twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ಬದುಕಿನ ಮೌಲ್ಯಗಳನ್ನ ಸಾರಲು ಬಂದ ಸೀದಾ ಸಾದ ರಾಜು

    |

    Rating:
    3.0/5
    Star Cast: ಸುದೀಪ್, ಗುರುನಂದನ್, ಆಶಿಕಾ ರಂಗನಾಥ್, ಅವಂತಿಕಾ ಶೆಟ್ಟಿ
    Director: ನರೇಶ್

    ಜೀವನದಲ್ಲಿ ಯಾವುದಕ್ಕೆ ಮೊದಲ ಪ್ರಾಮುಖ್ಯತೆ, ಯಾವುದಕ್ಕೆ ಆದತ್ಯೆ ಕೊಡಬೇಕು ಅನ್ನುವ ಗೊಂದಲದಲ್ಲಿ ಎಲ್ಲರೂ ಇರುತ್ತೇವೆ. ಅಂತಹ ಕೆಲವು ಜೀವನದ ಮೌಲ್ಯಗಳನ್ನ ಪ್ರೇಕ್ಷಕರಿಗೆ ಹೇಳುವ ಪ್ರಯತ್ನ ಕೈ ಹಾಕಿದ್ದಾರೆ 'ರಾಜು ಕನ್ನಡ ಮೀಡಿಯಂ' ಚಿತ್ರತಂಡ. ಫಸ್ಟ್ rank ಪಡೆದ ರಾಜು ಕನ್ನಡದ ಮೀಡಿಯಂನಲ್ಲಿ ಪಾಸ್ ಆಗಿದ್ದಾನಾ? ಸಿನಿಮಾ ಹೇಗಿದೆ? ಚಿತ್ರದ ಸಂಪೂರ್ಣ ವಿಮರ್ಶೆ ಇಲ್ಲಿದೆ. ಮುಂದೆ ಓದಿ..

    ಜೀವನದಲ್ಲಿ ಮುಖ್ಯವಾದದ್ದು ಜೀವನವೇ

    ಜೀವನದಲ್ಲಿ ಮುಖ್ಯವಾದದ್ದು ಜೀವನವೇ

    ಚಿತ್ರದಲ್ಲಿ ನಾಯಕ ರಾಜು (ಗುರುನಂದನ್) ಜೀವನದ ಪ್ರತಿ ಹಂತದಲ್ಲಿ ಒಂದೊಂದು ವಿಚಾರಕ್ಕೆ ಪ್ರಾಮುಖ್ಯತೆ ನೀಡುತ್ತಾ ಬಂದಿರುತ್ತಾನೆ. ಶಾಲೆಯಲ್ಲಿ ಒಂದು ಪ್ರೀತಿ, ಅಪ್ಪನ ಮರಣದ ನಂತರ ಜವಾಬ್ದಾರಿ, ಬೆಂಗಳೂರಿನಲ್ಲಿ ಕೆಲಸ ಆನಂತರ ಮತ್ತೊಂದು ಪ್ರೀತಿಯಲ್ಲಿ ಬೀಳುವ ನಾಯಕ ಜೀವನದಲ್ಲಿ ನಿಲ್ಲದೆ ಓಡುತ್ತಾನೆ. ಪ್ರೀತಿ ಪಡೆದ ನಂತರ ಯಶಸ್ಸಿನ ಹಿಂದೆ ಬೀಳುತ್ತಾನೆ. ಇನ್ನೇನು ಎಲ್ಲವೂ ಸರಿ ಆಯ್ತು ಎಂದುಕೊಳ್ಳುವಷ್ಟರಲ್ಲಿ ಚಿತ್ರದಲ್ಲಿ ದೊಡ್ಡ ತಿರುವು ಸಿಕ್ಕಿಬಿಡುತ್ತದೆ. ಪ್ರತಿಯೊಬ್ಬರ ಜೀವನ ಕಥೆ ಸಿನಿಮೀಯ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಬಂದಿರುವುದೇ 'ರಾಜು ಕನ್ನಡ ಮೀಡಿಯಂ'.

    ಚಿತ್ರದಲ್ಲಿದೆ ಕಿಚ್ಚನ ಖದರ್

    ಚಿತ್ರದಲ್ಲಿದೆ ಕಿಚ್ಚನ ಖದರ್

    'ರಾಜು ಕನ್ನಡ ಮಿಡಿಯಂ' ಸಿನಿಮಾದಲ್ಲಿ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯುಸಿನೆಸ್ ಮ್ಯಾನ್ ದೀಪಕ್ ಚಕ್ರವರ್ತಿ ಆಗಿ ತೆರೆ ಮೇಲೆ ಮಿಂಚಿರುವ ಸುದೀಪ್, ತಮ್ಮ ಡೈಲಾಗ್ ಗಳ ಮೂಲಕ ಪ್ರೇಕ್ಷಕರನ್ನು ಇಂಪ್ರೆಸ್ ಮಾಡುತ್ತಾರೆ. ಚಿತ್ರದಲ್ಲಿ ರಾಜು ಜೀವನಕ್ಕೆ ಮಹತ್ತರವಾದ ತಿರುವನ್ನ ನೀಡುವ ಕೆಲಸವನ್ನ ಮಾಡಿದ್ದಾರೆ ದೀಪಕ್ ಚಕ್ರವರ್ತಿ (ಸುದೀಪ್).

