»   » ಪತ್ರಕರ್ತ ಗೌರೀಶ್ ಅಕ್ಕಿ ಪ್ರಯತ್ನಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್?

ಪತ್ರಕರ್ತ ಗೌರೀಶ್ ಅಕ್ಕಿ ಪ್ರಯತ್ನಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್?

By Harshitha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಪತ್ರಕರ್ತ ಗೌರೀಶ್ ಅಕ್ಕಿ ನಿರ್ದೇಶಿಸಿರುವ ಚೊಚ್ಚಲ ಚಿತ್ರ 'ಸಿನಿಮಾ ಮೈ ಡಾರ್ಲಿಂಗ್' ಬಿಡುಗಡೆ ಆಗಿದೆ. ಹೊಸಬರ ಹೊಸ ಪ್ರಯತ್ನವಾಗಿರುವ ಈ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ.

  ಗಾಂಧಿನಗರಕ್ಕೆ ಕಾಲಿಡುವ ಹೊಸಬರು ಪಡುವ ಕಷ್ಟ, ಅನುಭವಿಸುವ ನಷ್ಟ, ನೋವು-ವ್ಯಥೆಯೇ 'ಸಿನಿಮಾ ಮೈ ಡಾರ್ಲಿಂಗ್'. ಚಿತ್ರರಂಗಕ್ಕೆ ಕಾಲಿಟ್ಟ ಹೊಸದರಲ್ಲಿ ತಮಗಾದ ಅನುಭವವನ್ನೇ ಸಿನಿಮಾ ಮಾಡಿದ್ದಾರೆ ಗೌರೀಶ್ ಅಕ್ಕಿ.[ಚಿತ್ರರಂಗದ ಕರಾಳ ಮುಖ ಪರಿಚಯಿಸ್ತಾರಂತೆ ಪತ್ರಕರ್ತ ಗೌರೀಶ್ ಅಕ್ಕಿ!]

  ಗೌರೀಶ್ ಅಕ್ಕಿ ರವರ ಹೊಸ ಪ್ರಯತ್ನ ವಿಮರ್ಶಕರಿಗೆ ಇಷ್ಟ ಆಯ್ತಾ? 'ಸಿನಿಮಾ ಮೈ ಡಾರ್ಲಿಂಗ್' ಚಿತ್ರದ ಕುರಿತು ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ಸ್ ಕ್ಲಿಕ್ಕಿಸಿ....

  ಚಿತ್ರ ಮೋಹಿಗಳ ತವಕ ತಲ್ಲಣ - ಪ್ರಜಾವಾಣಿ

  ಗಾಂಧಿನಗರ ಬಣ್ಣದ ಲೋಕ. ಅಲ್ಲಿನ ಗ್ಲಾಮರ್ ಸಿನಿಮಾ ಪ್ರೇಕ್ಷಕನನ್ನು ತಣಿಸುತ್ತದೆ. ಈ ಗ್ಲಾಮರ್ ಜನರ ತೆರೆಯ ಹಿಂದಿನ ಬದುಕನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ‘ಸಿನೆಮಾ ಮೈ ಡಾರ್ಲಿಂಗ್'.

  ಸಿನಿಮಾ ಪ್ರೇಮಿಗಳ ಪ್ರೀಯಿ ಪ್ರೇಮ ಪ್ರಣಯ ಪ್ರಯಾಣ - ಉದಯವಾಣಿ

  ನಿರ್ದೇಶಕ ಗೌರೀಶ್ ಅಕ್ಕಿಗೆ ಚಿತ್ರರಂಗದಲ್ಲಿ ಹೊಸಬರು ಪಡುವ ಪಾಡನ್ನೇ ಸಿನಿಮಾ ಮಾಡಿದರೆ ಹೇಗೆ ಎಂದೆನಿಸಿದ ಪರಿಣಾಮವಾಗಿ ಮೂಡಿಬಂದ ಸಿನಿಮಾವೇ 'ಸಿನಿಮಾ ಮೈ ಡಾರ್ಲಿಂಗ್'. ಈ ಸಿನಿಮಾದ ಮುಖ್ಯ ಆಶಯ ಕೂಡಾ ಹೊಸಬರನ್ನು ಕಡೆಗಣಿಸಬೇಡಿ, ಅವರಲ್ಲೂ ಪ್ರತಿಭೆ ಇರುತ್ತದೆ ಎಂಬುದು. ಜೊತೆಗೆ ಪ್ರತಿಭೆ ಇದೆ ಎಂದಾಕ್ಷಣ ಏನಾದರೂ ಮಾಡಿ ಸಿನಿಮಾ ಮಾಡಬೇಕೆಂಬ ಆತುರವೂ ಬೇಡ ಎಂಬ ಕಿವಿಮಾತು ಕೂಡಾ ಹೊಸಬರಿಗಿದೆ - ರವಿಪ್ರಕಾಶ್ ರೈ

  ಇಂಡಸ್ಟ್ರಿಗೆ ಹೊಸ ರಕ್ತದ ಭರವಸೆ - ವಿಜಯ ಕರ್ನಾಟಕ

  ಸಿನಿಮಾ ಎಂಬುದೇ ಥಳುಕು ಬಳುಕಿನ ಮಾಯಾಪುರಿ. ಅದರ ಮೋಡಿಗೆ ಒಳಗಾಗುವ ತುವ ಜನರ ತುಡಿತ, ಬಿಟ್ಟರೂ ಬಿಡಲಾಗದ ಬಂಧ, ಸಿನಿಮಾ ಮಾಡಲು ಎದುರಾಗುವ ಕಷ್ಟಗಳು, ಈ ಕ್ಷೇತ್ರದ ಆಂತರಿಕ ಕಾಲೆಳೆಯುವಿಕೆ, ಬದುಕಿನ ತಾಕಲಾಟಗಳು ಮತ್ತು ಕೂಡಿಕೊಳ್ಳುವ-ಮುರಿಯುವ ಸಂಬಂಧಗಳು, ಅನ್ಯಾಯಗಳು, ಹತಾಶೆಗಳು ಇಂಥ ರಸಾಭಿವ್ಯಕ್ತಿಯ ಪರಿಣಾಮ ರೂಪುಗೊಂಡಿದೆ ಒಂದು ಸದಭಿರುಚಿಯ ಚಿತ್ರ ಸಿನಿಮಾ ಮೈ ಡಾರ್ಲಿಂಗ್ - ಅವಿನಾಶ್ ಬೈಪಾಡಿತ್ತಾಯ

  Cinema My Darling - Time s of India

  The story is filled with his observations in the industry and also has a message from him to aspirants. The film that begins with some spoofing and caricatures of the film industry, turns later into a saga of dreams, shortcuts and perils faced by people who choose to fight their way into this dazzling world. While Gaurish must be applauded for a good story, the translation on screen falls short from the ideal representation on many counts. Firstly, the film ends up touching too many topics, many of which are forgotten midway and the multiple twists and turns with the many characters ensures the film lasts much longer than it should have - Sunayana Suresh

  Making of a 'struggling' act - Deccan Chronicle

  The only reason behind a bit of buzz around this movie was Gaurish Akki, a journalist who turned director for this venture. With a fair experience working as a film journalist for quite some time, there was lot riding on his debut directorial 'Cinema my Darling.' However, unfortunately it is neither refreshing nor has anything new to offer. It falls flat right from the start, coupled with ordinary making and forgetful performances. - Shashiprasad SM

  English summary
  Journalist turned Director Gowrish Akki's 'Cinema My Darling' has received mixed reviews from the critics. Here is the collection of reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more