For Quick Alerts
  ALLOW NOTIFICATIONS  
  For Daily Alerts

  'ಹುಲಿರಾಯ'ನ ಆಟ ನೋಡಿ 'ಘರ್ಜನೆ ಕಡಿಮೆ ಆಕ್ರಂದನವೇ ಅಧಿಕ' ಎಂದ ವಿಮರ್ಶಕರು

  By Naveen
  |

  ಟೈಟಲ್ ಮತ್ತು ಟ್ರೇಲರ್ ಮೂಲಕ ಕುತೂಹಲ ಹುಟ್ಟಿಸಿದ್ದ 'ಹುಲಿರಾಯ' ಸಿನಿಮಾ ನಿನ್ನೆ(ಅಕ್ಟೋಬರ್ 6) ತೆರೆಗೆ ಬಂದಿತ್ತು. ಮೊದಲ ದಿನ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡ ಈ ಚಿತ್ರದಲ್ಲಿ ಚಂದದ ಕಥೆ, ಅಷ್ಟೆ ಚಂದದ ನಿರೂಪಣೆ ಇತ್ತು.

  ಫೈಟ್, ಬಿಲ್ಡಪ್, ರೊಮ್ಯಾನ್ಸ್, ಫಾರಿನ್ ಲೋಕೇಷನ್ ಯಾವುದು ಇಲ್ಲದಿದ್ದರೂ ಕಥೆ ಮೂಲಕ ಈ ಚಿತ್ರದ ಜನರಿಗೆ ಹತ್ತಿರವಾಗಿತ್ತು. ಇನ್ನು ಬಿಡುಗಡೆಯಾಗಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ವಿಮರ್ಶಕರು ಸಹ ನೋಡಿ ಅದರ ಬಗ್ಗೆ ಬರೆದಿದ್ದಾರೆ.

  ಕನ್ನಡದ ಜನಪ್ರಿಯ ದಿನಪತ್ರಿಕೆಗಳಲ್ಲಿ ಬಂದಿರುವ 'ಹುಲಿರಾಯ' ಚಿತ್ರದ ವಿಮರ್ಶೆಗಳು ಮುಂದಿದೆ ಓದಿ..

  ಕಾಡು ನಾಡಿನ ಸಂಘರ್ಷಕ್ಕೆ ಸಾಕ್ಷಿಯಾಗುವ ಹುಲಿರಾಯ - ವಿಜಯ ಕರ್ನಾಟಕ

  ಕಾಡು ನಾಡಿನ ಸಂಘರ್ಷಕ್ಕೆ ಸಾಕ್ಷಿಯಾಗುವ ಹುಲಿರಾಯ - ವಿಜಯ ಕರ್ನಾಟಕ

  'ಹುಲಿರಾಯ' ಸಿನಿಮಾದ ಕತೆಯೇ ಸೂಕ್ಷ್ಮವಾಗಿದೆ. ಕಾಡು ಮತ್ತು ನಾಡಿನ ಮನಸ್ಥಿತಿಗಳನ್ನು ಹಲವು ಪ್ರತಿಮೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ವ್ಯಾಪಾರಿ ಅಂಶಗಳಿಗೆ ನಿರ್ದೇಶಕರು ಜೋತು ಬೀಳದೆ, ತಮ್ಮ ಕತೆಯ ಬೇಡಿಕೆಯಂತೆ ದೃಶ್ಯಗಳನ್ನು ಹೆಣೆದಿದ್ದರಿಂದ ಇಷ್ಟವಾಗುತ್ತಾ ಹೋಗುತ್ತದೆ ಹುಲಿರಾಯ. ಆದರೆ, ಕೇವಲ ನಾಯಕನಿಗೆ ಮಾತ್ರ ಚಿತ್ರಕತೆಯಲ್ಲಿ ಮಹತ್ವ ಕೊಟ್ಟಿದ್ದರಿಂದ ಮತ್ತು ಕಥಾ ನಾಯಕ ವಾಚಾಳಿಯಾಗಿದ್ದರಿಂದ ಮಾತಿಗಷ್ಟು ಮೌನಬೇಕಿತ್ತು ಅನಿಸುತ್ತದೆ. ಸಿನಿಮಾಟೋಗ್ರಫಿ ಕೂತಲ್ಲಿಯೇ ಪ್ರೇಕ್ಷಕರಿಗೆ ಕಾಡು ಸುತ್ತಿಸುತ್ತದೆ. ಬೇಕು ಬೇಡಗಳ ಮಧ್ಯ ಸಂಗೀತ ಸಾಗುತ್ತದೆ. ಇವುಗಳ ಜತೆ ಕೆಲ ನ್ಯೂನ್ಯತೆಗಳು ಕೂಡ ಸಿನಿಮಾದಲ್ಲಿವೆ. ಹುಲಿರಾಯನ ಘರ್ಜನೆಯಲ್ಲಿ ಅವುಗಳು ಮಂಕಾಗಿವೆ. - ಶರಣ್ ಹುಲ್ಲೂರು.

  ಘರ್ಜನೆ ಕಡಿಮೆ ಆಕ್ರಂದನವೇ ಅಧಿಕ! - ವಿಜಯವಾಣಿ

  ಘರ್ಜನೆ ಕಡಿಮೆ ಆಕ್ರಂದನವೇ ಅಧಿಕ! - ವಿಜಯವಾಣಿ

  ಹಳ್ಳಿಗಳಿಂದ ವಲಸೆ ಬಂದ ಯುವಕರ ಪ್ರತಿನಿಧಿಯಂತೆ ಕಥಾನಾಯಕ ಸುರೇಶ(ಬಾಲು)ನ ಪಾತ್ರ ಮೂಡಿಬಂದಿದೆ. ಹಾಗಾಗಿ ಈ 'ಹುಲಿರಾಯ'ನ ಘರ್ಜನೆಗಿಂತ ಆಕ್ರಂದನವೇ ಹೆಚ್ಚು ಕೇಳಿಸುತ್ತದೆ. ಬೆಂಗಳೂರಿನ ಜನಸಾಗರವನ್ನು ಕಂಡು ಬೆಚ್ಚಿಬೀಳುವ, ತಪ್ಪು ಮಾಡಿದ್ದೇನೆ ಎಂದು ಅರಿವಾಗುತ್ತಲೇ ಒದ್ದಾಡುವ ಮುಗ್ಧನಾಗಿ ಬಾಲು ನಟನೆ ಉತ್ತಮ. ಅವರು ಸಂಭಾಷಣೆ ಒಪ್ಪಿಸುವ ಶೈಲಿಯೂ ನೋಡುಗರಿಗೆ ಇಷ್ಟವಾಗುತ್ತದೆ. ವಿಭಿನ್ನ ಮ್ಯಾನರಿಸಂ ಮೂಲಕ ಇಡೀ ಸಿನಿಮಾವನ್ನು ಆಕ್ರಮಿಸಿಕೊಂಡಿದ್ದಾರೆ ಬಾಲು. ಇಬ್ಬರು ನಾಯಕಿಯರು ಚಿತ್ರದಲ್ಲಿದ್ದರೂ ಪಾತ್ರಗಳಿಗೆ ಹೇಳಿಕೊಳ್ಳುವಂತಹ ಸ್ಕೋಪ್ ಇಲ್ಲ. ಮೊದಲರ್ಧ ಭಾಗದಲ್ಲಿ ಚಿರಶ್ರೀ ಮೌನಸುಂದರಿಯಾಗಿ ಮಿಂಚಿ ಮರೆಯಾದರೆ, ದ್ವಿತಿಯಾರ್ಧದಲ್ಲಿ ಬೋಲ್ಡ್ ಬಾಲೆಯಾಗಿ ದಿವ್ಯಾ ಗಮನಸೆಳೆಯುತ್ತಾರೆ. - ಅವಿನಾಶ್.ಜಿ.ರಾಮ್.

  ಮುಗ್ಧ ಹುಲಿರಾಯನ ಹಾರಾಟ ಮತ್ತು ಹೋರಾಟ - ಉದಯವಾಣಿ

  ಮುಗ್ಧ ಹುಲಿರಾಯನ ಹಾರಾಟ ಮತ್ತು ಹೋರಾಟ - ಉದಯವಾಣಿ

  'ಹುಲಿರಾಯ' ಚಿತ್ರ ನಿಮಗೆ ಇಷ್ಟವಾಗೋದೇ ಅದರ ಕೆಲವು ಸೂಕ್ಷ್ಮಅಂಶಗಳಿಂದ. ಅತ್ತ ಕಡೆ ಕಾಡು, ಇತ್ತ ಕಡೆ ಸಿಟಿ ಈ ಎರಡು ಅಂಶಗಳನ್ನಿಟ್ಟುಕೊಂಡು ಸಾಗುವ ಸಿನಿಮಾದಲ್ಲಿ ಎರಡು ಬದುಕುಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅರವಿಂದ್‌ ಕೌಶಿಕ್. ಆ ಮಟ್ಟಿಗೆ 'ಹುಲಿರಾಯ' ಕಮರ್ಷಿಯಲ್ ಅಂಶಗಳನ್ನು ಮೈಗೆ ಮೆತ್ತಿಕೊಳ್ಳದೆಯೂ ಮಜಾ ಕೊಡುತ್ತಾ ಸಾಗುತ್ತದೆ. ಒಂದು ಸಣ್ಣ ಎಳೆಯೊಂದಿಗೆ ಎರಡು ಕಡೆಯ ಬದುಕಿನ ಚಿತ್ರಣವನ್ನು ನೀಡಲಾಗಿದೆ. ಇಲ್ಲಿ ಲವ್‌ ಇದೆ, ಸೆಂಟಿಮೆಂಟ್ ಇದೆ, ಕಾಮಿಡಿಯೂ ಇದೆ. ಹಾಗಂತ ಯಾವುದನ್ನು ಅತಿಯಾಗಿ ಬಳಸಿಕೊಂಡಿಲ್ಲ. ಹಾಗೆ ಬಂದು ಹೀಗೆ ಹೋಗುವ ಆ ದೃಶ್ಯಗಳೆಲ್ಲವೂ ಚಿತ್ರಕ್ಕೆ ಪೂರಕವಾಗಿವೆ. - ರವಿಪ್ರಕಾಶ್ ರೈ.

  ವಿಮರ್ಶೆ: ಕಾಡಿನ 'ಹುಲಿರಾಯ' ಹೇಳುವ ಜೀವನದ ಕಠೋರ ಸತ್ಯ

  Huliraaya Review- The Times of India

  Huliraaya Review- The Times of India

  Huliraaya is an interesting tale that symbolically uses the forest and cities as metaphors for people to introspect, Balu Nagendra as the protagonist ensures this tale is enjoyable with his performance. He is one actor to watch out for, as his performance lifts the story and gets one to feel with him through his journey. Newbie Divya Uruduga also shows potential as she lights up the screen with her peppy act. The cinematography, background score, soundtrack and locations ensure that one is engrossed. Though, the film does lag at places and has a climax that may seem to be a cop out.

  The film may have its shortcomings, but those can be overlooked by the performances and the story's novelty. While filmmakers saying they've made a 'different film' is a cliche in the film industry, Huliraaya genuinely is a different effort and it is worth a watch if you're game for something substantial and out of the box.

  English summary
  'Huliraya' movie has received mixed response from the critics. Here is the collection of 'Huliraya' reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X