twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ : ಒಂದು ದಿನ, ಒಂದು ಹುಡುಗಿ, ಒಂದಷ್ಟು ಕುತೂಹಲಕಾರಿ ಘಟನೆಗಳು

    |

    'ಹೀಗೊಂದು ದಿನ' ಹೆಸರಿಗೆ ತಕ್ಕಂತೆ ಒಂದು ದಿನದಲ್ಲಿ ಅದರಲ್ಲಿ ಬೆಳ್ಳಗೆ 6 ಗಂಟೆಯಿಂದ 8 ಗಂಟೆಯವರೆಗೆ ನಡೆಯುವ ಕಥೆ. ಜಾನವಿ (ಸಿಂಧು ಲೋಕನಾಥ್) ಎಂಬ ಒಬ್ಬ ಹುಡುಗಿ ಅಮ್ಮನ ಚಕ್ರವ್ಯೂಹ ಬೇದಿಸಿಕೊಂಡು ಬೆಳ್ಳಗೆ ಮನೆಯಿಂದ ಹೊರಗೆ ಹೋಗುತ್ತಾಳೆ. ಹೀಗೆ ಮನೆಯಿಂದ ಹೊರಟ ಹುಡುಗಿ ತಾನು ತಲುಪುವ ಜಾಗದ ನಡುವಿನ ಜರ್ನಿಯ ಕಥೆಯೇ 'ಹೀಗೊಂದು ದಿನ' ಸಿನಿಮಾ.

    'ಹೀಗೊಂದು ದಿನ' ಏನಾಗುತ್ತೆ? ಸಿಂಧು ಲೋಕನಾಥ್ ಹೇಳ್ತಾರೆ ಕೇಳಿ 'ಹೀಗೊಂದು ದಿನ' ಏನಾಗುತ್ತೆ? ಸಿಂಧು ಲೋಕನಾಥ್ ಹೇಳ್ತಾರೆ ಕೇಳಿ

    Rating:
    3.5/5
    Star Cast: ಸಿಂಧು ಲೋಕನಾಥ್, ಪ್ರವೀಣ್, ಮಿತ್ರ
    Director: ವಿಕ್ರಂ ಯೋಗಾನಂದ್

    ಒಂದು ದಿನ ಕಥೆ

    ಒಂದು ದಿನ ಕಥೆ

    ನಾಯಕಿ ಜಾನವಿ (ಸಿಂಧು ಲೋಕನಾಥ್)ಗೆ ಒಬ್ಬ ಒಳ್ಳೆಯ ನಟಿ ಆಗುವ ಕನಸು. ಆದರೆ ಆಕೆ ಅಮ್ಮನಿಗೆ ತನ್ನ ಕನಸನ್ನು ಹೇಳಲಾಗದೆ ಯಾವುದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಒಂದು ದಿನ ಆಕೆಯನ್ನು ನೋಡಲು ಅವರ ಮನೆಗೆ ಮದುವೆಯ ಗಂಡು ಬರಬೇಕಾಗಿರುತ್ತದೆ. ಆದರೆ ಅದೇ ದಿನ ಆಕೆಗೆ ಸಿನಿಮಾ ಆಡಿಷನ್ ಕೂಡ ಇರುತ್ತದೆ. ಒಂದು ಮೀಟಿಂಗ್ ಇದೆ, ಹುಡುಗರ ಮನೆಯವರು ಬರುವುದರ ಒಳಗೆ ಮರಳುತ್ತೇನೆ ಎಂದು ಹೇಳಿ ಹೋಗುವ ಆ ಹುಡುಗಿಯ ಇಡೀ ಜರ್ನಿ ಚಿತ್ರದ ಕಥೆಯಾಗಿದೆ. ಆ ಹುಡುಗಿಯ ಜರ್ನಿಯಲ್ಲಿ ಏನೇಲ್ಲ ಘಟನೆಗಳು ನಡೆಯುತ್ತದೆ, ಆಕೆ ತನಗೆ ಬರುವ ಎಲ್ಲ ಅಡೆತಡೆಗಳನ್ನು ಎದುರಿಸಿ ಗುರಿ ಮುಟ್ಟುತ್ತಾಳಾ ?, ಆಡಿಷನ್ ನಲ್ಲಿ ಭಾಗವಹಿಸಿ ತನ್ನ ಕನಸು ನನಸು ಮಾಡಿಕೊಳ್ಳುತ್ತಾಳಾ ಎನ್ನುವುದು ಚಿತ್ರದ ಕುತೂಹಲಕಾರಿ ಅಂಶ.

