Tere Ishk Mein X Review ; ಭಾವನಾತ್ಮಕ ಮೆರವಣಿಗೆ, ಧನುಷ್ ಅದ್ಭುತ, ಆದರೆ? ತೇರೆ ಇಷ್ಕ್ ಮೇ- ಪ್ರೇಕ್ಷಕರ ಅಭಿಪ್ರಾಯ

ಜನಸಾಮಾನ್ಯರನ್ನು ಪ್ರತಿನಿಧಿಸುವಂತಹ, ಅಪರೂಪದ ಕಥೆಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನವನ್ನ ಮೊದಲಿಂದ ಮಾಡಿಕೊಂಡು ಬಂದವರು ಧನುಷ್. ದಕ್ಷಿಣ ಭಾರತೀಯ ಚಿತ್ರರಂಗದ ಅದ್ಭುತ ನಟ. ಕಮರ್ಷಿಯಲ್ ಹೀರೋ ಆಗಿ ತನ್ನದೇ ಆದ ಸ್ಥಾನವನ್ನು ಕೂಡ ಹೊಂದಿರುವ ಧನುಷ್, ಬೇರೆ ಸೂಪರ್ ಸ್ಟಾರ್ ಗಳು ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುವ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಸಲೀಸಾಗಿ ನಟಿಸುತ್ತಾ ಬಂದವರು. ರಾಷ್ಟ್ರ ಪ್ರಶಸ್ತಿಯನ್ನೂ ಕೂಡ ಮುಡಿಗೇರಿಸಿಕೊಂಡವರು.

ಇಂಥಾ ಧನುಷ್ ಸದ್ಯ ನಾಲ್ಕು ವರ್ಷದ ನಂತರ ಹಿಂದಿ ಚಿತ್ರವನ್ನು ಮಾಡಿದ್ದಾರೆ. ಆ ಚಿತ್ರದ ಹೆಸರು ತೇರೆ ಇಷ್ಕ್‌ ಮೇ. ಆರಂಭದಿಂದಲೂ ಸದ್ದು ಮಾಡುತ್ತಾ, ಕುತೂಹಲ ಕೆರಳಿಸುತ್ತಾ ಬಂದ ಈ ಚಿತ್ರ ಸದ್ಯ ಈ ವಾರ ( ನವೆಂಬರ್ 28 ) ಬಿಡುಗಡೆಯಾಗಿದೆ. ಹಾಗಿದ್ದರೆ.. ''ತೇರೆ ಇಷ್ಕ್ ಮೇ'' ಚಿತ್ರವನ್ನು ನೋಡಿದ ಪ್ರೇಕ್ಷಕರು ಹೇಳಿದ್ದೇನು..? ಚಿತ್ರ ಹೇಗಿದೆ..? ಒಮ್ಮೆ ನೋಡಬಹುದಾ..? ಅಥವಾ ಪದೇ ಪದೇ ನೋಡುವಂತಹ ಸಿನಿಮಾನಾ..? ಎಂದು ತಿಳಿಯಲು ಮುಂದೆ ಓದಿ.

from-lack-of-grip-to-intense-romance-decoding-the-mixed-x-reviews-for-dhanushs-tere-ishk-mein

ಆನಂದ್ ರಾಯ್ ಸಿನಿಮಾ

ಆನಂದ್ ಎಲ್ ರಾಯ್ ಅವರ ಪರಿಪೂರ್ಣ ಶೋ ಇದು. ಬಿಗಿಯಾದ ಚಿತ್ರಕಥೆ.. ಗಾಢವಾದ ಹಿನ್ನೆಲೆ ಸಂಗೀತ.. ಮನಸಿಗೆ ಮುದ ನೀಡುವ ಹಾಡುಗಳು.. ಧನುಷ್ ಅವರ ಅದ್ಭುತ ಅಭಿನಯ. ಕೃತಿ ಸನೋನ್ ಮಾಡಿರುವ ಇಲ್ಲಿಯವರೆಗಿನ ಚಿತ್ರಗಳಲ್ಲಿ ಅತ್ಯುತ್ತಮವಾದ ಚಿತ್ರ ಇದು. ಎ.ಆರ್.ರೆಹಮಾನ್ ಮತ್ತು ಇರ್ಷಾದ್ ಕಮಿಲ್ ಅವರ ಕಥೆಯ ಆತ್ಮ ಎಂದು ಹೇಳಿರುವ ಒಬ್ಬರು ಚಿತ್ರಕ್ಕೆ ಮೂರು ಸ್ಟಾರ್‌ಗಳನ್ನು ನೀಡಿದ್ದಾರೆ.

ಓಕೆ ಓಕೆ ಎನ್ನುವಂತಹ ಸಿನಿಮಾ

ನನಗೆ ಮಿಶ್ರವಾದ ಅನುಭವ ನೀಡಿದ ಸಿನಿಮಾ ''ತೇರೆ ಇಷ್ಕ್ ಮೇ''. ಆನಂದ್ ಎಲ್ ರೈ ತಮ್ಮ ಇಷ್ಟದ ಅತಿರೇಕದ ಪ್ರೇಮಕಥೆಯಲ್ಲಿ ಮತ್ತೆ ಮುಳುಗಿದ್ದಾರೆ. ಆದರೆ ಈ ಬಾರಿ ಪ್ರೇಕ್ಷಕರ ಜೊತೆ ಕಥೆ ಸಂಪರ್ಕ ಸಾಧಿಸುವಲ್ಲಿ ವಿಫಲವಾಗಿದೆ. ಚಿತ್ರದಲ್ಲಿನ ಭಾವನಾತ್ಮಕ ಅಂಶಗಳಲ್ಲಿ ಸ್ಥಿರತೆ ಇಲ್ಲ. ಶಂಕರ್ ಪಾತ್ರದಲ್ಲಿ ಧನುಷ್ ಅವರ ಅಭಿನಯ ಅದ್ಭುತ. ಆದರೆ ಅವರ ಹಿಂದಿ ಉಚ್ಚಾರಣಾ ಸಮಸ್ಯೆಯಿಂದ ಕೆಲ ಸಾಲುಗಳು ಹೃದಯಕ್ಕೆ ನಾಟುವುದಿಲ್ಲ. ಕೃತಿ ಸನೋನ್ ಅವರ ಮುಕ್ತಿ ಪಾತ್ರ ಅತ್ಯುತ್ತಮವಾಗಿದೆ. ಊಹಿಸಬಹುದಾದ ಕಥೆ ಮತ್ತು ಆನಂದ್ ಎಲ್ ರೈ ಅವರ ಸಾಧಾರಣ ಕಥೆ ಹೇಳುವ ಶೈಲಿಯಿಂದ ಚಿತ್ರಕ್ಕೆ ಹಿನ್ನೆಡೆಯಾಗಿದೆ ಎಂದು ಹೇಳಿರುವ ಮತ್ತೊಬ್ಬರು ಚಿತ್ರಕ್ಕೆ 2.5 ಸ್ಟಾರ್‌ಗಳನ್ನು ನೀಡಿದ್ದಾರೆ.

ಪೈಸಾ ವಸೂಲ್ ಸಿನಿಮಾ

ಧನುಷ್ ಮತ್ತು ಕೃತಿ ಸನೋನ್ ಅವರ ಅಭಿನಯದ ಅದ್ಭುತವಾಗಿದೆ. ನೋವಿನ ಕಥೆಯನ್ನೊಂದಿರುವ ಅದ್ಭುತವಾದ ರೋಮ್ಯಾಂಟಿಕ್ ಸಿನಿಮಾ, ಪಕ್ಕಾ ಪೈಸಾ ವಸೂಲ್ ಚಿತ್ರ ಎಂದು ಹೇಳಿರುವ ಮತ್ತೊಬ್ಬರು ಚಿತ್ರಕ್ಕೆ ನಾಲ್ಕು ಸ್ಟಾರ್‌ಗಳನ್ನು ನೀಡಿದ್ದಾರೆ.

