»   » ವಿಮರ್ಶೆ: ಜಾಣನ 'Memory' ಪುರಾಣ 'ಸರಳ' ಸುಂದರ

ವಿಮರ್ಶೆ: ಜಾಣನ 'Memory' ಪುರಾಣ 'ಸರಳ' ಸುಂದರ

Posted By:
Subscribe to Filmibeat Kannada

ಸುಂದರಾಂಗ ಜಾಣ....ಹೆಸರಿಗೆ ತಕ್ಕಂತೆ ಇವನು ಜಾಣ. ಆದ್ರೆ, ಮರೆಯುವ ಚಟ ಇವನ ವೀಕ್ನೆಸ್. ಪ್ರೀತಿಸುವ ಹುಡುಗಿಯನ್ನ ಮದುವೆಯಾಗಲು 'ಜಾಣ'ನಿಗೆ ಶತ್ರುವಾಗಿ ಕಾಡುವುದೇ ಈ ಮರೆವು. ಹೀಗೆ ತನ್ನ ವೀಕ್ನೆಸ್ ಸುತ್ತ ನಡೆಯುವ ಸನ್ನಿವೇಶಗಳೇ ಇಡೀ ಸಿನಿಮಾ. ಪೂರ್ತಿ ಮನರಂಜನಾತ್ಮಕವಾಗಿರುವ ಜಾಣನ ಸುತ್ತ ಒಂದು ನೋಟ.


Rating:
3.0/5

ಚಿತ್ರ : ಸುಂದರಾಂಗ ಜಾಣ
ನಿರ್ದೇಶಕ : ರಮೇಶ್ ಅರವಿಂದ್
ನಿರ್ಮಾಪಕ : ರಾಕ್ ಲೈನ್ ವೆಂಕಟೇಶ್ ಮತ್ತು ಅಲ್ಲು ಅರವಿಂದ್
ಸಂಗೀತ ನಿರ್ದೇಶನ : ಅಜನೀಶ್ ಲೋಕನಾಥ್
ಕಥೆ: ಮಾರುತಿ ದಸರಿ
ಛಾಯಗ್ರಹಣ: ಮನೋಹರ್ ಜೋಶಿ
ತಾರಾಗಣ : ಗಣೇಶ್, ಶಾನ್ವಿ ಶ್ರೀವಸ್ತವ್, ದೇವರಾಜ್, ರಂಗಾಯಣ ರಘು, ರವಿಶಂಕರ್ ಗೌಡ, ಸಾಧುಕೋಕಿಲಾ ಮತ್ತು ಇತರರು
ಬಿಡುಗಡೆ : ಡಿಸೆಂಬರ್ 23, 2016


ಕಥಾಹಂದರ

ಲಕ್ಷ್ಮಿ ಪ್ರಸಾದ್ ಅಲಿಯಾಸ್ ಲಕ್ಕಿ (ಗಣೇಶ್) ಶಾರ್ಟ್ ಟೈಮ್ ಮೆಮೋರಿ ಲಾಸ್ ವ್ಯಕ್ತಿ. ತಾನು ಒಂದು ಕೆಲಸ ಮಾಡುವಾಗ, ಯಾರಾದರೂ ಇನ್ನೊಂದು ಕೆಲಸ ಹೇಳಿದ್ರೆ ಮೊದಲ ಕೆಲಸವನ್ನ ಮರೆತುಹೋಗುವುದು ಇವನ ವೀಕ್ನೆಸ್. ಇಂತಹ ವ್ಯಕ್ತಿಗೆ ಹೆಣ್ಣು ಕೊಡಲು ಯಾರು ಮುಂದೆ ಬರಲ್ಲ. ಆದ್ರೆ, ಇವನ ಈ ಮರೆಯುವ ವೀಕ್ನೆಸ್ ಗೊತ್ತಿಲ್ಲದ ನಂದನ (ಶಾನ್ವಿ ಶ್ರೀವಸ್ತವ್) ಲಕ್ಕಿಯ ಮೋಡಿಗೆ ಸೆರೆಯಾಗುತ್ತಾಳೆ. ಆದ್ರೆ, ನಂದನ ತಂದೆ (ದೇವರಾಜ್) ಅವರಿಗೆ ಈ ವಿಷ್ಯ ತಿಳಿದು ಅವನ ಲವ್ವಿಗೆ ಬ್ರೇಕ್ ಹಾಕುತ್ತಾರೆ. ಅಮೇಲೆ ಏನಾಗುತ್ತೆ ಎಂಬುದು ಕುತೂಹಲ.