    ಸಿಂಪಲ್ ಸಿನಿಮಾ, ಸಿಂಪಲ್ ಕಥೆ

    ಸಿಂಪಲ್ ಸಿನಿಮಾ, ಸಿಂಪಲ್ ಕಥೆ

    'ಹೀಗೊಂದು ದಿನ' ಸಿನಿಮಾವನ್ನು ಜಾಸ್ತಿ ತಲೆ ಕೆಡೆಸಿಕೊಂಡು ನೋಡುವ ಹಾಗೆ ಇಲ್ಲ. ಇಲ್ಲಿ ದೊಡ್ಡ ಲವ್ ಸ್ಟೋರಿ ಇಲ್ಲ, ಆಕ್ಷನ್ ಇಲ್ಲ, ಥ್ರಿಲ್ಲಿಂಗ್ ಅಂಶಗಳು ಇಲ್ಲ, ಎಲ್ಲದಕ್ಕಿಂತ ಹೆಚ್ಚಾಗಿ ಕಥೆಗೆ ಬೇಡದ ಯಾವುದು ವಿಷಯವನ್ನು ಇಲ್ಲಿ ಹೇಳಿಲ್ಲ. ಇದೊಂದು ಸಿಂಪಲ್ ಕಥೆಯ ಸಿಂಪಲ್ ಸಿನಿಮಾ. ಸರಳ ಕಥೆ ಹೊಂದಿರುವ 'ಹೀಗೊಂದು ದಿನ' ಚಿತ್ರದಲ್ಲಿ ಒಳ್ಳೆಯ ವಿಷಯ ಇದೆ. ಜರ್ನಿಯಲ್ಲಿ ನಡೆಯುವ ಸಣ್ಣ ಪುಟ್ಟ ಘಟನೆಗಳನ್ನು ಬಹಳ ಆಸಕ್ತಿದಾಯಕವಾಗಿ ತೋರಿಸಲಾಗಿದೆ.

    ಸಹಜ ನಟನೆಯ ಸಿಂಧು

    ಸಹಜ ನಟನೆಯ ಸಿಂಧು

    ಸಿಂಧು ಲೋಕನಾಥ್ ಮತ್ತೊಮ್ಮೆ ತಮ್ಮ ಸಹಜ ನಟನೆ ಮೂಲಕ ಇಷ್ಟ ಆಗುತ್ತಾರೆ. ಇಡೀ ಸಿನಿಮಾದಲ್ಲಿ ಅವರೇ ತುಂಬಿಕೊಂಡಿದ್ದಾರೆ. ಅವರೇ ಹೆಚ್ಚು ನಗಿಸುತ್ತಾರೆ. ಸಿನಿಮಾದ ಆ ಪಾತ್ರ ಏನು ಡಿಮ್ಯಾಂಡ್ ಮಾಡುತ್ತದೆ ಅದೆಲ್ಲವನ್ನು ಸಿಂಧು ನೀಡಿದ್ದಾರೆ. ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೆ ಸಿಂಧು ಪಾತ್ರ ಎಲ್ಲೋ ನಮ್ಮ ನಡುವೆ ಇರುವ ಒಬ್ಬ ಹುಡುಗಿ ರೀತಿ ಹತ್ತಿರ ಆಗುತ್ತದೆ. ಅನ್ ಕಟ್ ಫಿಲ್ಮ್ಸ್ ಆಗಿದ್ದರೂ, ಎಷ್ಟೇ ಉದ್ದವಾದ ದೃಶ್ಯವಿದ್ದರೂ, ಅದನ್ನು ನೀರು ಕುಡಿದಂತೆ ಮಾಡಿ ಮುಗಿಸಿದ್ದಾರೆ ಸಿಂಧು.

