Hit-3 'X' Review; ಸಖತ್ ವೈಲೆನ್ಸ್.. 'ಹಿಟ್-3' ಮಕ್ಕಳಿಗಲ್ಲ
ನಾನಿ ಹಾಗೂ ಶ್ರೀನಿಧಿ ಶೆಟ್ಟಿ ನಟನೆಯ 'ಹಿಟ್-'3' ಸಿನಿಮಾ ತೆರೆಗಪ್ಪಳಿಸಿದೆ. ಈಗಾಗಲೇ ಮಿಡ್‌ನೈಟ್, ಮಾರ್ನಿಂಗ್ ಶೋಗಳಲ್ಲಿ ಪ್ರೇಕ್ಷಕರು ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಸಿಕ್ಕಾಪಟ್ಟೆ ವೈಲೆನ್ಸ್ ಇರುವ ಸಿನಿಮಾ ಮಾಸ್ ಪ್ರೇಕ್ಷಕರನ್ನು ರಂಜಿಸುತ್ತಿದೆ.
ಆಕ್ಷನ್ ಥ್ರಿಲ್ಲರ್ 'ಹಿಟ್-3' ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿದೆ. ಶೈಲೇಶ್ ಕೊಲನು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸರಣಿಯ ಹಿಂದಿನ ಎರಡೂ ಸಿನಿಮಾಗಳು ಹಿಟ್ ಆಗಿದ್ದರಿಂದ ಸಹಜವಾಗಿಯೇ ಹೊಸ ಸೀಕ್ವೆಲ್ ನಿರೀಕ್ಷೆ ಮೂಡಿಸಿತ್ತು. 'ದಸರಾ', 'ಹಾಯ್ ನಾನ್ನ', 'ಸರಿಪೋದ ಶನಿವಾರಂ' ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಟ್ಟು ನಾನಿ ಗೆದ್ದಿದ್ದಾರೆ. ಹಾಗಾಗಿ ಈ ಚಿತ್ರಕ್ಕೂ ಅಭಿಮಾನಿಗಳು ಕಾಯುವಂತಾಗಿತ್ತು.

ಮಧ್ಯರಾತ್ರಿಯಿಂದಲೇ 'ಹಿಟ್- 3' ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಟ್ವಿಟ್ಟರ್ ತುಂಬಾ 'ಹಿಟ್- 3' ಹವಾ ಜೋರಾಗಿದೆ.
ಓಕೆ ಓಕೆ
"ಫಸ್ಟ್ ಹಾಫ್ ಲವ್ ಸಾಂಗ್ ಹೊರತುಪಡಿಸಿ ಉಳಿದೆಲ್ಲವೂ ಚೆನ್ನಾಗಿದೆ. ಇಂಟ್ರವಲ್ ಕೂಡ ವರ್ಕ್ ಆಗುತ್ತದೆ. ಸೆಕೆಂಡ್ ಹಾಫ್ ಸಂಪೂರ್ಣವಾಗಿ ವಿಭಿನ್ನ ದಿಕ್ಕಿನಲ್ಲಿ ಸಾಗುತ್ತದೆ. ಅದು ಅಷ್ಟೇನು ಕೆಟ್ಟದಾಗಿರಲಿಲ್ಲ, ಚೆನ್ನಾಗಿಯೂ ಇರಲಿಲ್ಲ. ಆದರೆ ರಕ್ತಸಿಕ್ತವಾಗಿತ್ತು ಮತ್ತು ಸ್ವಲ್ಪಮಟ್ಟಿಗೆ ನೋಡಬಹುದು ಎನ್ನುವಂತಿತ್ತು. ಅರ್ಜುನ್ ಸರ್ಕಾರ್ ಪಾತ್ರದಲ್ಲಿ ನಾನಿ ನಿಜಕ್ಕೂ ಅದ್ಭುತವಾಗಿ ನಟಿಸಿದ್ದಾರೆ. ಶ್ರೀನಿಧಿ ಚೆನ್ನಾಗಿ ಕಾಣುತ್ತಾರೆ. ಸಮರ್ಪಕವಾಗಿ ನಟಿಸಿದ್ದಾರೆ. ಮಿಕ್ಕಿಯ ಜೆ ಮೇಯರ್ ಸಂಗೀತ ಇಷ್ಟವಾಯಿತು. ಕ್ಲೈಮ್ಯಾಕ್ಸ್ ಬಲವಂತವಾಗಿ ತೋರಿಸಿದಂತಿತ್ತು. ಸರ್‌ಪ್ರೈಸ್‌ಗಳು ಅಷ್ಟೊಂದು ಅಚ್ಚರಿ ಮೂಡಿಸಲಿಲ್ಲ ಒಟ್ಟಾರೆಯಾಗಿ, ಇದನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು. 