'ದಿಲ್ ಬೆಚಾರ' ಟ್ವಿಟ್ಟರ್ ವಿಮರ್ಶೆ: ಸುಶಾಂತ್ ಸಿಂಗ್ ಕೊನೆಯ ಸಿನಿಮಾ ನೋಡಿ ಭಾವುಕರಾದ ಅಭಿಮಾನಿಗಳು

ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಬಹುನಿರೀಕ್ಷೆಯ ದಿಲ್ ಬೆಚಾರ ಸಿನಿಮಾ ರಿಲೀಸ್ ಆಗಿದೆ. ಸುಶಾಂತ್ ಕೊನೆಯ ಸಿನಿಮಾ ವೀಕ್ಷಣೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈಗಾಗಲೆ ಲಕ್ಷಾಂತರ ಮಂದಿ ಸಿನಿಮಾ ವೀಕ್ಷಿಸಿ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದಿಲ್ ಬೆಚಾರ ಸಿನಿಮಾವನ್ನು ಮತ್ತು ಸುಶಾಂತ್ ಸಿಂಗ್ ಅಭಿನಯವನ್ನು ಹಾಡಿಹೊಗಳುತ್ತಿದ್ದಾರೆ. ಅಭಿಮಾನಿಗಳು ದಿಲ್ ಬೆಚಾರ ದಿನ ಎಂದು ಆಚರಣೆ ಮಾಡುತ್ತಿದ್ದಾರೆ.

ಸುಶಾಂತ್ ಸಿಂಗ್ ಅಭಿನಯಕ್ಕೆ ಅಭಿಮಾನಿಗಳು ಮತ್ತೊಮ್ಮೆ ಮನಸೋತಿದ್ದಾರೆ. ಕಿಜ್ ಮತ್ತು ಮತ್ತು ಮನ್ನಿಯ ಭಾವನಾತ್ಮಕ ಜರ್ನಿ ನೋಡಿ ನೋಡುಗರ ಕಣ್ಣಾಲಿ ಒದ್ದೆ ಮಾಡಿದೆ. ದಿಲ್ ಬೆಚಾರ ನೋಡಿ ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸುಶಾಂತ್ ಸಿಂಗ್ ಬಗ್ಗೆ ಮತ್ತು ದಿಲ್ ಬೆಚಾರ ಬಗ್ಗೆ ಅಭಿಮಾನಿಗಳು ಮತ್ತು ಸಿನಿಗಣ್ಯರು ಹೇಳಿದ್ದೇನು? ಇಲ್ಲಿದೆ..

ಭಾವನಾತ್ಮಕ ಪಯಣ

ಭಾವನಾತ್ಮಕ ಪಯಣ

"ದಿಲ್ ಬೆಚಾರ ಭಾವನಾತ್ಮಕ ಪಯಣ, ಸುಶಾಂತ್ ಸಿಂಗ್ ಅದ್ಭುತ ಅಭಿನಯ ಮಾಡಿದ್ದಾರೆ. ಚಿತ್ರದುದ್ದಕ್ಕೂ ನನ್ನ ಭಾವನೆಗಳನ್ನು ನಿಯಂತ್ರಿಸಲು ನನಗೆ ಸಾಧ್ಯವಾಗಿಲ್ಲ. ಸುಶಾಂತ್ ಸಿಂಗ್ ಸುಂದರ ಪಯಣ ಅಂತ್ಯಕ್ಕೆ ಅರ್ಹವಲ್ಲ. ತುಂಬಾ ಬೇಗ ಹೋದಿರಿ ಸಹೋದರ" ಎಂದು ಅಭಿಮಾನಿಯೊಬ್ಬ ಬರೆದುಕೊಂಡಿದ್ದಾರೆ.

ತರಣ್ ಆದರ್ಶ್

ತರಣ್ ಆದರ್ಶ್

ಬಾಲಿವುಡ್ ಸಿನಿಮಾ ವಿಶ್ಲೇಶಕ ತರಣ್ ಆದರ್ಶ್ "ಸುಂದರವಾದ ಲವ್ ಸ್ಟೋರಿ. ಸುಶಾಂತ್ ಅಭಿನಯದ ಅದ್ಭುತ. ಭಾವನಾತ್ಮಕ ಸನ್ನಿವೇಶಗಳು ಕಣ್ಣಲ್ಲಿ ನೀರು ತರಿಸುತ್ತೆ. ಸಂಜನಾ ಸಾಂಘಿ ಅದ್ಭುತವಾಗಿ ಅಭಿನಯಿಸಿದ್ದೀರಿ" ಎಂದು ಬರೆದುಕೊಂಡಿದ್ದಾರೆ.

ನಟಿ ರಶ್ಮಿ ದೇಸಾಯಿ

ನಟಿ ರಶ್ಮಿ ದೇಸಾಯಿ

"ಸುಶಾಂತ್ ನನ್ನು ನೋಡುವಾಗ ಹೃದಯ ತುಂಬಾ ಭಾರವಾಗಿತ್ತು. ಅವನ ಶಕ್ತಿಯುತ ಆತ್ಮ ಮತ್ತು ಆ ನಗು ನನ್ನ ಕಣ್ಣೀರನ್ನು ತಡೆಯಲು ಸಾಧ್ಯವಾಗಿಲ್ಲ. ಎಷ್ಟೊಂದು ನೆನಪುಗಳು. ಅವನನ್ನು ರೀಲ್ ಮೇಲೆ ನೋಡುವಾಗ ನಿಜವೆಂದು ಭಾವಿಸಿದೆ. ಸುಂದರವಾದ ಸಂದೇಶ" ಎಂದು ರಶ್ಮಿ ದೇಸಾಯಿ ಬರೆದುಕೊಂಡಿದ್ದಾರೆ.

ನಟಿ ಕಂಗನಾ ರಣಾವತ್

ನಟಿ ಕಂಗನಾ ರಣಾವತ್

"ನಿಮ್ಮ ಸಿನಿಮಾ ನೋಡಿ ಈಗ ಮುಗಿಸಿದೆ. ನಾನು ಅಳಲ್ಲ. ನಾನು ತುಂಬಾ ಇಷ್ಟಪಟ್ಟೆ. ನಿಮ್ಮ ಚಿತ್ರದ ಅಂತ್ಯವು ಪ್ರಸ್ತುತ ಪರಿಸ್ಥಿತಿಗೆ ಸಂಪೂರ್ಣವಾಗಿ ಸಂಬಂಧಿಸಿದೆ. ನಿಮಗೆ ವಿದಾಯ ಬೇಡ. ನೀವು ಯಾವಾಗಲು ನಮ್ಮ ಹೃದಯದಲ್ಲಿ, ನಮ್ಮ ನೆನಪಿನಲ್ಲಿ ಇರುತ್ತೀರಿ. ನೀವು ಫೈಟರ್. ಸಂತೋಷವಾಗಿರಿ" ಎಂದು ಹೇಳಿದ್ದಾರೆ.

ಗಾಯಕ ಅರ್ಮಾನ್ ಮಲ್ಲಿಕ್

ಗಾಯಕ ಅರ್ಮಾನ್ ಮಲ್ಲಿಕ್

"ನನ್ನ ಕಣ್ಣು ಸುಶಾಂತ್ ಅವರ ಮೇಲೆ ಇತ್ತು. ಅವರ ನಗು ನನ್ನನ್ನು ಮೋಡಿ ಮಾಡಿದೆ. ಅರ ಸ್ಟುಪಿಡ್ ವರ್ತನೆಗಳು ನನ್ನನ್ನು ಚಕಿತಗೊಳಿಸಿದವು. ಸುಶಾಂತ್ ಅಳುವುದನ್ನು ನೋಡಲು ತುಂಬಾ ಕಷ್ಟವಾಯಿತು. ಅವರನ್ನು ಪರದೆ ಮೇಲೆ ನೋಡಿದಾಗ ನನ್ನೊಳಗಿನ ಪ್ರತಿಯೊಂದು ಭಾವನೆಯನ್ನು ನಾನು ಅನುಭವಿಸಿದೆ" ಎಂದು ಅರ್ಮಾನ್ ಮಲ್ಲಿಕ್ ಬರೆದುಕೊಂಡಿದ್ದಾರೆ.

ಮನೋಜ್ ಶರ್ಮಾ

ಮನೋಜ್ ಶರ್ಮಾ

"ನಾನು ಇಂದು ದಿಲ್ ಬೆಚಾರ ಸಿನಿಮಾ ನೋಡಿದ್ದಂತೆ ಯಾವ ಸಿನಿಮಾವನ್ನು ನೋಡಲಿಲ್ಲ. ನೈಜ ಜಗತ್ತಿನಲ್ಲಿ ಅವರ ಅನುಪಸ್ಥಿತಿಯೂ ಸಿನಿಮಾ ನೋಡದ ನಂತರ ನನಗೆ ಮತ್ತಷ್ಟು ಕಾಡುತ್ತಿದೆ. ಕಾಕತಾಳಿಯವಾಗಿ ಪ್ರತಿಯೊಂದು ಸಾಲುಗಳು ಮತ್ತು ಸಂಭಾಷಣೆಗಳು ರೀಲ್ ಗಿಂತ ನಿಜವೆಂದು ಭಾವಿಸಿದೆವು. ನಮ್ಮ ಕಾಲದ ಪ್ರಕಾಶಮಾನವಾದ ಪ್ರತಿಭೆಯನ್ನು ನಾವು ಕಳೆದುಕೊಂಡೆವು" ಎಂದಿದ್ದಾರೆ.

ರಜನಿಕಾಂತ್ ಅಭಿಮಾನಿಗಳು

ರಜನಿಕಾಂತ್ ಅಭಿಮಾನಿಗಳು

ಚಿತ್ರದಲ್ಲಿ ರಜನಿಕಾಂತ್ ಅವರಂತೆ ಅನುಕರಣೆ ಮಾಡುವ ಸಾಕಷ್ಟು ಸನ್ನಿವೇಶಗಳು ಸೂಪರ್ ಸ್ಟಾರ್ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ರಜನಿಕಾಂತ್ ಅಭಿಮಾನಿಗಳು ಸುಶಾಂತ್ ಅಭಿನಯದ ಫೋಟೋಗಳನ್ನು ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಜನಿಕಾಂತ್ ಮೇಲೆ ಇಷ್ಟು ಪ್ರೀತಿ ತೋರಿದ ಸುಶಾಂತ್ ಗೆ ಧನ್ಯವಾದ ತಿಳಿಸುತ್ತಿದ್ದಾರೆ.

ಕಣ್ಣೀರು ತಡೆಯಲು ಸಾಧ್ಯವಾಗಿಲ್ಲ

ಕಣ್ಣೀರು ತಡೆಯಲು ಸಾಧ್ಯವಾಗಿಲ್ಲ

"ಕೊನೆಯಲ್ಲಿ ನನ್ನ ಕಣ್ಣೀರನ್ನು ತಡೆಯಲಾಗಲಿಲ್ಲ. ಮನ್ನಿಗಾಗಿ ಅಲ್ಲ, ಸುಶಾಂತ್ ಸಿಂಗ್ ಗಾಗಿ. ಆದರೆ ಚಿತ್ರದುದ್ದಕ್ಕೂ ಪ್ರಮಾಣಿಕವಾಗಿ, ಈ ಮುಕ್ತ ಮನೋಭಾವದ ಆತ್ಮವು ನಮ್ಮೊಂದಿಗೆ ಇಲ್ಲ ಎಂದು ನಾನು ಎಂದಿಗೂ ಭಾವಿಸಲಿಲ್ಲ. ಸರಳವಾಗಿ ಕಥೆ ಹೇಳುವಿಕೆಯನ್ನು ಇಷ್ಟಪಟ್ಟೆ" ಎಂದಿದ್ದಾರೆ.

More from Filmibeat

English summary
Sushant Singh last movie Dil Bechara twitter review. Fans Get Emotional After Watching Sushant Singh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X