Good Bad Ugly X Review: ವಿಂಟೇಜ್ ಅಜಿತ್ ದರ್ಬಾರ್.. ಆದರೆ..

ಅಜಿತ್ ನಟನೆಯ 'ಗುಡ್‌ ಬ್ಯಾಡ್ ಅಗ್ಲಿ' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಅದಿಕ್ ರವಿಚಂದ್ರನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ರಾತ್ರಿಯಿಂದಲೇ ಕೆಲವೆಡೆ ಪ್ರೀಮಿಯರ್ ಶೋಗಳು ಆರಂಭವಾಗಿದೆ. ರಾಜ್ಯದಲ್ಲಿಯೂ ಸಿನಿಮಾ ದೊಡ್ಡಮಟ್ಟದಲ್ಲಿ ಬಿಡುಗಡೆಯಾಗಿದೆ.

ಎರಡು ತಿಂಗಳ ಹಿಂದೆ ಅಜಿತ್ ಹಾಗೂ ತ್ರಿಶಾ ನಟನೆಯ 'ವಿಡಾಮುಯರ್ಚಿ' ಸಿನಿಮಾ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅದರ ಬೆನ್ನಲ್ಲೇ 'ಗುಡ್‌ ಬ್ಯಾಡ್ ಅಗ್ಲಿ' ಸಿನಿಮಾ ತೆರೆಗೆ ಬಂದಿದೆ. ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ಅಜಿತ್ ಅಬ್ಬರಿಸಿದ್ದಾರೆ.

Good Bad Ugly twitter Reviews  Ajith Film Divides Netizens

ಜಿ. ವಿ ಪ್ರಕಾಶ್ ಕುಮಾರ್ ಸಂಗೀತ, ಅಭಿನಂದರ್ ರಾಮಾನುಜಂ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರಭು, ಅರ್ಜುನ್ ದಾಸ್, ಪ್ರಸನ್ನ, ಉಷಾ ಉತ್ತುಪ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ. ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ 'ಗುಡ್‌ ಬ್ಯಾಡ್ ಅಗ್ಲಿ' ಸಿನಿಮಾ ನಿರ್ಮಾಣವಾಗಿದೆ.

ನಟ ಅಜಿತ್ ದೊಡ್ಡ ಅಭಿಮಾನಿ ನಿರ್ದೇಶಕ ಅದಿಕ್ ರವಿಚಂದ್ರನ್. ಹಾಗಾಗಿ ಒಬ್ಬ ಅಭಿಮಾನಿಯಾಗಿ ತನ್ನ ನೆಚ್ಚಿನ ನಟನನ್ನು ಹೇಗೆ ತೆರೆಮೇಲೆ ನೋಡಬೇಕು ಎಂದುಕೊಂಡಿದ್ದರೋ ಅದೇ ರೀತಿ ಸಿನಿಮಾ ಮಾಡಿದ್ದಾರೆ. ಅಭಿಮಾನಿಗಳನ್ನು ರಂಜಿಸುವಲ್ಲಿ ಸಿನಿಮಾ ಗೆದ್ದಿದೆ. ಆದರೆ ಸಾಧಾರಣ ಪ್ರೇಕ್ಷಕರು ಸಿನಿಮಾ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಸಿನಿಮಾ ನೋಡಿದವರು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ವಿಂಟೇಜ್ ಅಜಿತ್ ಹವಾ

