twitter
    For Quick Alerts
    ALLOW NOTIFICATIONS  
    For Daily Alerts

    Gentleman Movie Review: ಕುತೂಹಲಕಾರಿಯಾಗಿದೆ ಜಂಟಲ್ ಮ್ಯಾನ್ ಜರ್ನಿ

    |

    ಕಷ್ಟದಲ್ಲಿ ಇರುವ ತನ್ನ ಕುಟುಂಬವನ್ನು ನಾಯಕ ಫೈಟ್ ಮಾಡಿ ಕಾಪಾಡುವ ಸನ್ನಿವೇಶ ಎಲ್ಲ ಸಿನಿಮಾದಲ್ಲಿಯೂ ಬರುತ್ತದೆ. ಆದರೆ ಅಂತಹ ಪರಿಸ್ಥಿತಿಯಲ್ಲಿ ಇಲ್ಲಿ ನಾಯಕನಿಗೆ ನಿದ್ದೆ ಬರುತ್ತದೆ. ದಿನದ 18 ಗಂಟೆಗಳ ಕಾಲ ಮಲಗುವ ನಾಯಕ ತನಗೆ ಬರುವ ಸಮಸ್ಯೆಯನ್ನು ಹೇಗೆ ಎದುರಿಸುತ್ತಾನೆ ಎನ್ನುವುದು 'ಜಂಟಲ್ ಮ್ಯಾನ್' ಜರ್ನಿಯಾಗಿದೆ.

    Rating:
    4.0/5
    Star Cast: ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು
    Director: ಜಡೇಶ್ ಕುಮಾರ್

    ಒಂದು ಸಿನಿಮಾದಲ್ಲಿ ಅನೇಕ ವಿಷಯಗಳು

    ಒಂದು ಸಿನಿಮಾದಲ್ಲಿ ಅನೇಕ ವಿಷಯಗಳು

    'ಜಂಟಲ್ ಮ್ಯಾನ್' ಸಿನಿಮಾ ಮೇಲ್ನೋಟಕ್ಕೆ ಒಂದು ಸಾಮಾನ್ಯ ಕಮರ್ಷಿಯಲ್ ಸಿನಿಮಾ ಅನಿಸುತ್ತದೆ. ಆದರೆ, ಸಿನಿಮಾದ ಒಳಗೆ ಒಂದಷ್ಟು ಬೇರೆ ಬೇರೆ ವಿಷಯಗಳು ಅಡಗಿವೆ. ಹೆಣ್ಣಿನ ಅಂಡಾಣು ಅಕ್ರಮ ಮಾರಾಟ ದಂಧೆ ಚಿತ್ರದ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ನಾಯಕನ ನಿದ್ರಾ ರೋಗದ ಮೇಲೆ ಸಿನಿಮಾದ ಕಥೆ ನಿಂತಿದೆ.

    ಈ ವಾರ ಕನ್ನಡದಲ್ಲಿ ಒಟ್ಟು 11 ಚಿತ್ರಗಳು ಬಿಡುಗಡೆಈ ವಾರ ಕನ್ನಡದಲ್ಲಿ ಒಟ್ಟು 11 ಚಿತ್ರಗಳು ಬಿಡುಗಡೆ

    6 ಗಂಟೆಯಲ್ಲಿ ಏನೇನು ಮಾಡೋದು?

    6 ಗಂಟೆಯಲ್ಲಿ ಏನೇನು ಮಾಡೋದು?

    ನಿದ್ರಾ ಖಾಯಿಲೆಯಲ್ಲಿ ಇರುವ ನಾಯಕ ಭರತ್ (ಪ್ರಜ್ವಲ್ ದೇವರಾಜ್) ದಿನದಲ್ಲಿ ಬರೀ 6 ಗಂಟೆ ಎಚ್ಚರವಾಗಿ ಇರುತ್ತಾನೆ. ಆರು ಗಂಟೆಗಳಲ್ಲಿ ಕೆಲಸ, ಪ್ರೇಮ, ಫ್ಯಾಮಿಲಿ ಎಲ್ಲವನ್ನು ನಿಭಾಯಿಸುತ್ತಿರುತ್ತಾನೆ. ಹೀಗಿದ್ದ ಭರತ್ ಜೀವನಕ್ಕೆ ವಿಲನ್ ಗಳ ಎಂಟ್ರಿಯಾಗುತ್ತದೆ. ತನ್ನ ಕುಟುಂಬದ ಪುಟ್ಟ ಹುಡುಗಿ ವರು (ಆರಾಧ್ಯ) ಳನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಈ ಪರಿಸ್ಥಿತಿಯನ್ನು ಭರತ್ ಹೇಗೆ ಗೆಲ್ಲುತ್ತಾನೆ ಎನ್ನುವುದೇ ಸಿನಿಮಾ.

