Housefull 5 Review ; ಎರಡು ಕ್ಲೈಮ್ಯಾಕ್ಸ್- ಒಂದು ಡಜನ್‌ ಸ್ಟಾರ್ಸ್, ಹೇಗಿದೆ ಹೌಸ್‌ಫುಲ್ 5 ?

Rating:
2.5/5

Star Cast: ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್, ಅಭಿಷೇಕ್ ಬಚ್ಚನ್, ಡಿನೋ ಮೋರಿಯಾ, ಫರ್ದಿನ್ ಖಾನ್, ಶ್ರೇಯಸ್‌ ತಲ್ಪಡೆ, ಜಾಕಿ ಶ್ರಾಫ್, ಸಂಜಯ್ ದತ್, ನಾನಾ ಪಾಟೇಕರ್, ಜಾನಿ ಲಿವರ್, ಚಂಕಿ ಪಾಂಡೆ, ಜಾಕ್ವೆಲಿನ್ ಫರ್ನಾಂಡಿಸ್, ಚಿತ್ರಾಂಗದಾ ಸಿಂಗ್, ನರ್ಗಿಸ್ ಫಕ್ರಿ, ಸೌಂದರ್ಯ ಶರ್ಮಾ, ಸೋನಮ್ ಬಾಜ್ವಾ, ರಂಜಿತ್, ನಿಕಿತಿನ್ ಧೀರ್, ಮುಂತಾದವರು

Director : ತರುಣ್ ಮನ್ಸುಖಾನಿ Producer & Story Writer : ಸಾಜಿದ್ ನಾಡಿಯಾದ್ವಾಲಾ

ಹಿಂದೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುತ್ತಾ, ಆಕಾಶಕ್ಕೆ ಏಣಿ ಹಾಕಿ ಕುಂತಿದ್ದರು ಅಕ್ಷಯ್ ಕುಮಾರ್. ಆದರೆ.. ಹಣೆಬರಹಕ್ಕೆ ಹೊಣೆ ಯಾರು ? ಕೆಲ ವರ್ಷಗಳಿಂದ ಅಕ್ಷಯ್ ಕುಮಾರ್ ಗೆ ಅದೃಷ್ಟ ಕೈ ಕೊಟ್ಟಿದೆ. ಒಂದಾದ ಮೇಲೊಂದು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸೋಲನ್ನು ಕಂಡಿವೆ. ಎಷ್ಟೇ ಕಷ್ಟಪಟ್ಟು ಚಿತ್ರ ಮಾಡಿದರು ಕೂಡ ಪ್ರೇಕ್ಷಕರು ಕ್ಯಾರೇ ಎನ್ನುತ್ತಿಲ್ಲ.

ಹೀಗಾಗಿಯೇ ಹಿಂದೆಯೆಲ್ಲ ಇವರನ್ನು ಲಕ್ಕಿ ಕುಮಾರ್ ಎಂದು ಕರೆಯುತ್ತಿದ್ದ ಬಾಲಿವುಡ್‌ ಈಗ ಇವರನ್ನು ಅನ್‌ಲಕ್ಕಿ ಕುಮಾರ್ ಎಂದು ಕರೆಯುತ್ತಿದೆ. ಇಂತಹ ಸಂದರ್ಭದಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿದ್ದ ಹೌಸ್‌ಫುಲ್ 5 ಚಿತ್ರ ಇಂದು ತೆರೆಗೆ ಬಂದಿದೆ.

Housefull 5 Review  Akshay Kumar Brings the Laughs     But This May Disappoint Fans

ಹಾಗಿದ್ದರೆ ಹೇಗಿದೆ ಹೌಸ್ ಫುಲ್ 5 ? ಈ ಬಾರಿಯಾದರೂ ಅಕ್ಷಯ್‌ ಕುಮಾರ್‌ಗೆ ಗೆಲುವು ಸಿಗುತ್ತಾ ? ಹಾಸ್ಯದ ರಸದೌತಣ ಬಡಿಸುವಲ್ಲಿ ಅಕ್ಷಯ್ ಕುಮಾರ್ & ಗ್ಯಾಂಗ್ ಯಶಸ್ವಿಯಾಗಿದೆಯಾ ? ಎಂದು ತಿಳಿಯಲು ಮುಂದೆ ಓದಿ.

