TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಗಿಣಿ ಹೇಳಿದ್ದು ಡ್ರೈವರ್ ಒಬ್ಬನ ಆತ್ಮಕಥೆ
ಫ್ರೆಶ್ ಆದೊಂದು ಶೀರ್ಷಿಕೆಯಿಂದಲೇ ಗಮನ ಸೆಳೆದಿದ್ದ ಚಿತ್ರ 'ಗಿಣಿ ಹೇಳಿದ ಕಥೆ'. ದೇವ್ ರಂಗಭೂಮಿ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರುವ ಈ ಸಿನಿಮಾ ತೆರೆ ಕಂಡಿದೆ. ರಂಗಭೂಮಿ ಪ್ರತಿಭೆಗಳೇ ತಾರಾಗಣ ತುಂಬಿಕೊಂಡಿದ್ದಾರೆ ಅನ್ನೋದರಿಂದ ಮೊದಲ್ಗೊಂಡು ಗಿಣಿ ಹೇಳಿದ ಕಥೆಯ ಬಗ್ಗೆ ಪ್ರೇಕ್ಷಕರ ಕುತೂಹಲಕ್ಕೆ ನಾನಾ ಕಾರಣಗಳಿದ್ದವೂ.
ಇದೀಗ ನೋಡಿದ ಪ್ರತಿಯೊಬ್ಬರಲ್ಲಿಯೂ ತಮ್ಮ ನಡುವೆಯೇ ಘಟಿಸಿದ ಚೆಂದದ ಕಥಾನಕವೊಂದನ್ನು ಕಣ್ತುಂಬಿಕೊಂಡಂಥಾ ಖುಷಿ ಕಾಣಿಸುತ್ತಿದೆ. 'ಗಿಣಿ ಹೇಳಿದ ಕಥೆ' ಸಿದ್ಧ ಸೂತ್ರಗಳನ್ನು ಮೀರಿದ ಚಿತ್ರ ಅಂತ ದೇವ್ ರಂಗಭೂಮಿ ಆರಂಭದಿಂದಲೂ ಹೇಳಿಕೊಂಡಿದ್ದರು. ಅದಕ್ಕೆ ತಕ್ಕುದಾಗಿಯೇ ಇಡೀ ಸಿನಿಮಾ ಮೂಡಿ ಬಂದಿದೆ ಅನ್ನೋದೇ ಸಮಾಧಾನ.
ಇಲ್ಲಿ ಗಿಣಿ ಹೇಳೋ ಕಥೆ ಸರಾಗವಾಗಿ ನೋಡಿಸಿಕೊಂಡು, ಕೇಳಿಸಿಕೊಂಡು ಹೋಗುತ್ತೆ. ಕೆಲವೊಂದು ವಿಚಾರಗಳಲ್ಲಿನ ಸಣ್ಣಪುಟ್ಟ ಲೋಪ ದೋಷಗಳನ್ನು ಹೊರತಾಗಿಸಿದರೆ ಎಲ್ಲವೂ ಮುದ್ದಾಗಿದೆ. ಇಲ್ಲಿ ಗಿಣಿ ಹೇಳೋ ಕಥೆಯಲ್ಲಿ ಹೇಳಿಕೊಳ್ಳುವಂಥಾ ವಿಶೇಷತೆ ಇಲ್ಲದೇ ಹೋದರೂ ಅದನ್ನು ನಿರೂಪಣೆ ಮಾಡಿರೋ ಜಾಣ್ಮೆಯೇ ನಿಜವಾದ ಫ್ಲಸ್ ಪಾಯಿಂಟ್.
ವಿಮರ್ಶೆ: ಗಿಣಿ ಹೇಳಿದ್ದು ಪ್ರೇಮ ಕಥೆ
ಇದೊಂಥರಾ ಬೆಂಗಳೂರಿನ ವಾತಾವರಣದಲ್ಲಿ ಬದುಕೋ ಸಾಮಾನ್ಯ ಡ್ರೈವರುಗಳ ಆತ್ಮಕಥೆಯಂಥಾ ಕಥಾ ಹಂದರ ಹೊಂದಿರೋ ಚಿತ್ರ. ಬೆಂಗಳೂರಿನಂಥಾ ನಗರಗಳಲ್ಲಿ ಚಾಲಕರು ಅದೇ ಕೈ ಸಾಲ, ಬಡ್ಡಿ, ಚೀಟಿ ವ್ಯವಹಾರ ಅಂತೆಲ್ಲ ಸಿಕ್ಕಿಕೊಂಡಿರುತ್ತಾರಲ್ಲಾ? ಅದೆಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ತೆರೆದಿಡೋ ಸೀನುಗಳಿಂದಲೇ ಗಿಣಿ ಹೇಳಿದ ಕಥೆ ಆರಂಭವಾಗುತ್ತೆ. ಇಲ್ಲಿ ನಾಯಕನೂ ಚಾಲಕ. ಪ್ಯಾಸೆಂಜರ್ ಕರೆದುಕೊಂಡು ಮಡಿಕೇರಿ ದಾರಿಯಲ್ಲಿ ಹೋಗುವಾಗ ಆತ ತನ್ನ ಕಥೆ ಹೇಳಿಕೊಳ್ಳುತ್ತಾ ಹೋಗುತ್ತಾನೆ. ಅದು ಆತನ ಪ್ರೀತಿಯ ಕಥಾನಕ. ಹೇಗೇಗೋ ಹಿಂದಿಂದೆ ಸುತ್ತಿ ಒಲಿಸಿಕೊಂಡಿದ್ದರಿಂದ ಹಿಡಿದು ಅಂತ್ಯದವರೆಗೂ ಎಲ್ಲವನ್ನೂ ಬಳಸಿಕೊಂಡು ಕಥೆ ಸಾಗುತ್ತೆ.
