Dhurandhar The Revenge Teaser X Review ; ಧುರಂಧರ್ 2 ಟೀಸರ್, ಅಳಿಯ ಅಲ್ಲ ಮಗಳ ಗಂಡ- ವ್ಯಾಪಕ ಆಕ್ರೋಶ

ದಕ್ಷಿಣ ಭಾರತೀಯ ಚಿತ್ರರಂಗದ ಅಬ್ಬರ, ಬಾಲಿವುಡ್ ನ ಬಾವಿಗೆ ತಳ್ಳಿದೆ ಎನ್ನುವುದು ಅನೇಕರ ಅಭಿಪ್ರಾಯ. ಹಾಗೇ ನೋಡಿದರೆ ಈ ಮಾತು ನಿಜಾ ಕೂಡಾ ಹೌದು. ಯಾಕೆಂದರೆ ಕೊರೊನಾ ನಂತರದ ದಿನಗಳಲ್ಲಿ ಬಾಲಿವುಡ್ ಎದ್ದಿದ್ದು ಕಡಿಮೆ. ಬೋರಲು ಬಿದ್ದಿದ್ದೇ ಹೆಚ್ಚು. ಕೊರೊನಾ ನಂತರ ಒಂದು ಕಡೆ ''ಬಾಹುಬಲಿ 1 ಮತ್ತು 2''.. ''ಕೆಜಿಎಫ್ 1 ಮತ್ತು 2'' .. ''ಪುಷ್ಪ 1 ಮತ್ತು 2'' ..''ಆರ್‌ಆರ್‌ಆರ್‌'' .. ''ಕಾಂತಾರ'' .. ''777 ಚಾರ್ಲಿ'' ...

ಹೀಗೆ ಹಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರಿಸಿದ್ದರೆ ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳೆಲ್ಲವೂ ನೆಲಕಚ್ಚಿದ್ದವು. ಆದರೆ.. 2023ರ ಸುಮಾರು ಬಾಲಿವುಡ್ ನಿಧಾನವಾಗಿ ಚೇತರಿಸಿಕೊಳ್ಳಲು ಶುರು ಮಾಡಿತ್ತು. ಹಾಗಂಥ.. ಮೊದಲಿನ ಲಯಕ್ಕೆ ಹಿಂದಿ ಉದ್ಯಮ ಕಳೆದ ವರ್ಷದವರೆಗೆ ಮರಳಿರಲಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಗೆದ್ದಿದ್ದು ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಮಾತ್ರ. ಆ ಪೈಕಿ ''ಧುರಂಧರ್'' ಕೂಡ ಒಂದು.

Dhurandhar 2 vs Toxic  Can Ranveer Singh   s Recycled Teaser Survive the Hype Battle

ಕಳೆದ ವರ್ಷಾಂತ್ಯದಲ್ಲಿ ತೆರೆಗೆ ಬಂದು ಬಾಲಿವುಡ್‌ ಇತಿಹಾಸದಲ್ಲಿಯೇ ಮೈಲಿಗಲ್ಲಾದ ಧುರಂಧರ್ ಚಿತ್ರದ ಮುಂದುವರೆದ ಭಾಗಕ್ಕೆ ಅಸಂಖ್ಯಾತ.. ಅಗಣಿತ..ಜನ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಬಾಲಿವುಡ್‌ಗೆ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಆದರೆ ಈಗ ಈ ನಿರೀಕ್ಷೆಯನ್ನು ''ಧುರಂಧರ್ 2'' ಹುಸಿ ಮಾಡಿದೆ. ಇದಕ್ಕೆ ವ್ಯಕ್ತವಾಗುತ್ತಿರುವ ಸಾರ್ವತ್ರಿಕ ಅಭಿಪ್ರಾಯಗಳೇ ಸಾಕ್ಷಿ.

ಹೌದು, ''ಧುರಂಧರ್ -ದಿ ರೀವೆಂಜ್'' ಚಿತ್ರದ ಟೀಸರ್ ನಿರೀಕ್ಷೆಗಳನ್ನು ಇನ್ನೂ ಹೆಚ್ಚು ಮಾಡಬೇಕಿತ್ತು. ಆದರೆ.. ಈ ನಿರೀಕ್ಷೆಗೆ ಆದಿತ್ಯ ಧರ್ ಮತ್ತು ತಂಡ ತಣ್ಣೀರು ಎರಚಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ''ಎಕ್ಸ್‌''(ಟ್ವಿಟರ್)ನಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಮೊದಲ ಭಾಗದ ಕೊನೆಯಲ್ಲಿಯೇ ನಾವು ಇದೆಲ್ಲವನ್ನೂ ನೋಡಿದ್ದೇವೆ, ನಮಗೆ ಬೇಕಿದ್ದಿದ್ದು ಬೇರೆಯದ್ದೇ ಟೀಸರ್ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಾಗಿದ್ದರೆ.. ಟೀಸರ್ ನೋಡಿದವರು ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.