ಫಸ್ಟ್‌ ಹಾಫ್ ಅಭಿಮಾನಿಗಳಿಗೆ ಹಬ್ಬ. ವೃತ್ತಿಜೀವನದ ಬೆಸ್ಟ್ ಎಂಟ್ರೋ.. ಟೈಟಲ್ ಕಾರ್ಡ್ ಅಂತೂ ಬೆಂಕಿ. ಅರ್ಜುನ್ ದಾಸ್ ನಟನೆ ಸೂಪರ್. ಬಹಳ ಸ್ಟೈಲಿಶ್ ಆಗಿ ಸಿನಿಮಾ ಕಟ್ಟಿಕೊಡಲಾಗಿದೆ. ಇಂಟರ್‌ವಲ್ ಬಹಳ ಸೊಗಸಾಗಿದೆ. ಅದರಲ್ಲೂ ಪ್ರಕಾಶ್ ಕುಮಾರ್ ಹಿನ್ನೆಲೆ ಸಂಗೀತ ಸಖತ್ತಾಗಿದೆ. ವಿಂಟೇಜ್ ಅಜಿತ್ ಚಿತ್ರದಲ್ಲಿ ನೋಡಬಹುದು. ಅವರ ಎನರ್ಜಿ, ಸ್ಕ್ರೀನ್ ಪ್ರಸೆನ್ಸ್‌ ಮಜಬೂತಾಗಿದೆ. ಅದಿಕ್ ನಿರ್ದೇಶನ ಚಿತ್ರದ ಹೈಲೆಟ್, ಅಜಿತ್ ಹಳೇ ಸಿನಿಮಾ ರೆಫರೆನ್ಸ್ ಚೆನ್ನಾಗಿ ವರ್ಕ್ ಆಗಿದೆ. ಸೆಕೆಂಡ್ ಹಾಫ್ ಕೂಡ ಚೆನ್ನಾಗಿದೆ. ಒಟ್ಟಾರೆ ಸಿನಿಮಾ ಹಿಟ್ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಅಜಿತ್ ಡಬಲ್ ಆಕ್ಷನ್

ಅಜಿತ್ ಇಂಟ್ರಡಕ್ಷನ್ ಬೇರೆ ಲೆವೆಲ್‌ನಲ್ಲಿದೆ. ಗಾಡ್‌ಬ್ಲೆಸ್ ಯು ಸಾಂಗ್ ಬಂದಾಗ ಚಿತ್ರಮಂದಿರದಲ್ಲಿ ಅಭಿಮಾನಿಗಳ ಆರ್ಭಟ ಜೋರಾಗುತ್ತದೆ. ಜಿ. ವಿ ಪ್ರಕಾಶ್ ಕುಮಾರ್ ಸಾಂಗ್ಸ್ ಹಾಗೂ ಬಿಜಿಎಂ ಬೊಂಬಾಟ್. ಇಂಟರ್‌ವಲ್ ಕೂಡ ಸೂಪರ್. ಸೆಕೆಂಡ್ ಹಾಫ್‌ನಲ್ಲಿ ಅಜಿತ್ ಡಬಲ್ ಆಕ್ಷನ್. ಕ್ಲೈಮ್ಯಾಕ್ಸ್ ಕೂಡ ಚೆನ್ನಾಗಿದೆ. ಕೊಂಚ ಲ್ಯಾಗ್ ಎನಿಸಿದರೂ ಒಂದೊಳ್ಳೆ ಸಿನಿಮಾ ನೋಡಿದ ಅನುಭವ ಸಿಗುತ್ತದೆ. ನನ್ನ ರೇಟಿಂಗ್ 3.75/5 ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ನಿರೀಕ್ಷೆ ತಲುಪುವುದಿಲ್ಲ

'ಗುಡ್‌ ಬ್ಯಾಡ್ ಅಗ್ಲಿ' ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಕೆಲ ಅಂಶಗಳು ಚೆನ್ನಾಗಿದೆ. ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಫಸ್ಟ್ ಹಾಫ್ ಬಳಿಕ ಫ್ಲ್ಯಾಶ್ ಬ್ಯಾಕ್ ಸನ್ನಿವೇಶದೊಂದಿಗೆ ಸೆಕೆಂಡ್ ಹಾಫ್ ಶುರುವಾಗುತ್ತದೆ. ಆದರೆ ಬಳಿಕ ಕೊಂಚ ಡ್ರ್ಯಾಗ್ ಎನಿಸುತ್ತದೆ. ಕೆಲವು ಸನ್ನಿವೇಶಗಳು ಸೊಗಸಾಗಿದ್ದು ವಿಂಟೇಜ್ ಅಜಿತ್ ಅವರನ್ನು ನೋಡುವುದೇ ಚೆಂದ. ಚಿತ್ರದಲ್ಲಿ ಕಥೆ, ಭಾವನಾತ್ಮಕ ಸನ್ನಿವೇಶಗಳಿಲ್ಲ. ಬರೀ ಬಿಲ್ಡಪ್ ಜಾಸ್ತಿ ಇದೆ. ಬಿಜಿಎಂ ಚೆನ್ನಾಗಿದೆ. ಆದರೆ ಇನ್ನು ಚೆನ್ನಾಗಿ ಮಾಡಬಹುದಿತ್ತು. ಪ್ರೊಡಕ್ಷನ್ಸ್ ವ್ಯಾಲೂಸ್ ಗುಡ್. ಸಂಪೂರ್ಣವಾಗಿ ನಿರೀಕ್ಷೆ ತಲುಪುವುದಿಲ್ಲ. ಆದರೂ ಇತ್ತೀಚೆಗೆ ಬಂದ ಅಜಿತ್ ಸಿನಿಮಾಗಳಲ್ಲಿ ಇದು ಚೆನ್ನಾಗಿದೆ ಎಂದು ಇನ್ನೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಭಿಮಾನಿಗಳಿಗೆ ಮಾತ್ರ

