»   » ಹರೆಯದ ಹುಡುಗಾಟ, ಅಡ್ಡದಾರಿ ಹಿಡಿದ ಹುಡುಗರ ತುಂಟಾಟದ ಸುತ್ತಾ..

ಹರೆಯದ ಹುಡುಗಾಟ, ಅಡ್ಡದಾರಿ ಹಿಡಿದ ಹುಡುಗರ ತುಂಟಾಟದ ಸುತ್ತಾ..

Subscribe to Filmibeat Kannada

ಚಿತ್ರ : ಫ್ರೆಂಡ್ಸ್‌ನಿರ್ದೇಶನ : ಎಂ.ಡಿ. ಶ್ರೀಧರ್‌ತಾರಾಗಣ : ಋತಿಕಾ, ಶರಣ್‌, ಹರಿ, ಶ್ಯಾಮ್‌, ಆನಂದ್‌, ಸೌಮ್ಯಲತಾ, ಟೆನ್ನಿಸ್‌ ಕೃಷ್ಣ, ಮಿಮಿಕ್ರೀ ದಯಾನಂದ್‌ ಮತ್ತಿತರರು.
*ಪದ್ಮನಾಭ ಪ್ರಸಾದ್‌

ಕಾಲೇಜು ಕ್ಯಾಂಪಸ್‌ ಕಥೆಯೇ ಈ ಚಿತ್ರಕ್ಕೂ ಬಂಡವಾಳ. ಇತ್ತೀಚೆಗೆ ಸಕ್ಸಸ್‌ ಆಗುತ್ತಿರುವ ಕಾಲೇಜು ಅಂಗಳದ ಕಥೆಯನ್ನೇ ಮತ್ತೊಮ್ಮೆ ಕ್ಯಾಷ್‌ ಮಾಡಿಕೊಳ್ಳುವ ಪ್ರಯತ್ನ ‘ಫ್ರೆಂಡ್ಸ್‌’ ಚಿತ್ರದಲ್ಲೂ ನಡೆದಿದೆ. ಇದು ತೆಲುಗಿನಲ್ಲಿ ಹಿಟ್‌ ಆದ ‘ಸಿಕ್ಸ್‌ ಟೀನ್ಸ್‌’ ಚಿತ್ರದ ಯಥಾವತ್‌ ನಕಲು.

ಅಮೆರಿಕದಿಂದ ಹಾರಿಬಂದು, ಹಾಯ್‌ ಫ್ರೆಂಡ್ಸ್‌ ಅನ್ನುವ ಮುದ್ದಾದ ಹುಡುಗಿಯ ಹಿಂದೆ ತಂಟೆ ಮಾಡುತ್ತಾ ಅಲೆದಾಡುವ ಹುಡುಗರು, ಕಾಲೇಜು ಆವರಣ, ಅವರ ಹುಡುಗಾಟದ ನಡುವೆ ಪುಟ್ಟದೊಂದು ಸಂದೇಶ ಚಿತ್ರದಲ್ಲಿ ಅಡಗಿಕೊಂಡಿದೆ.

ಚಿತ್ರ ನಿರಾಯಾಸವಾಗಿ ನೋಡಿಸಿಕೊಂಡು ಹೋದರೂ, ಆಂಟಿ ಪ್ರೀತ್ಸೆ ಚಿತ್ರ ನೋಡಿದವರಿಗೆ ಮಾತ್ರ ಎರಡನೇ ಬಾರಿ ಚಿತ್ರ ನೋಡುತ್ತಿರುವೆವೇನೋ ಎಂಬ ಅನುಮಾನವನ್ನು ಅರೆಕ್ಷಣ ಮೂಡಿಸುತ್ತದೆ. ಆದರೆ, ಅಲ್ಲಿ ಪ್ರೀತ್ಸೆ ಎಂದರೆ ಇಲ್ಲಿ ಕಾಮ್ಸೆ ಅಂತಾರೆ ಅಷ್ಟೆ.

ಅಮೆರಿಕದಿಂದ ಬಂದ ಬೆಡಗಿಯ ಪ್ರೀತಿಸೋ ಬದಲು ಕಾಮಿಸುವ ಈ ಹುಡುಗರು ಅವಳನ್ನು ಬೆಡ್‌ಗೆ ಬಾ ಅಂತಾರೆ. ಅವಳೂ ಈ ಮಾತಿನಿಂದ ಕೆರಳದೆ, ಕೂಲಾಗೇ ನಾಲ್ಕೂ ಜನರೊಂದಿಗೆ ಒಂದೇ ರಾತ್ರಿ ಕಳೆವುದಾಗಿ ವಚನ ಕೊಡ್ತಾಳೆ.

ಆಮೇಲೆ ಏನು? ಎತ್ತ ಎಂಬುದೇ ಕಥೆ... ಒಂದಿಷ್ಟು ಅನುಭವ ಇರುವ ಶರಣ್‌ ಹೊರತಾಗಿ ನಾಲ್ಕಾರು ಹೊಸ ಮುಖದ ನಾಯಕರಿಂದ ತುಂಬಿರುವ ಚಿತ್ರದಲ್ಲಿ ಇರುವುದು ಒಬ್ಬಳೇ ನಾಯಕಿ. ಶರಣ್‌ ಹಾಗೂ ಆನಂದ್‌ ಚಿತ್ರದ ಬಹುಭಾಗ ಆವರಿಸಿದ್ದು, ಪ್ರೇಕ್ಷಕರಿಗೆ ಕಚಗುಳಿ ಇಟ್ಟು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದ ಪೂರ್ವಾರ್ಧದಲ್ಲಿ ನಗಿಸುವ ಟೆನ್ನಿಸ್‌ ಕೃಷ್ಣ, ಮಿಮಿಕ್ರೀ ದಯಾನಂದ್‌ ಹಾಗೂ ರೇಖಾದಾಸ್‌ ಉತ್ತರಾರ್ಧದಲ್ಲಿ ಕಿರಿಕಿರಿ ಮಾಡ್ತಾರೆ. ನಾಯಕಿ ಋತಿಕಾಳ ಅಭಿನಯಕ್ಕೆ, ಕಂಠದಾನ ಕಲಾವಿದೆಯ ಸುದೀಘ್ರ ಲಕ್ಚರ್ರೂ ಸೇರಿಕೊಂಡಿದೆ. ಚಿತ್ರದಲ್ಲಿ ಹೇಳಿಕೊಳ್ಳುವಂಥದ್ದು ಏನೂ ಇಲ್ಲದಿದ್ದರೂ, ಎಲ್ಲ ಹೊಸ ಹುಡಗರೇ ಇರೋದ್ರಿಂದ ಹಾಗೂ ಇದು ಎಂ.ಡಿ. ಶ್ರೀಧರ್‌ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ನೀಡಿರುವ ಮೊದಲ ಕೊಡುಗೆ ಅನ್ನೋ ದೃಷ್ಟಿಯಲ್ಲಿ ಬೆನ್ನುತಟ್ಟಲು ಅಡ್ಡಿ ಇಲ್ಲ.

ಜಿ. ಕೃಷ್ಣ ಅವರ ಸಂಗೀತ 6 ಟೀನ್ಸ್‌ನ ಯಥಾವತ್‌ ಇದೆಯಾದ್ದರಿಂದ ಹೆಚ್ಚೇನೂ ಹೇಳುವ ಹಾಗಿಲ್ಲ. ರಮಣರ ಛಾಯಾಗ್ರಹಣ ಓಕೆ. ಕೆಲವೆಡೆ ಬಿ.ಎ. ಮಧು ಅವರ ಸಂಭಾಷಣೆ ಗಮನ ಸೆಳೆಯತ್ತೆ. ಕಲ್ಯಾಣ್‌ ಸಾಹಿತ್ಯ, ಕೌರವ ವೆಂಕಟೇಶ್‌ ಸಾಹಸ ಚಿತ್ರಕ್ಕಿದೆ. ಇದು ಕೋಮಲ್‌ ಎಂಟರ್‌ಪ್ರೆೃಸಸ್‌ ಕೊಡುಗೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada