Don't Miss!
- News
ಬೆಂಗಳೂರಿನಲ್ಲಿ ಇಂದು ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
- Lifestyle
ಪ್ಲಾಸ್ಟಿಕ್ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
- Sports
ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್
- Finance
ಮೇ 17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಮಾಹಿತಿ ಬಹಿರಂಗ: 528 ಕಿ.ಮೀ ರೇಂಜ್, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್
- Technology
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಬಿಡುಗಡೆ! ಡೌನ್ಲೋಡ್ ಮಾಡುವುದು ಹೇಗೆ?
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಹುಟ್ಟುಹಬ್ಬದ ಶುಭಾಶಯಗಳು': ಮರ್ಡರ್ ಮಿಸ್ಟರಿ ಕಥೆಗಿಲ್ಲ ಸೀರಿಯಸ್ ಟಚ್
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳು ಕೊರೊನಾ ಕಾರಣದಿಂದ ರಿಲೀಸ್ ಆಗದೇ ಹಾಗೆ ಉಳಿದುಕೊಂಡಿವೆ. ಸದ್ಯ ಇತ್ತೀಚೆಗೆ ಒಂದಷ್ಟು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿದ್ದು ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತಿದೆ. ಈ ವಾರ ಕೂಡ ಕನ್ನಡದ ಮೂರು ಸಿನಿಮಾಗಳು ರಿಲೀಸ್ ಆಗಿದ್ದು, ಅದರಲ್ಲಿ ಒಂದು ಹುಟ್ಟುಹಬ್ಬದ ಶುಭಾಶಯಗಳು ಚಿತ್ರ. ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾ ಸೆಟ್ಟೇರಿದಾಗಿನಿಂದಲೂ ಭಾರಿ ನಿರೀಕ್ಷೆಯನ್ನು ಹೆಚ್ಚಿಸಿತ್ತು. ಅದರಂತೆ ಇಂದು ಸಿನಿಮಾ ರಿಲೀಸ್ ಆಗಿದ್ದು, ಚಿತ್ರ ಹೇಗಿದೆ ಎಂಬ ವಿಮರ್ಶೆಯನ್ನು ಮುಂದೆ ಓದಿ .
ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾ ದಿಗಂತ್ ಮತ್ತು ಸೀರಿಯಲ್ ಖ್ಯಾತಿಯ ಕವಿತಾ ಗೌಡ ಮುಖ್ಯ ಭೂಮಿಕೆಯಲ್ಲಿ ಮೂಡಿಬಂದಿರುವ ಸಿನಿಮಾ. ಸಿಂಪಲ್ ಆಗಿ ಹೇಳಬೇಕು ಅಂದರೆ ಮರ್ಡರ್ ಮಿಸ್ಟರಿ ಕಥೆ ಇದಾಗಿದ್ದು, ಒಂದು ಕೊಲೆಯ ಸುತ್ತ ನಡೆಯುವ ಕಥೆಯೇ ಈ ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾ. ಅದು ಕೂಡ ಒಂದು ರೆಸಾರ್ಟ್ನಲ್ಲಿ ನಡೆಯುವ ಕಥೆ ಇದಾಗಿದ್ದು, ಒಂದು ರಾತ್ರಿ ನಡೆಯುವ ಕಥೆಯನ್ನು ನಿರ್ದೇಶಕರು ಎರಡೂವರೆ ತಾಸು ಪ್ರೇಕ್ಷಕರಿಗೆ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಹುಟ್ಟುಹಬ್ಬದ ಶುಭಾಶಯಗಳು ಚಿತ್ರ ಆರಂಭ ಆಗೋದೆ ಒಂದು ರೆಸಾರ್ಟ್ನಲ್ಲಿ. ಕಾಲೇಜು ಸ್ನೇಹಿತರೆಲ್ಲ ಗೆಳೆಯನ ಹುಟ್ಟುಹಬ್ಬಕ್ಕೆ ಅಂತ ಸಾಕಷ್ಟು ವರ್ಷಗಳ ಬಳಿಕ ಆ ರೆಸಾರ್ಟ್ನಲ್ಲಿ ಒಂದಾಗಿರುತ್ತಾರೆ. ಕುಡಿದು ಕುಪ್ಪಳಿಸುತ್ತಾ ಎಂಜಾಯ್ ಮಾಡುವ ಸಂದರ್ಭದಲ್ಲಿ ಚಿತ್ರದ ನಾಯಕ ಅಂದ್ರೆ ದಿಗಂತ್ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಸ್ನೇಹಿತನನ್ನೆ ಕೊಲೆ ಮಾಡುತ್ತಾರೆ. ದಿಗಂತ್ ಈ ಕೊಲೆಯನ್ನು ಯಾಕೆ ಮಾಡಿದರು. ಆ ಕೊಲೆಯಿಂದ ತಪ್ಪಿಸಿಕೊಳ್ಳಲು ದಿಗಂತ್ ಏನೆಲ್ಲ ಮಾಸ್ಟರ್ ಮೈಂಡ್ ಯೂಸ್ ಮಾಡ್ತಾರೆ? ಯಾರು ದಿಗಂತ್ಗೆ ಸಹಾಯ ಮಾಡುತ್ತಾರೆ? ಕೊನೆಗೂ ದಿಗಂತ್ ಇದರಿಂದ ಪಾರಾಗುತ್ತಾರಾ ಅನ್ನೋದೆ ಚಿತ್ರದ ಸಾರಾಂಶ. ಹಾಗೇ ಕೊನೆಯಲ್ಲಿ ಒಂದಷ್ಟು ಟರ್ನ್ ಆಂಡ್ ಟ್ವಿಸ್ಟ್ಗಳನ್ನು ನೀಡಲಾಗಿದ್ದು, ಕೊಲೆಯ ಕಾರಣವೇ ಒಂದು ಸೀಕ್ರೇಟ್. ಅದು ಸಿನಿಮಾದ ಕೊನೆಯಲ್ಲಿ ರಿವೀಲ್ ಆಗುತ್ತದೆ.
ಇದೇ ಮೊದಲ ಬಾರಿಗೆ ದಿಗಂತ್ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಲುಕ್ ಪಕ್ಕಾ ರಗಡ್ ಆಗಿ ಮೂಡಿ ಬಂದಿದೆ. ಕಾಮಿಡಿ ಜೊತೆ ಜೊತೆಗೆ ಲವ್ ಹಾಗೂ ಮಾಸ್ ಕಥೆ ಕೂಡ ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾ ಒಳಗೊಂಡಿದ್ದು, ಪ್ರಸನ್ನ ಹುಟ್ಟುಹಬ್ಬದ ಶುಭಾಶಯಗಳು ಕಥೆಯನ್ನು ಬರೆದಿದ್ದಾರೆ.
