Hostel Hudugaru Bekagiddare Review : 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ರಿವ್ಯೂ & ರೇಟಿಂಗ್

Rating:
3.5/5
Star Cast: ಪ್ರಜ್ವಲ್, ಚೇತನ್ ದುರ್ಗ, ಮಂಜುನಾಥ್ ನಾಯಕ್, ರಮ್ಯಾ, ರಿಷಬ್ ಶೆಟ್ಟಿ ಮುಂತಾದವರು
Director: ನಿತಿನ್ ಕೃಷ್ಣಮೂರ್ತಿ

ಸ್ಯಾಂಡಲ್‌ವುಡ್‌ನಲ್ಲಿ ಆಗೊಮ್ಮೆ ಈಗೊಮ್ಮೆ ಹೊಸಬರ ಸಿನಿಮಾಗಳು ತೆರೆಮೇಲೆ ಮ್ಯಾಜಿಕ್ ಮಾಡಿಬಿಡುತ್ತದೆ. ಸಂಪೂರ್ಣ ಹೊಸ ತಂಡ ಸೇರಿ ಮಾಡಿರುವ 'ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಕೂಡ ಅಂತದ್ದೇ ಕುತೂಹಲ ಮೂಡಿಸಿತ್ತು. ವಿಭಿನ್ನ ಪ್ರಮೋಷನ್‌ನಿಂದಲೇ ಸಿನಿಮಾ ಹೈಪ್ ಕ್ರಿಯೇಟ್ ಮಾಡಿತ್ತು. ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ನಟಿ ರಮ್ಯಾ ಲೀಗಲ್‌ ನೋಟಿಸ್‌ನಿಂದ ವಿವಾದ ಸುತ್ತಿಕೊಂಡು ಇನ್ನಷ್ಟು ಸುದ್ದಿಯಾಗಿತ್ತು.

ವರುಣ್ ಸ್ಟುಡಿಯೋಸ್ ಮತ್ತು ಗುಲ್‌ಮೊಹರ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಈ ಯೂತ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ ಈ ಹೊಸಬರ ತಂಡವನ್ನು ಬೆಂಬಲಿಸಿದ್ದರು. ಇತ್ತೀಚೆಗೆ ಟ್ರೈಲರ್ ಮತ್ತು ಸಾಂಗ್ಸ್‌ನಿಂದ ಸಿನಿಮಾ ಭಾರೀ ಸದ್ದು ಮಾಡಿತ್ತು. ಸಿಕ್ಕಾಪಟ್ಟೆ ಸ್ಪೀಡ್‌ ಆಗಿದ್ದ ಟ್ರೈಲರ್‌ ಮಜಾ ಕೊಟ್ಟಿತ್ತು. ಇದೀಗ ಸಿನಿಮಾ ರಿಲೀಸ್ ಆಗಿದ್ದು ಥಿಯೇಟರ್‌ಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದೆ. "Where drama begins logic ends" ಅನ್ನೋ ಮಾತಿನಂತೆ ಲಾಜಿಕ್ ಎಲ್ಲಾ ಬಿಟ್ಟು 2 ಗಂಟೆ ಹಾಸ್ಟೆಲ್ ಹುಡುಗರ ಹಾವಳಿ ನೋಡಿ ಎಂಜಾಯ್ ಮಾಡಬಹುದು.

Hostel Hudugaru Bekagiddare Kannada Movie Review And Rating

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ 'ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ' ಕೂಡ ಒಂದಾಗಿತ್ತು. ಹೊಸಬರ ಸಿನಿಮಾ ಆದ್ರು, ರಮ್ಯಾ, ರಿಷಬ್ ಶೆಟ್ಟಿ, ದಿಗಂತ್ ಗೆಸ್ಟ್ ಅಪಿಯರೆನ್ಸ್‌ನಿಂದ ಕೊಂಚಮಟ್ಟಿಗೆ ನಿರೀಕ್ಷೆ ಮೂಡಿಸಿತ್ತು. ಅಂತೂ ಇಂತೂ ಎಲ್ಲಾ ವಿಘ್ನಗಳನ್ನು ಮೀರಿಸಿ ಕೊನೆಗೂ ಸಿನಿಮಾ ರಿಲೀಸ್ ಆಗಿದೆ. ಹಾಗಾದರೆ ಸಿನಿಮಾ ಹೇಗಿದೆ? ಕಥೆ ಏನು? ಮುಂದೆ ಓದೆ.

