ವಿಮರ್ಶೆ: ತೊಂದರೆ ಇರಲಿ, ಸಾವು ಎದುರಿಗೆ ಬರಲಿ ಸ್ಮೈಲ್ ಪ್ಲೀಸ್.. ಮುಖದಲ್ಲಿರಲಿ

ಒತ್ತಡದಲ್ಲೇ ಇರಲಿ, ಸಾಯುವ ದಿನ ಗೊತ್ತಿರಲಿ ಯಾವುದಕ್ಕೂ ಹೆದರದೇ ಸದಾ ನಗುತ್ತಿರಬೇಕು. ಇತರರನ್ನೂ ನಗಿಸುತ್ತಿರಬೇಕು. ಜೀವಂತವಾಗಿ ಇರುವಷ್ಟು ದಿನ ನಮ್ಮ ಸುತ್ತಮುತ್ತಲಿನ ಜನರನ್ನು ನಗಿಸಬೇಕು, ಮುಖದಲ್ಲಿ ಮೂಡುವ ಸ್ಮೈಲ್ ಗೆ ಎಲ್ಲವನ್ನೂ ಮರೆಸುವ ಶಕ್ತಿ ಇದೆ, ಎಂಬುದನ್ನು ಹೇಳುವಲ್ಲಿ ನವ ನಿರ್ದೆಶಕ ರಘು ಸಮರ್ಥ್ 'ಸ್ಮೈಲ್ ಪ್ಲೀಸ್' ಚಿತ್ರದಲ್ಲಿ ಅಕ್ಷರಶಃ ಯಶಸ್ವಿ ಆಗಿದ್ದಾರೆ.

Rating:
3.5/5
Star Cast: ಗುರುನಂದನ್, ಕಾವ್ಯ ಶೆಟ್ಟಿ, ರಂಗಾಯಣ ರಘು, ಸುಧಾ ಬೆಳವಾಡಿ, ಅವಿನಾಶ್ ಯಳಂದೂರು
Director: ರಘು ಸಮರ್ಥ್

ಒಂದೇ ಫ್ಯಾಮಿಲಿ ಸುತ್ತ 'ಸ್ಮೈಲ್ ಪ್ಲೀಸ್'

ಒಂದೇ ಫ್ಯಾಮಿಲಿ ಸುತ್ತ 'ಸ್ಮೈಲ್ ಪ್ಲೀಸ್'

ನೂರು ಹುಡುಗಿಯರನ್ನು ನೋಡಿದರೂ ಮದುವೆಗೆ ಒಪ್ಪದ ನಾಯಕ ಮನು(ಗುರುನಂದನ್), ಹುಡುಗಿ ನೋಡಲು ತನ್ನ ಸೋದರ ಮಾವನ ಮನೆಗೆ ಹೋಗಿ, ತುಂಬಾ ಶಿಸ್ತು ಇರುವ ದೊಡ್ಡ ಕುಟುಂಬದಲ್ಲಿ ಎಲ್ಲರನ್ನು ಸ್ವತಂತ್ರರಾಗಿಸಿ ಎಲ್ಲರನ್ನು ನಗಿಸುವ ಚಾಲೆಂಜ್ ಸ್ವೀಕರಿಸುತ್ತಾನೆ. ಈ ಚಾಲೆಂಜ್ ಗಳನ್ನು ನಾಯಕ ಹೇಗೆಲ್ಲಾ ನಿರ್ವಹಿಸುತ್ತಾನೆ, ನಗಿಸುವುದರಲ್ಲಿ ಎಷ್ಟು ಸಕ್ಸಸ್ ಆಗುತ್ತಾನೆ ಎಂಬುದೇ ಚಿತ್ರದ ಕಥೆ.

ಇತರರಿಗಾಗಿ ಆದರೂ ಒಂದಷ್ಟು ದಿನ ಬದುಕಿ

ಇತರರಿಗಾಗಿ ಆದರೂ ಒಂದಷ್ಟು ದಿನ ಬದುಕಿ

ಮಾವ(ಶ್ರೀನಿವಾಸ ಪ್ರಭು) ಸದಾ ಮುಖ ಗಂಟಿಕ್ಕಿಕೊಂಡು, ಕುಟುಂಬದ ಸದಸ್ಯರಲ್ಲಿ ಶಿಸ್ತು ಸದಾ ಇರುವಂತೆ ಕಾಪಾಡಿಕೊಂಡಿರುತ್ತಾರೆ. ಆ ಕುಟುಂಬದೊಳಗೆ ಸೇರುವ ಮನು(ಗುರುನಂದನ್) 'ಲೈಫ್ ಒಂದು ಕಾಮಿಡಿ' ಎನ್ನುವ ಹೊಸ ಜೀವನ ಸೂತ್ರ ಪರಿಚಯಿಸಲು ಮುಂದಾಗುತ್ತಾರೆ. ಆ ಹೊಸ ಬದುಕಿನ ಶೈಲಿ ಯಾವುದು ಎಂದು ತೆರೆಮೇಲೆ ನೋಡುವಷ್ಟರಲ್ಲಿ ಚಿತ್ರದ ನಾಯಕನಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಇರುವುದು ಗೊತ್ತಾಗುತ್ತದೆ. ಹಾಗಿದ್ರೆ ಮುಂದೇನು ಅನ್ನೋದನ್ನ ಚಿತ್ರಮಂದಿರದಲ್ಲೇ ನೋಡಿ.