    ಉಳಿದವರ ಪಾಲು

    ಉಳಿದವರ ಪಾಲು

    ಸಿನಿಮಾದಲ್ಲಿ ಇರುವ ಎಲ್ಲ ಪಾತ್ರಗಳು ಮುಖ್ಯ ಪಾತ್ರವಾದ ಸಿಂಧು ಲೋಕನಾಥ್ ಗೆ ಸಾಥ್ ನೀಡಿವ ರೀತಿಯಲ್ಲಿದೆ. ಪ್ರವೀಣ್, ಮಿತ್ರ, ಗುರುಪ್ರಸಾದ್, ಶೋಭ್ ರಾಜ್, ಪದ್ಮಜಾ ರಾವ್ ಮತ್ತು ಗಿರಿಜಾ ಲೋಕೇಶ್ ಅವರ ಅನುಭವದ ನಟನೆ ಸಿನಿಮಾಗೆ ಪ್ಲಸ್ ಪಾಯಿಂಟ್. ಶೋಭ್ ರಾಜ್ ಇರುವ ಸನ್ನಿವೇಶಗಳು ಜನರನ್ನು ನಗಿಸುತ್ತದೆ.

    ನಿರ್ದೇಶನ

    ನಿರ್ದೇಶನ

    ನಿರ್ದೇಶಕ ವಿಕ್ರಂ ಯೋಗಾನಂದ್ ಒಂದು ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದಾರೆ. ತಾವೇ ಕ್ಯಾಮರಾ, ಸಂಕಲನ ಮತ್ತು ನಿರ್ದೇಶನ ಮೂರು ವಿಭಾಗವನ್ನು ನಿರ್ವಹಿಸಿದ್ದಾರೆ. ಜರ್ನಿಯ ಕಥೆ ಆಗಿರುವುದರಿಂದ ಇನ್ನಷ್ಟು ಪರಿಣಾಮಕಾರಿಯಾಗಿರುವ ಸನ್ನಿವೇಶಗಳನ್ನು ನಿರ್ದೇಶಕರು ಜೋಡಿಸಿದ್ದರೆ ಸಿನಿಮಾ ಇನ್ನಷ್ಟು ಮೆರಗು ಪಡೆಯುತ್ತಿತ್ತು. ಮುಖ್ಯವಾಗಿ ಕ್ಯಾಮರಾವನ್ನು ಚೆನ್ನಾಗಿ ನಿಭಾಹಿಸಿದ್ದಾರೆ. ಪ್ರತಿ ಸೀನ್ ಕೂಡ ಒಂದೇ ಶಾಟ್ ನಲ್ಲಿ ಮುಗಿಸುವುದು ಎಂದರೆ ತಮಾಷೆ ಮಾತಲ್ಲ.

    ಒಳ್ಳೆಯ ಪ್ರಯತ್ನ

    ಒಳ್ಳೆಯ ಪ್ರಯತ್ನ

    'ಹೀಗೊಂದು ದಿನ' ಇಡೀ ಸಿನಿಮಾ ಇಷ್ಟ ಆಗುವುದು ಒಂದು ಒಳ್ಳೆಯ ಪ್ರಯತ್ನ ಎನ್ನುವ ಕಾರಣಕ್ಕೆ. ಇದೊಂದು ಅನ್ ಕಟ್ ಫಿಲ್ಮ್. ಪ್ರತಿ ಸೀನ್ ಕೂಡ ಒಂದೇ ಶಾಟ್ ನಲ್ಲಿ ರೂಪಗೊಂಡಿದೆ. ಇದೆಲ್ಲ ನೋಡುಗರಿಗೆ ಹೊಸ ಅನುಭವ ನೀಡುತ್ತದೆ. ಸೋ, ಹೊಸ ಪ್ರಯತ್ನದ 'ಹೀಗೊಂದು ದಿನ'ವನ್ನು ನೀವು ನೋಡಿ ಬೆನ್ನು ತಟ್ಟಿ.

    English summary
    Kannada actress Sindhu Loknath's Heegondu Dina kannada movie review.
    Saturday, September 29, 2018, 12:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X