Krishnam Pranaya Sakhi Review; ಕೃಷ್ಣನ ಪ್ರಣಯ ಪ್ರಸಂಗ ಹೇಗಿದೆ? ಗಣೇಶ್‌ಗೆ ಬ್ಲಾಕ್‌ಬಸ್ಟರ್ ಸಿನಿಮಾ ಸಿಗುತ್ತಾ?

By ಯಶವಂತ್

Rating:
3.0/5
Star Cast: Ganesh, Malavika Nair, Sharanya Shetty
Director: Srinivas Raju

'ಕೃಷ್ಣಂ ಪ್ರಣಯ ಸಖಿ' ಕನ್ನಡದ ಮತ್ತೊಂದು ಬಹು ನಿರೀಕ್ಷೆಯ ಸಿನಿಮಾ. ಟಿಪಿಕಲ್ ಗಣೇಶ್ ಸಿನಿಮಾ ನೋಡಬೇಕು ಅಂತ ಕಾದು ಕೂತಿದ್ದವರಿಗೆ ಇಷ್ಟ ಪಡುವಂತಹ ಸಿನಿಮಾವಿದು. ದೊಡ್ಡ ಸ್ಟಾರ್‌ ಕಾಸ್ಟ್ ಅನ್ನು ಹಾಕಿಕೊಂಡು ಶ್ರೀಮಂತ ಮನೆತನದ ಕಥೆಯನ್ನು ಹೇಳಿರುವ ಸಿನಿಮಾವೇ 'ಕೃಷ್ಣಂ ಪ್ರಣಯ ಸಖಿ'.

'ದಂಡುಪಾಳ್ಯ'ದಂತಹ ರಗಡ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಶ್ರೀನಿವಾಸ್ ರಾಜು ಈ ಬಾರಿ ಫ್ಯಾಮಿಲಿ ಸಬ್ಜೆಕ್ಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಫ್ಯಾಮಿಲಿ ಸ್ಟಾರ್ ಗಣೇಶ್ ಅವರನ್ನು ನಾಯಕನ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದು ವಿಶೇಷ. ಇನ್ನು ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ಇಬ್ಬರು ನಾಯಕಿಯರು ಇದ್ದಾರೆ.

Ganesh Malavika Nair movie Krishnam Pranaya Sakhi review in Kannada

ಸಾಧು ಕೋಕಿಲಾ, ರಂಗಾಯಣ ರಘು, ಶಶಿಕುಮಾರ್, ರಾಮಕೃಷ್ಣ, ಶ್ರುತಿ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಈ ಎಲ್ಲಾ ಕಾರಣಕ್ಕೆ ವೀಕ್ಷಕರಿಗೆ ಈ ಸಿನಿಮಾ ಇಷ್ಟ ಆಗಬಹುದಾ? ಕಥೆ-ಚಿತ್ರಕಥೆ ಹೇಗಿದೆ? ಯಾರ ಪರ್ಫಾಮೆನ್ಸ್ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಕೃಷ್ಣನ ಪ್ರಣಯ ಪ್ರಸಂಗವೇನು?

'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಶುರುವಾಗುವುದೇ ಗಣೇಶ್‌ಗೆ ಹುಡುಗಿ ಹುಡುಕುವ ಮೂಲಕ. ಯಾವುದೇ ಹುಡುಗಿಯನ್ನು ನೋಡಿದರೂ ಇಷ್ಟ ಆಗದ ಗಣೇಶ್‌ಗೆ ಮನೆಯಲ್ಲೇ ಇರುವ ಹುಡುಗಿ ಜೊತೆ ಒಂದು ಪ್ಲ್ಯಾಶ್ ಬ್ಯಾಕ್ ಇರುತ್ತೆ. ಶ್ರೀಮಂತ ಮನೆತನಕ್ಕೆ ಸೇರಿದವನಾಗಿದ್ದರೂ, ಮಧ್ಯಮ ವರ್ಗದ ಹುಡುಗಿಯನ್ನು ಇಷ್ಟ ಪಡುವ ಗಣೇಶ್ ಆಕೆಯ ಪ್ರೀತಿಯನ್ನು ಪಡೆದುಕೊಳ್ಳುವುದಕ್ಕೆ ಏನು ಮಾಡುತ್ತಾನೆ? ಅನ್ನೋದೇ ಸಿನಿಮಾ ತಿರುಳು.

ಕಥೆಯಲ್ಲಿರುವ ಟ್ವಿಸ್ಟ್ ಏನು?

ನಾಯಕಿ (ಮಾಳವಿಕಾ ನಾಯರ್) ಮನಸ್ಸನ್ನು ಗೆಲ್ಲುವ ಗಣೇಶ್ ಗ್ಯಾಪ್‌ನಲ್ಲಿ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅಷ್ಟೊತ್ತಿಗಾಗಲೇ ಎರಡನೇ ನಾಯಕಿಯ (ಶರಣ್ಯ ಶೆಟ್ಟಿ) ಎಂಟ್ರಿ ಆಗಿರುತ್ತೆ. ಇಲ್ಲಿಂದ ಕಥೆಗೆ ಒಂದಿಷ್ಟು ಟ್ವಿಸ್ಟ್ ಅಂಡ್ ಟರ್ನ್‌ಗಳು ಸಿಗುತ್ತಾ ಹೋಗುತ್ತವೆ. ಕೆಲವೊಂದು ಆಕ್ಷನ್ ಸೀನ್‌ಗಳು ಬಂದು ಹೋಗುತ್ತವೆ.

Ganesh Malavika Nair movie Krishnam Pranaya Sakhi review in Kannada

ಫಸ್ಟ್ ಹಾಫ್ ಹೇಗಿದೆ?