ಅಭಿನಯ ಅದ್ಭುತ

''ತೇರೆ ಇಷ್ಕ್ ಮೇ'' ಚಿತ್ರದಲ್ಲಿ ಧನುಷ್ ಅವರ ಅಭಿನಯ ಅದ್ಭುತವಾಗಿದೆ. ಕೃತಿ ಸನೋನ್ ಅವರ ಅಭಿನಯ ಕೂಡ ಸೊಗಸಾಗಿದೆ. ಈ ಚಿತ್ರದ ಮೂಲಕ ನಿರ್ದೇಶಕ ಆನಂದ್ ಎಲ್ ರೈ ತಮ್ಮ ಕಂ ಬ್ಯಾಕ್ ಮಾಡಿದ್ಧಾರೆ.

ಹೀಗೆ ಪ್ರೇಕ್ಷಕರ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯುತ್ತಿರುವ ''ತೇರೆ ಇಷ್ಕ್‌ ಮೇ'' ಚಿತ್ರಕ್ಕೆ ವಿಮರ್ಷಕರು ಮಾತ್ರ ಜೈ ಅಂದಿದ್ದಾರೆ. ಬಾಲಿವುಡ್‌ನ ಹಿರಿಯ ಟ್ರೇಡ್ ವಿಶ್ಲೇಷಕ ಮತ್ತು ವಿಮರ್ಷಕ ತರಣ್ ಆದರ್ಶ್ ಸೇರಿ ಹಲವರು ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಈ ಪ್ರೇಮಕಥೆಯನ್ನು ನೋಡಿ

ಧನುಷ್ ಮತ್ತು ಕೃತಿ ಸನೋನ್ ಈ ಚಿತ್ರದ ಎರಡು ಪ್ರಮುಖ ಆಧಾರಸ್ತಂಭ. ಸಂಬಂಧಗಳ ಸುತ್ತ ಸುತ್ತುವ ನಿರ್ದೇಶಕ ಆನಂದ್ ಎಲ್ ರೈ ಮತ್ತೊಮ್ಮೆ ತಮ್ಮ ನೆಚ್ಚಿನ ಪ್ರೇಮಕಥಾನಕ ಜೊತೆ ಮರಳಿದ್ದಾರೆ. ಈ ಚಿತ್ರದಲ್ಲಿ ಆನಂದ್ ಎಲ್ ರೈ ಅವರ ಸೂಕ್ಷ್ಮತೆ ಎದ್ದು ಕಾಣಿಸುತ್ತೆ. ಆದರೆ ನಿರೂಪಣೆ ಇನ್ನೂ ಬಿಗಿಯಾಗಬಹುದಿತ್ತು. ಅದರಲ್ಲಿಯೂ ಕೊನೆಯಲ್ಲಿ ಎಳೆದಂತೆ ಭಾಸವಾಗುತ್ತದೆ. ಇನ್ನಷ್ಟು ಪರಿಣಾಮಕಾರಿಯಾಗಿ ಚಿತ್ರವನ್ನು ತೋರಿಸುವ ಅವಶ್ಯಕತೆ ಇತ್ತು. ಧನುಷ್ ಅದ್ಭುತ. ಕೃತಿ ಸನೋನ್ ತಮ್ಮ ವೃತ್ತಿ ಜೀವನದ ಅತ್ಯಂತ ಶ್ರೇಷ್ಠ ಅಭಿನಯವನ್ನು ಇಲ್ಲಿ ಪ್ರದರ್ಶಿಸಿದ್ದಾರೆ. ಧನುಷ್ ಮತ್ತು ಕೃತಿ ಕೆಮೆಸ್ಟ್ರೀ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತರಣ್ ಆದರ್ಶ್ ತಮ್ಮ ವಿಮರ್ಶೆ ಹಂಚಿಕೊಂಡಿದ್ಧಾರೆ. ಚಿತ್ರಕ್ಕೆ ಮೂರುವರೆ ಸ್ಟಾರ್‌ಗಳನ್ನು ನೀಡಿದ್ದಾರೆ.

More from Filmibeat

English summary
Dhanush & Kriti Sanon's romance leaves fans emotional, giving Raanjhanaa flashbacks! See why X reviews call the film an intense ride with powerful high points.
Read more about: dhanush bollywood kriti sanon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X