    ಗುರುನಂದನ್-ಅವಂತಿಕಾ ಶೆಟ್ಟಿ ಅಭಿನಯ

    ಗುರುನಂದನ್-ಅವಂತಿಕಾ ಶೆಟ್ಟಿ ಅಭಿನಯ

    ನಟ ಗುರುನಂದನ್ ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಪಾತ್ರದಲ್ಲಿ ಮಿಂಚಿರುವ ಅವಂತಿಕಾ ಶೆಟ್ಟಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಲ ಭಾವನಾತ್ಮಕ ಸನ್ನಿವೇಶಗಳಲ್ಲಿ ಅವಂತಿಕಾ ಶೆಟ್ಟಿ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗುತ್ತಾರೆ.

    ಎಲ್ಲರಿಗೂ ಇಷ್ಟವಾಗುವ ಅಶಿಕಾ ರಂಗನಾಥ್

    ಎಲ್ಲರಿಗೂ ಇಷ್ಟವಾಗುವ ಅಶಿಕಾ ರಂಗನಾಥ್

    ಸಿನಿಮಾದಲ್ಲಿ ಕೆಲವೇ ಸೀನ್ ಗಳಲ್ಲಿ ಮಾತ್ರ ನಟಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹಿಟ್ ಆಗಿರುವ ಹಾಡಿನಲ್ಲಿ ಆಶಿಕಾ ಅಭಿನಯ ತುಂಬಾ ಚೆನ್ನಾಗಿದೆ. ಆಶಿಕಾ ಅಭಿನಯ ನೋಡಿದರೆ ಚಿತ್ರರಂಗದಲ್ಲಿ ಭರವಸೆಯ ನಟಿಯಾಗಿ ಉಳಿದುಕೊಳ್ಳುವ ಎಲ್ಲಾ ರೀತಿಯ ಲಕ್ಷಣಗಳು ಕಾಣುತ್ತವೆ.

    ಉಳಿದ ಕಲಾವಿದರ ಅಭಿನಯ

    ಉಳಿದ ಕಲಾವಿದರ ಅಭಿನಯ

    ರಾಜು ಕನ್ನಡ ಮೀಡಿಯಂ ನಲ್ಲಿ ಅದ್ದೂರಿ ತಾರಾಬಳಗವಿದೆ. ಸಾಧುಕೋಕಿಲ, ಚಿಕ್ಕಣ್ಣ, ಅಮಿತ್, ಅಶೋಕ್, ಜ್ಯೋತಿ, ಕಿರಿಕ್ ಕೀರ್ತಿ, ಪ್ರಥಮ್, ಇಂದ್ರಜಿತ್ ಲಂಕೇಶ್ ಇನ್ನೂ ಅನೇಕರು ಚಿತ್ರದಲ್ಲಿ ಆಕ್ಟ್ ಮಾಡಿದ್ದು ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

    ಗಮನ ಸೆಳೆಯುವ ಕ್ಯಾಮೆರಾ ವರ್ಕ್

    ಗಮನ ಸೆಳೆಯುವ ಕ್ಯಾಮೆರಾ ವರ್ಕ್

    ಸುದೀಪ್ ಅಭಿನಯ, ಕ್ಯಾಮೆರಾ ವರ್ಕ್, ಸಂಭಾಷಣೆ ಚಿತ್ರದ ಪ್ಲಸ್ ಪಾಯಿಂಟ್ಸ್. ರಾಜು ಕನ್ನಡ ಮೀಡಿಯಂ ಸಿನಿಮಾದಲ್ಲಿ ಕಚಗುಳಿ ಇಡುವ ಸಂಭಾಷಣೆ ಪ್ರೇಕ್ಷಕರನ್ನ ನಗೆಗಡಲಲ್ಲಿ ತೇಲಿಸುತ್ತೆ. ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತ ರಾಜು ಜೀವನದ ಕಥೆಯನ್ನ ತೆರೆಮೇಲೆ ನೋಡಿ ಎಂಜಾಯ್ ಮಾಡಬಹುದು.

    ಕುಟುಂಬ ಸಮೇತ ನೋಡಬಹುದಾದ ಚಿತ್ರ

    ಕುಟುಂಬ ಸಮೇತ ನೋಡಬಹುದಾದ ಚಿತ್ರ

    'ಫಸ್ಟ್ rank ರಾಜು' ಸಿನಿಮಾವನ್ನ ನೋಡಿ ಮನೋರಂಜನೆ ಪಡೆದುಕೊಂಡಿದ್ದ ಪ್ರೇಕ್ಷಕರು 'ರಾಜು ಕನ್ನಡ ಮೀಡಿಯಂ' ಚಿತ್ರವನ್ನೂ ಅಷ್ಟೇ ಖುಷಿಯಿಂದ ನೋಡಬಹುದು.

    English summary
    Read Kannada Actor Gurunandan starrer 'Raju Kannada Medium' Movie review. The film is directed by Naresh.
    Saturday, September 29, 2018, 12:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X