Garadi Review: ದೇಸಿ ಕಥೆಗೆ ಭಟ್ರು ಮ್ಯಾಜಿಕ್.. ಹರಿಕೃಷ್ಣ ಮ್ಯೂಸಿಕ್ ಮಿಸ್ಸಿಂಗ್.. ದರ್ಶನ್ ಅಖಾಡಕ್ಕೆ ಇಳಿದ್ಮೇಲೆ ಆಟ!
ಯೋಗರಾಜ್ ಭಟ್ ನಿರ್ದೇಶಿಸಿದ 'ಗರಡಿ' ಪಕ್ಕಾ ದೇಸಿ ಸಿನಿಮಾ. 'ಗರಡಿ' ಮನೆಯ ಸುತ್ತಮುತ್ತವೇ ಸಾಗುವ ಕಥೆ. ಬಹಳ ದಿನಗಳ ಬಳಿಕ ಯಶಸ್ ಸೂರ್ಯ ಮತ್ತೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಸೋನಾಲ್ ಮಾಂಟೇರೋ ಭಟ್ಟರ ಸಿನಿಮಾಗೆ ಎರಡನೇ ಬಾರಿ ನಾಯಕಿಯಾಗಿದ್ದಾರೆ.
ಎಲ್ಲಕ್ಕಿಂತ ಹೈಲೈಟ್ ಅಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಈ 'ಗರಡಿ' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಹಾಗೇ ಕನ್ನಡದ ಕೌರವ ಬಿ ಸಿ ಪಾಟೀಲ್ ಪೈಲ್ವಾನ್ ಗುರುವಾಗಿ ಕಾಣಿಸಿಕೊಂಡಿದ್ದಾರೆ.

ಯೋಗರಾಜ್ ಭಟ್ ತಮ್ಮ ಶೈಲಿಯ ಸಿನಿಮಾಗಳನ್ನು ಪಕ್ಕಕ್ಕಿಟ್ಟು ಮಾಸ್ ಸಿನಿಮಾಗೆ ಕೈ ಹಾಕಿದ್ದಾರೆ. ಹೀಗಾಗಿ ಸಾಕಷ್ಟು 'ಗರಡಿ' ಒಂದಿಷ್ಟು ಕುತೂಹಲವನ್ನು ಕೆರಳಿಸಿರೋದಂತೂ ನಿಜ. ಅಸಲಿಗೆ ಈ ಸಿನಿಮಾ ಹೇಗಿದೆ? ಸಿನಿಮಾದ ಹೈಲೈಟ್ ಏನು? ಫ್ಲಸ್ ಏನು? ಮೈನಸ್ ಏನು? 'ಗರಡಿ' ವಿಮರ್ಶೆ ತಿಳಿಯಲು ಮುಂದೆ ಓದಿ..
'ಗರಡಿ' ಮನೆಯಲ್ಲಿ ಏನು ನಡೆಯುತ್ತೆ?
ಯೋಗರಾಜ್ ಭಟ್ ತಮ್ಮದೇ ಜಾನರ್ ಸಿನಿಮಾಗೆ ಬ್ರೇಕ್ ಕೊಟ್ಟು ಆಕ್ಷನ್ ಸಿನಿಮಾ ಮಾಡಿದ್ದಾರೆ. 'ಗರಡಿ' ನೋಡಿದ ಮೇಲೆ ಅದು ಹೌದು ಅಂತ ಅನಿಸುತ್ತೆ. ಭಟ್ಟರ ಮಾಸ್ ಹೇಗಿದೆ ಅನ್ನೋದನ್ನ ಆ ಮೇಲೆ ನೋಡೋಣ. ಅದಕ್ಕಿಂತ ಮೊದಲು 'ಗರಡಿ' ಮನೆಯಲ್ಲಿ ಏನು ನಡೆಯುತ್ತೆ ಅನ್ನೋದು ಇಂಟ್ರೆಸ್ಟಿಂಗ್. ಇದೂವರೆಗೂ ಕುಸ್ತಿಯಲ್ಲಿ ಸೋಲದೇ ಇರುವಂತಹ ಒಂದು ಮನೆತನವಿರುತ್ತೆ. ಅದೇ ರವಿಶಂಕರ್ ಮನೆತನ. ಈ ಊರಲ್ಲಿ ಬಿಸಿ ಪಾಟೀಲ್ ಪೈಲ್ವಾನ್‌ಗಳ ಗುರು. ಹೀಗೊಮ್ಮೆ ರವಿಶಂಕರ್ ಅಣ್ಣನಿಗೆ ಪೈಲ್ವಾನ್ ಒಬ್ಬ ಹೊಡೆದು ಸಾಯಿಸಿಬಿಡುತ್ತಾನೆ. ಆ ಸಿಟ್ಟಿಗೆ ರವಿಶಂಕರ್ ಆ ಪೈಲ್ವಾನ್ ಅನ್ನು ಸಾಯಿಸುತ್ತಾನೆ. ಅವರಿಗೆ ಇಬ್ಬರು ಮಕ್ಕಳು ಅವರೇ ದರ್ಶನ್ ಮತ್ತು ಯಶಸ್ ಸೂರ್ಯ.. ಅಲ್ಲಿಂದ ಕಥೆ ಶುರುವಾಗುತ್ತೆ. ಹಾಗಂತ ತಂದೆ ಸಾಯಿಸಿದ್ದಕ್ಕೆ ರಿವೇಂಜ್ ತೆಗೆದುಕೊಳ್ಳುವ ಕಥೆಯಲ್ಲ. ಇಲ್ಲಿ ರಿವೇಂಜ್ ಬೇರೆನೇ ಇದೆ. ಅದೇನು ಅಂತ ತಿಳಿಯೋಕೆ ಸಿನಿಮಾನೇ ನೋಡಬೇಕು.

