twitter
    For Quick Alerts
    ALLOW NOTIFICATIONS  
    For Daily Alerts

    'ಹುಟ್ಟುಹಬ್ಬದ ಶುಭಾಶಯಗಳು': ಮರ್ಡರ್ ಮಿಸ್ಟರಿ ಕಥೆಗಿಲ್ಲ ಸೀರಿಯಸ್ ಟಚ್

    |

    ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳು ಕೊರೊನಾ ಕಾರಣದಿಂದ ರಿಲೀಸ್ ಆಗದೇ ಹಾಗೆ ಉಳಿದುಕೊಂಡಿವೆ. ಸದ್ಯ ಇತ್ತೀಚೆಗೆ ಒಂದಷ್ಟು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿದ್ದು ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತಿದೆ. ಈ ವಾರ ಕೂಡ ಕನ್ನಡದ ಮೂರು ಸಿನಿಮಾಗಳು ರಿಲೀಸ್ ಆಗಿದ್ದು, ಅದರಲ್ಲಿ ಒಂದು ಹುಟ್ಟುಹಬ್ಬದ ಶುಭಾಶಯಗಳು ಚಿತ್ರ. ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾ ಸೆಟ್ಟೇರಿದಾಗಿನಿಂದಲೂ ಭಾರಿ ನಿರೀಕ್ಷೆಯನ್ನು ಹೆಚ್ಚಿಸಿತ್ತು. ಅದರಂತೆ ಇಂದು ಸಿನಿಮಾ ರಿಲೀಸ್ ಆಗಿದ್ದು, ಚಿತ್ರ ಹೇಗಿದೆ ಎಂಬ ವಿಮರ್ಶೆಯನ್ನು ಮುಂದೆ ಓದಿ .

    ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾ ದಿಗಂತ್ ಮತ್ತು ಸೀರಿಯಲ್ ಖ್ಯಾತಿಯ ಕವಿತಾ ಗೌಡ ಮುಖ್ಯ ಭೂಮಿಕೆಯಲ್ಲಿ ಮೂಡಿಬಂದಿರುವ ಸಿನಿಮಾ. ಸಿಂಪಲ್ ಆಗಿ ಹೇಳಬೇಕು ಅಂದರೆ ಮರ್ಡರ್ ಮಿಸ್ಟರಿ ಕಥೆ ಇದಾಗಿದ್ದು, ಒಂದು ಕೊಲೆಯ ಸುತ್ತ ನಡೆಯುವ ಕಥೆಯೇ ಈ ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾ. ಅದು ಕೂಡ ಒಂದು ರೆಸಾರ್ಟ್‌ನಲ್ಲಿ ನಡೆಯುವ ಕಥೆ ಇದಾಗಿದ್ದು, ಒಂದು ರಾತ್ರಿ ನಡೆಯುವ ಕಥೆಯನ್ನು ನಿರ್ದೇಶಕರು ಎರಡೂವರೆ ತಾಸು ಪ್ರೇಕ್ಷಕರಿಗೆ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ.

    ಹುಟ್ಟುಹಬ್ಬದ ಶುಭಾಶಯಗಳು ಚಿತ್ರ ಆರಂಭ ಆಗೋದೆ ಒಂದು ರೆಸಾರ್ಟ್‌ನಲ್ಲಿ. ಕಾಲೇಜು ಸ್ನೇಹಿತರೆಲ್ಲ ಗೆಳೆಯನ ಹುಟ್ಟುಹಬ್ಬಕ್ಕೆ ಅಂತ ಸಾಕಷ್ಟು ವರ್ಷಗಳ ಬಳಿಕ ಆ ರೆಸಾರ್ಟ್‌ನಲ್ಲಿ ಒಂದಾಗಿರುತ್ತಾರೆ. ಕುಡಿದು ಕುಪ್ಪಳಿಸುತ್ತಾ ಎಂಜಾಯ್ ಮಾಡುವ ಸಂದರ್ಭದಲ್ಲಿ ಚಿತ್ರದ ನಾಯಕ ಅಂದ್ರೆ ದಿಗಂತ್ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಸ್ನೇಹಿತನನ್ನೆ ಕೊಲೆ ಮಾಡುತ್ತಾರೆ. ದಿಗಂತ್ ಈ ಕೊಲೆಯನ್ನು ಯಾಕೆ ಮಾಡಿದರು. ಆ ಕೊಲೆಯಿಂದ ತಪ್ಪಿಸಿಕೊಳ್ಳಲು ದಿಗಂತ್ ಏನೆಲ್ಲ ಮಾಸ್ಟರ್ ಮೈಂಡ್ ಯೂಸ್ ಮಾಡ್ತಾರೆ? ಯಾರು ದಿಗಂತ್‌ಗೆ ಸಹಾಯ ಮಾಡುತ್ತಾರೆ? ಕೊನೆಗೂ ದಿಗಂತ್ ಇದರಿಂದ ಪಾರಾಗುತ್ತಾರಾ ಅನ್ನೋದೆ ಚಿತ್ರದ ಸಾರಾಂಶ. ಹಾಗೇ ಕೊನೆಯಲ್ಲಿ ಒಂದಷ್ಟು ಟರ್ನ್ ಆಂಡ್ ಟ್ವಿಸ್ಟ್‌ಗಳನ್ನು ನೀಡಲಾಗಿದ್ದು, ಕೊಲೆಯ ಕಾರಣವೇ ಒಂದು ಸೀಕ್ರೇಟ್. ಅದು ಸಿನಿಮಾದ ಕೊನೆಯಲ್ಲಿ ರಿವೀಲ್ ಆಗುತ್ತದೆ.

