twitter
    For Quick Alerts
    ALLOW NOTIFICATIONS  
    For Daily Alerts

    Geetha Review: ಸ್ವಾಭಿಮಾನಿ ಕನ್ನಡಿಗನ ಕೆಚ್ಚೆದೆಯ ಹೋರಾಟ ಮತ್ತು ನಿಷ್ಕಲ್ಮಶ ಪ್ರೀತಿ

    |

    'ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಕನ್ನಡಿಗನೇ ಸಾರ್ವಭೌಮ....' ಸ್ವಾಭಿಮಾನಿ ಕನ್ನಡಿಗನ ಹೋರಾಟದ ಕಥೆಯ ಜೊತೆ ಸುಂದರವಾದ ಪ್ರೇಮಕಥೆಯ ನಂಟು. ಗಣೇಶ್ ಸ್ಟೈಲ್ ಮತ್ತು ಇಮೇಜ್ ಗೆ ತಕ್ಕಂತೆ ಕಥೆಯೂ ಇದೆ. ಗಣೇಶ್ ಅವರಿಂದ ಏನಾದರೂ ಹೊಸ ರೀತಿ ಸಿನಿಮಾ ಬೇಕಲ್ವಾ ಎಂದುಕೊಂಡವರಿಗೆ ಸರ್ಪ್ರೈಸ್ ಕೂಡ ಇದೆ. ಪೂರ್ತಿ ವಿಮರ್ಶೆ ಮುಂದೆ ಓದಿ...

    Rating:
    3.5/5
    Star Cast: ಗಣೇಶ್, ಶಾನ್ವಿ ಶ್ರೀವಾಸ್ತವ್, ಪ್ರಯಾಗ್ ಮಾರ್ಟಿನ್, ಪಾರ್ವತಿ ಅರುಣ್, ದೇವರಾಜ್, ಸುಧಾರಾಣಿ ಮತ್ತು ಇತರರು.
    Director: ವಿಜಯ್ ನಾಗೇಂದ್ರ

    ಸ್ವಾಭಿಮಾನಿ ಕನ್ನಡಿಗ 'ಶಂಕರ್'

    ಸ್ವಾಭಿಮಾನಿ ಕನ್ನಡಿಗ 'ಶಂಕರ್'

    1981ರ ಸಮಯದಲ್ಲಿ ಕರ್ನಾಟಕದಲ್ಲಿ ಭಾಷೆಗೆ ಸಂಬಂಧಿಸಿದಂತೆ ಗೋಕಾಕ್ ಚಳುವಳಿ ಎಂಬ ಕ್ರಾಂತಿ ನಡೆಯುತ್ತೆ. ಈ ಹೋರಾಟದಲ್ಲಿ ಕನ್ನಡ ಭಾಷೆಗಾಗಿ ಹೋರಾಡುವ ಸ್ವಾಭಿಮಾನಿ ಕನ್ನಡಿಗನ ಪಾತ್ರದಲ್ಲಿ ಗಣೇಶ್ ನಟಿಸಿದ್ದಾರೆ. ಆ ಕಾಲಕ್ಕೆ ತಮ್ಮ ಕಾಸ್ಟ್ಯೂಮ್, ಸೆಟ್, ಅದಕ್ಕೆ ತಕ್ಕ ಲೋಕೇಶನ್ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಲಾಗಿದೆ. ಗೋಕಾಕ್ ಚಳುವಳಿಯ ಸಾಕ್ಷ್ಯಚಿತ್ರದ ನೈಜ ದೃಶ್ಯಗಳನ್ನ ಬಳಸಿಕೊಂಡಿರುವುದು ಇಷ್ಟವಾಗುತ್ತೆ. ಅಣ್ಣಾವ್ರು, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಶ್ ಸೇರಿದಂತೆ ಅನೇಕ ಸಾಹಿತಿಗಳು, ಕವಿಗಳನ್ನ ಆ ದೃಶ್ಯಗಳಲ್ಲಿ ನೋಡುವುದು ಥ್ರಿಲ್ ಕೊಡುತ್ತೆ. ಈ ಫ್ಲ್ಯಾಶ್ ಬ್ಯಾಕ್ ನಲ್ಲಿ ಗಣೇಶ್ ಅವರದ್ದು ಮಾಗಿದ ನಟನೆ. ಈ ಹೋರಾಟದ ಜೊತೆಜೊತೆಯಲ್ಲಿ ನಡೆಯುವ 'ಗೀತಾಂಜಲಿ' ಲವ್ ಸ್ಟೋರಿ ಕೂಡ ಉತ್ತಮ ಸಾಥ್ ಕೊಟ್ಟಿದೆ.

    'ನನ್ನ ಸಿನಿಮಾ ತಂಟೆಗೆ ಬರಬೇಡಿ' ಪರಭಾಷಾ ಚಿತ್ರಗಳಿಗೆ ಗಣೇಶ್ ಎಚ್ಚರಿಕೆ.!'ನನ್ನ ಸಿನಿಮಾ ತಂಟೆಗೆ ಬರಬೇಡಿ' ಪರಭಾಷಾ ಚಿತ್ರಗಳಿಗೆ ಗಣೇಶ್ ಎಚ್ಚರಿಕೆ.!

    ಪ್ರೀತಿಗಾಗಿ ಒದ್ದಾಡುವ ಆಕಾಶ್

    ಪ್ರೀತಿಗಾಗಿ ಒದ್ದಾಡುವ ಆಕಾಶ್

    ಒಂದು ಕಡೆ ಶಂಕರ್ ಪಾತ್ರದಲ್ಲಿ ಗಣೇಶ್ ಸ್ವಾಭಿಮಾನಿ ಕನ್ನಡಿಗನಾಗಿ ಅಬ್ಬರಿಸಿದರೆ, ಮತ್ತೊಂದು ಕಡೆ ಆಕಾಶ್ ಪಾತ್ರದಲ್ಲಿ ನ್ಯಾಚುರಲ್ ಅಭಿನಯ ನೀಡಿದ್ದಾರೆ. ಲವ್ ಸ್ಟೋರಿಗಳಿಗೆ ಗಣೇಶ್ ಸೂಕ್ತ ಎನ್ನುವುದನ್ನ ಈ ಪಾತ್ರ ಮತ್ತೆ ಸಾಬೀತು ಮಾಡಿದೆ. ಮುಂಗಾರುಮಳೆ, ಮುಗುಳುನಗೆ, ಮಳೆಯಲಿ ಜೊತೆಯಲಿ ಸ್ಟೈಲ್ ಗಣೇಶ್ ಇಲ್ಲೂ ಕಾಣ್ತಾರೆ. ಎರಡು ವಿಭಿನ್ನ ಶೇಡ್ ಗಳಲ್ಲಿ ಗಣಿ ನಟಿಸಿದ್ದು, ಎರಡರಲ್ಲೂ ಬೆಸ್ಟ್ ಆಗಿ ನಿಲ್ಲುತ್ತಾರೆ. ಹೋರಾಟಗಾರ ಮತ್ತು ಲವರ್ ಬಾಯ್ ಪಾತ್ರ ಹೇಗೆ ಎಂದು ಸಿನಿಮಾ ನೋಡಿದ್ರೆ ಅರ್ಥವಾಗುತ್ತೆ.

    ಮೂವರು ನಟಿಯರು 'ಸಕ್ಸಸ್'

    ಮೂವರು ನಟಿಯರು 'ಸಕ್ಸಸ್'

    'ಗೀತಾ' ಚಿತ್ರದಲ್ಲಿ ಮೂವರು ನಾಯಕಿಯರು. ಶಾನ್ವಿ ಶ್ರೀವಾಸ್ತವ್, ಪ್ರಯಾಗ್ ಮಾರ್ಟಿನ್, ಪಾರ್ವತಿ ಅರುಣ್. ಈ ಮೂರು ಪಾತ್ರಗಳಿಗೂ ಸಮನಾದ ಪ್ರಾಮುಖ್ಯತೆ ಇದೆ. ಮೂವರು ಕೂಡ ಪಾತ್ರಗಳಿಗೆ ತಕ್ಕಂತೆ ನಟಿಸಿದ್ದಾರೆ. ರೆಟ್ರೋ ಮತ್ತು ಮಾಡ್ರನ್ ಹುಡುಗಿ ಆಗಿ ನಟಿಸಿರುವ ಶಾನ್ವಿ ಶ್ರೀವಾಸ್ತವ್ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡಿದ್ದಾರೆ.

    'ಪೈಲ್ವಾನ್' ಪೈರಸಿಯಿಂದ ಎಚ್ಚೆತ್ತುಕೊಂಡ ಗೀತಾ ಚಿತ್ರತಂಡ'ಪೈಲ್ವಾನ್' ಪೈರಸಿಯಿಂದ ಎಚ್ಚೆತ್ತುಕೊಂಡ ಗೀತಾ ಚಿತ್ರತಂಡ

    ಡೈರೆಕ್ಟರ್ ಶ್ರಮ ಕಾಣುತ್ತೆ

    ಡೈರೆಕ್ಟರ್ ಶ್ರಮ ಕಾಣುತ್ತೆ

    ರೆಟ್ರೋ ಮತ್ತು ಮಾಡ್ರನ್ ಎರಡು ಶೇಡ್ ಗೆ ತಕ್ಕಂತೆ ಎಲ್ಲವನ್ನ ನಿಭಾಯಿಸುವಲ್ಲಿ ನಿರ್ದೇಶಕ ವಿಜಯ್ ನಾಗೇಂದ್ರ ಗೆಲುವು ಕಂಡಿದ್ದಾರೆ. ಪಾತ್ರಗಳು ಆಯ್ಕೆ, ಕಥೆಯನ್ನ ಪ್ರಸೆಂಟ್ ಮಾಡಿರುವ ರೀತಿ, ಫ್ಲ್ಯಾಶ್ ಗಾಗಿ ಬಳಸಿಕೊಂಡಿರುವ ಟ್ವಿಸ್ಟ್ ಚಿತ್ರಕ್ಕೆ ಪ್ಲಸ್ ಪಾಯಿಂಟ್. ನಿರ್ದೇಶಕ ಕಲ್ಪನೆಗೆ ತಕ್ಕಂತೆ ಶ್ರೀಶಾ ಕೂದುವಳ್ಳಿ ಸಿನಿಮಾಟೋಗ್ರಫಿ ಕೆಲಸ ಮಾಡಿದೆ. ಕಲಾ ನಿರ್ದೇಶಕ ಶಿವಕುಮಾರ್ ಮತ್ತು ವಿಶ್ವಾಸ್ ಕಶ್ಯಪ್ ಅವರ ಸೆಟ್ ವರ್ಕ್ ಕೂಡ ಪರಿಣಾಮಕಾರಿಯಾಗಿದೆ. ಹಾಡುಗಳು ಅಷ್ಟೇ ಜೊತೆಯಾಗಿದೆ. ದೇವರಾಜ್, ಸುಧಾರಾಣಿ, ರಂಗಾಯಣ ರಘು, ಅಚ್ಯುತ್ ಕುಮಾರ್ ಅವರ ನಟನೆಯೂ ಇಲ್ಲಿ ಮುಖ್ಯವಾಗಿದೆ.

    ಕೊನೆಯದಾಗಿ ಹೇಳುವುದೇನಂದರೆ...

    ಕೊನೆಯದಾಗಿ ಹೇಳುವುದೇನಂದರೆ...

    ಗೀತಾ ಚಿತ್ರದಲ್ಲಿ ನ್ಯೂನತೆಗಳೇ ಇಲ್ಲ ಎನ್ನುವುದಕ್ಕೆ ಆಗಲ್ಲ. ಆದರೆ ಅದನ್ನೆಲ್ಲಾ ಪಕ್ಕಕ್ಕೆ ಇಟ್ಟು ನೋಡಿದರೆ ಒಂದೊಳ್ಳೆ ಸಿನಿಮಾ. ಪ್ರೀತಿ, ಸ್ನೇಹ, ಅಪ್ಪ-ಅಮ್ಮನ ಬಾಂಧವ್ಯ, ಭಾಷೆ, ನಾಡು-ನುಡಿ, ವ್ಯಕ್ತಿ ಮತ್ತು ವ್ಯಕ್ತಿತ್ವ, ನಂಬಿಕೆ ಎಲ್ಲ ವಿಷಯಗಳನ್ನ ಹೊಂದಿರುವ ಕಮರ್ಷಿಯಲ್ ಚಿತ್ರ. ಪಕ್ಕಾ ಗಣೇಶ್ ಸ್ಟೈಲ್ ಸಿನಿಮಾ. ಎಮೋಷನಲ್ ಆಗಿ ಹೃದಯ ಮತ್ತು ಮನಸ್ಸು ಮುಟ್ಟವ ಕಥೆ.

    ಕನ್ನಡಕ್ಕಾಗಿ ಹೋರಾಡಿದ ಕಲಿಗಳಿಗೆ ಹಾಡು ಅರ್ಪಿಸಿದ ಗಣೇಶ್ಕನ್ನಡಕ್ಕಾಗಿ ಹೋರಾಡಿದ ಕಲಿಗಳಿಗೆ ಹಾಡು ಅರ್ಪಿಸಿದ ಗಣೇಶ್

    English summary
    Golden star Ganesh starrer Geetha Movie Review in Kannada.
    Friday, September 27, 2019, 16:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X