ಸೇಡು ತೀರಿಸಿಕೊಂಡ ಆದಿತ್ಯ ಧರ್

ಜನ ಹೊಸದು ನಿರೀಕ್ಷೆ ಮಾಡುತ್ತಿದ್ದರು. ಆದರೆ ಮೊದಲ ಭಾಗದ ಪೋಸ್ಟ್ ಕ್ರೆಡಿಟ್ ಸೀನ್‌ಗಳನ್ನೇ ಮತ್ತೆ ತೋರಿಸಿ ಆದಿತ್ಯ ಧರ್ ಸೇಡು ತೀರಿಸಿಕೊಂಡಿದ್ಧಾರೆ.ಎಂದು ಒಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ಧಾರೆ.

ಚೂನಾ ಲಗಾ ದಿಯಾ

ಬೆಳಗ್ಗೆಯಿಂದ ''ಧುರಂಧರ್ 2'' ಟೀಸರ್ ನೋಡಲು ಕಾತುರದಿಂದ ಕಾಯುತ್ತಿದ್ದೆ. ಆದರೆ ಸಿಕ್ಕಿದ್ದು ಚಿತ್ರದ ಎಂಡ್ ಕ್ರೆಡಿಟ್‌ನ ದೃಶ್ಯ. ಮೂರ್ಖರನ್ನಾಗಿ ಮಾಡಿದರು ಎಂಬರ್ಥದಲ್ಲಿ ಮತ್ತೊಬ್ಬರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ನಾನು ಆಘಾತಕ್ಕೊಳಗಾದೆ

ಎರಡು ವಿಷಯಗಳು
1. ಧುರಂಧರ್ ಚಿತ್ರದ ಟೀಸರ್‌ನಲ್ಲಿ ಇದಕ್ಕಿಂತ ಎರಡನೇ ಭಾಗದ ಹೆಚ್ಚಿನ ಕ್ಲಿಪ್‌ಗಳಿವೆ.
2.ನಾನು ಈಗಾಗಲೇ ನೆಟ್‌ಫ್ಲಿಕ್ಸ್‌ನಲ್ಲಿ ಇದೆಲ್ಲಾ ನೋಡಿಯಾಗಿದೆ.
ನನಗೆ ಆಘಾತವನ್ನುಂಟುಮಾಡಲು ಉದ್ದೇಶಿಸಿದ್ದರೆ, ನಾನು ಈಗ ಖಂಡಿತವಾಗಿಯೂ ನಾನು ಆಘಾತಕ್ಕೆ ಒಳಗಾಗಿದ್ದೇನೆ ಎಂದು ಮತ್ತೊಬ್ಬರು ಟ್ವಿಟ್ ಮಾಡಿದ್ಧಾರೆ.

ಅಂದ್ಹಾಗೇ ''ಧುರಂಧರ್ 2'' ಎದುರು ''ಟಾಕ್ಸಿಕ್'' ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಇಬ್ಬರಲ್ಲಿ ಒಬ್ಬರು ತಮ್ಮ ಹೆಜ್ಜೆಯನ್ನು ಮುಂದಡಿ ಇಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಇಬ್ಬರು ಹಿಂದೆ ಸರಿಯಲು ತಯಾರಿಲ್ಲ. ಮುಂದಕ್ಕೋಗಲು ಒಪ್ಪುತ್ತಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಮಾರ್ಚ್ 19ರಂದು ''ಧುರಂಧರ್'' ಬಿಡುಗಡೆಯಾಗುವುದು ಖಚಿತ ಎನ್ನುವ ಸಂದೇಶವನ್ನು ಚಿತ್ರತಂಡ ಟೀಸರ್ ಮೂಲಕ ಮತ್ತೊಮ್ಮೆ ರವಾನೆ ಮಾಡಿದೆ.

ಆದರೆ, ಇದೇ ವೇಳೆ ಟೀಸರ್ ವಿರುದ್ಧ ಆಕ್ರೋಶ, ಅಸಮಾಧಾನ ಕೂಡ ಹೆಚ್ಚಾಗಿದ್ದು ಮುಂಬರುವ ದಿನಗಳಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯ ಸಮಯದಲ್ಲಿಯೂ ಕೂಡ ಪ್ರೇಕ್ಷಕರಿಗೆ ನಿರಾಸೆಯಾದರೆ ''ಟಾಕ್ಸಿಕ್‌''ಗೆ ಈ ವಿಚಾರ ಸಹಕಾರಿಯಾದರೂ ಆಗಬಹುದು. ಹಮ್ಜಾನ ಸೇಡಿನ ಸ್ಯಾಂಪಲ್ ನೋಡಲು ಹವಣಿಸುತ್ತಿರುವ ಅಭಿಮಾನಿಗಳನ್ನು ಆದಿತ್ಯ ಧರ್ ಮುಂಬರುವ ದಿನಗಳಲ್ಲಿ ಹೇಗೆ ಸಮಾಧಾನಗೊಳಿಸುತ್ತಾರೆ ಎನ್ನುವುದನ್ನು ನೋಡಬೇಕಿದೆ.

More from Filmibeat

English summary
"Twitter explodes over Dhurandhar 2: The Revenge! While fans expected a high-octane look at the sequel, they were met with recycled montages and a disappointing 're-hash.' Read the brutal fan reactions and see why the Ranveer Singh starrer is trending for all the wrong reasons."
Read more about: ranveer singh bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X