Rank ಸ್ಟಾರ್ ಫುಲ್ ಸ್ಪೀಡ್

Rank ಸ್ಟಾರ್ ಫುಲ್ ಸ್ಪೀಡ್

'ಸ್ಮೈಲ್ ಪ್ಲೀಸ್' ಚಿತ್ರದ ನಾಯಕ ಗುರುನಂದನ್, ಜನರ ಸ್ಮೈಲ್ ಗಾಗಿ ತುಂಬಾ ವೇಗದ ಡೈಲಾಗ್ ಡೆಲಿವರಿ ಮಾಡಿ ನಗಿಸುವಲ್ಲಿ ಜನರ ಮನ್ನಣೆ ಗಳಿಸುತ್ತಾರೆ. ಡಬಲ್ ಮೀನಿಂಗ್ ಬದಲಾಗಿ ನೇರವಾಗಿ ಹಾಸ್ಯದ ಡೈಲಾಗ್ ಗಳನ್ನು ಹೇಳುತ್ತ ಗುರುನಂದನ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಕಾವ್ಯಾ ಶೆಟ್ಟಿ ನಗುವುದು ಕಡಿಮೆ

ಕಾವ್ಯಾ ಶೆಟ್ಟಿ ನಗುವುದು ಕಡಿಮೆ

ಚಿತ್ರದ ಮೂಕ್ಕಾಲು ಭಾಗವು ಹೆಚ್ಚು ನಗದೇ, ಮಾನಸ(ಕಾವ್ಯಾ ಶೆಟ್ಟಿ) ಸೈಲಾಂಟಾಗೇ ಇದ್ದರೂ ತಮ್ಮ ನೋಟದಲ್ಲೇ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸುತ್ತಾರೆ.

ಉಳಿದವರು..

ಉಳಿದವರು..

ಚಿತ್ರ ಸಂಪೂರ್ಣ ಫ್ಯಾಮಿಲಿ ಎಂಟರ್ ಟೈನರ್ ಆಗಿರುವುದರಿಂದ ನಾಯಕ ಮತ್ತು ನಾಯಕಿಯಷ್ಟೇ ಇತರೆ ಪಾತ್ರಗಳಿಗೂ ಪ್ರಾಮುಖ್ಯತೆ ಕೊಡಲಾಗಿದೆ. ಆದ್ದರಿಂದ ರಂಗಾಯಣ ರಘು, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣಾ ಬಾಲರಾಜ್‌ ಎಲ್ಲರೂ ಸಹ ಸಮನಾಗಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಒತ್ತಡ, ಪ್ರೀತಿ ಮತ್ತು ನಗು

ಒತ್ತಡ, ಪ್ರೀತಿ ಮತ್ತು ನಗು

ಒತ್ತಡ ಜೀವನದಿಂದ ಎಲ್ಲರೂ ನಗುವನ್ನು ಮರೆಯುತ್ತಾರೆ. ಶಿಸ್ತು ಎಂದು ಪುರುಷ ಪ್ರಧಾನ ಕುಟುಂಬದಲ್ಲಿ ಕೆಲವು ಅಪ್ಪಂದಿರು ಮಕ್ಕಳ ಸ್ವತಂತ್ರ ಕಿತ್ತು ಕೊಳ್ಳುತ್ತಾರೆ. ಈ ಎಲ್ಲದಕ್ಕೂ ಬ್ರೇಕ್ ಹಾಕಿ, ನಗುವುದನ್ನು ಕಲಿಯಿರಿ. ಲೈಫ್ ನಲ್ಲಿ ಕಾಮಿಡಿ ಗೆ ಎಲ್ಲವನ್ನು ಮರೆಸುವ ಶಕ್ತಿ ಇದೆ ಎಂಬುದನ್ನು ಹೇಳಲಾಗಿದೆ.

ನಗಿಸುವಲ್ಲಿ ನಿರ್ದೇಶಕರು ಸಕ್ಸಸ್

ನಗಿಸುವಲ್ಲಿ ನಿರ್ದೇಶಕರು ಸಕ್ಸಸ್

ನಿರ್ದೇಶಕ ರಘು ಸಮರ್ಥ್, ಮೊದಲ ಚಿತ್ರದಲ್ಲೇ ಸೇಡು, ಫೈಟು, ಸಂಪೂರ್ಣ ಲವ್ ಸ್ಟೋರಿ, ರಾಜಕೀಯ, ಹೀಗೆ ಯಾವುದೇ ವಿಷಯಗಳನ್ನು ತೆರೆ ಮೇಲೆ ತಂದಿಲ್ಲ. ಸಿನಿ ಪ್ರಿಯರು ಶಾಂತವಾಗಿ ಮನರಂಜನೆ ಅಂಶಗಳನ್ನು ಮಾತ್ರ ಗಮನಹರಿಸುವಂತೆ ಪ್ರೇಕ್ಷಕರನ್ನು ಕೊನೆವರೆಗೂ ಕೂರಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಛಾಯಾಗ್ರಹಣದಲ್ಲಿ ಕೊಂಚ ಮಂಕು

