ವಿಮರ್ಶೆ: 'ಮಜಾ' ತುಂಬಿದ ಸೃಜಾ ಸಿನಿಮಾ

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು.....ಎಂಬ ಗಾದೆ ಮಾತಿದೆ. ಆದರೆ, ಸೃಜನ್ ಲೋಕೇಶ್ ಹೇಳುವ ಒಂದು ಸುಳ್ಳು, ಸಾವಿರಾರು ಸುಳ್ಳುಗಳನ್ನ ಹುಟ್ಟುಹಾಕುತ್ತೆ. ಆ ಸುಳ್ಳಿನ ಗೋಡೆ ಮೇಲೆ ಕಟ್ಟುವ ಪ್ರೀತಿಯನ್ನ ಉಳಿಸಿಕೊಳ್ಳಲು ಸೃಜನ್ ಪಡುವ ಹರಸಾಹಸವೇ 'ಎಲ್ಲಿದ್ದೆ ಇಲ್ಲಿ ತನಕ'. ಮುಂದೆ ಓದಿ.....

Rating:
3.5/5

ಚಿತ್ರ: ಎಲ್ಲಿದ್ದೆ ಇಲ್ಲಿ ತನಕ

ನಿರ್ದೇಶಕ: ತೇಜಸ್ವಿ

ಕಲಾವಿದರು: ಸೃಜನ್ ಲೋಕೇಶ್, ಹರಿಪ್ರಿಯಾ, ಯಶಸ್ ಸೂರ್ಯ ಮತ್ತು ಇತರರು

ಬಿಡುಗಡೆ: ಅಕ್ಟೋಬರ್ 11, 2019

ಸಿನಿಮಾ ಪೂರ್ತಿ 'ಮಜಾ'

ಸಿನಿಮಾ ಪೂರ್ತಿ 'ಮಜಾ'

ಆಗರ್ಭ ಶ್ರೀಮಂತನ ಮಗ ಸೂರ್ಯ (ಸೃಜನ್ ಲೋಕೇಶ್). ಚಾಲೆಂಜ್ ಅಂದ್ರೆ ಸವಾಲ್ ಆಗಿ ಸ್ವೀಕರಿಸುವ ಯುವಕ. ಸ್ವತಂತ್ರವಾಗಿ ಲೈಫ್ ಎಂಜಾಯ್ ಮಾಡಬೇಕು ಎಂಬ ಆಸೆಯಿಂದ ಮಲೇಷಿಯಾದಿಂದ ಭಾರತಕ್ಕೆ ಬರ್ತಾನೆ. ಮೊದಲ ನೋಟದಲ್ಲೇ ನಂದಿನಿ (ಹರಿಪ್ರಿಯಾ) ಮೇಲೆ ಲವ್ವಾಗುತ್ತೆ. ಸ್ನೇಹಿತನನ್ನ ಮುಂದಿಟ್ಟುಕೊಂಡು ಒಂದು ಸುಳ್ಳು ಹೇಳಿ ಆಕೆಯ ಸ್ನೇಹ ಸಂಪಾದನೆ ಮಾಡಿಕೊಳ್ಳುವ ಸೂರ್ಯ, ಆ ಪ್ರೀತಿಯನ್ನ ಉಳಿಸಿಕೊಳ್ಳಲು ಸುಳ್ಳಿನ ಕೋಟೆ ಕಟ್ಟುತ್ತಾನೆ. ಸುಳ್ಳಿನಿಂದ ಕಟ್ಟಿದ ಪ್ರೀತಿಯ ಕೋಟೆಯನ್ನ ಉಳಿಸಿಕೊಳ್ಳುತ್ತಾನಾ ಎಂಬುದು ಕಥೆ. ಸರಳ ಕತೆಯನ್ನ ಭರಪೂರ ಮನರಂಜನೆಯಿಂದ ನೀಡಿದ್ದಾರೆ.

ಮಾತಿನಲ್ಲಿ ಹಿಡಿದಿಡುವ ಚಿತ್ರ

ಮಾತಿನಲ್ಲಿ ಹಿಡಿದಿಡುವ ಚಿತ್ರ

ಸೃಜನ್ ಲೋಕೇಶ್ ಟಾಕಿಂಗ್ ಸ್ಟಾರ್ ಎನ್ನುವುದನ್ನ ಮತ್ತೆ ಪ್ರೂವ್ ಮಾಡುತ್ತೆ ಈ ಸಿನಿಮಾ. ಮಾತಿನಿಂದಲೇ ಇಡೀ ಸಿನಿಮಾ ರೂಪುಗೊಂಡಿದೆ. ಪ್ರೇಕ್ಷಕರನ್ನ ನಕ್ಕು ನಗಿಸಬೇಕು ಎಂಬ ಉದ್ದೇಶದಿಂದ ಹಾಸ್ಯಾಸ್ಪದ ಸಂಭಾಷಣೆ, ಅದಕ್ಕೆ ತಕ್ಕ ನಟನೆ, ಕಲಾವಿದರ ಜುಗಲ್ ಬಂದಿ, ಆಸಕ್ತಿಕರ ಚಿತ್ರಕಥೆ ಮೂಲಕ ಸಿನಿಮಾ ಮಾಡಲಾಗಿದೆ. ಸೃಜನ್ ಅವರ ಕಾಮಿಡಿ ಟೈಮಿಂಗ್ಸ್, ಪಂಚಿಂಗ್ ಡೈಲಾಗ್, ಜೊತೆಗೆ ಅಚ್ಚರಿ ಎಂಬಂತೆ ಡ್ಯಾನ್ಸ್ ಹಾಗೂ ಫೈಟ್ ಕೂಡ ಸಾಥ್ ಕೊಟ್ಟಿದೆ.

