For Quick Alerts
  ALLOW NOTIFICATIONS  
  For Daily Alerts

  ಹೈವೇ ವಿಮರ್ಶೆ: ಸುಂದರ ಪಯಣ ನಿಮ್ಮದಾಗಲಿ

  By ಜೇಮ್ಸ್ ಮಾರ್ಟಿನ್
  |

  ಕೆಲವೊಮ್ಮೆ ಹೋಗುವ ದಾರಿ ಎಷ್ಟು ಇಷ್ಟವಾಗುತ್ತದೆ ಎಂದರೆ ಈ ಪಯಣ ಹೀಗೆ ಸಾಗಲಿ ನಿರಂತರ ಎನ್ನುವ ಮನಸ್ಸಾಗುತ್ತದೆ. ನಿರ್ದೇಶಕ ಇಮ್ತಿಯಾಜ್ ಅಲಿ ತನ್ನ ಬಳಿ ಇದ್ದ ಪುರಾತನ ಕಥೆಗೆ ಹೊಸ ಲೇಪಕೊಟ್ಟು ಕೊನೆಗೂ ತೆರೆಗೆ ತಂದು ಹೈವೇ ರೋಡಿಗಿಳಿಸಿದ್ದಾರೆ. ಅಲಿ ಹೊಸ ಹಾದಿಯಲ್ಲಿ ನಿಮ್ಮನ್ನು ಕರೆದುಕೊಂಡು ಹೋಗುತ್ತಾರಾದರೂ ಎಲ್ಲರಿಗೂ ಈ ಹಾದಿ ಇಷ್ಟವಾಗುತ್ತದೆ ಎನ್ನಲು ಬರುವುದಿಲ್ಲ.

  ನಾಲ್ಕು ದಿನಗಳಲ್ಲಿ ಮದುವೆ ನಿಶ್ಚಯವಾಗಿರುವ ಖ್ಯಾತ ಉದ್ಯಮಿಯ ಮಗಳೊಬ್ಬಳನ್ನು ಗ್ಯಾಂಗ್ ಅಪಹರಿಸುತ್ತದೆ. ಒತ್ತೆ ಹಣ ಕೇಳುವ ಬದಲು ಯುವತಿಗೆ ಆತ ಮನಸೋಲುತ್ತಾನೆ ಕಥೆ ಊಹೆಗೆ ಸಿಗಬಹುದಾದರೂ ಇಬ್ಬರ ಪಯಣ ಸುಂದರ, ಸಂಗೀತಮಯ, ತಾಜಾತನದಿಂದ ಕೂಡಿದೆ. ಹೀಗಾಗಿ ಒಮ್ಮೆ ಇವರ ಜತೆ ನೀವು ಪಯಣಿಸಬಹುದು.

  ಅಲಿ ಅವರ ರಿಶ್ತೆ ಸರಣಿಯ ಮುಂದುವರೆದ ಭಾಗವಾಗಿರುವ ಈ ಕಥೆಗೆ ಇಲ್ಲಿ ಎ.ಆರ್ ರೆಹಮಾನ್ ಹಾಡುಗಳು ವೇಗ ತುಂಬಿವೆ. ಕಥಾ ನಿರೂಪಣೆ, ಆಲಿಯಾ ಭಟ್ ಹಾಗೂ ರಣದೀಪ್ ಹೂಡಾ ನಟನೆ, ಹಿಮಾಚಲ, ಕಾಶ್ಮೀರ, ರಾಜಸ್ಥಾನ, ಪಂಜಾಬ್ ಪ್ರಾಂತ್ಯದ ಸುಂದರ ಚಿತ್ರಗಳನ್ನು ಕಣ್ತುಂಬಿಸಿಕೊಳ್ಳಲು ಚಿತ್ರವನ್ನು ತಪ್ಪದೇ ನೋಡಿ.. ಹೈವೇ ಚಿತ್ರದ ಬಗ್ಗೆ ವಿಮರ್ಶಕರು ನೀಡಿರುವ ವಿಮರ್ಶೆಯ ಸಂಗ್ರಹ ಇಲ್ಲಿದೆ....

  ಹೈವೇ ಚಿತ್ರದ ವಿಮರ್ಶಕರ ವಿಮರ್ಶೆ

  ಹೈವೇ ಚಿತ್ರದ ವಿಮರ್ಶಕರ ವಿಮರ್ಶೆ

  ರೋಮ್ಯಾಂಟಿಕ್ ಡ್ರಾಮಾ ಇಲ್ಲಿಲ್ಲ, ಸಾಮಾನ್ಯ ಪ್ರೇಮಕಥೆಯೂ ಇದಲ್ಲ. ಇದೊಂದು ಸುಂದರ ಪಯಣ ಅಷ್ಟೆ. ಚಿತ್ರಮಂದಿರದಿಂದ ಹೊರ ಬಂದ ಮೇಲೂ ವೀರಾ ತ್ರಿಪಾಠಿ(ಅಲಿಯಾ ಭಟ್) ಮಹಭೀರ್ ಭಾಟಿ(ರಣದೀಪ್ ಹೂಡಾ) ಕಾಡುತ್ತಾರೆ. ಅದರೆ, ತೆಳುವಾದ ಕಥಾಹಂದರ ಚಿತ್ರದ ಓಟಕ್ಕೆ ಮಾರಕವಾಗಬಲ್ಲದು.. ಅಷ್ಟರಲ್ಲಿ ಒಮ್ಮೆ ನೋಡಿ ಬಿಡಿ-ಸೈಬಲ್ ಚಟರ್ಜಿ, ಎನ್ ಡಿಟಿವಿ