ಕ್ರಿಸ್ಟೋಫರ್ ಕನಕರಾಜ್ ಎಂಬುವವರು ಟ್ವೀಟ್ ಮಾಡಿ ಫಸ್ಟ್ ಹಾಫ್, ಎನರ್ಜಿಟಿಕ್ ಅಜಿತ್ ಕುಮಾರ್. ಬರೀ ಬಿಲ್ಡಪ್ಸ್, ಸ್ಲೋ ಮೋಷನ್ ಸೀನ್‌ಗಳು ಹಾಗೂ ಫೈಟ್ಸ್. ಅಭಿಮಾನಿಗಳಿಗೆ ಹಬ್ಬ, ಕಥೆ ಇಲ್ಲ, ಯಾವುದೇ ಎಮೋಷನ್ ಇಲ್ಲ. ಇಂಟರ್‌ವಲ್ ಟ್ವಿಸ್ಟ್ ಸೂಪರ್. ಸೆಕೆಂಡ್ ಹಾಫ್‌ನಲ್ಲಿ ರೆಡ್ ಡ್ರ್ಯಾಗನ್ ಹವಾ. ಬಹಳ ದಿನಗಳ ಬಳಿಕ ಎನರ್ಜಿಟಿಕ್ ಅಜಿತ್ ಕಾಣುತ್ತಾರೆ. ಪಕ್ಕಾ ಒನ್‌ಮ್ಯಾನ್ ಶೋ. ಅರ್ಜುನ್‌ ದಾಸ್‌ಗೆ ಹೆಚ್ಚು ಅವಕಾಶ ಸಿಕ್ಕಿದೆ. ಓವರ್‌ಡೋಸ್ ರೆಟ್ರೋ ಸಾಂಗ್ಸ್, ಅಭಿಮಾನಿಗಳಾಗಿ ಮಾಡಿರೋ ಸಿನಿಮಾ ಎಂದು ಬರೆದುಕೊಂಡಿದ್ದಾರೆ.

ಈಗ್ಲೇ ಟಿಕೆಟ್ ಬುಕ್ ಮಾಡಿ

'ಗುಡ್‌ ಬ್ಯಾಡ್ ಅಗ್ಲಿ' 30 ವರ್ಷಗಳ ಅಜಿತ್‌ ಕುಮಾರ್ ಸಿನಿಮಾ ಜರ್ನಿಯ ಸಂಭ್ರಮಾಚರಣೆ. ಮಾಸ್ ಪಕ್ಕಾ ಮಾಸ್. ಅಭಿಮಾನಿಗಳಿಗೆ ಹೇಳಿಮಾಡಿಸಿದಂತೆ ಮಾಡಿರುವ ಸಿನಿಮಾ. ಮೆಗಾ ಬ್ಲಾಕ್‌ಬಸ್ಟರ್. ಈಗ್ಲೇ ಟಿಕೆಟ್ ಬುಕ್ ಮಾಡಿ. ನಿಮಗೆ ನಿರಾಸೆಯಾಗುವುದಿಲ್ಲ. ನನಗೆ ಸಿನಿಮಾ ಬಹಳ ಇಷ್ಟವಾಯಿತು ಎಂದು ಕಾರ್ತಿಕ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಅತಿಯಾದ ಆಕ್ಷನ್