    ಗಮನ ಸೆಳೆದ ಪ್ರಜ್ವಲ್, ಸಂಚಾರಿ ವಿಜಯ್

    ಗಮನ ಸೆಳೆದ ಪ್ರಜ್ವಲ್, ಸಂಚಾರಿ ವಿಜಯ್

    ಪ್ರಜ್ವಲ್ ದೇವರಾಜ್ ನಟನೆ ಚೆನ್ನಾಗಿದೆ. ಅವರ ಪಾತ್ರಕ್ಕೆ ಕ್ಲಾಸ್ ಹಾಗೂ ಮಾಸ್ ಎರಡೂ ಶೇಡ್ ಇದೆ. ನಿಶ್ವಿಕಾ ನಾಯ್ಡು ತೆರೆ ಮೇಲೆ ಚೆನ್ನಾಗಿ ಕಾಣುತ್ತಾರೆ. ಆದರೆ, ಅವರ ಪಾತ್ರಕ್ಕೆ ಅಷ್ಟೊಂದು ವ್ಯಾಪ್ತಿ ಇಲ್ಲ. ಸಂಚಾರಿ ವಿಜಯ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದಾರೆ. ಈ ಹಿಂದಿನ ಪಾತ್ರಗಳಿಂದ ಹೊರ ಬಂದು ಇಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಟ್ವಿಸ್ಟ್ ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತದೆ. ಖಳನಟರ ಹಾಗೂ ಬಾಲನಟಿಯ ನಟನೆ ಬೊಂಬಾಟ್.

    ದರ್ಶನ್ ಕಂಡ್ರೆ ಪ್ರಜ್ವಲ್ ದೇವರಾಜ್ ಗಿದೆ ಅಸೂಯೆ, ಹೊಟ್ಟೆ ಕಿಚ್ಚು.!ದರ್ಶನ್ ಕಂಡ್ರೆ ಪ್ರಜ್ವಲ್ ದೇವರಾಜ್ ಗಿದೆ ಅಸೂಯೆ, ಹೊಟ್ಟೆ ಕಿಚ್ಚು.!

    ಕಥೆ, ಚಿತ್ರಕಥೆ ಚೆನ್ನಾಗಿದೆ

    ಕಥೆ, ಚಿತ್ರಕಥೆ ಚೆನ್ನಾಗಿದೆ

    ಸಿನಿಮಾದ ಕಥೆ ಚೆನ್ನಾಗಿದೆ. ಅಷ್ಟೇ ಚೆನ್ನಾಗಿ ಅದನ್ನು ತೆರೆ ಮೇಲೆ ತಂದಿದ್ದಾರೆ. ನಿರ್ದೇಶಕ ಜಡೇಶ್ ಪ್ರಾಮಾಣಿಕ ಪ್ರಯತ್ನ ತೆರೆ ಮೇಲೆ ಕಾಣುತ್ತದೆ. ಮೇಕಿಂಗ್ ಕೂಡ ಸುಂದರವಾಗಿ ಮಾಡಿದ್ದಾರೆ. ಕಾಮಿಡಿ ಅಂಶಗಳು ಸಿನಿಮಾದಲ್ಲಿ ಸ್ವಲ್ಪ ಇದ್ದಿದ್ದರೆ ಇನ್ನಷ್ಟು ಹತ್ತಿರ ಆಗುತ್ತಿತ್ತು. ಜೊತೆಗೆ ಪ್ರೇಮದ ದೃಶ್ಯಗಳ ಅಗತ್ಯವೂ ಇತ್ತು.

    ಹಾಡುಗಳು, ಸಾಹಸ ದೃಶ್ಯಗಳು

    ಹಾಡುಗಳು, ಸಾಹಸ ದೃಶ್ಯಗಳು

    ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾದ 'ಅರರೇ ಶುರುವಾಯಿತು..' ಹಾಡು ಬಿಡುಗಡೆಗೆ ಮೊದಲೇ ಹಿಟ್ ಆಗಿತ್ತು. ಅದರೊಂದಿಗೆ ಮತ್ತೊಂದು ಹಾಡು ಕೇಳಲು ಇಂಪಾಗಿದೆ. ಸಾಹಸ ದೃಶ್ಯಗಳು ಇಷ್ಟ ಆಗುತ್ತದೆ. ಪ್ರಶಾಂತ್ ಸಿದ್ಧಿ ಹಾಗೂ ಪ್ರಜ್ವಲ್ ದೇವರಾಜ್ ಫೈಟ್ ಸಖತ್ತಾಗಿದೆ.

    ಪ್ರಜ್ವಲ್ ಮತ್ತು ವಿಜಯ್ ಸಿನಿಮಾಗಳ ವಾರ್: ವಾಣಿಜ್ಯ ಮಂಡಳಿ ಮೆಟ್ಟಿಲೇರಿದ ಗುರು ದೇಶಪಾಂಡೆಪ್ರಜ್ವಲ್ ಮತ್ತು ವಿಜಯ್ ಸಿನಿಮಾಗಳ ವಾರ್: ವಾಣಿಜ್ಯ ಮಂಡಳಿ ಮೆಟ್ಟಿಲೇರಿದ ಗುರು ದೇಶಪಾಂಡೆ

    ಜಂಟಲ್ ಸಿನಿಮಾ

    ಜಂಟಲ್ ಸಿನಿಮಾ

    'ಜಂಟಲ್ ಮ್ಯಾನ್' ಒಂದು ಜಂಟಲ್ ಸಿನಿಮಾ. ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳ ಜೊತೆಗೆ ಒಂದು ಕುತೂಹಲಕಾರಿ ಕಥೆ ಇಲ್ಲಿದೆ. ಟಿಕೆಟ್ ಪಡೆದು ಹೋದ ಪ್ರೇಕ್ಷಕರಿಗೆ ಸಿನಿಮಾ ಮನರಂಜನೆ ನೀಡುತ್ತದೆ.

    English summary
    Gentleman kannada movie review.
    Friday, February 7, 2020, 18:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X