ವಿಮರ್ಶೆ: ಗಣೇಶ 'ಪಟಾಕಿ'ಯಲ್ಲಿ ನಗುವಿನ ಸದ್ದೇ ಹೆಚ್ಚು

''ಪೊಲೀಸ್ ಅಂದ್ರೆ ಭಯ.. ಪೊಲೀಸ್ ಅಂದ್ರೆ ಪವರ್.. ಪೊಲೀಸ್ ಅಂದ್ರೆ ಪೌರುಷ..'' - ಖಾಕಿ ಧರಿಸಿರುವ ಎ.ಸಿ.ಪಿ ಸೂರ್ಯ (ಗಣೇಶ್) ಬಾಯಲ್ಲಿ ಇಂತಹ ಬೆಂಕಿ ಉಂಡೆಗಳು ಹೊರಬರುತ್ತಿದ್ದರೆ ಗೋಲ್ಡನ್ ಸ್ಟಾರ್ ಫ್ಯಾನ್ಸ್ ಶಿಳ್ಳೆ ಹೊಡೆಯುವುದರಲ್ಲಿಯೇ ಬಿಜಿ. ಅಷ್ಟರಮಟ್ಟಿಗೆ 'ಜಿ ಸ್ಟಾರ್' ಅಭಿಮಾನಿಗಳಿಗೆ 'ಪಟಾಕಿ' ಹಬ್ಬದ ಸಂಭ್ರಮ ಬಲು ಜೋರು.

Rating:
3.5/5
Star Cast: ಗಣೇಶ್, ರನ್ಯಾ ರಾವ್, ಸಾಯಿ ಕುಮಾರ್, ಸಾಧು ಕೋಕಿಲ
Director: ಮಂಜು ಸ್ವರಾಜ್

'ಪಟಾಕಿ' ಕಥಾಹಂದರ

'ಪಟಾಕಿ' ಕಥಾಹಂದರ

ಟಾಲಿವುಡ್ ನಲ್ಲಿ ಭರ್ಜರಿಯಾಗಿ ಸದ್ದು ಮಾಡಿದ್ದ 'ಪಟಾಸ್' ಚಿತ್ರದ ರೀಮೇಕ್ ಈ 'ಪಟಾಕಿ'. ಆದರೂ, 'ಸ್ಯಾಂಡಲ್ ವುಡ್' ನೆಲಕ್ಕೆ ಹೊಂದಾಣಿಕೆ ಆಗುವಂತೆ ಚಿತ್ರವನ್ನ ನಿರ್ದೇಶನ ಮಾಡುವಲ್ಲಿ ಡೈರೆಕ್ಟರ್ ಮಂಜು ಸ್ವರಾಜ್ ಯಶಸ್ವಿ ಆಗಿದ್ದಾರೆ.

ಇಬ್ಬರು ಪೊಲೀಸ್ ಸುತ್ತ ಸುತ್ತುವ ಕಥೆ

ಇಬ್ಬರು ಪೊಲೀಸ್ ಸುತ್ತ ಸುತ್ತುವ ಕಥೆ

ಜನ ಹಿತಕ್ಕಾಗಿ ಕಾನೂನು ಕಾಪಾಡುವ ಬದಲು, ವೈಯುಕ್ತಿಕ ಸ್ವಾರ್ಥಕ್ಕಾಗಿ ಭ್ರಷ್ಟಾಚಾರಕ್ಕೆ ಇಳಿಯುವ ಎ.ಸಿ.ಪಿ ಸೂರ್ಯ (ಗಣೇಶ್) ಕಡೆಗೆ ಪ್ರಾಮಾಣಿಕ ಅಧಿಕಾರಿಯಾಗಿ ಬದಲಾಗಿ ದುಷ್ಟರ ಬುಡಕ್ಕೆ ಹೇಗೆ 'ಪಟಾಕಿ' ಅಂಟಿಸಿ ಭಸ್ಮ ಮಾಡುತ್ತಾರೆ ಎಂಬುದೇ ಚಿತ್ರದ ಕಥಾಹಂದರ. ಇದರ ಮಧ್ಯೆ ಅಲ್ಪ ಫ್ಲ್ಯಾಶ್ ಬ್ಯಾಕ್, ಸ್ವಲ್ಪ ಫೈಟ್, ಸ್ವಲ್ಪ ಲವ್, ಬೇಜಾನ್ ಕಾಮಿಡಿ 'ಪಟಾಕಿ' ಚಿತ್ರದಲ್ಲಿ ಇದೆ.

ಗಣೇಶ್ ಖಾಕಿ ಖದರ್

ಗಣೇಶ್ ಖಾಕಿ ಖದರ್

ಮೊಟ್ಟ ಮೊದಲ ಬಾರಿಗೆ ಖಾಕಿ ಧರಿಸಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯ ಚೆನ್ನಾಗಿದೆ. ಆಕ್ಷನ್ ಸನ್ನಿವೇಶಗಳಲ್ಲಿ ನೀರು ಕುಡಿದಷ್ಟೇ ಸಲೀಸಾಗಿ ಗಣೇಶ್ ಅಭಿನಯಿಸಿದ್ದಾರೆ. ಇನ್ನೂ ಗಣೇಶ್ ರವರ ಕಾಮಿಡಿ ಟೈಮಿಂಗ್ ಬಗ್ಗೆ ತುಟಿ ಎರಡು ಮಾಡುವ ಹಾಗೇ ಇಲ್ಲ.

ರನ್ಯ ರಾವ್ ಅಭಿನಯ ಹೇಗಿದೆ.?

ರನ್ಯ ರಾವ್ ಅಭಿನಯ ಹೇಗಿದೆ.?

'ಪಟಾಕಿ' ಚಿತ್ರದಲ್ಲಿ ಗಣೇಶ್ ಮುಂದೆ ರನ್ಯ ರಾವ್ ಸಪ್ಪೆ. ಆಕ್ಟಿಂಗ್ ಮತ್ತು ಡ್ಯಾನ್ಸ್... ಎರಡರಲ್ಲೂ ರನ್ಯ ರಾವ್ ಪಳಗಬೇಕು.

ಸಾಯಿಕುಮಾರ್ 'ಅಗ್ನಿ'

ಸಾಯಿಕುಮಾರ್ 'ಅಗ್ನಿ'

'ಡಿಜಿಪಿ ಅಗ್ನಿ'ಯಾಗಿ ಸಾಯಿ ಕುಮಾರ್ ಅಭಿನಯ ಎಂದಿನಂತೆ ಖಡಕ್ ಆಗಿದೆ.

ನಕ್ಕು-ನಲಿಸುವ ಸಾಧುಕೋಕಿಲ

ನಕ್ಕು-ನಲಿಸುವ ಸಾಧುಕೋಕಿಲ

'ಪಟಾಕಿ' ಚಿತ್ರದಲ್ಲಿ ಮಂಗಳಮುಖಿ ಆಗಿ ನಟಿಸಿರುವ ಸಾಧು ಕೋಕಿಲ ಅಭಿನಯಕ್ಕೆ ಮುಲಾಜಿಲ್ದೆ ಫುಲ್ ಮಾರ್ಕ್ಸ್ ನೀಡಬಹುದು. ಸಾಧು ಕೋಕಿಲ ಸ್ಕ್ರೀನ್ ಮೇಲೆ ಬಂದರೆ ಸಾಕು, ಪ್ರೇಕ್ಷಕರು ನಗೆಗಡಲಿನಲ್ಲಿ ತೇಲುತ್ತಾರೆ. ಗಣೇಶ್ ಮತ್ತು ಸಾಧು ಕೋಕಿಲ 'ಕೆಮಿಸ್ಟ್ರಿ' ಚಿತ್ರದಲ್ಲಿ ಚೆನ್ನಾಗಿ ವರ್ಕೌಟ್ ಆಗಿದೆ.

'ಕೇಡಿ' ಆಶೀಶ್ ವಿದ್ಯಾರ್ಥಿ

'ಕೇಡಿ' ಆಶೀಶ್ ವಿದ್ಯಾರ್ಥಿ

ವಿಲನ್ 'ರುದ್ರ ಪ್ರತಾಪ್' ಪಾತ್ರದಲ್ಲಿ ಆಶೀಶ್ ವಿದ್ಯಾರ್ಥಿ ಗಮನ ಸೆಳೆಯುತ್ತಾರೆ.

ಕಾಮಿಡಿ ಹೈಲೆಟ್

ಕಾಮಿಡಿ ಹೈಲೆಟ್

'ಪಟಾಕಿ' ಚಿತ್ರದಲ್ಲಿ ಕಾಮಿಡಿ ಹೈಲೈಟ್. ಹಾಗೂ ಅದೇ ಪ್ಲಸ್ ಪಾಯಿಂಟ್. ರವಿಚಂದ್ರನ್ ಹಾಡುಗಳು... ಅದಕ್ಕೆ ಸಾಧು ಕೋಕಿಲ ಹಾಗೂ ಗಣೇಶ್ ಡ್ಯುಯೆಟ್... 'ಬಸಂತಿ' ಬಾಯಲ್ಲಿ 'ಮುಂಗಾರು ಮಳೆ' ಡೈಲಾಗ್ ಬರ್ತಿದ್ರೆ, ಪ್ರೇಕ್ಷಕರು 'ಕಿಸಕ್' ಅಂತ ಹಲ್ಲು ಬಿಡುತ್ತಾರೆ.

ಲಾಜಿಕ್ ಇಲ್ಲ ಓನ್ಲಿ ಮ್ಯಾಜಿಕ್

ಲಾಜಿಕ್ ಇಲ್ಲ ಓನ್ಲಿ ಮ್ಯಾಜಿಕ್

ಪೊಲೀಸ್ ಅಧಿಕಾರಿ ಸುತ್ತ ಹೆಣೆದಿರುವ ಕಥೆ ಆದರೂ, ಸಿನಿಮಾದಲ್ಲಿ ಲಾಜಿಕ್ ಅಂಶಗಳು ಕಮ್ಮಿ. ಲಾಜಿಕ್ ಹುಡುಕದೆ ಮ್ಯಾಜಿಕ್ ನೋಡಿದರೆ, ಮನರಂಜನೆ ಸಿಗಬಹುದು.

ಅರ್ಜುನ್ ಜನ್ಯ ಸಂಗೀತ ಹೇಗಿದೆ.?

ಅರ್ಜುನ್ ಜನ್ಯ ಸಂಗೀತ ಹೇಗಿದೆ.?

ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ 'ಪಟಾಕಿ' ಹಾಡುಗಳ ಪೈಕಿ ಒಂದು ಹಾಡು ಖುಷಿ ಕೊಡುತ್ತೆ. ಬ್ಯಾಕ್ ಗ್ರೌಂಡ್ ಸ್ಕೋರ್ ಕಥೆಗೆ ಪೂರಕವಾಗಿದೆ.

'ಪಟಾಸ್' ನೋಡಿಲ್ಲ ಅಂದ್ರೆ...

'ಪಟಾಸ್' ನೋಡಿಲ್ಲ ಅಂದ್ರೆ...

ಹೇಳಿ ಕೇಳಿ 'ಪಟಾಕಿ' ರೀಮೇಕ್ ಸಿನಿಮಾ, ತೆಲುಗಿನ 'ಪಟಾಸ್' ಚಿತ್ರವನ್ನ ನೀವು ನೋಡಿಲ್ಲ ಅಂದ್ರೆ, 'ಪಟಾಕಿ' ಚಿತ್ರವನ್ನ ಒಮ್ಮೆ ನೋಡಬಹುದು.

ಮನರಂಜನೆ ಬಯಸುವವರು...

ಮನರಂಜನೆ ಬಯಸುವವರು...

ಆಕ್ಷನ್, ಕಾಮಿಡಿ ಮತ್ತು ರೋಮ್ಯಾನ್ಸ್ ಮಿಶ್ರಣ ಹೊಂದಿರುವ ಪಟಾಕಿ, ಗಣೇಶ್ ಅಭಿಮಾನಿಗಳು ಬಯಸುವ ಕಮರ್ಶಿಯಲ್ ಚಿತ್ರ. ಬರೀ ಮನರಂಜನೆ ಬಯಸುವವರು 'ಪಟಾಕಿ' ಚಿತ್ರವನ್ನ ಒಂದು ಬಾರಿ ನೋಡಬಹುದು.

More from Filmibeat

English summary
Kannada Actor Ganesh starrer 'Pataki' has hit the screens today (May 26th). The movie is the treat for 'Golden Star; fans. Here is the movie review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X