'ದಿ ಹಿಟ್' ಫ್ರಾಂಚೈಸಿಯ ಭಾಗವಾಗುವುದಕ್ಕಿಂತ ಪ್ರತ್ಯೇಕ ಚಿತ್ರವಾಗಿ ನಿಲ್ಲಬಹುದಿತ್ತು" ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಮಕ್ಕಳಿಗಲ್ಲ
ಬಹಳ ಕ್ರೂರವಾಗಿದೆ. ರಕ್ತಸಿಕ್ತವಾಗಿದೆ. ಫ್ಯಾಮಿಲಿ ಆಡಿಯನ್ಸ್, ಮಕ್ಕಳು ನೋಡುವಂತಿಲ್ಲ. ನಾನಿ ಎಂತಹ ಅದ್ಭುತ ನಟ. ಆತ ಬಹಳ ಚೆನ್ನಾಗಿ ಬೆಳೆಯುತ್ತಿದ್ದು ಮುಂದೆ ಬಾಕ್ಸಾಫೀಸ್ ಸ್ಟಾರ್ ಆಗುತ್ತಿದ್ದಾರೆ. ನಾನು ನೋಡಿದ್ದರಲ್ಲಿ ನಾನಿಯ ಒಳ್ಳೆ ನಟನೆ. ಒಟ್ಟಾರೆಯಾಗಿ ಹೊಸ ಅನುಭವ ನೀಡಿದ ಸಿನಿಮಾ. ಮಕ್ಕಳು ಮಾತ್ರ ನೋಡುವಂತಿಲ್ಲ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒನ್‌ಮ್ಯಾನ್ ಶೋ
ಟೈಟಲ್ ಕಾರ್ಡ್ ಸೂಪರ್. ಫಸ್ಟ್ ಹಾಫ್ ಬಹಳ ಚೆನ್ನಾಗಿದೆ. ಬಹಳ ನಿರೀಕ್ಷೆ ಇಟ್ಟುಕೊಂಡು ಬಂದು ಸಿನಿಮಾ ನೋಡಿ. ನಾನಿ ಮೇಲೆ ನಂಬಿಕೆ ಇಟ್ಟು ಬನ್ನಿ. ಬಹಳ ವೈಲೆನ್ಸ್ ಎನಿಸಬಹುದು. ಬಟ್ ಆದರೂ ಸಖತ್ತಾಗಿದೆ. ನಾನಿ ಒನ್‌ಮ್ಯಾನ್ ಶೋ.
ಸ್ಕ್ವಿಡ್ ಗೇಮ್‌ನಿಂದ ಪ್ರೇರಣೆ
"ಹಿಟ್- 3 ಬಹಳ ಹಿಂಸಾತ್ಮಕ ಆಕ್ಷನ್ ಕ್ರೈಮ್ ಥ್ರಿಲ್ಲರ್ ಆಗಿದ್ದು, ಸನ್ನಿವೇಶಗಳು ಚೆನ್ನಾಗಿ ವರ್ಕ್ ಆಗುತ್ತದೆ. ಅದೇ ನಿಧಾನಗತಿಯ ನಿರೂಪಣೆ ಇರುವ ಭಾಗಗಳು ಇದೆ. ಫಸ್ಟ್ ಹಾಫ್‌ನಿಂದ ಪ್ರೀ ಇಂಟರ್‌ವಲ್‌ವರೆಗೆ ಆವರೇಜ್ ಮತ್ತು ಊಹಿಸಬಹುದಾದದ್ದು. ಸೆಕೆಂಡ್ ಹಾಫ್ ಸ್ಕ್ವಿಡ್ ಗೇಮ್‌ನಿಂದ ಪ್ರೇರೇಣೆ ಹೊಂದಿದೆ. ಪ್ರೀ-ಕ್ಲೈಮ್ಯಾಕ್ಸ್‌ನಿಂದ ಕ್ಲೈಮ್ಯಾಕ್ಸ್ ಚೆನ್ನಾಗಿದೆ. ಪ್ರೊಡಕ್ಷನ್ ವ್ಯಾಲ್ಯೂಸ್ ಮತ್ತು ಛಾಯಾಗ್ರಹಣ ಎದ್ದು ಕಾಣುತ್ತದೆ. ಸಂಗೀತ ಪರಿಣಾಮಕಾರಿಯಾಗಿದೆ ಹಾಗೂ ಹಾಡುಗಳು ಸ್ಪೀಡ್ ಬ್ರೇಕರ್‌ಗಳಾಗಿವೆ.
ನಾನಿ ಚಿತ್ರ ಹೊತ್ತು ಸಾಗಿದ್ದಾರೆ
"ಫಸ್ಟ್ ಹಾಫ್ ಚೆನ್ನಾಗಿದೆ. ನಾನಿ ಪಾತ್ರ ಪೋಷಣೆ ಚೆನ್ನಾಗಿದೆ ಮತ್ತು ಅವರು ಚೆನ್ನಾಗಿ ನಟಿಸಿದ್ದಾರೆ. ಚಿತ್ರವು ತನಿಖಾ ಸನ್ನಿವೇಶಗಳು ಮತ್ತು ಆಕ್ಷನ್‌ನೊಂದಿಗೆ ಆಕರ್ಷಕವಾಗಿದೆ. ಸಂಭಾಷಣೆ, ಪ್ರೊಡಕ್ಷನ್ ವ್ಯಾಲ್ಯೂಸ್, ಲೊಕೇಶನ್ಸ್ ಅತ್ಯುತ್ತಮವಾಗಿವೆ. ಪ್ರೀ ಇಂಟರ್‌ವಲ್ ಹಾಗೂ ಇಂಟರ್‌ವಲ್ ಚೆನ್ನಾಗಿ ಹೊಂದಿಸಿದೆ. ಹಿನ್ನೆಲೆ ಸಂಗೀತ ಇನ್ನೂ ಉತ್ತಮವಾಗಿರಬಹುದಿತ್ತು. ಪ್ರೀ ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ ಫೈಟ್‌ಗಳನ್ನು ಅತ್ಯುತ್ತಮವಾಗಿ ಕಂಪೋಸ್ ಮಾಡಲಾಗಿದೆ, ಇದು ಹೈ ಮೊಮೆಂಟ್ಸ್ ಎನಿಸುತ್ತದೆ. ನಾನಿ ಈ ಚಿತ್ರವನ್ನು ಆರಂಭದಿಂದ ಕೊನೆಯವರೆಗೆ ಹೊತ್ತು ಸಾಗಿದ್ದಾರೆ. ಅತಿಥಿ ಪಾತ್ರಗಳು ವರ್ಕ್ ಆಗಿದೆ. ಈ ಕಾನ್ಸೆಪ್ಟ್ ಯುವಕರನ್ನು ಆಕರ್ಷಿಸುತ್ತದೆ" ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
ನಾನಿ ಶೋ
'ಹಿಟ್-3' ನಾನಿ ಶೋ. ಅರ್ಜುನ್ ಸರ್ಕಾರ್ ಪಾತ್ರ ಪೋಷಣೆ ಹಾಗೂ ಆಕ್ಷನ್ ಕಂಪೋಸ್ ಮಾಡಿರುವ ಪರಿ ಚೆನ್ನಾಗಿದೆ. ವೈಲೆನ್ಸ್ ಇಷ್ಟಪಡುವವರಿಗೆ ಸಿನಿಮಾ ಸೂಪರ್ ಎಂದು ಮತ್ತೊಬ್ಬರು ಟ್ವಿಟ್ ಮಾಡಿದ್ದಾರೆ.
ಆ ರೇಂಜಿಗೆ ಇಲ್ಲ
ಚಿತ್ರವನ್ನು ಬಹಳ ಚೆನ್ನಾಗಿ ಪ್ರಚಾರ ಮಾಡಿದರು. ಆದರೆ ಇದು ಆ ಮಟ್ಟಕ್ಕಿಲ್ಲ. ಶೈಲೇಶ್ ಬರವಣಿಗೆ ಚೆನ್ನಾಗಿಲ್ಲ. ಎಲ್ಲವನ್ನೂ ಬಲವಂತದ ನಿರೂಪಣೆಯಾಗಿ ಸಿದ್ಧಪಡಿಸಲಾಗಿದೆ. ಆ ಪ್ರೀ ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ ಹೊರತುಪಡಿಸಿ ಎಲ್ಲವೂ ವೇಸ್ಟ್. ನಾನಿ ನಟನೆ ಉತ್ತಮವಾಗಿದೆ. ಛಾಯಾಗ್ರಹಣ ಕೂಡ ಸೊಗಸಾಗಿದೆ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications











