Ekka Twitter Review; 'ಎಕ್ಕ' ಫಸ್ಟ್ ಹಾಫ್ ಸೂಪರ್.. ಆದ್ರೆ ಸೆಕೆಂಡ್ ಹಾಫ್..?
ರೋಹಿತ್ ಪದಕಿ ನಿರ್ದೇಶನದಲ್ಲಿ ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಸಿನಿಮಾ ವಿಶ್ವದಾದ್ಯಂತ ತೆರೆಗೆ ಬಂದಿದೆ. ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿವೆ. ಟೀಸರ್, ಸಾಂಗ್ಸ್, ಟ್ರೈಲರ್‌ನಿಂದ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಇದೀಗ ಪ್ರೇಕ್ಷಕರನ್ನು ರಂಜಿಸುತ್ತಿದೆ.
ಯುವ ರಾಜ್‌ಕುಮಾರ್ ನಟನೆಯ 2ನೇ ಸಿನಿಮಾ ಇದು. ಸಂಜನಾ ಆನಂದ್, ಸಂಪದಾ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಇನ್ನುಳಿದಂತೆ ಅತುಲ್ ಕುಲಕರ್ಣಿ, ಶ್ರುತಿ, ಪೂರ್ಣಚಂದ್ರ, ಆದಿತ್ಯಾ, ಸಾಧು ಕೋಕಿಲ ಚಿತ್ರದ ತಾರಾಗಣದಲ್ಲಿದ್ದಾರೆ. ಬೆಳ್ಳಗ್ಗೆ 7 ಗಂಟೆಗೆ ಹೊಸಪೇಟೆಯಲ್ಲಿ 'ಎಕ್ಕ' ಸಿನಿಮಾ ಮೊದಲ ಪ್ರದರ್ಶನ ಆರಂಭವಾಗಿತ್ತು. ಇನ್ನುಳಿದಂತೆ ಎಲ್ಲೆಡೆ 10 ಗಂಟೆಗೆ 'ಎಕ್ಕ' ದರ್ಬಾರ್ ಶುರುವಾಯಿತು.

'ಎಕ್ಕ' ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಟ್ವಿಟರ್‌ನಲ್ಲಿ 'ಎಕ್ಕ' ಟ್ರೆಂಡ್ ಜೋರಾಗಿದೆ. ಸಿನಿರಸಿಕರು ಸಿನಿಮಾ ನೋಡಿ ಟ್ವೀಟ್ ಮಾಡಿ ಪ್ಲಸ್, ಮೈನಸ್ ಬಗ್ಗೆ ಮಾತನಾಡುತ್ತಿದ್ದಾರೆ.
ಅದ್ಭುತ ಸಿನಿಮಾ
ವಸಿಷ್ಟ ಪ್ರಭು ಎಂಬುವವರು ಟ್ಟೀಟ್ ಮಾಡಿ "ಯುವ' ಅದ್ಭುತ ಸಿನಿಮಾ. ಸಿನಿಮಾ ಬರವಣಿಗೆ ಚೆನ್ನಾಗಿದೆ ಮತ್ತು ಅಷ್ಟೇ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ನಟನೆಯಲ್ಲಿ ಯುವ ಬಹಳಷ್ಟು ಸುಧಾರಿಸಿದ್ದಾರೆ. ಚಿತ್ರದಲ್ಲಿ ಮಸ್ತಾನ್ ಭಾಯ್ ಮತ್ತು ಡ್ಯಾಡಿ ನನ್ನ ನೆಚ್ಚಿನ ಪಾತ್ರಗಳು. ಆಸ್ಪತ್ರೆಯ ದೃಶ್ಯದ ನಂತರ ಹರಿಣಿ ಅವರ ಅಭಿನಯ ತುಂಬಾ ಚೆನ್ನಾಗಿದೆ. ಕಾರ್ತಿಕ್ ಅವರ ರೊಲೆಕ್ಸ್ ರೀತಿಯ ಕೆಮಿಯೋ ಸೂಪರ್(ನಸು ನಕ್ಕು) ಎಂದಿದ್ದಾರೆ.