'ಜಾಣ'ನ ಎಡವಟ್ಟು ಸಖತ್ ಕಿಕ್

ಒಬ್ಬ ಮರೆಯುವ ವ್ಯಕ್ತಿ ಸಮಾಜದಲ್ಲಿ ಹೇಗೆಲ್ಲ ಇರಬಹುದು ಎಂದು 'ಸುಂದರಾಂಗ ಜಾಣ' ತೋರಿಸುತ್ತದೆ. ಇಲ್ಲಿ ಲಕ್ಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗಣೇಶ್ ಅವರದ್ದು ಇಂತಹದ್ದೆ ಪಾತ್ರ. ತನ್ನ ಮರೆಯುವ ವೀಕ್ನೆಸ್ ನಿಂದ ಮಾಡುವ ಎಡವಟ್ಟು ಒಂದು ಎರಡ!. ತನಗೆ ಮೆಮೊರಿ ಲಾಸ್ ಎಂದು ತೋರಿಸಿಕೊಳ್ಳಲಾಗದೆ ಪರದಾಡುವ ಪರಿ ನೋಡಲು ಮಜಾವಾಗಿದೆ. ಪ್ರಸವ ವೇದನೆಯಿಂದ ನರುಳುತ್ತಿದ್ದ ಗರ್ಭೀಣೆ ಹೆಂಗಸನ್ನ ಮಧ್ಯರಾತ್ರಿ ಆಸ್ಪತ್ರಗೆ ಕರೆದುಕೊಂಡು ಹೋಗುವ ಲಕ್ಕಿ, ರಸ್ತೆ ಮಧ್ಯ ಯಾರೋ ಒಬ್ಬ ಮಾತನಾಡಿಸಿದ ತಕ್ಷಣ, ಗರ್ಭೀಣೆ ಹೆಂಗಸಿನ ಗಂಭೀರ ಸ್ಥಿತಿಯನ್ನ ಮರೆತು ಟೀ ಕುಡಿದು ನಿಲ್ಲುವ ಮಟ್ಟಿಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಗಣೇಶ್.


ನಿಧಾನಗತಿಯ ಮೊದಲಾರ್ಧ

'ಸುಂದರಾಂಗ ಜಾಣ' ಚಿತ್ರದ ಮೊದಲಾರ್ಧ ಮನರಂಜನಾತ್ಮಕವಾಗಿದ್ದರೂ ನಿಧಾನಗತಿಯ ಚಿತ್ರಕಥೆ ಪ್ರೇಕ್ಷಕರಿಗೆ ಸಾಕು ಎನಿಸುತ್ತದೆ. ಫಸ್ಟ್ ಹಾಫ್ ಪೂರ್ತಿ ಗಣೇಶ್ ಅವರ ಮರೆಯುವ ಚಟವನ್ನ ವೈಭವಿಕರಿಸಲಾಗಿದೆ. ಮಧ್ಯಂತರದವರೆಗೂ ಲಕ್ಕಿ, ಒಬ್ಬ ಶಾರ್ಟ್ ಟೈಮ್ ಮೆಮೊರಿ ಲಾಸ್ ವ್ಯಕ್ತಿ ಎಂಬುದನ್ನ ಪ್ರೇಕ್ಷಕರಿಗೆ ಪದೇ ಪದೇ ಹೇಳುವ ಪ್ರಯತ್ನವಾಗಿದೆ.