  ಅಲಿಯಾ ಭಟ್, ರಣದೀಪ್ ನಟನೆಗೆ ಜೈ

  ಅಲಿಯಾ ಭಟ್, ರಣದೀಪ್ ನಟನೆಗೆ ಜೈ

  ಇಮ್ತಿಯಾಜ್ ಅಲಿ ಅವರು ತಮ್ಮ್ ಟ್ರೇಡ್ ಮಾರ್ಕ್ ಚಿತ್ರಗಳನ್ನು ಬಿಟ್ಟು ಹೊಸ ಹಾದಿ ಹಿಡಿದಿದ್ದು ಆಲಿಯಾಗೂ ಹೊಸ ಪಾತ್ರ ಹಾಗೂ ಪ್ರಬುದ್ಧತೆ ಇಲ್ಲಿ ಸಿಕ್ಕಿದೆ. ರಣದೀಪ್ ಹೂಡಾ ಡೈಲಾಗ್, ಮೌನ, ರೆಹಮಾನ್ ಸಂಗೀತ ಚಿತ್ರವನ್ನು ನೋಡುವಂತೆ ಮಾಡಿದೆ. ಅಲಿಯಾಗೆ ಇದು ಕಲಿಕೆಯ ಚಿತ್ರವಾಗಿದೆ. ಕಥೆ ಇದ್ದಿದ್ದರೆ ಚಿತ್ರ ವೇಗ ಪಡೆಯುತ್ತಿತ್ತು. 2/5 ಶುಭ್ರ ಗುಪ್ತ, ಇಂಡಿಯನ್ ಎಕ್ಸ್ ಪ್ರೆಸ್

  ಮನರಂಜನೆ ಹುಡುಕುವವರು ಟ್ರಕ್ ಹತ್ತಬೇಡಿ

  ಮನರಂಜನೆ ಹುಡುಕುವವರು ಟ್ರಕ್ ಹತ್ತಬೇಡಿ

  ಮನರಂಜನೆ ಹುಡುಕುವವರು ಆಲಿಯಾ, ರಣದೀಪ್ ಜತೆ ಟ್ರಕ್ ಹತ್ತಬೇಡಿ. ಇದು ಹೊಸ ಹಾದಿ ಪಯಣ, ರೆಹಮಾನ್ ಸಂಗೀತ, ಅನಿಲ್ ಮೆಹ್ತಾ ಛಾಯಾಗ್ರಹಣ ಎಲ್ಲವೂ ಸುಂದರ ಅದರೆ, ಚಿತ್ರಮಂದಿರಕ್ಕೆ ಕಾಲಿಡುವ ಮುನ್ನ ಯೋಚಿಸಿ, ಇದೊಂದು ರೀತಿ ಆರೋಗ್ಯಕ್ಕೆ ಹಿತವಾದ ಅಡುಗೆ, ರುಚಿಗಾಗಿ ಮಾಡಿದ ಮಸಾಲೆ ಖಾದ್ಯವಲ್ಲ. Avoid this Highway, it will lead you nowhere! 2/5 ರೋಹಿಣಿ ಖಿಲ್ನಾನಿ, India Today

  ಎತ್ತ ಸಾಗುವುದು ಎಂಬ ಗೊಂದಲವಿದ್ದರೆ ಹೈವೇಗೆ ಬನ್ನಿ

  ಎತ್ತ ಸಾಗುವುದು ಎಂಬ ಗೊಂದಲವಿದ್ದರೆ ಹೈವೇಗೆ ಬನ್ನಿ

  ಎತ್ತ ಸಾಗುವುದು ಎಂಬ ಗೊಂದಲವಿದ್ದರೆ ಹೈವೇಗೆ ಬನ್ನಿ, ಜಬ್ ವೀ ಮೆಟ್ ಗೀತ್, ರಾಕ್ ಸ್ಟಾರ್ ನ ಹೀರ್ ಪಾತ್ರಗಳ ಮುಂದುವರೆದ ಭಾಗವಾಗಿ ವೀರಾ(ಆಲಿಯಾ) ಕಾಣಿಸಿಕೊಂಡಿದ್ದಾಳೆ. ಕಡಿಮೆ ಖರ್ಚಿನಲ್ಲಿ ಅಜ್ಮೇರ್, ಬಿಕಾನೇರ್, ಫರಿದಾಕೋಟ್, ರಾಮ್ ಪುರ್, ಅರು ಸುತ್ತಾಡಿ, ಆಗಾಗ ದಾಭಾಗಳಲ್ಲಿ ಕುಳಿತು ರೋಟಿ ತಿಂದು ಚಹಾ ಕುಡಿಯಿರಿ, ಪುರುಸೊತ್ತಿದ್ದರೆ ಈ ಚಿತ್ರ ನೋಡಿ ಅವಸರವಿದ್ದರೆ ಟ್ರಕ್ ಹತ್ತಬೇಡಿ- ಪರ್ ಮಿತಾ ಯೂನಿಯಾಲ್, ಹಿಂದೂಸ್ತಾನ್ ಟೈಮ್ಸ್