ಯೋಗರಾಜ್ ಭಟ್ ಹೊಸ ಅಧ್ಯಾಯ
'ಮುಂಗಾರು ಮಳೆ' ಸಿನಿಮಾ ನೋಡಿದವರಿಗೆ ಭಟ್ಟರ ಇಮೇಜ್ ಬೇರೆನೇ ಇರುತ್ತೆ. ಅದು ಈ ಸಿನಿಮಾ ಮೂಲಕ ಬದಲಾಗುತ್ತೆ. ಈ ಹಿಂದೆ 'ಮಣಿ', 'ರಂಗ ಎಸ್‌ಎಸ್‌ಎಲ್‌ಸಿ' ಅಂತಹ ಮಾಸ್ ಸಿನಿಮಾ ಮಾಡಿದ್ದರೂ ಯಶಸ್ಸು ಸಿಕ್ಕಿರಲಿಲ್ಲ. ಈಗ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ. 'ಗರಡಿ' ಕಥೆಯಲ್ಲೇನು ವಿಶೇಷತೆ ಇಲ್ಲ. ಆದರೆ, ಸಿನಿಮಾ ತೆಗೆದುಕೊಂಡು ಹೋಗುವ ರೀತಿ ಚೆನ್ನಾಗಿದೆ. ಬೋರ್ ಹೊಡೆಸುವುದಿಲ್ಲ. ಯೋಗರಾಜ್ ಭಟ್ ಮಾಸ್ ಸಿನಿಮಾ ಮಾಡಬಹುದು ಅಂತ ಪ್ರೇಕ್ಷಕರ ಅರಿವಿಗೆ ಬರುತ್ತೆ.
ಸಿನಿಮಾದ ಹೈಲೈಟ್ ಏನು?
ಯೋಗರಾಜ್ ಭಟ್ ಮಾಸ್ ಸಿನಿಮಾ ಮಾಡಿದ್ರೂ, ದೇಸಿ ಶೈಲಿಯನ್ನು ಬಿಟ್ಟಿಲ್ಲ. ಹೀಗಾಗಿ ಇದೊಂದು ಪಕ್ಕಾ ದೇಸಿ ಸಿನಿಮಾ ಅಂತ ಹೇಳಬಹುದು. ಇದರಲ್ಲೂ ಲವ್ ಸ್ಟೋರಿಯಿದೆ. ಇಲ್ಲೂ ನೋವಿದೆ-ನಲಿವಿದೆ. ಸಿನಿಮಾದ ಹೀರೊ ಯಶಸ್ ಸೂರ್ಯ ಕಮ್‌ಬ್ಯಾಕ್ ಮಾಡಿರುವ ಈ ಸಿನಿಮಾದಲ್ಲಿ ಆಕ್ಷನ್ ಇದೆ. ಪೈಲ್ವಾನ್, ಕುಸ್ತಿ, ಸೇಡು, ಹೋರಾಟವಿದೆ. ಇವೆಲ್ಲ ಏನೇ ಇದ್ದರೂ ಸಿನಿಮಾದ ಹೈಲೈಟ್ ದರ್ಶನ್.