ವೀಕ್ ಸ್ಕ್ರಿಪ್ಟ್. ಊಹಿಸಿಬಿಡಬಹುದಾದ ಕಥೆ. ಅತಿಯಾದ ಆಕ್ಷನ್ ಮತ್ತು ನಿಧಾನಗತಿಯ ಸೆಕೆಂಡ್ ಹಾಫ್ ನಿರಾಶೆ ಉಂಟು ಮಾಡುತ್ತದೆ. ಒಂದಷ್ಟು ರೆಫರೆನ್ಸ್‌ಗಳು ಮತ್ತು ಎಲಿವೇಷನ್ಸ್ ಇದ್ದರೂ ಅದನ್ನು ಹಿಡಿದಿಟ್ಟುಕೊಳ್ಳಲು ಸರಿಯಾದ ಕಥೆಯಿಲ್ಲ. ಅಜಿತ್ ಸ್ವ್ಯಾಗ್ ಮಾತ್ರ ಮಂದಗತಿಯ ಸಿನಿಮಾವನ್ನು ಉಳಿಸೋಕೆ ಸಾಧ್ಯವಿಲ್ಲ. ಮರೆತುಬಿಡಬಹುದು ಎಂದು ಮತ್ತೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಜಿತ್ ದರ್ಬಾರ್

ಅಜಿತ್‌ಗೆ ಅಭಿಮಾನಿಯಾಗಿ ಅದಿಕ್ ಕಟ್ಟಿಕೊಟ್ಟಿರುವ ಸಿನಿಮಾ 'ಗುಡ್‌ ಬ್ಯಾಡ್ ಅಗ್ಲಿ'. ಪ್ರತಿ ಫ್ರೇಮ್‌ನಲ್ಲಿ ಅಜಿತ್ ಮೇಲಿನ ಅಭಿಮಾನ, ಹುಚ್ಚುತನ ಎದ್ದು ಕಾಣುತ್ತದೆ. ಕಥೆಯ ಬಗ್ಗೆ ಹೆಚ್ಚು ಮಾತನಾಡುವಂಥದ್ದು ಏನು ಇಲ್ಲ. ಇದು ಬರೀ ಅಜಿತ್ ದರ್ಬಾರ್ ಅಷ್ಟೆ. ಅದರಲ್ಲಿ ಆತ ಗೆದ್ದಿದ್ದಾನೆ. ನಿರೀಕ್ಷಿಸಿದ್ದಕ್ಕಿಂತ ಕೊಂಚ ಆರ್ಭಟ ಹೆಚ್ಚಾಗಿದೆ. ಆದರೂ ಎಂಜಾಯ್ ಮಾಡ್ದೆ ಎಂದು ಮಗದೊಬ್ಬರು ಟ್ವೀಟ್ ಮಾಡಿದ್ದಾರೆ.

ನೆನಪಿನಲ್ಲಿ ಉಳಿಯುವ ಚಿತ್ರ

'ಗುಡ್‌ ಬ್ಯಾಡ್ ಅಗ್ಲಿ' ಸಖತ್ ಮಜವಾಗಿದೆ. ಅದಿಕ್ ವರ್ಷನ್ ಆಫ್ ಕೆಜಿಎಫ್ ಸಿನಿಮಾ ಎನ್ನುವಂತಿದೆ. ಅಭಿಮಾನಿಯಾಗಿ ಓವರ್‌ಡೋಸ್ ಎನ್ನುವಂತೆ ಸಿನಿಮಾ ತೆರೆಗೆ ತಂದಿದ್ದಾರೆ. ಇಂಟ್ರೊಡಕ್ಷನ್ ಹಾಗೂ ಇಂಟರ್‌ವಲ್ ಮೈಜುಮ್ ಎನಿಸುವಂತಿದೆ. ಎಂಡ್ ಕ್ರೆಡಿಟ್ಸ್ ಕೂಡ ಸಖತ್ತಾಗಿದೆ. ಅಜಿತ್ ಅಭಿಮಾನಿಗಳಿಗೆ ಚಿತ್ರಮಂದಿರಗಳಲ್ಲಿ ಒಂದೊಳ್ಳೆ ಅನುಭವ. ಅಜಿತ್ ಕರಿಯರ್‌ನಲ್ಲಿ 'ಧೀನಾ' ರೀತಿಯಲ್ಲೇ ಈ ಸಿನಿಮಾ ನೆನಪಿನಲ್ಲಿ ಉಳಿಯುತ್ತದೆ ಎಂದು ಸಿನಿಮಾ ನೋಡಿದ ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಒಟ್ಟಾರೆ ಪರವಾಗಿಲ್ಲ

