ ಅಂಶಗಳಿದ್ದರೆ ಜನ ಚಿತ್ರಮಂದಿರಕ್ಕೆ ಬರುವುದಿಲ್ಲ, ಜತೆಗೆ ಒಂದಿಷ್ಟು ಸೆಂಟಿಮೆಂಟ್‌ ದೃಶ್ಯಗಳು, ಸಿನಿಮ್ಯಾಟಿಕ್ ಕತೆಯೂ ಇರಬೇಕು ಎಂಬುದನ್ನು ಅವರು ಚೆನ್ನಾಗಿ ಅರಿತಿದ್ದಾರೆ. ಇವೆಲ್ಲ ಅಂಶಗಳು ಅವರ ಮೊದಲ ಸಿನಿಮಾದಲ್ಲಿಯೂ ಇದ್ದವು, ಇಲ್ಲೂ ಇವೆ. ಸಿನಿಮಾದ ಮೊದಲರ್ಧ ಕಲರ್‌ಫುಲ್‌ ಆಗಿ ಕಂಡರೆ, ದ್ವಿತಿಯಾರ್ಧ ಕೆಂಪು ಧೂಳಿನಿಂದ ಕಂಗೊಳಿಸುತ್ತದೆ. ನಿರ್ದೇಶಕರ ಕತೆ ಮತ್ತು ಚಿತ್ರಕಥೆಗೆ ತಕ್ಕಂತೆ ಸಿನಿಮಾಟೋಗ್ರಫರ್‌ ಶ್ರೀಷಾ ಕೆಲಸ ಮಾಡಿದ್ದಾರೆ. 'ಚಿರತೆ ಬಂದ್ರೆ ವೇಗ ಇರುತ್ತೆ. ಹುಲಿ ಬಂದ್ರೆ ಗಾಂಭೀರ್ಯ ಇರುತ್ತೆ. ಸಿಂಹ ಬಂದ್ರೆ ಗರ್ಜನೆ ಇರುತ್ತೆ. ಈ ಸೂರ್ಯ ಬಂದ್ರೆ ಮೂರು ಇರುತ್ತೆ' ಎಂಬ ಡೈಲಾಗ್‌ಗಳು ಸ್ಪೀಡನ್ನು ಹೆಚ್ಚಿಸಿವೆ. ಇಂಥ ಡೈಲಾಗ್‌ಗಳನ್ನು ಹೊಡೆಯುತ್ತಾ ತಮ್ಮ ಅಭಿಮಾನಿಗಳಿಗೆ ಧ್ರುವ ಮತ್ತಷ್ಟು ಕಿಕ್‌ ಕೊಟ್ಟಿದ್ದಾರೆ. ಜತೆಗೆ ಲವರ್‌ ಬಾಯ್‌ ಆಗಿ, ತಾಯಿಗೆ ತಕ್ಕ ಮಗನಾಗಿ, ಎದುರಾಳಿಗಳನ್ನು ಭರ್ಜರಿಯಾಗಿ ಮಣ್ಣುಮುಕ್ಕಿಸುತ್ತಾ ಅಬ್ಬರಿಸಿದ್ದಾರೆ - ಹರೀಶ್ ಬಸವರಾಜ್

Bharjari Movie Review - The Times of India

The film definitely marks the graduation of Dhruva as an actor (never mind the fact that he is an SSLC fail in the film), as he charms the audience through the film. Rachita Ram packs in another winsome performance, while Hariprriya and Vaishali Deepak have their own appeal that adds to the story. The film also boasts a big ensemble cast who do their bits. The background score, fights and cinematography need a special mention. This is a mass entertainer, which nearly works with a slight lag in the second half. But it does have enough to ensure at least one visit to the cinema halls. For fans of Dhruva, the Action Prince ensures he gives them just what they asked for. If commercial drama is your kind, this might just work for you - Sunayana Suresh

A Worn Out Storyline - Bangalore Mirror

Considering that both director Chetan Kumar and actor Dhruva Sarja were not part of any other film for three years since their successful combination with Bahaddur, it is surprising that they managed to only pick a worn-out storyline for their comeback. Despite the slick narrative, amazing screen presence of Dhruva Saraja and grandly mounted sets, Bharjari is but a motley hotchpotch of situations from standard commercial films. It is Vajrakaya in one scene and even Bahaddur in another. It does not even give you the feel-good deja vu rush but a seen-it-all drudgery - Shyam Prasad

English summary
Dhruva Sarja starrer Kannada Movie 'Bharjari' has received mixed response from the critics. Here is the collection of 'Bharjari' reviews by Top News Papers of Karnataka.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more