    Diganth And Kavitha Gowda starrer huttu habbada shubhashayagalu Kannada Movie Review and Rating
    ಹೀಗೆ ಸಾಗುವ ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾ ಅಲ್ಲಲ್ಲಿ ಬೋರಿಂಗ್ ಅನ್ನಿಸುವ ಸಂಭಾಷಣೆ, ಬೇಡವಿತ್ತು ಅನ್ನಿಸುವ ಸೀನ್‌ಗಳನ್ನು ಸಿನಿಮಾದಲ್ಲಿ ಇರಿಸಲಾಗಿದೆ. ಒಂದಷ್ಟು ಕಡೆಗಳಲ್ಲಿ ಚಿತ್ರಕ್ಕೆ ಇರಬೇಕಾದ ಗಂಭೀರತೆ ಕಳೆದುಕೊಳ್ಳುವ ಚಿತ್ರ, ಅಲ್ಲಲ್ಲಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ವಿಫಲವಾಗಿದೆ. ನಾಗರಾಜು ಬೆತ್ತೂರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅಚ್ಚುಕಟ್ಟಾಗಿ ಚಿತ್ರವನ್ನು ಪ್ರೇಕ್ಷಕರು ಮುಂದೆ ಇಡುವ ಪ್ರಯತ್ನ ಮಾಡಿದ್ದಾರೆ ಆದರೂ ಕೆಲವು ಕಡೆಗಳಲ್ಲಿ ಎಡವಿದ್ದಾರೆ ಎಂದು ಅನಿಸುತ್ತಿದೆ. ಹಾಗೇ ಸಿನಿಮಾದಲ್ಲಿ ಬರುವ ಪಾತ್ರವರ್ಗ ಕೂಡ ಕೊಟ್ಟಿರುವ ಪಾತ್ರಗಳಿಗೆ ಜೀವ ತುಂಬುವ ಪ್ರಯತ್ನವನ್ನು ಮಾಡಿದ್ದಾರೆ.

    ಇದೇ ಮೊದಲ ಬಾರಿಗೆ ದಿಗಂತ್​ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.​ ಅವರ ಹೊಸ ಲುಕ್​ ಪಕ್ಕಾ ರಗಡ್​​​ ಆಗಿ ಮೂಡಿ ಬಂದಿದೆ. ಕಾಮಿಡಿ ಜೊತೆ ಜೊತೆಗೆ ಲವ್​ ಹಾಗೂ ಮಾಸ್​ ಕಥೆ ಕೂಡ ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾ ಒಳಗೊಂಡಿದ್ದು, ಪ್ರಸನ್ನ ಹುಟ್ಟುಹಬ್ಬದ ಶುಭಾಶಯಗಳು ಕಥೆಯನ್ನು ಬರೆದಿದ್ದಾರೆ.

    Diganth And Kavitha Gowda starrer huttu habbada shubhashayagalu Kannada Movie Review and Rating
    ಚಿತ್ರಕ್ಕೆ ಯೋಗರಾಜ್ ಭಟ್ ಸಾಹಿತ್ಯ ಬರೆದಿರೋದು ಈ ಸಿನಿಮಾದ ಮತ್ತೊಂದು ಪ್ಲಸ್ ಪಾಯಿಂಟ್. ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದು, ಶ್ರೀಕಾಂತ್ ಶ್ರಾಫ್ ಸಂಕಲನ, ಅಭಿಲಾಶ್ ಕಲತಿ ಕ್ಯಾಮೆರಾ ಕೈಚಳಕ 'ಹುಟ್ಟುಹಬ್ಬದ ಶುಭಾಶಯಗಳು' ಚಿತ್ರಕ್ಕಿದೆ. ಚೇತನ್ ಗಂಧರ್ವ, ಮಡೇನೂರು ಮನು, ಸೂರಜ್, ಸೂರ್ಯ, ವಾಣಿಶ್ರೀ, ರೋಹಿತ್ ರಂಗಸ್ವಾಮಿ, ಶನಯ ಕಾಟ್ವೆ, ಶರಣ್ಯ ಶೆಟ್ಟಿ, ಶ್ರೀದತ್ತ, ಶ್ರೀಹರಿ, ಸುಜಯ್ ಶಾಸ್ತ್ರಿ, ರತನ್ ರಾಮ್, ಅಮೋಘವರ್ಷ, ಅಜಯ್ ಗಜ ಸೇರಿದಂತೆ ಮುಂತಾದವರು ಚಿತ್ರದಲ್ಲಿ ನಟಿಸಿ ನೋಡುಗರಿಗೆ ತಮ್ಮದೇ ಶೈಲಿಯಲ್ಲಿ ಮನೋರಂಜನೆ ನೀಡಿದ್ದಾರೆ. ಸಿನಿಮಾ ಒಂದು ರೀತಿಯಲ್ಲಿ ಚೆನ್ನಾಗಿ ಮೂಡಿ ಬಂದಿದ್ದರು ಕೂಡ, ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ವಿಫಲ ಆಗಿರೋದು ಸತ್ಯ.

    Rating:
    2.0/5

    English summary
    huttu habbada shubhashayagalu Movie Review, kavitha gowda, diganth starrer huttu habbada shubhashayagalu Kannada movie Review and Rating
    Friday, December 31, 2021, 19:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X