ಪ್ರೇಕ್ಷಕರನ್ನ ಹಿಡಿದಿಡುವ ಸೆಕೆಂಡ್ ಹಾಫ್

'ಸುಂದರಾಂಗ ಜಾಣ' ಚಿತ್ರದಲ್ಲಿ ನಿಜವಾದ ಜೋಶ್ ಬರುವುದೇ ಚಿತ್ರದ ಸೆಕೆಂಡ್ ಹಾಫ್ ನಲ್ಲಿ. ಮೊದಲಿನಿಂದಲೂ ಪ್ರೇಕ್ಷಕರನ್ನ ನಗಿಸುವ ಪ್ರಯತ್ನ ಮಾಡಿದ್ದರೂ, ಮೊದಲಾರ್ಧದಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಆದ್ರೆ, ಚಿತ್ರದ ದ್ವಿತಿಯಾರ್ಧ ನೋಡುಗರಿಗೆ ಸ್ವಲ್ಪ ನಗು ಜೊತೆಗೆ ಕುತೂಹಲವು ಎನಿಸುತ್ತದೆ.


ಗಣೇಶ್ ತುಂಟಾಟ ಚೆಂದ

'ಸುಂದರಾಂಗ ಜಾಣ' ಶೀರ್ಷಿಕೆಗೆ ತಕ್ಕಂತೆ ಗಣೇಶ್ ಅವರು ಸುಂದರವಾಗಿ ಕಾಣಿಸಿಕೊಂಡಿದ್ದು, ಜಾಣನಾಗಿ ಅಭಿನಯಿಸಿದ್ದಾರೆ. ಸ್ಟೈಲಿಶ್ ಲುಕ್ ಗಳಲ್ಲಿ ಗಣೇಶ್ ಮೋಡಿ ಮಾಡುತ್ತಾರೆ. ತುಂಟಾಟಗಳ ಮೂಲಕ ಗಮನ ಸೆಳೆಯುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಈ ಚಿತ್ರದಲ್ಲಿ ಗಣೇಶ್ ಅವರನ್ನ 'ಕೂಲ್' ಆಗಿ ನೋಡಬಹುದು.


ಶಾನ್ವಿ ಶ್ರೀವಸ್ತವ್ ಅಭಿನಯ ಹೇಗಿದೆ?

ಮೊದಲ ಭಾರಿಗೆ ಗಣೇಶ್ ಜೊತೆಯಲ್ಲಿ ಕಾಣಿಸಿಕೊಂಡಿರುವ ಶಾನ್ವಿ ಶ್ರೀವಸ್ತವ್, ತಮ್ಮ ಅಭಿನಯದ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಲವಲವಿಕೆಯಿಂದ ತೆರೆಮೇಲೆ ಬರುವ ನಂದನ ಪಾತ್ರ ನೋಡುಗರಿಗೆ ರೊಮ್ಯಾಂಟಿಕ್ ಫೀಲ್ ಕೊಡುತ್ತೆ.


ಕಾಮಿಡಿ ಕಲಾವಿದರ ಶೋ

ಸುಂದರಾಂಗ ಜಾಣನ ಒಂದು ಬಲ ಎಂದರೆ ದೊಡ್ಡ ತಾರಬಳಗ. ಇದೊಂದು ಕಾಮಿಡಿ ಎಂಟರ್ ಟೈನರ್ ಚಿತ್ರವಾಗಿದ್ದು, ನಾಯಕನ ಪಾತ್ರವೇ ಹಾಸ್ಯಮಯವಾಗಿರುತ್ತೆ. ಆದರೂ, ಗಣೇಶ್ ಅವರ ಜೊತೆಗೆ ರಂಗಾಯಣ ರಘು, ಸಾಧುಕೋಕಿಲಾ, ರವಿಶಂಕರ್ ಗೌಡ, ಮತ್ತಷ್ಟು ಕಾಮಿಡಿ ಕಿಕ್ ನೀಡುತ್ತಾರೆ.


ಉಳಿದವರು ಅಭಿನಯ..

ಉಳಿದಂತೆ ಚಿತ್ರದಲ್ಲಿ ಡೈನಾಮಿಕ್ ಹೀರೋ ದೇವರಾಜ್ ಮುಖ್ಯ ಪಾತ್ರವನ್ನ ನಿರ್ವಹಿಸಿದ್ದಾರೆ. ವಸಿಷ್ಠ ಸಿಂಹ ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸಿಹಿಕಹಿ ಚಂದ್ರು, ವೀಣಾ ಸುಂದರ್ ಸೇರಿದಂತೆ ಹಲವು ಕಲಾವಿದರು ಸುಂದರಾಂಗ ಜಾಣನಿಗೆ ಸಾಥ್ ಕೊಟ್ಟಿದ್ದಾರೆ.


ಸಂಗೀತ ಹೇಗಿದೆ?

'ಸುಂದರಾಂಗ ಜಾಣ' ಚಿತ್ರದಲ್ಲಿ ಹಿನ್ನಲೆ ಸಂಗೀತ ವರ್ಕೌಟ್ ಆಗಿದೆ. ಆದ್ರೆ, ಚಿತ್ರದ ಹಾಡುಗಳು ಅಷ್ಟಾಗಿ ಪರಿಣಾಮಕಾರಿಯಾಗಿಲ್ಲ. ಯಾವೊಂದು ಹಾಡು ಕೂಡ ಕೇಳುಗರ ಕಿವಿಯಲ್ಲಿ ಕೂರಲ್ಲ.


ರಮೇಶ್ ಅರವಿಂದ್ ನಿರ್ದೇಶನ ಹೇಗಿದೆ?

ರಮೇಶ್ ಅರವಿಂದ್ ಅವರು ಆಕ್ಷನ್ ಕಟ್ ಹೇಳಿದ್ದ ಈ ಹಿಂದಿನ ಸಿನಿಮಾಗಳಂತೆ ಈ ಚಿತ್ರವನ್ನ ಪೂರ್ತಿ ಮನರಂಜನಾತ್ಮಕ ಪ್ರೆಸೆಂಟ್ ಮಾಡಿದ್ದಾರೆ. ರಮೇಶ್ ಅವರ ನಿರ್ದೇಶನದ ಶೈಲಿಯಲ್ಲಿ ಬದಲಾವಣೆ ಇಲ್ಲ. ಇನ್ನೂ ರಾಕ್ ಲೈನ್ ವೆಂಕಟೇಶ್ ಹಾಗೂ ಅಲ್ಲು ಅರವಿಂದ್ ನಿರ್ಮಾಣ ಅದ್ದೂರಿಯಾಗಿದೆ.


ಫೈನಲ್ ಸ್ಟೇಟ್ ಮೆಂಟ್

ಜನರ ನಿರೀಕ್ಷೆಯನ್ನ 'ಸುಂದರಾಂಗ ಜಾಣ' ತಲುಪುವಲ್ಲಿ ಸ್ವಲ್ಪ ಹಿನ್ನೆಡೆಯಾಗಿದೆ. ಆದ್ರೆ, ದೊಡ್ಡ ಸ್ಟಾರ್ ಗಳ ಸಮ್ಮಿಲನನಿಂದ ಮೂಡಿಬಂದಿರುವ ಈ ಚಿತ್ರ ಅದ್ದೂರಿಯಾಗಿದ್ದು, ಗಣೇಶ್, ಸಾಧುಕೋಕಿಲಾ, ರಂಗಾಯಣ ರಘು ಅವರು ಕಾಮಿಡಿ ಜುಗಲ್ ಬಂದಿ ಕಂಪ್ಲೀಟ್ ಎಂಟರ್ ಟೈನಿಂಗ್ ಆಗಿದೆ. ಈ ವಾರ ಬಿಡುಗಡೆಯಾದ ಚಿತ್ರಗಳ ಪೈಕಿ 'ಜಾಣನ 'Memory' ಪುರಾಣ 'ಸರಳ' ಸುಂದರ'


English summary
Golden Star Ganesh starrer Kannada Movie 'Sundaranga Jaana' has hit the screens today (December 23rd). The Movie is Directed By Ramesh Aravind. Here is the complete Review of 'Sundaranga Jaana'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada