Hari Hara Veera Mallu X Review: 'ಹರಿಹರ ವೀರಮಲ್ಲು' ಸಿನಿಮಾ ನೋಡಿದವರ ರಿಯಾಕ್ಷನ್
ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಒಳ್ಳೆ ಸಿನಿಮಾ ಆಗುವ ಎಲ್ಲಾ ಅವಕಾಶಗಳನ್ನು ಚಿತ್ರತಂಡ ತನ್ನ ಕೈಯಾರೆ ಹಾಳು ಮಾಡಿಕೊಂಡಿದೆ. ಒಂದು ದಿನ ಮೊದಲೇ ಪ್ರೀಮಿಯರ್ ಶೋಗಳಲ್ಲಿ ಅಭಿಮಾನಿಗಳು ಸಿನಿಮಾ ನೋಡಿದ್ದಾರೆ.
ಎ. ಎಂ ರತ್ನಂ ಹಾಗೂ ದಯಾಕರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಾಜಕೀಯರಂಗದಲ್ಲಿ ಸಕ್ರಿಯರಾಗಿರುವ ಪವನ್ ಕಲ್ಯಾಣ್ ಸಿನಿಮಾಗಳಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಹಾಗಾಗಿ ಸದ್ಯ ಅರ್ಧಕ್ಕೆ ನಿಂತಿದ್ದ ಸಿನಿಮಾಗಳನ್ನು ಮುಗಿಸುತ್ತಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟನ ಕೊನೆಯ ಸಿನಿಮಾಗಳನ್ನು ದೊಡ್ಡದಾಗಿ ಸೆಲೆಬ್ರೇಟ್ ಮಾಡುವ ಪ್ರಯತ್ನದಲ್ಲಿದ್ದಾರೆ. ಆದರೆ ಸಿನಿಮಾ ತೆರೆಮೇಲೆ ನಿರಾಸೆ ಮೂಡಿಸಿ ಬೇಸರ ತಂದಿದೆ.

250 ಕೋಟಿ ರೂ. ಬಜೆಟ್‌ನಲ್ಲಿ 'ಹರಿಹರ ವೀರಮಲ್ಲು' ಸಿನಿಮಾ ನಿರ್ಮಾಣ ಮಾಡಿರುವುದಾಗಿ ಸ್ವತಃ ನಿರ್ದೇಶಕರೇ ಹೇಳಿದ್ದರು. ಅದಕ್ಕೆ ತಕ್ಕಂತೆ ಸಿನಿಮಾ ಇದ್ಯಾ? ಎಂದು ಪ್ರೇಕ್ಷಕರು ಬೇಸರಗೊಂಡಿದ್ದಾರೆ. ಈಗಾಗಲೇ ಸಿನಿಮಾ ನೋಡಿದವರು 'X' ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬೋರಿಂಗ್ ಆಗಿದೆ
ಪ್ರತ್ಯೂಷ ಎಂಬುವವರು ಟ್ವೀಟ್ ಮಾಡಿ "ಈ ಸಿನಿಮಾ ಮೂಲಕ ಪವನ್ ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಅವಕಾಶ ಕಳೆದುಕೊಂಡ್ರು. ವಿಎಎಫ್‌ಎಕ್ಸ್ ಬಹಳ ಕೆಟ್ಟದಾಗಿದೆ. ಪವನ್ ಲುಕ್ಸ್ ಬಗ್ಗೆ ಗಮನ ಹರಿಸಿಲ್ಲ. ವಯಸ್ಸಾದಂತೆ ಕಾಣುವ ಅವರು ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಕೆಟ್ಟದಾಗಿ ಕಾಣುತ್ತಾರೆ. ಪವನ್ ಕಲ್ಯಾಣ್ ನಟನೆ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದಂತಿಲ್ಲ. ಕಾಟಚಾರದ ಬರವಣಿಗೆ, ಅರ್ಥವಿಲ್ಲದಂತೆ ಬ್ಯಾಕ್ ಟು ಬ್ಯಾಕ್ ಆಕ್ಷನ್ ಸನ್ನಿವೇಶಗಳು, ಪವನ್ ಡೈಲಾಗ್ಸ್ ಎಲ್ಲವೂ ಬೋರಿಂಗ್" ಎಂದು ಬರೆದುಕೊಂಡಿದ್ದಾರೆ.
ಪವನ್ ಮ್ಯಾಜಿಕ್ ಮಿಸ್
ಸಿನಿಮಾ ನೋಡಿ ಬಂದೆ. ಸೆಕೆಂಡ್ ಹಾಫ್ ಬಹಳ ಬೇಸರ ಮೂಡಿಸಿತು. ಪವನ್ ನಟನೆ ಹಾಗೂ ಮ್ಯಾಜಿಕ್ ಕಳೆದುಕೊಂಡಿದ್ದಾರೆ. ಬಾಬಿ ಡಿಯೋಲ್ ಪರ್ಫಾರ್ಮನ್ಸ್ ಓಕೆ, ಓಕೆ. ನಿಧಿ ತೆರೆಮೇಲೆ ಚೆನ್ನಾಗಿ ಕಾಣುತ್ತಾರೆ. ವಿಎಫ್‌ಎಕ್ಸ್ ಬಹಳ ಕೆಟ್ಟದಾಗಿದೆ. ಟಿಕೆಟ್ ಬೆಲೆ ತಕ್ಕ ಒಂದೇ ಒಂದು ಸನ್ನಿವೇಶ ಇಲ್ಲ. ಕ್ಲೈಮ್ಯಾಕ್ಸ್ ಮತ್ತಷ್ಟು ದಾರುಣವಾಗಿದೆ ಎನ್ನುವುದು ಮತ್ತೊಬ್ಬರ ಅಭಿಪ್ರಾಯ.
ಪವನ್ ಆರ್ಭಟ ಜೋರು
'ಹರಿಹರ ವೀರಮಲ್ಲು' ಬರೀ ಸಿನಿಮಾ ಅಲ್ಲ. ಅದು ಭಾರತದಲ್ಲಿ ಸಮಾಧಿಯಾಗಿರುವ ಸತ್ಯವನ್ನು ತೆರೆದಿಟ್ಟಿದೆ. ಪವನ್ ಕಲ್ಯಾಣ್ ತೆರೆಮೇಲೆ ಅಬ್ಬರಿಸಿದ್ದಾರೆ. ಔರಂಗಜೇಬನ ದಬ್ಬಾಳಿಕೆ ಮಟ್ಟಹಾಕಿ, ಸನಾತನ ಧರ್ಮ ಹೆಮ್ಮೆ ಪುನಃ ಸ್ಥಾಪಿಸುವಂತಿದೆ" ಎಂದು ಮೃಣಾಲ್ ಮಂಜರಿ ಎಂಬವವರು ಟ್ವೀಟ್ ಮಾಡಿದ್ದಾರೆ.
ನಿರಾಸೆ ಮೂಡಿಸುತ್ತದೆ
ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನು ನೋಡಿ ಸಿನಿಮಾ ನೋಡಲು ಉತ್ಸುಕರಾಗಿದ್ದೆವು. ಆದರೆ ಕಥೆ ಹಾಗೂ ವಿಷ್ಯುವಲ್ ಎಫೆಕ್ಟ್ ವಿಚಾರದಲ್ಲಿ ಸಿನಿಮಾ ನಮ್ಮ ನಿರೀಕ್ಷೆ ತಲುಪಲಿಲ್ಲ. ಕೀರವಾಣಿ ಸೇರಿದಂತೆ ಕೆಲವರು ಮಾತ್ರ ಚಿತ್ರಕ್ಕಾಗಿ ತಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸಿದ್ದಾರೆ ಎನ್ನುವುದು ಮತ್ತೊಬ್ಬರ ಪ್ರತಿಕ್ರಿಯೆಯಾಗಿದೆ.
ಓಕೆ ಓಕೆ
ಫಸ್ಟ್ ಹಾಫ್ ಚೆನ್ನಾಗಿದೆ. ಸೆಕೆಂಡ್ ಹಾಫ್ ಪರವಾಗಿಲ್ಲ. ಒಮ್ಮೆ ನೋಡಬಹುದು. ಚಿತ್ರಮಂದಿರಗಳಲ್ಲೇ ನೋಡಿ ಎಂದು ರಘು ರೋಹಿತ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಬ್ಲಾಕ್‌ಬಸ್ಟರ್ ಪಕ್ಕಾ
ಸಿನಿಮಾ ಫಸ್ಟ್ ಹಾಫ್ ಬ್ಲಾಕ್‌ಬಸ್ಟರ್. ಪವನ್ ಎಂಟ್ರಿ, ಬಂದರು ಸನ್ನಿವೇಶ, 'ಕೊಲ್ಲಗೊಟ್ಟಿನಾದಿರೋ' ಸಾಂಗ್ ಪಕ್ಕಾ ಮಾಸ್. ಕುಸ್ತಿ ಫೈಟ್, ಕುತುಬ್ ಷಾ ಟೈಗರ್ ಸೀನ್ಸ್ ಗೂಸ್‌ಬಂಪ್ಸ್. ಸೆಕೆಂಡ್ ಹಾಫ್‌ನಲ್ಲಿ ಕಾಮಿಡಿ ಓಕೆ. ಫಾರೆಸ್ಟ್ ವಿಎಫ್‌ಎಕ್ಸ್ ಕೆಟ್ಟದಾಗಿದೆ. ಜಿಜಿಯಾ ತೆರಿಗೆ ಫೈಟ್, ಪಂಚಮಿ ಆಗಿ ನಿಧಿ ಸೂಪರ್ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
ಪವನ್ ನಟನೆ ಸೂಪರ್
ಫಸ್ಟ್ ಹಾಫ್ ಅದ್ಭುತ. ಸೆಕೆಂಡ್ ಹಾಫ್ ಪ್ರೀ ಕ್ಲೈಮ್ಯಾಕ್ಸ್‌ವರೆಗೆ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ವಿಎಫ್‌ಎಕ್ಸ್ ಚೆನ್ನಾಗಿಲ್ಲ. ಪವನ್ ನಟನೆ, ಲುಕ್ಸ್, ಸ್ಕ್ರೀನ್ ಪ್ರಸೆನ್ಸ್ ಬೆಂಕಿ. ಕೀರವಾಣಿ ಸಂಗೀತಕ್ಕೆ ಹ್ಯಾಟ್ಸಫ್. ಆಕ್ಷನ್ ಸೀಕ್ವೆನ್ಸ್ ಹಾಗೂ ಸಾಂಗ್ಸ್ ಚಿಂದಿ ಎಂದು ರಾಜಾಸಾಬ್ ಎಂಬುವವರು ಟ್ವೀಟ್ ಮಾಡಿದ್ದಾರೆ.


Click it and Unblock the Notifications