'ಗಿಣಿ ಹೇಳಿದ ಕಥೆ'ಯನ್ನ ನೀವು ಈ ವಾರ ನೋಡಬಹುದು
ಆದರೆ ಹಾಗೆ ಪ್ರೀತಿಸಿ ಜೊತೆಯಾದ ನಾಯಕಿ ಕಣ್ಮರೆಯಾದದ್ದರ ಹಿಂದೊಂದು ಭಯಾನಕ ಅಂಶವೂ ಇರುತ್ತೆ. ಅದೇನು. ಆ ಘಟನೆಗೂ ಈ ಡ್ರೈವರ್ ಕೊಡಗಿನತ್ತ ಕರೆದೊಯ್ಯುವ ಪ್ಯಾಸೆಂಜರುಗಳಿಗೂ ಏನು ಸಂಬಂಧ ಎಂಬುದನ್ನು ಥೇಟರಿನಲ್ಲಿಯೇ ನೋಡಿದರೆ ಚೆನ್ನ. ಒಟ್ಟಾರೆಯಾಗಿ ಇಡೀ ಚಿತ್ರ ಯಾವ ಅಡೆತಡೆಗಳೂ ಇಲ್ಲದೇ ನೋಡಿಸಿಕೊಂಡು ಹೋಗುತ್ತೆ. ದೇವ್ ರಂಗಭೂಮಿ ಇಲ್ಲಿನ ನಾಯಕನ ಪಾತ್ರಕ್ಕೆ ಸೂಕ್ತ ವ್ಯಕ್ತಿ ಅಂತ ಸಿನಿಮಾ ನೋಡಿದ ಯಾರಿಗಾದರೂ ಅನ್ನಿಸುತ್ತೆ. ಅವರು ರಂಗಭೂಮಿಯ ಕಸುವನ್ನೆಲ್ಲ ಬಸಿದು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕಿ ಗೀತಾಂಜಲಿಗೆ ಕೂಡಾ ಇದು ಮೊದಲ ಚಿತ್ರ ಎಂಬ ಸುಳಿವೂ ಕೊಡದಂತೆ ನಟಿಸಿದ್ದಾರೆ.
ರಂಗಭೂಮಿ ನಟ ನಟಿಯರೇ ಈ ಚಿತ್ರದ ಎಂಬತ್ನಾಲಕ್ಕು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆದ್ದರಿಂದಲೇ ಒಟ್ಟಾರೆ ಚಿತ್ರ ಹೊಸಾ ಅನುಭವ ನೀಡುವಂತೆ ಮೂಡಿ ಬಂದಿದೆ. ಇನ್ನು ರಾಜನೇಸರ ಅವರು ಬರೆದ ಹಾಡಿನ ಜೊತೆಗೆ ಮಿಕ್ಕೆಲ್ಲ ಹಾಡುಗಳೂ ಹೊಸಾ ಫೀಲ್ ಕೊಡುತ್ತದೆ. ನೋಡೋದಕ್ಕೂ ಚೆಂದ ಎನಿಸುತ್ತದೆ. ಬೆಂಗಳೂರಿನ ಗವೀಪುರ ಗುಟ್ಟಹಳ್ಳಿ, ಬಸವನಗುಡಿಗಳಲ್ಲೇ ಬಹುತೇಕ ಚಿತ್ರೀಕರಣ ನಡೆದಿರೋದು ಕಾಣಸಿಗುತ್ತದೆ ಮತ್ತದ ಇಡೀ ಸಿನಿಮಾದ ಒಂದು ಪಾತ್ರವಾಗಿ ಚಿತ್ರಿತಗೊಂಡಿದೆ.