ಚಾಲೆಂಜಿಂಗ್ ರೋಲ್ಸ್
ಈ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡುತ್ತಿರುವ ಯಶಸ್ ಸೂರ್ಯಗೆ ಚಾಲೆಂಜಿಂಗ್ ರೋಲ್ ಸಿಕ್ಕಿದೆ. ಅದನ್ನು ಉತ್ತಮವಾಗಿಯೇ ನಿಭಾಯಿಸಿದ್ದಾರೆ. ಸೋನಾಲ್ ಮಾಂಟೇರೊ ಪಾತ್ರದಲ್ಲಿ ವಿಶೇಷತೆ ಏನಿಲ್ಲ. ಖಳನಾಯಕನಾಗಿ ರವಿಶಂಕರ್ ಎಂದಿನಂತೆ ಅದ್ಭುತ ಅಭಿನಯ ನೀಡಿದ್ದಾರೆ. ಪೈಲ್ವಾನ್ ಆಗಿ ಬಿ ಸಿ ಪಾಟೀಲ್ ಕೂಡ ಮನಗೆಲ್ಲುತ್ತಾರೆ.
ದರ್ಶನ್ ಎಂಟ್ರಿ ಬೀಳುತ್ತೆ ಶಿಳ್ಳೆ
'ಗರಡಿ' ಸಿನಿಮಾದ ಕೊನೆಯಲ್ಲಿ ದರ್ಶನ್ ಎಂಟ್ರಿ ಆಗುತ್ತೆ. ಹಾಗಂತ ಎರಡು ಮೂರು ನಿಮಿಷ ಬಂದು ಹೋಗುವ ಪಾತ್ರವಲ್ಲ. ಅತಿಥಿ ಪಾತ್ರಕ್ಕಿಂತ ಹೆಚ್ಚು ಹೊತ್ತು ತೆರೆಮೇಲೆ ದರ್ಶನ್ ಕಾಣಿಸಿಕೊಳ್ಳುತ್ತಾರೆ. ದರ್ಶನ್ ಎಂಟ್ರಿ ಪವರ್‌ಫುಲ್ ಆಗಿದೆ. ಇದೇ ಸಿನಿಮಾದ ಹೈಲೈಟ್. ಇಲ್ಲೊಂದು ಸಿನಿಮಾಗೆ ಶಿಳ್ಳೆ ಬರೋದು ಗ್ಯಾರಂಟಿ. ಹಾಗೇ ಸಿನಿಮಾಗೊಂದು ಜೀವಕಳೆ ಬಂದಂತೆ ಆಗುತ್ತೆ.
'ಗರಡಿ' ಪ್ಲಸ್ ಏನು?
'ಗರಡಿ' ಸಿನಿಮಾ ಕಥೆ ಸಾಧಾರಣ. ಆದರೆ, ಯೋಗರಾಜ್ ಭಟ್ಟರ ಮಾಸ್ ಶೈಲಿಯ ಸಿನಿಮಾ ಇಷ್ಟ ಆಗುತ್ತೆ. ಯಶಸ್ ಸೂರ್ಯ, ಸೋನಾಲ್ ಮಾಂಟೇರೊ ಜೋಡಿ ಪ್ರಾಮಿಸಿಂಗ್ ಆಗಿದೆ. ಹರಿಕೃಷ್ಣ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಇವೆಲ್ಲವುಗಳ ಜೊತೆಗೆ ದರ್ಶನ್ ಆಗಮನ ಸಿನಿಮಾದ ಪ್ರಮುಖ ಅಂಶಗಳಲ್ಲೊಂದು.
'ಗರಡಿ' ಮೈನಸ್ ಏನು?
ಯೋಗರಾಜ್ ಭಟ್ ಕಥೆಯನ್ನು ಇನ್ನೂ ಸ್ವಲ್ಪ ಬಲಪಡಿಸಬೇಕಿತ್ತು. ಚಿತ್ರಕಥೆ ಚೆನ್ನಾಗಿದ್ದರೂ, ಇನ್ನೂ ಸ್ವಲ್ಪ ಟ್ರಿಮ್ ಮಾಡಬಹುದಿತ್ತು ಅಂತ ಅನಿಸುತ್ತೆ. ಹರಿಕೃಷ್ಣ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ ಹಾಡುಗಳು ವರ್ಕ್‌ಔಟ್ ಆಗಿಲ್ಲ. ಇವಿಷ್ಟನ್ನು ಬಿಟ್ಟರೆ, ಕುಟುಂಬ ಸಮೇತ ಒಮ್ಮೆ ಹೋಗಿ ಸಿನಿಮಾ ನೋಡಿ ಮನೆಗೆ ಬರಬಹುದು.


Click it and Unblock the Notifications