Hostel Hudugaru Bekagiddare Kannada Movie Review And Rating

ತುಂಗಾ ಹಾಸ್ಟೆಲ್ ಹುಡುಗ್ರ ಕ್ವಾಟ್ಲೆ ಕಥೆ

ಟೈಟಲ್ಲೇ ಹೇಳುವಂತೆ ಇದು ಹಾಸ್ಟೆಲ್ ಹುಡುಗರ ಕಥೆ. ಅದು ನೂರಾರು ವಿದ್ಯಾರ್ಥಿಗಳಿರುವ ತುಂಗಾ ಹಾಸ್ಟೆಲ್. ಅಲ್ಲಿ ಹುಡುಗರ ಆಟ, ತುಂಟಾಟ, ತರಲೆ, ತಮಾಷೆ ಕೊಂಚ ಜಾಸ್ತಿನೇ ಇರುತ್ತೆ. ಭಾರೀ ಹಾವಳಿ ಕೊಡುವ ಹಾಸ್ಟೆಲ್‌ ಹುಡುಗರನ್ನು ಕಾಡುವ ಒಬ್ಬ ಸ್ಟ್ರಿಕ್ಟ್ ವಾರ್ಡನ್. ಸಿನಿಮಾ ನಿರ್ದೇಶಕನಾಗುವ ಕನಸು ಕಂಡ ಹಾಸ್ಟೆಲ್ ವಿದ್ಯಾರ್ಥಿ ಅಜಿತ್ ಒಂದು ಶಾರ್ಟ್ ಫಿಲ್ಮ್ ಪ್ಲ್ಯಾನ್ ಮಾಡ್ತಾನೆ. ಇದ್ದಕ್ಕಿದಂತೆ ಆ ವಾರ್ಡನ್ ಒಂದಷ್ಡು ಹುಡುಗರ ಹೆಸರನ್ನು ಸುಸೈಡ್ ನೋಟ್‌ನಲ್ಲಿ ಬರೆದಿಟ್ಟು ಸುಸೈಡ್ ಮಾಡಿಕೊಂಡರೆ ಮುಂದೆ ಏನೆಲ್ಲಾ ಏನಾಗುತ್ತದೆ? ಅನ್ನೋದನ್ನು ಲೈವ್‌ನಲ್ಲಿ ಶೂಟ್ ಮಾಡೋದು ಅವನ ಐಡಿಯಾ. ಆದರೆ ಈ ಹಾದಿಯಲ್ಲಿ ಏನಾಲ್ಲಾ ಆಗುತ್ತೆ ಅನ್ನೋದು ಸಿನಿಮಾ ಒನ್‌ಲೈನ್ ಸ್ಟೋರಿ.

ಸಿನಿಮಾ ಹೇಗಿದೆ?

ಕೊನೆ ಕ್ಷಣದಲ್ಲಿ ಚಿತ್ರತಂಡಕ್ಕೆ ಶಾಕ್ ಕೊಟ್ಟಿ ನಟಿ ರಮ್ಯಾ ಚಿತ್ರದಲ್ಲಿ ಮ್ಯಾಥ್ಸ್ ಲೆಕ್ಚರರ್ ದಿವ್ಯಾ ಸ್ಪಂದನಾ ಆಗಿ ಮೊದಲ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ಕಥೆ ಹಾಸ್ಟೆಲ್ ಒಳಕ್ಕೆ ಕರೆದುಕೊಂಡು ಹೋಗುತ್ತದೆ. ಅಲ್ಲಿಂದ ಮುಂದೆ ನಾನ್‌ಸ್ಟಾಪ್ ಟ್ರೈನ್‌ ತರ ಓಡುತ್ತಲೇ ಇರುತ್ತದೆ. ಪದೇ ಪದೇ ಒಂದಷ್ಟು ಕನ್‌ಫ್ಯೂಷನ್ ಕ್ರಿಯೇಟ್ ಮಾಡಿ ನಂತರ ಅದನ್ನೆಲ್ಲಾ ಬಗೆಹರಿಸುತ್ತಾ ಸ್ಕ್ರೀನ್‌ಪ್ಲೇ ಪ್ರೇಕ್ಷಕರನ್ನು ಎಂಗೇಜಿಂಗ್ ಆಗಿ ಇಟ್ಟುಕೊಳ್ಳುತ್ತದೆ.

ಹಾಸ್ಟೆಲ್‌ ಹುಡುಗರು ಮತ್ತು ವಾರ್ಡನ್ ನಡುವಿನ ತಿಕ್ಕಾಟ. ಹುಡುಗರು ಏನೋ ಮಾಡಲು ಹೋಗಿ ಮತ್ತೇನೋ ಎಡವಟ್ಟಾಗಿ ಕೊನೆಗೆ ಎಲ್ಲವೂ ಸುಖಾಂತ್ಯ ಕಾಣುತ್ತದೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಬಹಳ ಸೊಗಸಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಹಾಸ್ಯಕ್ಕೆ ಪ್ರಾಮುಖ್ಯತೆ ಕೊಡ್ಟು ಸಿನಿಮಾ ಮಾಡಿದ್ದಾರೆ. ಸ್ಕ್ರೀನ್‌ಪ್ಲೇ, ನಿರೂಪಣೆ ಚೆನ್ನಾಗಿದೆ. ಹಾಸ್ಟೆಲ್ ಹುಡುಗರ ಹಾಡು, ಪಾಡು, ಸೀನಿಯರ್‌ಗಳ ಹಾವಳಿ, ಜ್ಯೂನಿಯರ್‌ಗಳ ಜಟಾಪಟಿ ಎಲ್ಲವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಹಾಸ್ಟೆಲ್‌ನಲ್ಲಿ ಇರುವವರಿಗೆ, ಒಂದ್ಕಾಲದಲ್ಲಿ ಇದ್ದವರಿಗೆ ಈ ಸಿನಿಮಾ ಬಹಳ ಹತ್ತಿರವಾಗಲಿದೆ.

ಕಲಾವಿದರ ಅಭಿನಯ

ಈ ಚಿತ್ರದಲ್ಲಿ ನಟಿಸಿರುವವರೆಲ್ಲಾ ಬಹುತೇಕ ಹೊಸಬರೇ. ಸಾಕಷ್ಟು ರಿಹರ್ಸಲ್ ಮಾಡಿ ಸನ್ನಿವೇಶಗಳನ್ನು ಕಟ್ಟಿಕೊಟ್ಟಿರುವುದು ಗೊತ್ತಾಗುತ್ತದೆ. ಸಾಧ್ಯವಾದಷ್ಟು ನೈಜವಾಗಿ ಸನ್ನಿವೇಶಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಇದು ಬರೀ ಹಾಸ್ಟೆಲ್ ಹುಡುಗರ ಕಥೆ. ಹಂಗಾಗಿ ಇಲ್ಲಿ ನಾಯಕ, ನಾಯಕಿ ಅನ್ನೋ ಕಾನ್ಸೆಪ್ಟ್ ಇಲ್ಲ. ಇದ್ದಿದ್ದರಲ್ಲಿ ಅಜಿತ್ ಪಾತ್ರಧಾರಿ ಪ್ರಜ್ವಲ್ ಒಂದರ್ಥದಲ್ಲಿ ನಾಯಕ ಎನಿಸಿಕೊಳ್ಳುತ್ತಾರೆ. ಇನ್ನು ಹಾಸ್ಟೆಲ್ ವಾರ್ಡನ್ ಆಗಿ ಮಂಜುನಾಥ್ ನಾಯಕ್, ಹಾಸ್ಯ ನಟ ಚೇತನ್ ದುರ್ಗ ನೆನಪಿನಲ್ಲಿ ಉಳಿಯುತ್ತಾರೆ. ನಟಿ ರಮ್ಯಾ ಆಗಾಗ್ಗೆ ಒಂದೊಂದು ಫ್ರೇಮ್‌ನಲ್ಲಿ ಬಂದು ಬಂದು ಹೋಗುತ್ತಿರುತ್ತಾರೆ.

ನೂರಾರು ಹುಡುಗರನ್ನು ಒಂದೆಡೆ ಸೇರಿಸಿ ಶೂಟಿಂಗ್ ಮಾಡುವುದು ಅಷ್ಟು ಸುಲಭವ ವಿಚಾರ ಅಲ್ಲ. ಆ ಪ್ರಯತ್ನದಲ್ಲಿ ನಿತಿನ್ ಕೃಷ್ಣಮೂರ್ತಿ ಅಂಡ್ ಟೀಂ ಗೆದ್ದಿದೆ. ಜಿನ್ನಿ ಎನ್ನುವ ಹಾಸ್ಟೆಲ್ ಸೀನಿಯರ್ ಪಾತ್ರದಲ್ಲಿ ನಿರ್ದೇಶಕ ನಿತಿನ್ ಕೂಡ ಗಮನ ಸೆಳೆಯುತ್ತಾರೆ. ಇನ್ನು ಅಜಿತ್ ಮಾಡುವ ಮಾಡುವ ಶಾರ್ಟ್‌ ಫಿಲ್ಮ್ ಎಡಿಟ್ ಮಾಡುವ ಫೋಟೊ ಸ್ಟುಡಿಯೋ ಎಡಿಟರ್ ಪಾತ್ರದಲ್ಲಿ ದಿಗಂತ್ ಮಸ್ತ್ ಮಜಾ ಕೊಡ್ತಾರೆ. ಇಡೀ ಚಿತ್ರದ ಹೈಲೆಟ್ ಅರವಿಂದ್ ಕಶ್ಯಪ್ ಛಾಯಾಗ್ರಹಣ. ಅಜಿತ್ ಮಾಡುವ ಶಾರ್ಟ್‌ ಫಿಲ್ಮ್‌ನ ಹ್ಯಾಂಡ್‌ಕ್ಯಾಮ್‌ನಲ್ಲಿ ಶೂಟ್‌ ಮಾಡುವಂತೆ ತೋರಿಸಲಾಗಿದೆ. ಅದನ್ನು ಬಹಳ ಸೊಗಸಾಗಿ ಅರವಿಂದ್ ನಿಭಾಯಿಸಿದ್ದಾರೆ.

ಕೊನೆ ಮಾತು

'ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಸಖತ್ ಮಜವಾಗಿದೆ ನಿಜ. ಆದರೆ ಕೊಂಚ ಗಜಿಬಿಜಿ ಆಗಿದೆ. ಇದು ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಹೇಳುವುದು ಕಷ್ಟ. ಕೆಲ ಪಾತ್ರಗಳು ಸ್ಪೀಡ್‌ ಆಗಿ ಡೈಲಾಗ್ ಹೇಳುವುದು ಕೇಳಿಸುವುದಿಲ್ಲ. ಅಜನೀಶ್ ಲೋಕನಾಥ್ ಮ್ಯೂಸಿಕ್ ಹೈಲೆಟ್ ಎನ್ನಿಸಿದರು ಬಿಜಿಎಂ ಕೆಲವೆಡೆ ಡೈಲಾಗ್‌ಗಳನ್ನು ನುಂಗುವಂತಿದೆ. ಕೆಲವೆಡೆ ಕನ್‌ಫ್ಯೂಷನ್ ಹೆಚ್ಚಾಗಿ ಸಾಮಾನ್ಯ ಪ್ರೇಕ್ಷಕರಿಗೆ ಅರ್ಥವಾಗದ ಭಯವೂ ಇದೆ.

More from Filmibeat

English summary
Hostel Hudugaru Bekagiddare Review in Kannada: Check the Ramya, Manjunath, Prajwal BP, Rishab Shetty Starrer hostel hudugaru bekagiddare Movie Review and Rating directed by Nithin Krishnamurthy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X