2nd ಹಾಫ್ ಚೆನ್ನಾಗಿಲ್ಲ
ಮತ್ತೊಬ್ಬರು ಟ್ವೀಟ್ ಮಾಡಿ 'ಎಕ್ಕ' ಚಿತ್ರದ ಪಾಸಿಟಿವ್ ಹಾಗೂ ನೆಗೆಟಿವ್ ಪಟ್ಟಿ ಮಾಡಿದ್ದಾರೆ. ಫಸ್ಟ್ ಹಾಫ್, ಸಿನಿಮಾ ನಿರ್ದೇಶನ ಸಖತ್ತಾಗಿದೆ. ಡೈಲಾಗ್ಸ್, ಕಾಮಿಡಿ, ಸಿನಿಮಾಟೋಗ್ರೋಫಿ ಅದ್ಭುತ. ಕಥೆ, ಸಂಗೀತ, ಬಿಜಿಎಂ, ಯುವ ಹಾಗೂ ಸಂಜನಾ ನಟನೆ ಬಹಳ ಉತ್ತಮವಾಗಿದೆ. ನೆಗೆಟಿವ್ ವಿಚಾರಕ್ಕೆ ಬಂದರೆ ಸೆಕೆಂಡ್ ಹಾಫ್ ಕೆಟ್ಟದಾಗಿದೆ. ಕ್ಲೈಮ್ಯಾಕ್ಸ್ ಕೂಡ ಚೆನ್ನಾಗಿಲ್ಲ. ಒಟ್ಟಾರೆ 5ಕ್ಕೆ 3 ಅಂಕ ಎಂದು ಬರೆದಿದ್ದಾರೆ.
ಚರಣ್ ಮ್ಯೂಸಿಕ್ ಮ್ಯಾಜಿಕ್
"ಇಡೀ ಸಿನಿಮಾ ಎಮೋಷನ್, ಡ್ರಾಮಾ, ಆಕ್ಷನ್, ಹಾಸ್ಯ ಮತ್ತು ಶುದ್ಧ ಮನರಂಜನೆಯಿಂದ ತುಂಬಿದೆ. ಮಾಸ್ತಿ ಡೈಲಾಗ್ಸ್ ಚೆನ್ನಾಗಿದೆ. ಚರಣ್ ರಾಜ್ ಮ್ಯೂಸಿಕ್ ಮ್ಯಾಜಿಕ್ ಮಾಡಿದೆ. ರೋಹಿತ್ ಒಳ್ಳೆ ಕಥೆ ಕಟ್ಟಿಕೊಟ್ಟಿದ್ದಾರೆ. ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ಆದರೆ ಆದಿತ್ಯ ಮತ್ತು ಪೂರ್ಣ ಸೆಕೆಂಡ್ ಹಾಫ್ ಚಂದಗೊಳಿಸಿ ಗಮನ ಸೆಳೆದರು" ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸಪ್ಪೆ ಎನಿಸಿತು
"ಬಹಳ ನಿರೀಕ್ಷೆಯೊಂದಿಗೆ ಸಿನಿಮಾ ನೋಡಲು ಬಂದೆ. ಆದರೆ ದುರದೃಷ್ಟವಶಾತ್ ಸಿನಿಮಾ ಸಪ್ಪೆ ಎನಿಸಿತು. ಯುವ ನಟನೆ ಇನ್ನು ಚೆನ್ನಾಗಿರಬೇಕಿತ್ತು. ಡೈಲಾಗ್ ಡೆಲಿವರಿ ಇನ್ನು ಉತ್ತವಾಗಿರಬೇಕಿತ್ತು. ಕಥೆಗೆ ಒಳ್ಳೆ ಸಾಮರ್ಥ್ಯ ಇತ್ತು. ಅದನ್ನು ಇನ್ನ ಚೆನ್ನಾಗಿ ತೋರಿಸುವ ಅವಕಾಶ ಇತ್ತು. ಚರಣ್ ರಾಜ್ ಸಂಗೀತ ಮಾತ್ರ ಸೂಪರ್. ಒಟ್ಟಾರೆ 2.5/5" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
2nd ಹಾಫ್ ಬೋರಿಂಗ್
ಒಮ್ಮೆ ನೋಡಬಹುದಾದ ಸಿನಿಮಾ 'ಎಕ್ಕ'. ಫಸ್ಟ್ ಹಾಫ್ ಸ್ಲೋ ಆದರೆ ಚೆನ್ನಾಗಿದೆ. ಸೆಕೆಂಡ್ ಹಾಫ್ ಬೋರಿಂಗ್. 'ಯುವ' ಚಿತ್ರಕ್ಕಿಂತ ಈ ಚಿತ್ರದಲ್ಲಿ ಯುವ ನಟನ ಸುಧಾರಿಸಿದೆ ಎಂದು ಮತ್ತೊಬ್ಬರು ಅಭಿಪ್ರಾಯ ತಿಳಿಸಿದ್ದಾರೆ.


Click it and Unblock the Notifications