"ಒಬ್ಬ ಅಜಿತ್ ಅಭಿಮಾನಿ ಆಗಿ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಿದ್ದೆ. ಕೆಲವು ಭಾಗ ಚೆನ್ನಾಗಿದೆ, ಮತ್ತೆ ಕೆಲವು ಭಾಗ ನನಗೆ ಇಷ್ಟ ಆಗಲಿಲ್ಲ, ಆದರೆ ನನ್ನ ಪತ್ನಿ ಇಡೀ ಸಿನಿಮಾ ಎಂಜಾಯ್ ಮಾಡಿದಳು. ಕಂಟೆಂಟ್ ಹೆಚ್ಚಿಲ್ಲ. ಒಟ್ಟಾರೆಯಾಗಿ ಪರವಾಗಿಲ್ಲ" ಎನ್ನುವುದು ಮತ್ತೊಬ್ಬರ ಅಭಿಪ್ರಾಯ.

ಹಣ ವ್ಯರ್ಥ

"ನಿರ್ದೇಶಕ ಅಧಿಕ್ ಪ್ರಬುದ್ಧನಾಗಿ ಯೋಚಿಸಬೇಕು. ಕೇವಲ ಅಜಿತ್ ಅಭಿಮಾನಿಗಳಿಗೆ ಹೇಳಿಮಾಡಿಸಿದ ಸಿನಿಮಾ. ಹೆಚ್ಚೇನು ಇಲ್ಲ. ತೆರೆಮೇಲೆ ಹಾಗೂ ತೆರೆಯ ಹೊರಗೆ ಹಣ ವ್ಯರ್ಥ. ಕೆಟ್ಟ ಸಿನಿಮಾ. ಒಂದೇ ಒಂದು ದೃಶ್ಯವೂ ಒರಿಜಿನಲ್ ಅಲ್ಲ. ಈ ರೀತಿಯ ಸಿನಿಮಾಗಳನ್ನು ಬೆಂಬಲಿಸುವ ಮತ್ತು ಸಂಭ್ರಮಿಸುವ ಜನರು ಪ್ರಬುದ್ಧರಾಗಬೇಕು. ಸಮಯ, ಹಣ ಎಲ್ಲವೂ ವ್ಯರ್ಥ ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

500 ಕೋಟಿ ರೂ, ಗಳಿಸುತ್ತೆ

ಇತ್ತೀಚಿನ ದಿನಗಳಲ್ಲಿ 'ಗುಡ್‌ ಬ್ಯಾಡ್ ಅಗ್ಲಿ' ಒಂದೊಳ್ಳೆ ಕಮರ್ಷಿಯಲ್ ಎಂಟರ್‌ಟೈನರ್. ಕಳೆದ 12 ವರ್ಷಗಳಲ್ಲಿ ಅಜಿತ್ ಅವರ ಬೆಸ್ಟ್ ಸಿನಿಮಾ. ಅಧಿಕ್ ಅವರಿಂದ ಈ ಮಟ್ಟಿಗಿನ ಔಟ್‌ಫುಟ್ ನಿರೀಕ್ಷಿರಲಿಲ್ಲ. ಸಿನಿಮಾ ಸುಲಭವಾಗಿ 500 ಕೋಟಿ ರೂ. ಗಳಿಸುತ್ತದೆ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಟ್ಟಾರೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಕಾದು ನೋಡಬೇಕು.

More from Filmibeat

English summary
Good Bad Ugly X Review; Check out how Kollywood fans reacted to Ajith and trisha starrer
Read more about: ajith review kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X