ಶಕ್ತಿ ತುಂಬುವ ಕಲಾವಿದರು

ಶಕ್ತಿ ತುಂಬುವ ಕಲಾವಿದರು

ಸೃಜನ್ ಲೋಕೇಶ್ ಅವರ ಎಲ್ಲಿದ್ದೆ ಇಲ್ಲಿ ತನಕ ಮನೆಯಲ್ಲಿ ಕಲಾವಿದರು ದಂಡೆ ಇದೆ. ಹರಿಪ್ರಿಯಾ ನಾಯಕಿಯಾಗಿ ಉತ್ತಮ ಸಾಥ್ ನೀಡಿದ್ದಾರೆ. ಸೃಜನಾ ತಾಯಿ ಪಾತ್ರದಲ್ಲಿ ತಾರಾ ಲವಲವಿಕೆಯಾಗಿ ಕಾಣಿಸಿಕೊಂಡಿದ್ದಾರೆ. ಶ್ರೀಮಂತ ತಂದೆಯಾಗಿ ಅವಿನಾಶ್ ಗಮನಾರ್ಹ ನಟನೆ. ಸೃಜನ್ ಲೋಕೇಶ್ ಸ್ನೇಹಿತರಾಗಿ ಗಿರಿ ಮತ್ತು ಯಶಸ್ ಸೂರ್ಯ ಸಾಥ್ ಕೊಟ್ಟಿದ್ದು, ಸೃಜನ್ ಹಾಗೂ ಗಿರಿ ಕಾಂಬಿನೇಷನ್ ಹೆಚ್ಚು ವರ್ಕೌಟ್ ಆಗಿದೆ. ತರಂಗ ವಿಶ್ವ, ತಬಲಾ ನಾಣಿ, ಮಂಡ್ಯ ರಮೇಶ್, ಕ್ಲೈಮ್ಯಾಕ್ಸ್ ನಲ್ಲಿ ಬರುವ ಸಾಧುಕೋಕಿಲಾ ನಗಿಸುವಲ್ಲಿ ಸಫಲರಾಗಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಧಿಕಾ ರಾವ್ ಗಮನ ಸೆಳೆಯುತ್ತಾರೆ.

ನಿರ್ದೇಶಕನ ಜಾಣ್ಮೆ ಒಪ್ಪಬೇಕು

ನಿರ್ದೇಶಕನ ಜಾಣ್ಮೆ ಒಪ್ಪಬೇಕು

ಕಿರುತೆರೆಯಲ್ಲಿ ಮಜಾ ಟಾಕೀಸ್ ಮೂಲಕ ಪ್ರೇಕ್ಷಕರನ್ನ ರಂಜಿಸಿರುವ ಸೃಜನ್ ಲೋಕೇಶ್ ಜೊತೆ ಎಂತಹ ಸಿನಿಮಾ ಮಾಡಬೇಕು ಎಂದು ಅರಿತುಕೊಂಡಿದ್ದ ತೇಜಸ್ವಿ, ವೀಕ್ಷಕನ ನಿರೀಕ್ಷೆ ಹುಸಿ ಮಾಡಿಲ್ಲ. ಕಮರ್ಷಿಯಲ್ ಅಂಶಗಳ ಜೊತೆ ಕಾಮಿಡಿ ಕಿಕ್ ಕೊಟ್ಟು ಚೊಚ್ಚಲ ನಿರ್ದೇಶನದಲ್ಲಿ ಗಮನ ಸೆಳೆದಿದ್ದಾರೆ. ಆದರೆ, ಎರಡು ಗಂಟೆ ಇಪ್ಪತ್ತು ನಿಮಿಷ ಕಾಲಾವಧಿ ಬೇಕಾಗಿರಲಿಲ್ಲ ಅನ್ಸುತ್ತೆ. ಮಜಾ ಟಾಕೀಸ್ ಕಲಾವಿದರು ಹಾಗೂ ಸೃಜನ್ ಡೈಲಾಗ್ಸ್ ನೋಡಿದ್ರೆ ಮಜಾ ಟಾಕೀಸ್ ಮುಂದುವರಿದ ಭಾಗದಂತೆಯೂ ಭಾಸವಾಗುತ್ತೆ.

ಕೊನೆಯದಾಗಿ ಒಂದು ಮಾತು

ಕೊನೆಯದಾಗಿ ಒಂದು ಮಾತು

ಸಿನಿಮಾ ನೋಡುವ ಎರಡೂವರೆ ಗಂಟೆ ಮನರಂಜನೆ ಖಂಡಿತ. ಸೃಜನ್ ಅವರ ಈ ಹಿಂದಿನ ಸಿನಿಮಾಗಳಂತೆ ಈ ಚಿತ್ರವಿಲ್ಲ. ಪ್ರೇಕ್ಷಕರಿಗೆ ಬೇಕಾಗಿರುವ ನಗುವಿನ ಟಾನಿಕ್ ಹೊತ್ತು ಬಂದಿದ್ದಾರೆ. ಸೃಜನ್ ಕಲರ್ ಫುಲ್ ಆಗಿ, ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಒಂದು ಸರಳ ಸುಂದರ ಕತೆ ಕೊಟ್ಟಿದ್ದಾರೆ. ನೋಡಲು ಯಾವುದೇ ಮೋಸವಿಲ್ಲ.

More from Filmibeat

English summary
Kannada actor Srujan Lokesh Starrer Ellidde Illeethanka movie review in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X