  ಈ ಚಿತ್ರ ನೋಡದಿದ್ದರೆ ನಿಮಗೆ ನಷ್ಟ

  ಈ ಚಿತ್ರ ನೋಡದಿದ್ದರೆ ನಿಮಗೆ ನಷ್ಟ

  ಹೈವೇ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡದಿರಬಹುದು. ಇಮ್ತಿಯಾಜ್ ಚಿತ್ರ ಇಷ್ಟಪಡುವವರು, ಆಲಿಯಾ ನಟನೆ ನೋಡಬಯಸುವವರು, ಕಮರ್ಷಿಯಲ್ ಚಿತ್ರಗಳಿಂದ ಬ್ರೇಕ್ ಎನಿಸುವವರು ಹೈವೇ ಹಾದಿ ಹಿಡಿಯಬಹುದು. ಬಾಲಿವುಡ್ ಹೊಸತನಕ್ಕೆ ಒಗ್ಗಿಕೊಳ್ಳುತ್ತಿರುವುದು ಸಂತಸದ ಸಂಗತಿ. ಸ್ಟಾಕ್ ಹೋಂ ಸಿಂಡ್ರೋಮ್ ಪೀಡಿತ ಆಲಿಯಾ ಪ್ರಬುದ್ಧ ನಟನೆ ಮನಸೂರೆ ಮಾಡುತ್ತದೆ. -ಮಿಹಿರ್ ಫಡ್ನಾವಿಸ್, ಫಸ್ಟ್ ಪೋಸ್ಟ್

  ಟೈಮ್ಸ್ ಆಫ್ ಇಂಡಿಯಾ ವಿಮರ್ಶೆ

  ಟೈಮ್ಸ್ ಆಫ್ ಇಂಡಿಯಾ ವಿಮರ್ಶೆ

  ಇದು ತಾಜಾತನದಿಂದ ಕೂಡಿದ ಪಯಣವಾದರೂ ಆಲಿಯಾ ಭಟ್ ಮಾತ್ರ ಎದ್ದು ಕಾಣುತ್ತಾಳೆ. ಇಮ್ತಿಯಾಜ್ ಅಲಿ ಚಿತ್ರಗಳನ್ನು ನೋಡುತ್ತ ಬಂದವರಿಗೆ ಇಷ್ಟವಾಗಬಹುದು. ಚಿತ್ರದ ಓಟ ವೇಗದ ಮಿತಿಗೆ ಒಳಪಟ್ಟಿದೆ. "Highway is not an easy ride. But it offers fresh breezes and new sights."- ಶ್ರೀಜನಾ ಮಿತ್ರ ದಾಸ್

  KOIMOI ಹೈವೇ ವಿಮರ್ಶೆ: 2.5/5

  KOIMOI ಹೈವೇ ವಿಮರ್ಶೆ: 2.5/5

  ಎ.ಆರ್ ರೆಹಮಾನ್ ಸಂಗೀತ, ಅನಿಲ್ ಮೆಹ್ತಾ ಕೆಮೆರಾ ವರ್ಕ್ ಬಿಟ್ಟರೆ ಮತ್ತೇನು ಚಿತ್ರದಲ್ಲಿಲ್ಲ. ಆಲಿಯಾ ನಟಿಸಲು ಕಲಿತ್ತಿದ್ದಾಳೆ. ಸ್ಕ್ರೀನ್ ಪ್ಲೇ, ಜೋಡಿ ನಡುವೆ ಪ್ರಣಯ ಇಲ್ಲವೇ ಇಲ್ಲ. ಕಥೆ ಹುಡುಕಲೇಬೇಡಿ. ಎಲ್ಲವೂ ಊಹಿಸಿದಂತೆ ನಡೆದು ಚಿತ್ರ ಮುಕ್ತಾಯ ಕಾಣುತ್ತದೆ. ಇಷ್ಟರಮೇಲೆ ಹೈವೇ ಹಾದಿ ಹಿಡಿದರೆ ಸುಂದರ ಪಯಣ ನಿಮ್ಮದಾಗಲಿ : ಮೊಹರ್ ಬಸು

  English summary
  Highway, directed by Imtiaz Ali is an interesting and unconventional road story. As everybody knows that the film is a remake of Imtiaz Ali's own Rishtey series, everything in the first half is predictable. This movie is defiantly unconventional, if not entirely satisfying.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X