'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಫಸ್ಟ್ ಹಾಫ್‌ನಲ್ಲಿ ನಾಯಕ, ನಾಯಕಿಯ ಪರಿಚಯ. ಲವ್ ಸ್ಟೋರಿ ಆರಂಭ ಆಗುತ್ತೆ. ಆದರೆ, ಮೊದಲಾರ್ಧ ಕಥೆಯನ್ನು ಎಳೆದಿದ್ದಾರೆ ಅಂತ ಅನಿಸುತ್ತೆ. ಈ ಹಂತದಲ್ಲಿ ನಿರ್ದೇಶಕ ಶ್ರೀನಿವಾಸ ರಾಜು ಚಿತ್ರಕಥೆ ಮಾಡುವಾಗ ಮತ್ತೊಂದಿಷ್ಟು ಜಾಗರೂಕತೆ ವಹಿಸಬೇಕಿತ್ತು. ಫ್ಲ್ಯಾಶ್ ಬ್ಯಾಕ್ ಸೀನ್‌ಗಳು ಹಾಗೂ ಲೈವ್ ಸೀನ್‌ಗಳ್ಯಾವುದು ಅನ್ನೋ ಗೊಂದಲಕ್ಕೆ ಪ್ರೇಕ್ಷಕರು ಬೀಳುವ ಸಂದರ್ಭಗಳಿವೆ.

ಸೆಕೆಂಡ್ ಹಾಫ್ ಹೇಗಿದೆ?

ಸಿನಿಮಾದ ಸೆಕೆಂಡ್ ಹಾಫ್ ಇಷ್ಟ ಆಗುತ್ತೆ. ಕಥೆಯಲ್ಲಿ ಅದ್ಭುತವಾದದ್ದನ್ನು ನಿರೀಕ್ಷೆ ಮಾಡದೇ ಹೋದರೂ, ಸಾಧು ಕೋಕಿಲಾ ಹಾಗೂ ರಂಗಾಯಣ ರಘು ಕಾಮಿಡಿ ಸಖತ್ ಇಷ್ಟ ಆಗುತ್ತೆ. ಇವರಿಬ್ಬರು ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡುತ್ತಾರೆ. ಇವರಿಬ್ಬರು ಇಲ್ಲದೇ ಹೋಗಿದ್ದರೆ, ಸಿನಿಮಾ ಸೆಕೆಂಡ್‌ ಹಾಫ್‌ನಲ್ಲಿ ಬೋರ್ ಹೊಡೆಸುವ ಸಾಧ್ಯತೆಯಿತ್ತು.

ಸಿನಿಮಾದ ಪ್ಲಸ್ ಪಾಯಿಂಟ್ ಏನು?

ಬಹಳ ದಿನಗಳ ಬಳಿಕ ಕುಟುಂಬದವರೆಲ್ಲರೂ ಜೊತೆಯಾಗಿ ಹೋಗಿ ಸಿನಿಮಾ ನೋಡಬಹುದು. ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಹಾಡುಗಳು ಚೆನ್ನಾಗಿವೆ. ಕಾಮಿಡಿ ಪ್ರಿಯರಿಗೆ ಈ ಸಿನಿಮಾ ಇಷ್ಟ ಆಗುತ್ತೆ. ಅಲ್ಲದೆ ಗೋಲ್ಡನ್ ಸ್ಟಾರ್ ಗಣೇಶ್ ಮಿಸ್ ಮಾಡಿಕೊಂಡವರಿಗೆ ಈ ಸಿನಿಮಾ ಲೈಕ್ ಆಗುತ್ತೆ. ಗಣೇಶ್, ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ ಪರ್ಫಾಮೆನ್ಸ್ ಚೆನ್ನಾಗಿದೆ. ಸಾಧು ಕೋಕಿಲಾ, ರಂಗಯಾಣ ರಘು ಸಿನಿಮಾದ ಹೈಲೈಟ್.

ಸಿನಿಮಾದ ಮೈನಸ್ ಪಾಯಿಂಟ್ ಏನು?

ಶಶಿಕುಮಾರ್, ಶಿವಧ್ವಜ್, ರಾಮಕೃಷ್ಣ, ಶ್ರುತಿ ಅಂತಹ ದೊಡ್ಡ ಸ್ಟಾರ್‌ ಕಾಸ್ಟ್ ಇದ್ದಾರೆ. ಅವರನ್ನು ಈ ಸಿನಿಮಾ ಹೆಚ್ಚಾಗಿ ಬಳಸಿಕೊಂಡಿಲ್ಲ. ಫಸ್ಟ್‌ ಹಾಫ್‌ನಲ್ಲಿ ಹಿರಿಯ ನಟ ರಾಮಕೃಷ್ಣ ಅವರಿಗೆ ಡೈಲಾಗ್‌ಗಳನ್ನೇ ಕೊಟ್ಟಿಲ್ಲ. ಹಿರಿಯ ಕಲಾವಿದರನ್ನು ಸಮರ್ಥವಾಗಿ ಬಳಸಿಕೊಳ್ಳದೆ ಇರುವುದೇ ಮೈನಸ್ ಪಾಯಿಂಟ್. ಬ್ಯಾಕ್ ಟು ಬ್ಯಾಕ್ ಹಾಡುಗಳು ಬಂದಾ ಕಿರಿ ಕಿರಿ ಆಗುತ್ತೆ. ಇವೆಲ್ಲವನ್ನೂ ಹೊರತು ಪಡಿಸಿದರೆ, ಒಮ್ಮೆ ಸಿನಿಮಾವನ್ನು ಕುಟುಂಬದೊಂದಿಗೆ ನೋಡಬಹುದು.

More from Filmibeat

English summary
Ganesh, Malavika Nair movie Krishnam Pranaya Sakhi review:
Read more about: ganesh review filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X