»   » ತಮಿಳಿನ ಸೇತು ಚಿತ್ರವನ್ನು ಫ್ರೇಮ್‌ ಬೈ ಫ್ರೇಮ್‌ ಭಟ್ಟಿ ಇಳಿಸಿ ನಿರ್ಮಿಸಲಾಗಿರುವ ಚಿತ್ರವೇ ಹುಚ್ಚ.

ತಮಿಳಿನ ಸೇತು ಚಿತ್ರವನ್ನು ಫ್ರೇಮ್‌ ಬೈ ಫ್ರೇಮ್‌ ಭಟ್ಟಿ ಇಳಿಸಿ ನಿರ್ಮಿಸಲಾಗಿರುವ ಚಿತ್ರವೇ ಹುಚ್ಚ.

Subscribe to Filmibeat Kannada

ಕುರುಚಲು ಗಡ್ಡ, ಕೈಯಲ್ಲೊಂದು ಸಿಗರೇಟ್‌ ಹಿಡಿದ ನಾಯಕ ಸುದೀಪ್‌, ಆರಂಭದಲ್ಲಿ ರೌಡಿಯಂತೆ ಕಂಡರೂ ಕೋಮಲ ಹೃದಯದ, ಮೃದು ಮನಸ್ಸಿನ ವಿಶಾಲ ಹೃದಯಿ. ಕೊಂಚ ಒರಟುತನದ ಈ ಹುಡಗನ ಹೃದಯವನ್ನು ಮುಗ್ಧ ಹುಡುಗಿ ಕದಿಯುತ್ತಾಳೆ. ನಾಯಕ ಆಕೆಯ ಭಯಮಿಶ್ರಿತ ಮೌನವನ್ನೇ ಪ್ರೇಮ ಸಿಗ್ನಲ್‌ ಎಂದುಕೊಳ್ಳುತ್ತಾನೆ.

ಒರಟನ ಹೃದಯಗೆದ್ದ ಮುಗ್ದ ಹುಡುಗಿಗೆ ಮದುವೆ ಗೊತ್ತಾಗಿದೆ. ಆಕೆ, ತನ್ನನ್ನು ಲೌ ಮಾಡ್ತಿಲ್ಲ ಎಂದು ತಿಳಿದಾಗ ನಾಯಕ ಹುಚ್ಚು ಹುಚ್ಚಾಗಿ ಆಡುತ್ತಾನೆ. ಪ್ರೀತ್ಸು ಅಂತ ಒತ್ತಾಯ ಒತ್ತಡ, ಬೆದರಿಕೆ, ಬಲವಂತದ ಆರಂಭ. ಈ ಮಧ್ಯೆ ಒಂದು ಪುಟ್ಟ ಸೆಂಟಿಮೆಂಟ್‌. ನಾಯಕಿಯ ಅಕ್ಕ ಗಂಡನಿಂದ ತಿರಸ್ಕೃತಳಾಗಿ ಮನೆಗೆ ಮರಳುತ್ತಾಳೆ. ನಾಯಕ ನಾಯಕಿಯ ಅಕ್ಕಳನ್ನು ಮತ್ತೆ ಗಂಡನ ಮನೆಗೆ ಸೇರಿಸುತ್ತಾನೆ.

ಮಾಮೂಲಿನಂತೆ ನಾಯಕಿಯ ಮನಸ್ಸು ಬದಲಾಗತ್ತೆ. ಅಷ್ಟೊತ್ತಿಗೆ ನಾಯಕನ ತಲೆಯನ್ನು ರೌಡಿಗಳ ಗುಂಪು ಒಡೆಯತ್ತೆ. ತಲೆಗೆ ಪೆಟ್ಟು ಬಿದ್ದ ಮೇಲೆ ಹುಚ್ಚು ಹಿಡಿಯದಿದ್ದರೆ ಹೇಗೆ? ಪ್ರೇಮದ ಹುಚ್ಚಿನಲ್ಲಿದ್ದ ನಾಯಕ ನಿಜವಾಗಿಯೂ ಹುಚ್ಚನಾಗಿ ಹುಚ್ಚಾಸ್ಪತ್ರೆ ಸೇರುತ್ತಾನೆ. ಕೋಮಲ ಹೃದಯದ ಕೆಲವು ಹೆಂಗರುಳ ಪ್ರೇಕ್ಷಕರ ಕಂಗಳಲ್ಲಿ ಒಂದೆರಡು ಹನಿ ನೀರೂ ಬರತ್ತೆ.

ಚಿತ್ರದ ಕಥೆಯಲ್ಲಿ ಹೊಸತನವೇನೂ ಇಲ್ಲದಿದ್ದರೂ, ನವಿರಾದ ಚಿತ್ರಕತೆ ಬೇಸರವಿಲ್ಲದಂತೆ, ಚಿತ್ರವೆಲ್ಲೂ ಫ್ಲಾಪ್‌ ಆಗದಂತೆ ಕಾಪಾಡಿಕೊಂಡು ಬಂದಿದೆ. ಛಾಯಾಗ್ರಹಣವೂ ಹೆಚ್ಚೂ ಕಮ್ಮೀ ರೀಮೇಕ್‌ ಎಂದೇ ಹೇಳಬಹುದು. ರಾಜೇಶ್‌ ರಾಮನಾಥ್‌ ಸಂಗೀತ ಕೊಂಚ ಗದ್ದಲಮಯವಾಗಿದೆ. ಹಿನ್ನೆಲೆ ಸಂಗೀತ ಚಿತ್ರದ ಹೆಸರನ್ನು ಉಳಿಸಿದೆ.

ಚಿತ್ರದ ಪ್ಲಸ್‌ ಪಾಯಿಂಟ್‌ ಸುದೀಪ್‌ ಅಭಿನಯ. ಸ್ಪರ್ಶಕ್ಕಿಂತ ಭಿನ್ನವಾದ ಪಾತ್ರದಲ್ಲಿ ಸುದೀಪ್‌ ಮಿಂಚಿದ್ದಾರೆ. ಪೋಷಕನಟನಾಗಿ ಅಣ್ಣನ ಪಾತ್ರದಲ್ಲಿ ಅವಿನಾಶ್‌ ಮೆಚ್ಚುಗೆ ಗಳಿಸುವ ಅಭಿನಯ ಮೆರೆದಿದ್ದಾರೆ. ಸೋದರರ ಜಗಳ ರಿಯಲಿಸ್ಟಿಕ್‌ ಆಗಿದೆ. ಚಿತ್ರ ಖ್ಯಾತಿಯ ನಾಯಕಿ ರೇಖಾ ಇಲ್ಲಿ ಹೆಚ್ಚೂ ಕಮ್ಮಿ ಸೋಲುಂಡಿದ್ದಾರೆ. ಒಂದು ಸನ್ನಿವೇಶದ ಹೊರತಾಗಿ ರೇಖಾ ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ಗೆಲ್ಲುವಲ್ಲಿ ವಿಫಲರಾಗಿದ್ದಾರೆ.

ಹಾಡುಗಳು ಚೆನ್ನಾಗಿವೆ. ಡ್ಯಾನ್ಸು, ಫೈಟು, ಪುಕ್ಕಲು ಹುಡುಗಿಯ ಪ್ರೀತಿಸಲು ಹೋಗಿ ಧೀರ ನಾಯಕನೂ ಪುಕ್ಕಲನಾಗುವ ಪರಿ, ಆತನ ಸ್ನೇಹಿತರ ಮಂಗನಾಟ, ಹೊಟ್ಟೆ ಕಿಚ್ಚು ಹದಿಹರೆಯದ ಮನಸ್ಸುಗಳನ್ನು ಸೆಳೆಯುವಲ್ಲಿ ಸಮರ್ಥವಾಗಿದೆ. ಸೇತು ನೋಡದಿದ್ದರೆ, ಹುಚ್ಚ ನೋಡಲು ಖಂಡಿತಾ ಅಡ್ಚಿ ಇಲ್ಲ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada