Dunki Twitter Review: ಶಾರುಖ್ ಹ್ಯಾಟ್ರಿಕ್ ಹಿಟ್ ಫಿಕ್ಸ್? 'ಡಂಕಿ' ಟ್ವಿಟ್ಟರ್ ರಿವ್ಯೂ

ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ 'ಡಂಕಿ' ಸಿನಿಮಾ ತೆರೆಗಪ್ಪಳಿಸಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಕಾಮಿಡಿ ಡ್ರಾಮಾ ಭಾರೀ ಕುತೂಹಲ ಮೂಡಿಸಿತ್ತು. 'ಸಲಾರ್' ಎದುರು ಬರುತ್ತಿರುವ 'ಡಂಕಿ' ಸೋಲುತ್ತೆ ಅಂತ್ಲೇ ಕೆಲವರು ಅಂದುಕೊಂಡಿದ್ದಾರೆ. ಆದರೆ ಚಿತ್ರತಂಡ ಮಾತ್ರ ಭಾರೀ ಭರವಸೆಯಿಂದ ಚಿತ್ರವನ್ನು ತೆರೆಗೆ ತಂದಿದೆ.

ಈ ವರ್ಷ 'ಪಠಾಣ್', 'ಜವಾನ್' ರೀತಿಯ ಎರಡು 1000 ಕೋಟಿ ರೂ. ಬಜೆಟ್ ಚಿತ್ರವನ್ನು ಶಾರುಖ್ ಖಾನ್ ಕೊಟ್ಟಿದ್ದಾರೆ. ಹಾಗಾಗಿ ಸಹಜವಾಗಿಯೇ 'ಡಂಕಿ' ಸಿನಿಮಾ ಹೇಗಿರುತ್ತೆ? ಎನ್ನುವ ಚರ್ಚೆ ನಡೆದಿತ್ತು. ಇನ್ನು ಮುನ್ನಾಭಾಯ್ ಸರಣಿ, ಪಿಕೆ ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಕೊಟ್ಟ ರಾಜ್‌ಕುಮಾರ್ ಹಿರಾನಿ, ಬಾಲಿವುಡ್ ಕಿಂಗ್‌ ಖಾನ್ ಜೊತೆ ಮೊದಲ ಬಾರಿಗೆ ಕೈ ಜೋಡಿಸಿದ್ದಾರೆ. ಅದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದ್ದು ಸುಳ್ಳಲ್ಲ.

Dunki Twitter Review: What X Audience Says About Shah Rukh Khans New Movie

ಹಿರಾನಿ ಜೊತೆ ಸೇರಿ ಸ್ವತಃ ಶಾರುಖ್ ಖಾನ್ 'ಡಂಕಿ' ಸಿನಿಮಾ ನಿರ್ಮಿಸಿದ್ದಾರೆ. ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ ಚಿತ್ರದ ತಾರಾಗಣದಲ್ಲಿದ್ದಾರೆ. ಕೆಲವೆಡೆ ಪ್ರೀಮಿಯರ್‌ ಶೋಗಳು ನಡೆದಿತ್ತು. ಇನ್ನು ದೇಶದ ಕೆಲವೆಡೆ ಬೆಳಗ್ಗೆ 7 ಗಂಟೆಗೆ ಚಿತ್ರದ ಮೊದಲ ಪ್ರದರ್ಶನ ಆರಂಭವಾಗಿತ್ತು. ಸಿನಿಮಾ ನೋಡಿ ಬಂದ ಪ್ರೇಕ್ಷಕರು ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದು ಹಿರಾನಿ ಪ್ರಪಂಚ

"ಕಂಡಿತ ಬ್ಲಾಕ್‌ಬಸ್ಟರ್. ಇದು ರಾಜ್‌ಕುಮಾರ್ ಹಿರಾನಿ ಪ್ರಪಂಚ. ಆರಂಭದಿಂದ ಕೊನೆಯವರೆಗೂ ಭಾವುಕತೆ ಜೊತೆಗೆ ನಗುವಂತಿದೆ. ಶಾರುಖ್ ಖಾನ್ ಅವರ ವೃತ್ತಿಜೀವನದಲ್ಲಿ ಬೆಸ್ಟ್ ಪರ್ಫಾರ್ಮನ್ಸ್‌ಗಳಲ್ಲಿ ಒಂದು. ಸಹ ಕಲಾವಿದರೆಲ್ಲರೂ ಉತ್ತಮವಾಗಿ ಸಾಥ್ ಕೊಟ್ಟಿದ್ದಾರೆ. ಅದರಲ್ಲೂ ವಿಕ್ಕಿ ಕೌಶಲ್, ತಾಪ್ಸಿ ನಟನೆ ಪ್ರಶಂಸನೀಯ" ಎಂದು ಫಿಲ್ಮ್ ಕ್ರಿಟಿಕ್ ಕೋಮಲ್ ನಹ್ತಾ ಬರೆದುಕೊಂಡಿದ್ದಾರೆ.

ಕಾಮಿಡಿ ಕೂಡ ನಗು ತರಿಸಲ್ಲ

ಮತ್ತೊಬ್ಬ ನೆಟ್ಟಗರು "ಡಂಕಿ ರಾಜ್‌ಕುಮಾರ್ ಹಿರಾನಿ ಈವರೆಗೆ ಮಾಡಿರುವ ಸಿನಿಮಾಗಳಲ್ಲಿ ಕೆಟ್ಟ ಸಿನಿಮಾ. ಕಾಮಿಡಿ ನಗು ತರಿಸಲ್ಲ. ಚಿತ್ರಕಥೆ ಹಾಗೂ ಅದನ್ನು ತೆರೆಗೆ ತಂದಿರುವುದು ಡಲ್ಲಾಗಿದೆ. ಶಾರುಖ್- ತಾಪ್ಸಿ ಕೆಮಿಸ್ಟ್ರಿ ವರ್ಕ್ ಆಗಿಲ್ಲ. ಇಂತಹ ಸಿನಿಮಾಗಳಿಗೆ ಅದು ಮುಖ್ಯವಾಗಿ ಬೇಕಿತ್ತು. ವಿಕ್ಕಿ ಕೌಶಲ್ ಒಬ್ಬರೇ ಸಿನಿಮಾವನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

ವಿಕ್ಕಿಗೆ ಪ್ರಶಸ್ತಿ ಬರಬೇಕು

"ಇಂಟರ್‌ವಲ್. ಇಲ್ಲಿವರೆಗೂ ಇದು ಒಂದು ಡೀಸೆಂಟ್ ಸಿನಿಮಾ. ನಂಬಿದ್ರೆ ನಂಬಿ ಬಿಟ್ಟರೆ ಬಿಡಿ ಸಹ ಕಲಾವಿದರೇ ಚಿತ್ರದಲ್ಲಿ ಹೆಚ್ಚು ಮೆರೆದಿದ್ದಾರೆ. ಅದರಲ್ಲೂ ವಿಕ್ಕಿ ನಟನೆ ಸೂಪರ್. ಸಾಮ ಬಹದ್ದೂರ್ ಚಿತ್ರಕ್ಕೆ ಅವರಿಗೆ ಅತ್ತುತ್ತಮ ನಟ ಪ್ರಶಸ್ತಿ ಸಿಗಬೇಕು. ಅದೇ ರೀತಿ 'ಡಂಕಿ' ಚಿತ್ರದ ಪೋಷಕ ಪಾತ್ರಕ್ಕೂ ಪ್ರಶಸ್ತಿ ಸಿಗುತ್ತದೆ ಎಂದು ಇನ್ನೊಬ್ಬರು ಬರೆದಿದ್ದಾರೆ.

ಮೊದಲಾರ್ಧ ತಾಪ್ಸಿ ಆವರಿಸಿಕೊಂಡಿದ್ದಾರೆ

"ಡಂಕಿ ಮೊದಲರ್ಧ ಸೂಪರ್. ಕಾಮಿಡಿ ಜೊತೆಗೆ ಎಮೋಷನಲ್ ಜರ್ನಿ ಚೆನ್ನಾಗಿದೆ. ಕೆಲವೇ ಕ್ಷಣ ಬಂದರೂ ವಿಕ್ಕಿ ಕೌಶಲ್ ಮನದಲ್ಲಿ ಉಳಿಯುತ್ತಾರೆ. ಮೊದಲರ್ಧವನ್ನು ಅವರಿಸಿಕೊಂಡಿರುವುದು ತಾಪ್ಸಿ ಪನ್ನು. 'ಜವಾನ್' ಮತ್ತು 'ಪಠಾಣ್' ಬಳಿಕ ಹೊಸ ರೀತಿಯಲ್ಲಿ ಶಾರುಖ್‌ ಖಾನ್‌ರನ್ನು ರಾಜ್‌ಕುಮಾರ್ ಹಿರಾನಿ ನಮ್ಮ ಮುಂದೆ ತಂದಿದ್ದಾರೆ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಹಿರಾನಿಯ ಮತ್ತೊಂದು ಮಾಸ್ಟರ್‌ಪೀಸ್

ಅಂಜನಾ ಓಂ ಕಶ್ಯಪ್ ಎಂಬುವವರು ಟ್ವೀಟ್ ಮಾಡಿ "ಈಗಷ್ಟೇ 'ಡಂಕಿ' ಸಿನಿಮಾ ನೋಡಿ ಮುಗಿಸಿದೆ. ಚಿತ್ರದಲ್ಲಿ ಕಾಮಿಡಿ, ಎಮೋಷನ್, ಸರ್‌ಪ್ರೈಸಸ್, ಕಥೆ ಎಲ್ಲವೂ ಇದೆ. 'ಡಂಕಿ' ಬರೀ ಸಿನಿಮಾ ಅಲ್ಲ. ಇದೊಂದು ಸಿನಿಮಾ ಹಬ್ಬ, ದೇಶಾಭಿಮಾನದ ಹಬ್ಬ. ರಾಜ್‌ಕುಮಾರ್‌ ಹಿರಾನಿ ಮತ್ತೊಂದು ಮಾಸ್ಟರ್ ಪೀಸ್ ಸಿನಿಮಾ ಕೊಟ್ಟಿದ್ದಾರೆ" ಎಂದಿದ್ದಾರೆ.

More from Filmibeat

English summary
Explore What Audience Responses To Dunki Movie On Twitter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X