ಛಾಯಾಗ್ರಹಣದಲ್ಲಿ ಕೊಂಚ ಮಂಕು

ಚಿಕ್ಕಮಗಳೂರು, ಮಂಗಳೂರು, ಮಲೆನಾಡು ಬ್ಯಾಕ್ ಡ್ರಾಪ್, ಸಕಲೇಶ್ವರ ಸೇರಿದಂತೆ, ಹೆಚ್ಚು ಮಲೆನಾಡು ಪ್ರದೇಶಗಳಲ್ಲಿ ಚಿತ್ರೀಕರಣವಾಗಿದ್ದರೂ, ಫ್ರೇಮ್ ನಲ್ಲಿ ಅಷ್ಟೊಂದು ಬ್ಯೂಟಿಫುಲ್ ದೃಶ್ಯಗಳು ಕಂಡುಬಂದಿಲ್ಲ. ಛಾಯಾಗ್ರಹಣದಲ್ಲೂ ಕೊಂಚ ಮಂಕು ಇರುವುದು ಕಂಡುಬಂದಿದೆ.

ಮನಸ್ಸಿನಲ್ಲಿ ಉಳಿಯದ ಹಾಡುಗಳು

ಮನಸ್ಸಿನಲ್ಲಿ ಉಳಿಯದ ಹಾಡುಗಳು

'ಸ್ಮೈಲ್ ಪ್ಲೀಸ್' ಚಿತ್ರದ ಹಿನ್ನೆಲೆ ಸಂಗೀತಕ್ಕೆ ಫುಲ್ ಮಾರ್ಕ್ಸ್ ಕೊಡಬಹುದು. ಸಿನಿಮಾ ದ ಮೂರು ಹಾಡುಗಳನ್ನು ಥಿಯೇಟರ್ ನಲ್ಲಿ ನೋಡಿದ ನೆನಪು. ವಿಡಿಯೋ ಹಾಡುಗಳ ಬಗ್ಗೆ ಇನ್ನಷ್ಟು ಗಮನಹರಿಸಬೇಕಿತ್ತು.

ಕಂಪ್ಲೀಟ್ ಫ್ಯಾಮಿಲಿ ಎಂಟರ್ ಟೈನರ್

ಕಂಪ್ಲೀಟ್ ಫ್ಯಾಮಿಲಿ ಎಂಟರ್ ಟೈನರ್

ಎಲ್ಲರೂ ಸ್ವತಂತ್ರವಾಗಿ ತಮ್ಮ ಲೈಫ್ ಲೀಡ್ ಮಾಡಲು, ಹೊರಗಡೆ ಪ್ರಪಂಚ ನೋಡಬೇಕು. ಸಾಯುವ ಮುನ್ನ ಇತರರಿಗಾಗಿ ಆದರು ಒಂದಷ್ಟು ದಿನ ಬದುಕಿ, ಸುತ್ತ ಮುತ್ತಲಿನ ಜನರನ್ನು ನಗಿಸಬೇಕು ಎನ್ನುವ ಸಂದೇಶವನ್ನು ಸ್ಮೈಲ್ ಪ್ಲೀಸ್ ಚಿತ್ರ ಹೊಂದಿದೆ. 'ಸ್ಮೈಲ್ ಪ್ಲೀಸ್' ಚಿತ್ರವನ್ನು ಕ್ಲಾಸ್ ಮತ್ತು ಮಾಸ್ ಎಂಬ ಭೇದಭಾವ ಇಲ್ಲದೇ, ಕುಟುಂಬ ಸಮೇತ ಕುಳಿತು ನೋಡಬಹುದು.

ಫೈನಲ್ ಸ್ಟೇಟ್ ಮೆಂಟ್

ಫೈನಲ್ ಸ್ಟೇಟ್ ಮೆಂಟ್

ಕಂಪ್ಲೀಟ್ ಮನರಂಜನೆ ಬೇಕು. ಸ್ವಲ್ಪನೂ ಬೋರ್ ಆಗಬಾರದು ಎಂದು ಥಿಂಕ್ ಮಾಡುವವರು ನಿಸ್ಸಂಶಯವಾಗಿ ಈ ಚಿತ್ರ ನೋಡಬಹುದು. Rank ಸ್ಟಾರ್ ಮತ್ತೆ ನಗಿಸುವಲ್ಲಿ ಸಕ್ಸಸ್ ಆಗಿದ್ದಾರೆ.

More from Filmibeat

English summary
Gurunandan and Kavya Shetty Starrer Kannada Movie 'Smile Please' has hit the screens today (February 10th). Here is the review of 'Smile Please' movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X