ಕಥಾ ಹಂದರ

ಯುಕೆಯ 7ನೇ ಕೋಟ್ಯಾಧಿಪತಿ ಉದ್ಯಮಿ ರಂಜಿತ್ ದೋಬ್ರಿಯಾಲ್ { ರಂಜಿತ್ } ಅವರ 100ನೇ ಬರ್ತ್‌ಡೇ ಹಿನ್ನೆಲೆ ಚಿತ್ರದ ಕಥೆ ತೆರೆದುಕೊಳ್ಳುತ್ತೆ. 100ನೇ ಹುಟ್ಟುಹಬ್ಬವನ್ನು ಹಡಗಿನಲ್ಲಿ ಅದ್ಧೂರಿಯಾಗಿ ಆಚರಿಸಲು ಹೋದ ರಂಜಿತ್ ಅದೇ ಹಡುಗಿನಲ್ಲಿ ಶವವಾಗಿ ಪತ್ತೆಯಾಗುತ್ತಾನೆ.

ಆದರೆ ಹೀಗೆ ಸಾಯುವ ಮೊದಲು ರಂಜಿತ್ ತನ್ನ ಎಲ್ಲ ಆಸ್ತಿಯನ್ನು ಮೊದಲ ಪತ್ನಿಯ ಮಗ ಜಾಲಿ ಹೆಸರಿಗೆ ಬರೆದಿರುತ್ತಾನೆ. ಈ ಸಮಯದಲ್ಲಿ ಒಬ್ಬರಲ್ಲ, ಇಬ್ಬರಲ್ಲ, ಮೂವರು ಜಾಲಿಗಳ ಪ್ರವೇಶವಾಗುತ್ತೆ.

ಜಲಬುದ್ದೀನ್ ಅಲಿಯಾಸ್ ಜಾಲಿ (ರಿತೇಶ್ ದೇಶಮುಖ್), ಜಲಭೂಷಣ್ ಅಲಿಯಾಸ್ ಜಾಲಿ (ಅಭಿಷೇಕ್ ಬಚ್ಚನ್) ಮತ್ತು ಜೂಲಿಯಸ್ ಅಲಿಯಾಸ್ ಜಾಲಿ (ಅಕ್ಷಯ್ ಕುಮಾರ್) ಅವರ ಪ್ರವೇಶದಿಂದ ಕಥೆ ತಿರುವು ಪಡೆದುಕೊಳ್ಳುತ್ತೆ.

ಇದೇ ಸಮಯದಲ್ಲಿ ರಂಜಿತ್‌ನ ಎರಡನೇ ಹೆಂಡತಿ ಮಗ { ಫರ್ದಿನ್ ಖಾನ್ } ನಿಜವಾದ ಜಾಲಿಯನ್ನು ಪತ್ತೆ ಹಚ್ಚಲು ಡಿಎನ್‌ಎ ಜಾಲವನ್ನು ಎಸೆಯುತ್ತಾನೆ. ಆದರೆ ಇದರ ಬೆನ್ನಲ್ಲೇ ಡಾಕ್ಟರ್‌ನ ಕೂಡ ಕೊಲೆ ಮಾಡಲಾಗುತ್ತೆ. ಮುಂದೇನು ? ಹಡಗಿನಲ್ಲಿ ಕೊಲೆ ಮಾಡುತ್ತಿರುವುದು ಯಾರು ? ನಿಜವಾದ ಜಾಲಿ ಯಾರು ? ಎಂಬ ಪ್ರಶ್ನೆಗೆ ಉತ್ತರವನ್ನು ನೀವು ಚಿತ್ರಮಂದಿರದಲ್ಲಿಯೇ ನೋಡಿ ಪಡೆಯಬೇಕು.

ನೆನಪಿರಲಿ..ಭಾರತೀಯ ಚಿತ್ರರಂಗದಲ್ಲೇ ಹೊಸ ಪ್ರಯೋಗ ಎಂಬಂತೆ ಈ ಚಿತ್ರಕ್ಕೆ ಎರಡು ಕ್ಲೈಮ್ಯಾಕ್ಸ್‌ಗಳಿವೆ. ಅಕ್ಕ-ಪಕ್ಕದ ಸ್ಕ್ರೀನ್‌ಗಳಲ್ಲಿ ಪ್ರದರ್ಶನವಾಗುತ್ತಿರುವ ಹೌಸ್‌ಫುಲ್ 5ಎ ಮತ್ತು ಹೌಸ್‌ಫುಲ್ 5 ಬಿ ಇವೆರೆಡರ ಕ್ಲೈಮ್ಯಾಕ್ಸ್‌ನಲ್ಲಿ ಆರೋಪಿ ಬೇರೆ ಬೇರೆಯಾಗಿರಬಹುದು.

ಪರ್ಫಾಮೆನ್ಸ್ ಹೇಗಿದೆ ?

ಹೌಸ್‌ಫುಲ್ 5ರಲ್ಲಿ ಒಂದು ಡಜನ್‌ಗಿಂತ ಹೆಚ್ಚಿನ ಕಲಾವಿದರು ಇದ್ದಾರೆ. ಆ ಪೈಕಿ ಅಕ್ಷಯ್ ಕುಮಾರ್ ಮತ್ತು ರಿತೇಶ್ ದೇಶಮುಖ್ ತಮ್ಮ ಸಂಪೂರ್ಣ ಶ್ರಮವನ್ನು ಹಾಕಿದ್ದಾರೆ. ತಮ್ಮ ಅಭಿನಯದಿಂದ ಅಭಿಮಾನಿಗಳ ಹೃದಯವನ್ನು ಕೂಡ ಗೆಲ್ಲುತ್ತಾರೆ.

ಇವರನ್ನು ಹೊರತು ಪಡಿಸಿದರೆ ಚಿತ್ರದಲ್ಲಿ ನೆನಪಿನಲ್ಲಿ ಉಳಿಯುವುದು ಹಿರಿಯ ಕಲಾವಿದ ನಾನಾ ಪಾಟೇಕರ್ ಅವರ ಅಭಿನಯ. ಚಂಕಿ ಪಾಂಡೆ ಕೂಡ ಗಮನ ಸೆಳೆಯುತ್ತಾರೆ. ಅಭಿಷೇಕ್ ಬಚ್ಚನ್ ನಗಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು, ಸಂಜಯ್ ದತ್ ಮತ್ತು ಜಾಕಿ ಶ್ರಾಫ್ ಇಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇಬ್ಬರದ್ದು ಕೂಡ ಓವರ್ ಆಕ್ಟಿಂಗ್.

ನಾಯಕಿಯರ ವಿಚಾರಕ್ಕೆ ಬಂದರೆ ಜಾಕ್ವೆಲಿನ್ ಫರ್ನಾಂಡಿಸ್, ಸೋನಮ್ ಬಾಜ್ವಾ, ನರ್ಗಿಸ್ ಫಕ್ರಿ, ಸೌಂದರ್ಯ ಶರ್ಮಾ, ಚಿತ್ರಾಂಗದಾ ಸಿಂಗ್ ಅವರಿಗೆ ಈ ಚಿತ್ರದಲ್ಲಿ ಹೆಚ್ಚೇನು ಕೆಲಸ ಇಲ್ಲ. ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಮತ್ತು ಹಾಡುಗಳಿಗಷ್ಟೇ ಇವರನ್ನು ಸೀಮಿತ ಮಾಡಲಾಗಿದೆ.

ಮೈನಸ್ ಪಾಯಿಂಟ್ ಏನು ?

ಸಾಮಾನ್ಯವಾಗಿ ಹೌಸ್‌ಫುಲ್ ಫ್ರಾಂಚೈಸಿಯಲ್ಲಿ ತಾರೆಯರ ದಂಡು ಹಿಂದೆ ಇತ್ತು. ಆದರೆ.. ಈ ಬಾರಿ ಇಲ್ಲಿ ತುಸು ಹೆಚ್ಚೇ ಪಾತ್ರಧಾರಿಗಳನ್ನು ಇಲ್ಲಿ ಸೇರಿಸಲಾಗಿದೆ. ಇದೇ ಚಿತ್ರದ ಬಹುದೊಡ್ಡ ಮೈಸನ್ ಪಾಯಿಂಟ್. ಒಂದು ಡಜನ್‌ಗಿಂತ ಹೆಚ್ಚಿನ ಕಲಾವಿದರು ಇಲ್ಲಿರುವುದರಿಂದ ನಿರ್ದೇಶಕರಿಗೆ ಯಾರ ಮೇಲೆ ಕೂಡ ಗಮನ ಹರಿಸಲು ಸಾಧ್ಯವಾಗಿಲ್ಲ.

ಇನ್ನು 'ಹೌಸ್‌ಫುಲ್' ಮೊದಲಿಂದ ಗೊಂದಲದಿಂದ ಕೂಡಿರುತ್ತಿತ್ತು. ಆ ಗೊಂದಲ ಪ್ರೇಕ್ಷಕರಿಗೆ ಕಿಕ್ ಕೊಡುತ್ತಿತ್ತು. ಆದರೆ ಇಲ್ಲಿ ಗೊಂದಲ ತುಸು ಹೆಚ್ಚೇ ಇದೆ. ಇನ್ನು ಸಂಭಾಷಣೆ ಕೂಡ ಈ ಬಾರಿ ಕೈ ಕೊಟ್ಟಿದೆ. ಹಲವಡೆ ತುಂಬಾನೇ ಅಶ್ಲೀಲವಾದ ಸಂಭಾಷಣೆಗಳಿವೆ. ನಗು ಉಕ್ಕಿಸುವಲ್ಲಿ ಕೂಡ ವಿಫಲವಾಗಿವೆ.

ಇನ್ನು ಖಯಾಮತ್, ಲಾಲ್ ಪರಿ ಮತ್ತು ಫುಗ್ಡಿ ಡ್ಯಾನ್ಸ್ ಹಾಡುಗಳು ಚೆನ್ನಾಗಿವೆ. ಆದರೆ ಕೊಲೆಯ ರಸಹ್ಯ ಬೆನ್ನತ್ತಿ ಹೊರಟಾಗ ಒಂದಾಂದ ಮೇಲೊಂದರಂತೆ ಬರುವ ಈ ಹಾಡುಗಳು ಕಿರಿಕಿರಿಗೆ ಕಾರಣವಾಗುತ್ತವೆ.

ಕೊನೆ ಮಾತು

ಒಟ್ನಲ್ಲಿ ಲಾಜಿಕ್‌ ಎಲ್ಲ ಮರೆತು ಸುಮ್ಮನೆ ಸಮಯ ಮತ್ತು ಹಣ ವ್ಯರ್ಥ ಮಾಡಲು ಬಯಸಿದರೆ ಹೌಸ್‌ಫುಲ್ 5 ಚಿತ್ರವನ್ನು ನೀವು ಒಮ್ಮೆ ಚಿತ್ರಮಂದಿರದಲ್ಲಿ ನೋಡಬಹುದು. ಅಲ್ಲಲ್ಲಿ ಚಿತ್ರ ಮಜಾ ಕೊಡುತ್ತೆ. ಆದರೆ.. ಸಂಪೂರ್ಣವಾಗಿ ನಕ್ಕು ನಗಿಸುವಲ್ಲಿ ಚಿತ್ರತಂಡ ವಿಫಲವಾಗಿದೆ. ಇಲ್ಲಿಯವರೆಗೆ ಬಂದ ಹೌಸ್‌ಫುಲ್‌ನ ಈ ಹಿಂದಿನ 4 ಚಿತ್ರಗಳಿಗೆ ಹೋಲಿಸಿದರೆ ಈ ಚಿತ್ರ ತುಂಬಾ ಪೇಲವವಾಗಿದೆ.

More from Filmibeat

English summary
In Housefull 5, Akshay Kumar leads a chaotic ensemble cast in a comedy-thriller set aboard a luxury cruise. Despite the star power, the film falters with its over-the-top humor and lack of coherence. While fans of the franchise may find some enjoyment, others might be left wanting more
Read more about: review akshay kumar bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X